ಇಲ್ಲಿವೆ ಹ್ಯುಂಡೈ ಎಕ್ಸ್‌ಟರ್‌ನ ಇಂಟೀರಿಯರ್ ಮತ್ತು ಫೀಚರ್‌ಗಳ ವಿವರಗಳು
ಹುಂಡೈ ಎಕ್ಸ್‌ಟರ್ ಗಾಗಿ tarun ಮೂಲಕ ಜೂನ್ 16, 2023 02:00 pm ರಂದು ಪ್ರಕಟಿಸಲಾಗಿದೆ
- 13 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಎಕ್ಸ್‌ಟರ್ ಸ್ಥಾನವು ವೆನ್ಯೂಗಿಂತ ಕೆಳಗಿರುತ್ತದೆ ಮತ್ತು ಟಾಟಾ ಪಂಚ್‌ಗಿಂತ ಮೇಲಿರುತ್ತದೆ
-
ಎಕ್ಸ್‌ಟರ್‌ನ ಇಂಟೀರಿಯರ್ ಸೆಮಿ-ಲೆದರೆಟ್ ಸೀಟುಗಳನ್ನು ಪಡೆದಿದ್ದು ಗ್ರ್ಯಾಂಡ್ i10 ನಿಯೋಸ್‌ನಿಂದ ಪ್ರೇರಿತವಾದಂತೆ ತೋರುತ್ತದೆ.
-
8-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ಕ್ರ್ಯೂಸ್ ಕಂಟ್ರೋಲ್, ಆಟೋ AC ಮತ್ತು ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ಫೀಚರ್ ಪಟ್ಟಿಯಲ್ಲಿ ಪಡೆದಿದೆ.
-
2450mm ಉದ್ದದ ಮತ್ತು 1631mm ಎತ್ತರದ ವ್ಹೀಲ್ ಬೇಸ್ ಅನ್ನು ಹೊಂದಿದೆ.
-
ಇಂಜಿನ್ ಕಾರ್ಯಗಳನ್ನು 5-ಸ್ಪೀಡ್ MT ಮತ್ತು AMT ಹೊಂದಿರುವ 1.2-ಲೀಟರ್ ಪೆಟ್ರೋಲ್ ಇಂಜಿನ್ ನಿರ್ವಹಿಸುತ್ತದೆ.
-
ಬೆಲೆಗಳು ಸುಮಾರು ರೂ 6 ಲಕ್ಷಗಳಷ್ಟು (ಎಕ್ಸ್-ಶೋರೂಂ) ಇರಬಹುದು ಎಂದು ಅಂದಾಜಿಸಲಾಗಿದೆ.
ಹ್ಯುಂಡೈ ಎಕ್ಸ್‌ಟರ್‌ನ ಇಂಟೀರಿಯರ್ ಮತ್ತು ಅದರ ಕೆಲವು ಫೀಚರ್‌ಗಳನ್ನು ಅನಾವರಣಗೊಳಿಸಲಾಗಿದೆ. ಇದರ ಎಕ್ಸ್‌ಟೀರಿಯರ್ ಡಿಸೈನ್ ಅನ್ನು ಈಗಾಗಲೇ ಪೂರ್ಣವಾಗಿ ಅನಾವರಣಗೊಳಿಸಲಾಗಿದೆ. ಜುಲೈ 10ರಂದು ಬಿಡುಗಡೆಯಾಗಲಿರುವ ಎಕ್ಸ್‌ಟರ್ ಈಗ ಅದಕ್ಕೂ ಮುನ್ನವೇ ಬುಕಿಂಗ್‌ಗಳಿಗೆ ಲಭ್ಯವಿದೆ.
ಇಂಟೀರಿಯರ್ ಅನಾವರಣ
ಹ್ಯುಂಡೈ ಎಕ್ಸ್‌ಟರ್‌ನ ಆಲ್-ಬ್ಲ್ಯಾಕ್ ಇಂಟೀರಿಯರ್ ಡಿಸೈನ್ ಗ್ರ್ಯಾಂಡ್ i10 ನಿಯೋಸ್‌ನಿಂದ ಪ್ರೇರಿತವಾದಂತೆ ತೋರುತ್ತದೆ. ಮಧ್ಯದ ಕನ್ಸೋಲ್ ಡಿಸೈನ್, ಡ್ಯಾಶ್‌ಬೋರ್ಡ್‌ನ ಡೈಮಂಡ್ ವಿನ್ಯಾಸ, ಟರ್ಬೈನ್ ಆಕಾರದ AC ವೆಂಟ್‌ಗಳು ಈ ಹ್ಯಾಚ್‌ಬ್ಯಾಕ್ ಅನ್ನು ಬಲವಾಗಿ ಹೋಲುತ್ತವೆ.
ಸ್ಟೀರಿಂಗ್ ವ್ಹೀಲ್ ಕೂಡಾ ಈ ಹ್ಯಾಚ್‌ಬ್ಯಾಕ್ ಮತ್ತು ಅದರ ಸೆಡಾನ್ ತದ್ರೂಪಿಯಂತೆಯೇ (ಆರಾ) ಇದ್ದು ಲೆದರೆಟ್ ಅಪ್‌ಹೋಲ್ಸ್‌ಟ್ರಿಯಿಂದ ಆವರಿಸಿದೆ. ಅಲ್ಲದೇ ಸೀಟುಗಳಿಗೂ ಸೆಮಿ-ಲೆದರೆಟ್ ಅಪ್‌ಹೋಲ್ಸ್‌ಟ್ರಿ ಫಿನಿಷಿಂಗ್ ಅನ್ನು ನೀಡಲಾಗಿದೆ.
ಇದು ಸಂಪೂರ್ಣ ಡಿಜಿಟೈಸ್ ಮಾಡಲಾದ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದ್ದು ಮಧ್ಯದಲ್ಲಿ 4.2-ಇಂಚು TFT MIDಯೊಂದಿಗೆ ವೆನ್ಯೂ ಅನ್ನು ಹೋಲುತ್ತದೆ. ಖಾತ್ರಿಯಾದ ಇತರ ಫೀಚರ್‌ಗಳೆಂದರೆ, 8-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಕ್ರ್ಯೂಸ್ ಕಂಟ್ರೋಲ್, ಆಟೋಮ್ಯಾಟಿಕ್ AC, ರೈನ್ ಸೆನ್ಸಿಂಗ್ ವೈಪರ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು. ಇನ್ಫೋಟೇನ್‌ಮೆಂಟ್ ಸಿಸ್ಟಮ್ 60 ರ ತನಕದ ಬ್ಲೂಲಿಂಕ್ ಸಂಪರ್ಕಿತ ಫೀಚರ್‌ಗಳು, ವಾಯ್ಸ್ ಕಮಾಂಡ್‌ಗಳು, ಮಲ್ಟಿ-ಲ್ಯಾಂಗ್ವೇಜ್ ಇನ್ಫೋಟೇನ್‌ಮೆಂಟ್, ಅಲೆಕ್ಸಾ ಮೂಲಕ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮನೆಯಿಂದ ಕಾರ್‌ಗೆ ವಾಯ್ಸ್ ಕಮಾಂಡ್‌ಗಳನ್ನು ಬೆಂಬಲಿಸುತ್ತದೆ.
ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್: ಇದಕ್ಕಾಗಿ ನೀವು ಕಾಯಬೇಕ ಅಥವಾ ಅದರ ಪ್ರತಿಸ್ಪರ್ಧಿಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕೆ?
ಆಯಾಮಗಳ ಅನಾವರಣ
ಈ ಎಕ್ಸ್‌ಟರ್ 2450mm ಉದ್ದದ ಮತ್ತು 1631mm ಎತ್ತರದ ವ್ಹೀಲ್‌ಬೇಸ್ ಹೊಂದಿದೆ ಎಂದು ಹ್ಯುಂಡೈ ಹೇಳುತ್ತದೆ. ಇದೇ ವ್ಹೀಲ್‌ಬೇಸ್ ಅನ್ನು ನಿಯೋಸ್‌ನಲ್ಲಿಯೂ ಕಾಣಬಹುದು ಆದರೆ ಅದು 111mm ಎತ್ತರ ಹೊಂದಿದೆ.
ಖಾತ್ರಿಪಡಿಸಲಾದ ಇತರ ವಿವರಗಳು
ಎಕ್ಸ್‌ಟರ್ ಅನ್ನು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ ಐದು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. 83PS 1.2-ಲೀಟರ್ ಪೆಟ್ರೋಲ್ ಇಂಜಿನ್‌ನಿಂದ ಚಾಲಿತವಾಗಿರುವ ಇದಕ್ಕೆ 5-ಸ್ಪೀಡ್ ಮ್ಯಾನುವಲ್ ಮತ್ತು AMT ಟ್ರಾನ್ಸ್‌ಮಿಷನ್ ಅನ್ನು ಜೋಡಿಸಲಾಗಿದೆ. ಬಿಡುಗಡೆ ಸಮಾರಂಭದಲ್ಲಿ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ CNG ಆಯ್ಕೆಯೂ ಇರುತ್ತದೆ.
ಹ್ಯುಂಡೈ ಮೊದಲು ಇಲೆಕ್ಟ್ರಿಕ್ ಸನ್‌ರೂಫ್ ಮತ್ತು ಡ್ಯುಯೆಲ್ ಕ್ಯಾಮರಾ ಡ್ಯಾಶ್‌ಕ್ಯಾಮ್ ಮುಂತಾದ ಫೀಚರ್‌ಗಳ ಇರುವಿಕೆಯನ್ನು ಖಾತ್ರಿಪಡಿಸಿತ್ತು. ಸುರಕ್ಷತಾ ಫೀಚರ್‌ಗಳೆಂದರೆ ಆರು ಏರ್‌ಬ್ಯಾಗ್‌ಗಳು, ESC, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್,ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ISOFIX ಚೈಲ್ಡ್ ಸೀಟು ಮೌಂಟ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದೆ.
ಇದನ್ನೂ ಓದಿ: ನವೀಕೃತ ಹ್ಯುಂಡೈ i20 N ಲೈನ್ ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ
ಪ್ರಯಾಣಿಕ ಸುರಕ್ಷತೆಯ ವಿಚಾರಕ್ಕೆ ಬಂದರೆ, ಇದು ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು, ABS ಜೊತೆಗಿನ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ISOFIX ಚೈಲ್ಡ್-ಸೀಟ್ ಆ್ಯಂಕೋರೇಜ್‌ಗಳನ್ನು ಪಡೆದಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಎಕ್ಸ್‌ಟರ್‌ನ ಬೆಲೆ ಸುಮಾರು ರೂ 6 ಲಕ್ಷದಷ್ಟು (ಎಕ್ಸ್-ಶೋರೂಂ) ಇರಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಇದು ಟಾಟಾ ಪಂಚ್, ಸಿಟ್ರಾನ್ C3, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್ ಮತ್ತು ಮಾರುತಿ ಫ್ರಾಂಕ್ಸ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ.