ಕಿಯಾ ಕೆ-ಕೋಡ್‌ನಿಂದ ಹೊಸ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು ಹೇಗೆ ತ್ವರಿತವಾಗಿ ಪಡೆಯಬಹುದು ?
ಕಿಯಾ ಸೆಲ್ಟೋಸ್ ಗಾಗಿ ansh ಮೂಲಕ ಜುಲೈ 12, 2023 04:02 pm ರಂದು ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಈಗಾಗಲೇ ಕಿಯಾ ಸೆಲ್ಟೋಸ್ ಅನ್ನು ಹೊಂದಿರುವ ವ್ಯಕ್ತಿಗಳಿಂದಲೂ ನೀವು ಕೆ-ಕೋಡ್ ಅನ್ನು ಪಡೆಯಬಹುದು.
ಈ ನವೀಕೃತ ಕಿಯಾ ಸೆಲ್ಟೋಸ್ ಇತ್ತೀಚೆಗೆ ಅದರ ಡಿಸೈನ್ ಮತ್ತು ಫೀಚರ್ ಲಿಸ್ಟ್‌ನಲ್ಲಿ ಅನೇಕ ನವೀಕರಣಗಳನ್ನು ಪಡೆಯುವುದರೊಂದಿಗೆ ತನ್ನ ಇಂಡಿಯಾ-ಸ್ಪೆಕ್ ಅನ್ನು ಬಿಡುಗಡೆಗೊಳಿಸಿದೆ. ಇದರ ತಯಾರಕರು ಜುಲೈ 14 ನಿಂದ ಆರ್ಡರ್ ತೆಗೆದುಕೊಳ್ಳಲು ಪ್ರಾರಂಭಿಸುತ್ತಿದ್ದು, ಹೆಚ್ಚಿನ ಬೇಡಿಕೆಯಿರಬಹುದೆಂದು ನಿರೀಕ್ಷಿಸುತ್ತಾ, ನವೀಕೃತ-ಪೂರ್ವ ಸೆಲ್ಟೋಸ್ ಹೊಂದಿರುವವರಿಗೆ ಪ್ರಯತ್ನಿಸಲು ಮತ್ತು ರಿವಾರ್ಡ್‌ಗಳನ್ನು ನೀಡಲು ಒಂದು ಮಾರ್ಗವನ್ನು ಪರಿಚಯಿಸಿದೆ. ಈ ಉಪಕ್ರಮವನ್ನು ಕಿಯಾ ಕೆ-ಕೋಡ್ ಎಂದು ಕರೆಯಲಾಗುತ್ತದೆ.
ಕೆ-ಕೋಡ್ ಎಂದರೇನು?
ಕಿಯಾ ಕೋಡ್ ಎಂಬುದು ಒಂದು ವಿಶೇಷ ಕೋಡ್ ಆಗಿದ್ದು, ಅದು ಕಿಯಾ ವೆಬ್‌ಸೈಟ್‌ನಲ್ಲಿ ಜನರೇಟ್ ಆಗುತ್ತದೆ. ನೀವು ಈಗಾಗಲೇ ಸೆಲ್ಟೋಸ್ ಅನ್ನು ಹೊಂದಿದವರಾಗಿದ್ದರೆ ಅಥವಾ ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊಂದಿರುವ ಯಾರಾದರೂ ನಿಮಗೆ ತಿಳಿದಿದ್ದರೆ ನೀವು ಕೆ-ಕೋಡ್ ಅನ್ನು ಅವರಿಂದ ಪಡೆಯಬಹುದು. ಸೆಕೆಂಡ್ ಹ್ಯಾಂಡ್ ಕಿಯಾ ಸೆಲ್ಟೋಸ್‌ನ ಮಾಲೀಕರು ಸಹ ಕೆ-ಕೋಡ್‌ನ ಪ್ರಯೋಜನವನ್ನು ಪಡೆಯಬಹುದು. ನೀವು ಕೆ-ಕೋಡ್ ಅನ್ನು ಪಡೆದ ನಂತರ ಜುಲೈ 14 ರಂದು ಬುಕಿಂಗ್ ಮಾಡುವ ಸಂದರ್ಭದಲ್ಲಿ ನೀವದನ್ನು ಬಳಸಬೇಕಾಗುತ್ತದೆ.
ಇದರ ಪ್ರಯೋಜನಗಳು
ನೀವು ಕೆ-ಕೋಡ್ ಅನ್ನು ಹೊಂದಿದ್ದರೆ ಮತ್ತು ಅದನ್ನು ಬಳಸಿಕೊಂಡು ಬುಕಿಂಗ್ ಮಾಡಿದರೆ, ನೀವು ಹೆಚ್ಚಿನ ಆದ್ಯತಾ ಡೆಲಿವರಿಯನ್ನು ಪಡೆಯುತ್ತೀರಿ. ಅಂದರೆ ಕೆ-ಕೋಡ್ ಇಲ್ಲದೆ ನವೀಕೃತ ಸೆಲ್ಟೋಸ್ ಅನ್ನು ಬುಕಿಂಗ್ ಮಾಡುವವರಿಗೆ ಹೋಲಿಸಿದರೆ ಕೆ-ಕೋಡ್‌ನೊಂದಿಗೆ ಬುಕ್ ಮಾಡುವವರ ಕಾಯುವಿಕೆಯ ಅವಧಿಯು ಕಡಿಮೆಯಿರುತ್ತದೆ; ಮತ್ತು ನೀವು ವಾಸಿಸುವ ನಗರವನ್ನು ಅವಲಂಬಿಸಿ ಕಾಯುವಿಕೆ ಅವಧಿಯು 3 ರಿಂದ 4 ತಿಂಗಳುಗಳನ್ನೂ ಮೀರಬಹುದು. ಈ ಉಪಕ್ರಮವು ನವೀಕೃತ-ಪೂರ್ವ ಕಿಯಾ ಸೆಲ್ಟೋಸ್ ಮಾಲೀಕರಿಗೆ ತ್ವರಿತವಾಗಿ ನವೀಕೃತ ಮಾಡೆಲ್‌ಗೆ ಅಪ್‌ಗ್ರೇಡ್ ಆಗಲು ಸಹಾಯ ಮಾಡುತ್ತದೆ ಅಥವಾ ಅವರ ಸ್ನೇಹಿತರು ಹಾಗೂ ಕುಟುಂಬವು ಕಿಯಾ ಬ್ರ್ಯಾಂಡ್‌ನ ಭಾಗವಾಗಲು ಸಹಾಯ ಮಾಡುತ್ತದೆ.
2023 ಸೆಲ್ಟೋಸ್ ಏನನ್ನು ನೀಡುತ್ತದೆ
ವಿನ್ಯಾಸ
ಹೆಚ್ಚುತ್ತಿರುವ ಪೈಪೋಟಿಯಲ್ಲಿ ಮುಂದುವರಿಯಲು ನವೀಕೃತ ಕಿಯಾ ಸೆಲ್ಟೋಸ್ ಸಣ್ಣ ಆದರೆ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಪಡೆಯುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಪರಿಷ್ಕೃತ ಬಂಪರ್ ಮತ್ತು ಹೊಸ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಪಡೆಯುತ್ತದೆ. 18-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲು ಪಾರ್ಶ್ವ ಪ್ರೊಫೈಲ್ ಅನ್ನು ಮೊದಲಿನಂತೆಯೇ ಉಳಿಸಲಾಗಿದ್ದು, ಇನ್ನು ಮುಂದೆ X-ಲೈನ್ ವೇರಿಯೆಂಟ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಹಿಂಭಾಗದಲ್ಲಿ, ಈ 2023 ಸೆಲ್ಟೋಸ್ ಸಂಪರ್ಕಿತ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ ಮತ್ತು ಹೊಸ ಡ್ಯುಯಲ್-ಟಿಪ್ ಎಕ್ಸಾಸ್ಟ್ ಸೆಟಪ್ ಪಡೆಯಲು ಬಂಪರ್‌ನ ವಿನ್ಯಾಸವನ್ನು GT ಲೈನ್ ಮತ್ತು X-ಲೈನ್ ವೇರಿಯೆಂಟ್‌ನಲ್ಲಿನ ಬದಲಾವಣೆಯನ್ನು ಪಡೆದಿದೆ.
ಪವರ್‌ಟ್ರೇನ್
ನವೀಕೃತ ಕಿಯಾ ಸೆಲ್ಟೋಸ್ ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ: 6-ಸ್ಪೀಡ್ ಮ್ಯಾನ್ಯುವಲ್ ಅಥವಾ CVT ಆಟೋಮ್ಯಾಟಿಕ್‌ಗೆ ಜೊತೆಯಾದ 1.5-ಲೀಟರ್ ಪೆಟ್ರೋಲ್ (115PS/144Nm) ಎಂಜಿನ್ ಮತ್ತು iMT ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ಗೆ ಜೊತೆಯಾದ 1.5-ಲೀಟರ್ ಡಿಸೇಲ್ (116PS/250Nm) ಎಂಜಿನ್.
ಇದನ್ನೂ ನೋಡಿ: ಚಿತ್ರ ಹೋಲಿಕೆ: ಹೊಸ ವರ್ಸಸ್ ಹಳೆಯ ಕಿಯಾ ಸೆಲ್ಟೋಸ್
ಈ ಕಾರು ತಯಾರಕರು, ಕ್ಯಾರೆನ್ಸ್‌ನಿಂದ 6-ಸ್ಪೀಡ್ iMT (ಕ್ಲಚ್ ರಹಿತ ಮ್ಯಾನ್ಯುವಲ್) ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್(DCT) ನೊಂದಿಗೆ ಬರುವ 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (160PS/253Nm) ಅನ್ನು ಸಹ ಸೇರಿಸಿದ್ದಾರೆ.
ಫೀಚರ್‌ಗಳು ಮತ್ತು ಸುರಕ್ಷತೆ
ಈ 2023 ಸೆಲ್ಟೋಸ್ ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಸ್ಕ್ರೀನ್‌ಗಳು (ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಡ್ಯುಯಲ್ ಝೋನ್ ಕ್ಲೈಮೆಟ್ ಕಂಟ್ರೋಲ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಆ್ಯಂಬಿಯೆಂಟ್ ಲೈಂಟಿಂಗ್ ಮತ್ತು ವಿಹಂಗಮ ಸನ್‌ರೂಫ್ ಅನ್ನು ಫೀಚರ್‌ಗಳಾಗಿ ಪಡೆದಿದೆ.
ಇದನ್ನೂ ಓದಿ: ನವೀಕೃತ ಕಿಯಾ ಸೆಲ್ಟೋಸ್ ವೇರಿಯೆಂಟ್-ವಾರು ಫೀಚರ್‌ಗಳು ಬಹಿರಂಗ
ಇದರ ಸುರಕ್ಷತಾ ಕಿಟ್‌ಗೆ ಪ್ರಮುಖ ಸೇರ್ಪಡೆಯನ್ನು ನೀಡಲಾಗಿದೆ. ಈ ನವೀಕೃತ ಸೆಲ್ಟೋಸ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್, ಮುಂಭಾಗದ ಘರ್ಷಣಾ ವಾರ್ನಿಂಗ್, ಮತ್ತು ಆಟೋ ತುರ್ತು ಬ್ರೇಕಿಂಗ್‌ನಂತಹ ADAS ಫೀಚರ್ ಅನ್ನು ಒಳಗೊಂಡಿದೆ. ಇದರಲ್ಲಿನ ಇತರ ಫೀಚರ್‌ಗಳೆಂದರೆ ಆರು ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮರಾ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
2023 ಕಿಯಾ ಸೆಲ್ಟೋಸ್‌ನ ಬೆಲೆಯು ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರುವ ಸಾಧ್ಯತೆಯಿದ್ದು ಆಗಸ್ಟ್ ಮಧ್ಯಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಹ್ಯುಂಡಾ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಕ್, ಟೊಯೋಟಾ ಹೈರೈಡರ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಎಂಜಿ ಆಸ್ಟರ್‌ಗೆ ಪ್ರತಿಸ್ಪರ್ಧಿಯಾಗಿರುತ್ತದೆ ಮತ್ತು ಮುಂಬರುವ ಹೋಂಡಾ ಎಲಿವೇಟ್ ಮತ್ತು ಸಿಟ್ರಾನ್ C3 ಏರ್‌ಕ್ರಾಸ್‌ಗೆ ಪೈಪೋಟಿ ನೀಡಲಿದೆ.
ಇನ್ನಷ್ಟು ಇಲ್ಲಿ ಓದಿ : ಸೆಲ್ಟೋಸ್ ಡಿಸೇಲ್
0 out of 0 found this helpful