ಹ್ಯುಂಡೈ ಎಕ್ಸ್‌ಟರ್ ಡಿಸೈನ್ ಸ್ಕೆಚ್‌ನ ಮೊದಲ ನೋಟ ಇಲ್ಲಿದೆ
ಏಪ್ರಿಲ್ 27, 2023 08:25 pm ರಂದು tarun ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈನ ಈ ಹೊಸ ಮೈಕ್ರೋ SUV ಜೂನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ನಿರೀಕ್ಷೆ ಇದೆ
- SUV ಅನುಭವಕ್ಕಾಗಿ ಹ್ಯುಂಡೈ ಎಕ್ಸ್‌ಟರ್ ಕೆಲವು ಸದೃಢ ಅಂಶಗಳೊಂದಿಗೆ ನೇರ ಮತ್ತು ಬಾಕ್ಸಿ ಡಿಸೈನ್ ಪಡೆಯುತ್ತದೆ.
- H-ಆಕಾರದ LED DRLಗಳು, LED ಪ್ರಾಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಇತರ ಗೋಚರ ಅಂಶಗಳನ್ನು ಹೊಂದಿರಲಿದೆ.
- ದೊಡ್ಡದಾದ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಕ್ರ್ಯೂಸ್ ಕಂಟ್ರೋಲ್ ಮತ್ತು ಆರರ ತನಕ ಏರ್‌ಬ್ಯಾಗ್‌ಗಳನ್ನು ಹೊಂದಿರುವ ನಿರೀಕ್ಷೆ ಇದೆ.
- ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿರುವ 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿರಲಿದೆ.
- ಬೆಲೆ ಸುಮಾರು ರೂ. 6 ಲಕ್ಷ (ಎಕ್ಸ್-ಶೋರೂಂ) ಇರುವ ನಿರೀಕ್ಷೆ ಇದೆ.
ಎಕ್ಸ್‌ಟರ್ SUVಯ ಹೊಸ ಟೀಸರ್ ಅನ್ನು ಹ್ಯುಂಡೈ ಡಿಸೈನ್ ಸ್ಕೆಚ್ ಮೂಲಕ ಹೊರತಂದಿದೆ. ಈ ಹೊಸ ಮೈಕ್ರೋ SUV ಜೂನ್‌ನಲ್ಲಿ ಪಾದಾರ್ಪಣೆಯಾಗುವ ನಿರೀಕ್ಷೆ ಇದ್ದು ಟಾಟಾ ಪಂಚ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗಾರ್, ಮತ್ತು ಸಿಟ್ರಾನ್ C3 ಗೆ ಪ್ರತಿಸ್ಪರ್ಧಿಯಾಗಲಿದೆ.
ಈ ಹ್ಯುಂಡೈ ಎಕ್ಸ್‌ಟರ್‌ನ ಫ್ರಂಟ್ ಫೇಸಿಯಾ ಜ್ಯಾಮಿತೀಯ ಆಕಾರಗಳಿಂದ ಪ್ರೇರಿತವಾಗಿದ್ದು ಕೊಂಚ ಬಾಕ್ಸಿಯಾಗಿದೆ. ಇದು ನಯವಾದ ಕಪ್ಪು ಪಟ್ಟಿಯಿಂದ ಸಂಪರ್ಕಿತಗೊಂಡ H-ಆಕಾರದ LED DRLಗಳನ್ನು ಪಡೆದಿದೆ. ಈ ವಿಶಿಷ್ಟ ಡಿಸೈನ್‌ನ ಗ್ರಿಲ್, LED ಪ್ರಾಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದ್ದು ಎರಡು ಚೌಕಾಕಾರದ ಕೇಸ್‌ನಿಂದ ಆವೃತವಾಗಿದೆ.
ಇದನ್ನೂ ಓದಿ: ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆ ಹೊಂದಿರುವ ರೂ 10 ಕೆಳಗಿನ ಅತ್ಯಂತ ಕೈಗೆಟುಕುವ ಕಾರುಗಳು
ಇತರ ಡಿಸೈನ್ ಅಂಶಗಳೆಂದರೆ, ರೂಫ್ ರೈಲ್‌ಗಳು, ಟಾಲ್-ಬಾಯ್ ಲುಕ್ ಮತ್ತು ತುಸು ಹೊಳೆಯುವ ವ್ಹೀಲ್ ಆರ್ಚ್‌ಗಳು. ಅಲ್ಲದೇ H-ಆಕಾರದ ಟೈಲ್ ಲ್ಯಾಂಪ್‌ಗಳು, ಫಂಕಿ ಅಲಾಯ್ ವ್ಹೀಲ್‌ಗಳು ಮತ್ತು ಇಲೆಕ್ಟ್ರಿಕ್ ಸನ್‌ರೂಫ್‌ಗಳನ್ನೂ ಕಾಣಬಹುದು.
ಹ್ಯುಂಡೈ ಎಕ್ಸ್‌ಟರ್ ತನ್ನ ಯುವ ಗ್ರಾಹಕರ ಆಕರ್ಷಣೆಗೆ ಪೂರಕವಾಗಿರುವ ವಿಶಿಷ್ಟ-ನೋಟದ ಕ್ಯಾಬಿನ್ ಅಂಶಗಳನ್ನು ಹೊಂದಿರುವ ನಿರೀಕ್ಷೆ ಇದೆ. ಇದು ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಕ್ರ್ಯೂಸ್ ಕಂಟ್ರೋಲ್, ಆರರ ತನಕ ಏರ್‌ಬ್ಯಾಗ್‌ಗಳು, ರಿಯರ್ ಕ್ಯಾಮರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮುಂತಾದ ಫೀಚರ್‌ಗಳನ್ನು ಹೊಂದಿರುತ್ತದೆ.
ಇದನ್ನೂ ಓದಿ: ಹ್ಯುಂಡೈ ವರ್ನಾ 2023 ವಿಮರ್ಶೆಯಿಂದ ನಾವು ತಿಳಿದ 5 ಸಂಗತಿಗಳು
ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳನ್ನು ಹೊಂದಿರುವ ಗ್ರ್ಯಾಂಡ್ i10 ನಿಯೋಸ್’83PS 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಎಕ್ಸ್‌ಟರ್‌ನಲ್ಲಿ ಬಳಸಲಾಗುತ್ತದೆ. ಅಲ್ಲದೇ CNG ಆಯ್ಕೆಯನ್ನೂ ನೀಡಬಹುದೆಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದರೊಂದಿಗೆ ಹೆಚ್ಚಿನ ಸಾಮರ್ಥ್ಯಕ್ಕಾಗಿ, ಹ್ಯುಂಡೈ ಈ SUVಯೊಂದಿಗೆ 100PS 1-ಟರ್ಬೋ ಪೆಟ್ರೋಲ್ ಇಂಜಿನ್ ಅನ್ನೂ ನೀಡುವ ನಿರೀಕ್ಷೆ ಇದೆ.
ಹ್ಯುಂಡೈ ಎಕ್ಸ್‌ಟರ್‌ನ ನಿರೀಕ್ಷಿತ ಬೆಲೆ ರೂ 6 ಲಕ್ಷ (ಎಕ್ಸ್-ಶೋರೂಂ) ಇರಬಹುದೆಂಬುದು ನಮ್ಮ ನಿರೀಕ್ಷೆಯಾಗಿದೆ. ಇದಕ್ಕೆ ಆರಂಭಿಕ ಹಂತದ SUV ಸ್ಥಾನವನ್ನು ನೀಡಲಾಗಿದ್ದು, ಬೆಲೆಯ ವಿಷಯದಲ್ಲಿ ನಿಯೋಸ್ ಮತ್ತು i20ಯ ನಡುವೆ ಇರಿಸಲಾಗಿದೆ.