Login or Register ಅತ್ಯುತ್ತಮ CarDekho experience ಗೆ
Login

2025ರ ಜನವರಿಯಿಂದ Hyundai ಕಾರುಗಳ ಬೆಲೆಯಲ್ಲಿ ಏರಿಕೆ

ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ rohit ಮೂಲಕ ಡಿಸೆಂಬರ್ 05, 2024 05:39 pm ರಂದು ಪ್ರಕಟಿಸಲಾಗಿದೆ

ಫೇಸ್‌ಲಿಫ್ಟೆಡ್ ಕ್ರೆಟಾ ಮತ್ತು ಅಲ್ಕಾಜರ್ ಎಸ್‌ಯುವಿಗಳನ್ನು ಒಳಗೊಂಡಿರುವ ಹ್ಯುಂಡೈನ ಸಂಪೂರ್ಣ ಭಾರತೀಯ ಕಾರುಗಳಿಗೆ ಬೆಲೆ ಏರಿಕೆಯನ್ನು ಜಾರಿಗೆ ತರಲಾಗುತ್ತದೆ

ಕ್ಯಾಲೆಂಡರ್ ವರ್ಷವು ಮುಕ್ತಾಯವಾಗುತ್ತಿದ್ದಂತೆ, ಮುಂಬರುವ ವರ್ಷದಿಂದ ಅನ್ವಯವಾಗುವಂತೆ ಯೋಜಿಸಲಾದ ಬೆಲೆ ತಿದ್ದುಪಡಿಗಳನ್ನು ಘೋಷಿಸುವುದು ಅನೇಕ ಕಾರು ತಯಾರಕರಿಗೆ ಸಾಮಾನ್ಯ ಅಭ್ಯಾಸವಾಗಿದೆ. 2025ರ ಸ್ವಾಗತಕ್ಕೆ ದಿನಗಣನೆ ಆರಂಭವಾಗಿರುವಾಗ, 2025ರ ಜನವರಿಯಿಂದ ಜಾರಿಗೆ ಬರುವಂತೆ MY2025 ಮೊಡೆಲ್‌ಗಳ ಬೆಲೆ ಏರಿಕೆಯನ್ನು ಪ್ರಾರಂಭಿಸುವುದಾಗಿ ಹ್ಯುಂಡೈ ಬಹಿರಂಗಪಡಿಸಿದೆ. ವಿವಿಧ ಮೊಡೆಲ್‌ಗಳು ಮತ್ತು ವೇರಿಯೆಂಟ್‌ಗಳಿಗೆ ಬೆಲೆ ಪರಿಷ್ಕರಣೆ ಬದಲಾಗುತ್ತದೆ. ಆದ್ದರಿಂದ ನೀವು ಹ್ಯುಂಡೈ ಕಾರನ್ನು ಖರೀದಿಸಲು ಬಯಸಿದರೆ, ಬೆಲೆ ಏರಿಕೆಯಿಂದ ಪಾರಾಗಲು ನಿಮ್ಮ ಇಷ್ಟದ ಹ್ಯುಂಡೈ ಕಾರನ್ನು ಈಗಲೇ ಬುಕ್‌ ಮಾಡುವುದು ಉತ್ತಮ ಸಮಯವಾಗಿದೆ.

ಬೆಲೆ ಏರಿಕೆಗೆ ಕಾರಣಗಳು

ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ, ಪ್ರತಿಕೂಲ ವಿನಿಮಯ ದರ ಮತ್ತು ಲಾಜಿಸ್ಟಿಕ್ಸ್ ವೆಚ್ಚದಲ್ಲಿನ ಹೆಚ್ಚಳವು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹ್ಯುಂಡೈ ಹೇಳಿದೆ. ಆಯ್ಕೆ ಮಾಡಿದ ಮೊಡೆಲ್‌ನ ಆಧಾರದ ಮೇಲೆ 25,000 ರೂ.ವರೆಗೆ ಬೆಲೆಗಳನ್ನು ಪರಿಷ್ಕರಿಸಲಾಗುವುದು ಎಂದು ಹ್ಯುಂಡೈ ಹೇಳಿದೆ.

ಹ್ಯುಂಡೈನ ಅಸ್ತಿತ್ವದಲ್ಲಿರುವ ಮೊಡೆಲ್‌ಗಳ ಬೆಲೆಗಳು

ಮೊಡೆಲ್‌

ಬೆಲೆ ರೇಂಜ್‌

ಗ್ರಾಂಡ್ ಐ10 ನಿಯೋಸ್

5.92 ಲಕ್ಷ ರೂ. ನಿಂದ 8.56 ಲಕ್ಷ ರೂ.

ಐ20

7.04 ಲಕ್ಷ ರೂ. ನಿಂದ 11.21 ಲಕ್ಷ ರೂ.

i20 ಎನ್‌ ಲೈನ್

10 ಲಕ್ಷ ರೂ. ನಿಂದ 12.52 ಲಕ್ಷ ರೂ.

ಔರಾ

6.49 ಲಕ್ಷ ರೂ. ನಿಂದ 9.05 ಲಕ್ಷ ರೂ.

ವೆರ್ನಾ

11 ಲಕ್ಷ ರೂ. ನಿಂದ 17.48 ಲಕ್ಷ ರೂ.

ಎಕ್ಸ್‌ಟರ್‌

6 ಲಕ್ಷ ರೂ. ನಿಂದ 10.43 ಲಕ್ಷ ರೂ.

ವೆನ್ಯೂ

7.94 ಲಕ್ಷ ರೂ. ನಿಂದ 13.53 ಲಕ್ಷ ರೂ.

ವೆನ್ಯೂ ಎನ್‌ ಲೈನ್

12.08 ಲಕ್ಷ ರೂ. ನಿಂದ 13.90 ಲಕ್ಷ ರೂ.

ಕ್ರೆಟಾ

11 ಲಕ್ಷ ರೂ. ನಿಂದ 20.30 ಲಕ್ಷ ರೂ.

ಕ್ರೆಟಾ ಎನ್ ಲೈನ್

16.82 ಲಕ್ಷ ರೂ. ನಿಂದ 20.45 ಲಕ್ಷ ರೂ.

ಅಲ್ಕಾಜರ್

14.99 ಲಕ್ಷ ರೂ. ನಿಂದ 21.55 ಲಕ್ಷ ರೂ.

ಟಕ್ಸನ್

29.02 ಲಕ್ಷ ರೂ. ನಿಂದ 35.94 ಲಕ್ಷ ರೂ.

ಐಯೊನಿಕ್ 5

46.05 ಲಕ್ಷ ರೂ.

ಹ್ಯುಂಡೈನ ಪ್ರಸ್ತುತ ಭಾರತೀಯ ಕಾರುಗಳ ಪಟ್ಟಿಯು ಮೂರು ಎನ್‌ ಲೈನ್ ಕಾರುಗಳನ್ನು ಒಳಗೊಂಡಂತೆ 13 ಮೊಡೆಲ್‌ಗಳನ್ನು ಒಳಗೊಂಡಿದೆ. ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಅತ್ಯಂತ ಕೈಗೆಟುಕುವ ಮೊಡೆಲ್‌ ಆಗಿದ್ದು, ಇದರ ಬೆಲೆ 5.92 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಹಾಗೆಯೇ, ಇದರಲ್ಲಿ ಹೆಚ್ಚಿನ ಬೆಲೆಯನ್ನು ಹೊಂದಿರುವ ಐಯೋನಿಕ್ 5 ಬೆಲೆಯು 46.05 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.

ಇದನ್ನೂ ಸಹ ಓದಿ: ಭಾರತ್ NCAP ನಿಂದ ಭರ್ಜರಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದ Hyundai Tucson

ಹ್ಯುಂಡೈ ಇಂಡಿಯಾದ ಮುಂಬರುವ ಕಾರು ಯಾವುದು ?

ಮುಂದಿನ ವರ್ಷ ಜನವರಿಯಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆಯಿರುವ ಕ್ರೆಟಾ ಇವಿ ಬಿಡುಗಡೆಯೊಂದಿಗೆ ಕೊರಿಯನ್ ಕಾರು ತಯಾರಿಕಾ ಕಂಪೆನಿಯಾಗಿರುವ ಹ್ಯುಂಡೈ 2025 ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. 2025ರಲ್ಲಿ ಭಾರತಕ್ಕೆ ಆಗಮಿಸಬಹುದಾದ ಇತರ ಹೊಸ ಹ್ಯುಂಡೈ ಕಾರುಗಳಲ್ಲಿ ಫೇಸ್‌ಲಿಫ್ಟೆಡ್ ಟಕ್ಸನ್, ಐಯೋನಿಕ್ 6 ಮತ್ತು ಬಹುಶಃ ಹೊಸ-ಜನರೇಶನ್‌ನ ವೆನ್ಯೂ ಸಹ ಸೇರಿವೆ.

ಕಾರುಗಳ ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ WhatsApp ಚಾನಲ್ ಅನ್ನು ಮಿಸ್‌ ಮಾಡದೇ ಫಾಲೋ ಮಾಡಿ

ಇನ್ನಷ್ಟು ಓದಿ: ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಎಎಂಟಿ

Share via

Write your Comment on Hyundai Grand ಐ10 Nios

explore similar ಕಾರುಗಳು

ಹುಂಡೈ ಔರಾ

ಪೆಟ್ರೋಲ್17 ಕೆಎಂಪಿಎಲ್
ಸಿಎನ್‌ಜಿ22 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಹುಂಡೈ ಎಕ್ಸ್‌ಟರ್

ಪೆಟ್ರೋಲ್19.4 ಕೆಎಂಪಿಎಲ್
ಸಿಎನ್‌ಜಿ27.1 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಹುಂಡೈ ಅಲ್ಕಝರ್

ಡೀಸಲ್18.1 ಕೆಎಂಪಿಎಲ್
ಪೆಟ್ರೋಲ್18 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ