ಬಿಡುಗಡೆಗೂ ಮುನ್ನವೇ 10,000 ಕ್ಕೂ ಹೆಚ್ಚು ಹ್ಯುಂಡೈ ಎಕ್ಸ್‌ಟರ್ ನ ಬುಕಿಂಗ್

published on ಜುಲೈ 11, 2023 10:45 pm by ansh for ಹುಂಡೈ ಎಕ್ಸ್‌ಟರ್

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಜುಲೈ 11 ರಿಂದ ಹುಂಡೈ ಎಕ್ಸ್‌ಟರ್ ಡೆಲಿವರಿಯನ್ನು ಪ್ರಾರಂಭಿಸಲಾಗುತ್ತದೆ.

Hyundai Exter

  •  ಎಕ್ಸ್‌ಟರ್‌ನ ಬೆಲೆಗಳು 5.99 ಲಕ್ಷ ರೂ.ದಿಂದ ಪ್ರಾರಂಭವಾಗುತ್ತವೆ (ಪ್ರಾಸ್ತಾವಿಕ, ಎಕ್ಸ್-ಶೋ ರೂಂ)

  •  ಈ ಮೈಕ್ರೋ ಎಸ್‌ಯುವಿ ಕಾರಿನ ಬುಕಿಂಗ್ ಈಗಾಗಲೇ ಆರಂಭವಾಗಿದೆ.

  •  1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಅನ್ನು ನೀಡಲಾಗಿದೆ.

  •  ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ವಾಯ್ಸ್-ಎನೇಬಲ್ಡ್ ಸಿಂಗಲ್-ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನಂತಹ ಫೀಚರ್‌ಗಳನ್ನು  ಹೊಂದಿದೆ.

ಸುಮಾರು ಮೂರು ತಿಂಗಳ ಕಾಯುವಿಕೆಯ ನಂತರ, ಹ್ಯುಂಡೈ ಎಕ್ಸ್‌ಟರ್ ರೂ. 5.99 ಲಕ್ಷದ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ (ಪ್ರಾಸ್ತಾವಿಕ, ಎಕ್ಸ್ ಶೋ ರೂಂ). ಎಕ್ಸ್‌ಟರ್ ಟಾಟಾ ಪಂಚ್ ಮತ್ತು ಮಾರುತಿ ಇಗ್ನಿಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಈಗಾಗಲೇ ಉತ್ತಮ ಪ್ರಮಾಣದ ಬುಕಿಂಗ್‌ಗಳನ್ನು ಸ್ವೀಕರಿಸಿದೆ. ಅದರ ಬುಕಿಂಗ್ ಮತ್ತು ಡೆಲಿವರಿ ವಿವರಗಳನ್ನು ಕೆಳಗೆ ನೀಡಲಾಗಿದೆ:

 

ಬುಕಿಂಗ್‌ಗಳು ಮತ್ತು ಡೆಲಿವರಿ

Hyundai Exter

 ಎಕ್ಸ್‌ಟರ್‌ ಕಾರಿಗೆ ಬುಕಿಂಗ್ ಆರಂಭವಾಗಿ 2 ತಿಂಗಳಿಗಿಂತಲೂ ಹೆಚ್ಚಿನ ಸಮಯವಾಗಿದ್ದು, ಆಸಕ್ತ ಗ್ರಾಹಕರು 11,000 ರೂ.ಗಳ ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದಾಗಿದೆ. ಬಿಡುಗಡೆಗೂ ಮುನ್ನ ಈ ಕಾರು 10,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದಿತ್ತು. ಜುಲೈ 11 ರಿಂದ ಎಕ್ಸ್‌ಟರ್‌ನ ಡೆಲಿವರಿಯನ್ನು ಪ್ರಾರಂಭಿಸುವುದಾಗಿ ಹುಂಡೈ ತಿಳಿಸಿದೆ.

 

ಪವರ್‌ಟ್ರೇನ್

Hyundai Exter Engine

ಎಕ್ಸ್‌ಟರ್ 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 82PS ಪವರ್ ಮತ್ತು 113Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಇದು ಅದೇ ಎಂಜಿನ್‌ನೊಂದಿಗೆ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಸಹ ಪಡೆಯುತ್ತದೆ, ಇದು 69PS ಮತ್ತು 95Nm ಅನ್ನು ಉತ್ಪಾದಿಸುತ್ತದೆ. ಎಕ್ಸ್‌ಟರ್ ಸಿಎನ್‌ಜಿ ವೇರಿಯಂಟ್‌ಗಳಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಮಾತ್ರ ನೀಡಲಾಗಿದೆ.

ಫೀಚರ್‌ಗಳು ಮತ್ತು ಸುರಕ್ಷತೆ

Hyundai Exter Dashboard

 ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್ ಕಮಾಂಡ್‌ಗಳೊಂದಿಗೆ ಸಿಂಗಲ್-ಪೇನ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಎರಡು ಕ್ಯಾಮೆರಾಗಳೊಂದಿಗೆ ಡ್ಯಾಶ್ ಕ್ಯಾಮೆರಾದಂತಹ ಫೀಚರ್‌ಗಳನ್ನು ಹುಂಡೈ ಎಕ್ಸ್‌ಟರ್ ಹೊಂದಿದೆ.

 ಇದನ್ನೂ ಓದಿ: ಗ್ರ್ಯಾಂಡ್ i10 ನಿಯೋಸ್‌ಗೆ ಹೋಲಿಸಿದರೆ ಈ 5 ಹೆಚ್ಚುವರಿ ಫೀಚರ್‌ಗಳನ್ನು ಹೊಂದಿರುವ ಹ್ಯುಂಡೈ ಎಕ್ಸ್‌ಟರ್

 ಇದರ ಪ್ರಮಾಣಿತ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM) ಮತ್ತು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿದೆ. ಮೈಕ್ರೋ-ಎಸ್‌ಯುವಿಯ ಉನ್ನತ ವೇರಿಯಂಟ್‌ಗಳು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಡೇ & ನೈಟ್ IRVM, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾದಂತಹ ಫೀಚರ್‌ಗಳನ್ನೂ ಸಹ ಪಡೆಯುತ್ತವೆ.

 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Hyundai Exter

ಇದರ ಸಂಪೂರ್ಣ ಬೆಲೆ ಪಟ್ಟಿ ಇನ್ನೂ ಬಹಿರಂಗವಾಗಿಲ್ಲವಾದರೂ, ಮ್ಯಾನುಯಲ್ ವೇರಿಯಂಟ್‌ಗಳ ಬೆಲೆಗಳು ರೂ. 5.99 ಲಕ್ಷದಿಂದ ರೂ. 10 ಲಕ್ಷದವರೆಗೆ (ಪರಿಚಯಾತ್ಮಕ, ಎಕ್ಸ್-ಶೋರೂಂ) ಇರಬಹುದು ಎಂದು ತಿಳಿದುಬಂದಿದೆ. ಟಾಟಾ ಪಂಚ್ ಮತ್ತು ಮಾರುತಿ ಇಗ್ನಿಸ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಎಕ್ಸ್‌ಟರ್ ಅನ್ನು ಸಿಟ್ರಾನ್ C3, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್‌ಗೆ ಪರ್ಯಾಯವಾಗಿ ಕೂಡ ಪರಿಗಣಿಸಬಹುದು.

ಇನ್ನಷ್ಟು ಓದಿ: ಎಕ್ಸ್‌ಟರ್ AMT

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ಎಕ್ಸ್‌ಟರ್

1 ಕಾಮೆಂಟ್
1
S
sanjay singh
Jul 22, 2023, 12:59:21 PM

Muje bhi chahiye

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience