Login or Register ಅತ್ಯುತ್ತಮ CarDekho experience ಗೆ
Login

Hyundai Exter Knight ಎಡಿಷನ್‌ ಬಿಡುಗಡೆ, ಬೆಲೆಗಳು 8.38 ಲಕ್ಷ ರೂ.ನಿಂದ ಪ್ರಾರಂಭ

ಹುಂಡೈ ಎಕ್ಸ್‌ಟರ್ ಗಾಗಿ shreyash ಮೂಲಕ ಜುಲೈ 10, 2024 07:30 pm ರಂದು ಪ್ರಕಟಿಸಲಾಗಿದೆ

ಎಸ್‌ಯುವಿಯ 1-ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮಿಸಲು ಪರಿಚಯಿಸಲಾದ ಎಕ್ಸ್‌ಟರ್‌ನ ನೈಟ್ ಆವೃತ್ತಿಯು ಉನ್ನತ-ಸ್ಪೆಕ್ ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒಪ್ಶನಲ್‌) ಕನೆಕ್ಟ್ ಆವೃತ್ತಿಗಳೊಂದಿಗೆ ಲಭ್ಯವಿದೆ

  • ಹೊರಭಾಗದ ಹೈಲೈಟ್ಸ್‌ಗಳು ಎಲ್ಲಾ ಕಪ್ಪು ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಕಪ್ಪು ಅಲಾಯ್‌ ವೀಲ್‌ಗಳು ಮತ್ತು ಕೆಂಪು-ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳನ್ನು ಒಳಗೊಂಡಿವೆ.
  • ಒಳಭಾಗದಲ್ಲಿ, ಇದು ಎಲ್ಲಾ ಕಪ್ಪು ಡ್ಯಾಶ್‌ಬೋರ್ಡ್ ಮತ್ತು ಕೆಂಪು ಇನ್ಸರ್ಟ್‌ನೊಂದಿಗೆ ಕಪ್ಪು ಸೀಟ್ ಫ್ಯಾಬ್ರಿಕ್‌ ಅನ್ನು ಪಡೆಯುತ್ತದೆ.
  • 8-ಇಂಚಿನ ಟಚ್‌ಸ್ಕ್ರೀನ್, ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾದೊಂದಿಗೆ ಡ್ಯಾಶ್ ಕ್ಯಾಮ್ ಸೇರಿದಂತೆ ಫೀಚರ್‌ಗಳನ್ನು ಎಕ್ಸ್‌ಟರ್‌ನಂತೆ ಪಡೆಯುತ್ತದೆ.
  • ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಿಂದ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.
  • ರೆಗುಲರ್‌ ಎಕ್ಸ್‌ಟರ್‌ನೊಂದಿಗೆ ನೀಡಲಾಗುವ ಅದೇ 1.2-ಲೀಟರ್ ನ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ.
  • ಎಕ್ಸ್‌ಟರ್‌ನ ನೈಟ್ ಎಡಿಷನ್‌ಗಾಗಿ ಗ್ರಾಹಕರು 15,000 ರೂ.ಗಳಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ.

2023ರಲ್ಲಿ ಹ್ಯುಂಡೈ ಎಕ್ಸ್‌ಟರ್ ಅನ್ನು ಮೊದಲು ಭಾರತದಲ್ಲಿ ಪರಿಚಯಿಸಲಾಯಿತು, ಈ ಮೂಲಕ ಟಾಟಾ ಪಂಚ್‌ಗೆ ಸ್ಪರ್ಧೆಯನ್ನು ಒಡ್ಡಲು ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ಗೆ ಪ್ರವೇಶಿಸಿತು. ಎಕ್ಸ್‌ಟರ್‌ನ ಎಸ್‌ಯುವಿ ತರಹದ ವಿನ್ಯಾಸ ಮತ್ತು ಫೀಚರ್‌ಗಳಿಂದಾಗಿ ಇದು ಮೊದಲಿನಿಂದಲೂ ಖರೀದಿದಾರರ ಜನಪ್ರಿಯ ಆಯ್ಕೆಯಾಗಿದೆ. ಅದರ ಜನಪ್ರಿಯತೆಯನ್ನು ಹೆಚ್ಚಿಸಲು ಮತ್ತು ಅದರ 1-ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮಿಸಲು, ಹ್ಯುಂಡೈ ಈಗ ಎಕ್ಸ್‌ಟರ್‌ನ ವಿಶೇಷ ನೈಟ್ ಎಡಿಷನ್‌ಅನ್ನು ಪರಿಚಯಿಸಿದೆ.

ಬೆಲೆಗಳು

ಆವೃತ್ತಿಗಳು

ರೆಗುಲರ್‌ನ ಬೆಲೆ

ನೈಟ್‌ ಎಡಿಷನ್‌ನ ಬೆಲೆಗಳು

ವ್ಯತ್ಯಾಸ

ಮ್ಯಾನುಯಲ್‌

ಎಸ್‌ಎಕ್ಸ್‌

8.23 ಲಕ್ಷ ರೂ.

8.38 ಲಕ್ಷ ರೂ.

+ 15,000 ರೂ.

ಎಸ್‌ಎಕ್ಸ್‌ ಡ್ಯುಯಲ್‌ ಟೋನ್‌

8.47 ಲಕ್ಷ ರೂ.

8.62 ಲಕ್ಷ ರೂ.

+ 15,000 ರೂ.

ಎಸ್‌ಎಕ್ಸ್‌ (ಒಪ್ಶನಲ್‌) ಕನೆಕ್ಟ್‌

9.56 ಲಕ್ಷ ರೂ.

9.71 ಲಕ್ಷ ರೂ.

+ 15,000 ರೂ.

ಎಸ್‌ಎಕ್ಸ್‌ (ಒಪ್ಶನಲ್‌) ಕನೆಕ್ಟ್‌ ಡ್ಯುಯಲ್‌ ಟೋನ್‌

9.71 ಲಕ್ಷ ರೂ.

9.86 ಲಕ್ಷ ರೂ.

+15,000 ರೂ.

ಆಟೋಮ್ಯಾಟಿಕ್‌

ಎಸ್‌ಎಕ್ಸ್‌

8.90 ಲಕ್ಷ ರೂ.

9.05 ಲಕ್ಷ ರೂ.

+ 15,000 ರೂ.

ಎಸ್‌ಎಕ್ಸ್‌ ಡ್ಯುಯಲ್‌ ಟೋನ್‌

9.15 ಲಕ್ಷ ರೂ.

9.30 ಲಕ್ಷ ರೂ.

+15,000 ರೂ.

ಎಸ್‌ಎಕ್ಸ್‌ (ಒಪ್ಶನಲ್‌) ಕನೆಕ್ಟ್‌

10 ಲಕ್ಷ ರೂ.

10.15 ಲಕ್ಷ ರೂ.

+15,000 ರೂ.

ಎಸ್‌ಎಕ್ಸ್‌ (ಒಪ್ಶನಲ್‌) ಕನೆಕ್ಟ್‌ ಡ್ಯುಯಲ್‌ ಟೋನ್‌

10.28 ಲಕ್ಷ ರೂ.

10.43 ಲಕ್ಷ ರೂ.

+ 15,000 ರೂ.

ಎಕ್ಸ್‌ಟರ್‌ನ ನೈಟ್ ಎಡಿಷನ್‌ಅನ್ನು ಅದರ ಟಾಪ್‌ ಸ್ಪೆಕ್‌ಗಳಾದ ಎಸ್‌ಎಕ್ಸ್‌ ಮತ್ತು ಎಸ್‌ಎಕ್ಸ್‌(ಒಪ್ಶನಲ್‌) ಕನೆಕ್ಟ್ ಆವೃತ್ತಿಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಇದು ರೆಗುಲರ್‌ ಆವೃತ್ತಿಗಳಿಂದ 15,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ ಮತ್ತು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳೊಂದಿಗೆ ಲಭ್ಯವಿದೆ.

ಇದನ್ನು ಸಹ ಓದಿ: ಈ ಜುಲೈನಲ್ಲಿ ಕೆಲವು Hyundai ಕಾರುಗಳ ಮೇಲೆ ಭರ್ಜರಿ 2 ಲಕ್ಷ ರೂ.ವರೆಗೆ ಡಿಸ್ಕೌಂಟ್‌ಗಳನ್ನು ಪಡೆಯಿರಿ

ನೈಟ್ ಎಡಿಷನ್‌ನಲ್ಲಿರುವ ಬದಲಾವಣೆಗಳು

ಹುಂಡೈ ವೆನ್ಯೂನ ನೈಟ್ ಎಡಿಷನ್‌ನಲ್ಲಿ ಗಮನಿಸಿದಂತೆ, ಎಕ್ಸ್‌ಟರ್ ಸುತ್ತಲೂ ಕೆಂಪು ಹೈಲೈಟ್‌ಗಳೊಂದಿಗೆ ಸಂಪೂರ್ಣ ಕಪ್ಪು ಬಾಡಿಕಲರ್‌ನೊಂದಿಗೆ ಬರುತ್ತದೆ. ಬಾಡಿ ಕಲರ್‌ನ ಹೊರತಾಗಿ, ಎಕ್ಸ್‌ಟರ್ ನೈಟ್ ಆವೃತ್ತಿಯಲ್ಲಿನ ಬದಲಾವಣೆಗಳು ಸಂಪೂರ್ಣ-ಕಪ್ಪು ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಸಂಪೂರ್ಣ ಕಪ್ಪಾದ ಅಲಾಯ್‌ ವೀಲ್‌ಗಳು ಮತ್ತು ನೈಟ್ ಎಡಿಷನ್‌ನ ಬ್ಯಾಡ್ಜ್ ಅನ್ನು ಒಳಗೊಂಡಿವೆ. ಹೊಸ ಅಬಿಸ್ ಬ್ಲ್ಯಾಕ್ ಬಾಡಿ ಕಲರ್‌ನ ಹೊರತಾಗಿ, ಎಕ್ಸ್‌ಟರ್ ನೈಟ್ ಎಡಿಷನ್‌ ಇತರ ನಾಲ್ಕು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಪೇಂಟ್ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಸ್ಟಾರಿ ನೈಟ್, ಅಟ್ಲಾಸ್ ವೈಟ್, ರೇಂಜರ್ ಖಾಕಿ, ಶ್ಯಾಡೋ ಗ್ರೇ (ಹೊಸ) ಎಂಬ ಮೊನೋಟೋನ್‌ ಬಣ್ಣಗಳಾದರೆ, ಅಬಿಸ್ ಬ್ಲ್ಯಾಕ್‌ ರೂಫ್‌ನೊಂದಿಗೆ ರೇಂಜರ್ ಖಾಕಿ ಮತ್ತು ಅಬಿಸ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಕಪ್ಪು ಛಾವಣಿಯೊಂದಿಗೆ ಶ್ಯಾಡೋ ಗ್ರೇ(ಹೊಸ) ಎಂಬ ಡ್ಯುಯಲ್‌ ಟೋನ್‌ನಲ್ಲಿ ಲಭ್ಯವಿದೆ.

ಇಂಟಿರೀಯರ್‌ ಫೀಚರ್‌ಗಳು

ಒಳಭಾಗದಲ್ಲಿ, ಎಕ್ಸ್‌ಟರ್ ನೈಟ್ ಎಡಿಷನ್‌ ಎಲ್ಲಾ ಕಪ್ಪು ಇಂಟರ್ನಲ್‌ ಥೀಮ್ ಮತ್ತು ಕಪ್ಪು ಸೀಟ್ ಕವರ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಇದು ಎಸಿ ವೆಂಟ್‌ಗಳು ಮತ್ತು ಸೀಟ್‌ಗಳ ಮೇಲೆ ಕೆಂಪು ಇನ್ಸರ್ಟ್‌ಗಳನ್ನು ಪಡೆಯುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ, ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್ ಕ್ಯಾಮ್ ಸೇರಿದಂತೆ ಅದರ ರೆಗುಲರ್‌ ಆವೃತ್ತಿಯಂತೆ ಎಕ್ಸ್‌ಟರ್‌ನ ಸಂಪೂರ್ಣ ಕಪ್ಪು ಎಡಿಷನ್‌ ಇದೇ ರೀತಿಯ ಫೀಚರ್‌ಗಳ ಪಟ್ಟಿಯನ್ನು ಹೊಂದಿದೆ.

ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಿಂದ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.

ಅದೇ ಪೆಟ್ರೋಲ್ ಇಂಜಿನ್

ಎಕ್ಸ್‌ಟರ್‌ನ ನೈಟ್ ಎಡಿಷನ್‌ ಅದೇ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ (83 PS/114 Nm), ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ನೊಂದಿಗೆ ಜೋಡಿಸಬಹುದಾಗಿದೆ. ಮೈಕ್ರೋ ಎಸ್‌ಯುವಿಯ ವಿಶೇಷ ಎಡಿಷನ್‌ನ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯೊಂದಿಗೆ ಲಭ್ಯವಿಲ್ಲ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹ್ಯುಂಡೈ ಎಕ್ಸ್‌ಟರ್‌ನ ವಿಶೇಷ ನೈಟ್ ಎಡಿಷನ್‌ನ ಅನುಗುಣವಾದ ರೆಗುಲರ್‌ ಆವೃತ್ತಿಗಿಂತ 15,000 ರೂ.ವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿದೆ. ಎಕ್ಸ್‌ಟರ್ ಪ್ರಸ್ತುತ ಬೆಲೆಯು 6.13 ಲಕ್ಷ ರೂ.ನಿಂದ 10.43 ಲಕ್ಷ ರೂ.(ಎಕ್ಸ್ ಶೋರೂಂ ದೆಹಲಿ) ವರೆಗೆ ಇದೆ. ಇದು ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿದ್ದು, ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ನಂತಹ ಸಬ್-4ಎಮ್‌ ಕ್ರಾಸ್‌ಒವರ್‌ಗಳಿಗೆ ಪರ್ಯಾಯವಾಗಿದೆ.

ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡುವುದನ್ನು ಮಿಸ್‌ ಮಾಡ್ಬೇಡಿ

ಇನ್ನಷ್ಟು ಓದಿ: ಹ್ಯುಂಡೈ ಎಕ್ಸ್‌ಟರ್ ಎಎಮ್‌ಟಿ

Share via

Write your Comment on Hyundai ಎಕ್ಸ್‌ಟರ್

A
adil mansoori
Jul 14, 2024, 3:35:13 PM

I hope for turbo petrol option like XUV 3XO

A
adil mansoori
Jul 14, 2024, 3:35:13 PM

I hope for turbo petrol option like XUV 3XO

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ಫೇಸ್ ಲಿಫ್ಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ