ಬಿಡುಗಡೆಗೆ ಮುಂಚಿತವಾಗಿ ಉತ್ಪಾದನಾ ಶ್ರೇಣಿಯನ್ನು ಪ್ರಾರಂಭಿಸುತ್ತಿರುವ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ
ಹುಂಡೈ ಎಕ್ಸ್‌ಟರ್ ಗಾಗಿ rohit ಮೂಲಕ ಜೂನ್ 26, 2023 02:33 pm ರಂದು ಪ್ರಕಟಿಸಲಾಗಿದೆ
- 17 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಎಕ್ಸ್‌ಟರ್‌ನ ಸರಣಿ ಉತ್ಪಾದನೆಯ ಮೊದಲನೇ ಮಾಡೆಲ್ ಹೊಸ ಖಾಕಿ ಬಾಹ್ಯ ಬಣ್ಣದ ಫಿನಿಶಿಂಗ್ ಆಯ್ಕೆಯನ್ನು ಪಡೆದುಕೊಂಡಿದೆ
-
11,000 ರೂ.ಗೆ ಹ್ಯುಂಡೈ ಎಕ್ಸ್‌ಟರ್‌ಗೆ ಬುಕ್ಕಿಂಗ್‌ಗಳನ್ನು ಸ್ವೀಕರಿಸಲಾಗುತ್ತಿದೆ.
-
ಮೈಕ್ರೋ ಎಸ್‌ಯುವಿ ಜುಲೈ 10 ರಂದು ಬಿಡುಗಡೆಯಾಗಲಿದೆ.
-
ಬಾಹ್ಯ ಮುಖ್ಯಾಂಶಗಳಲ್ಲಿ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು ಮತ್ತುರೂಫ್ ರೈಲ್‌ಗಳಲ್ಲಿ H- ಆಕಾರದ ಎಲಿಮೆಂಟ್‌ಗಳು ಸೇರಿವೆ.
-
ಗ್ರ್ಯಾಂಡ್ i10 ನಿಯೋಸ್‌ನಲ್ಲಿ ಕಂಡುಬರದ ಸನ್‌ರೂಫ್ ಮತ್ತು ಡಿಜಿಟೈಸ್ಡ್ ಡ್ರೈವರ್ ಡಿಸ್‌ಪ್ಲೇ ಪಡೆಯುತ್ತದೆ.
-
ಗ್ರ್ಯಾಂಡ್ i10 ನಿಯೋಸ್‌ನಲ್ಲಿರುವಂತದ್ದೇ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್‌ಗಳನ್ನು ಪಡೆದುಕೊಳ್ಳುತ್ತದೆ.
-
ಬೆಲೆಗಳು 6 ಲಕ್ಷ ರೂ. ದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ).
ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ಕಾರು ತಯಾರಕರ ಉತ್ಪಾದನಾ ಘಟಕದಲ್ಲಿ ಸರಣಿ ಉತ್ಪಾದನೆಯನ್ನು ಪ್ರವೇಶಿಸುವ ಮೂಲಕ ಹ್ಯುಂಡೈ ಎಕ್ಸ್‌ಟರ್ ಬಿಡುಗಡೆಗೆ ಸಿದ್ಧವಾಗುತ್ತಿದೆ. ಉತ್ಪಾದನಾ ಶ್ರೇಣಿಯ ಮೊದಲ ಮಾಡೆಲ್ ವಿಶಿಷ್ಟವಾದ ಖಾಕಿ ಬಣ್ಣದ ಫಿನಿಶಿಂಗ್ ಆಯ್ಕೆಯನ್ನು ಪಡೆದುಕೊಂಡಿದೆ. ಹ್ಯುಂಡೈ ಈಗಾಗಲೇ ಮೈಕ್ರೋ ಎಸ್‌ಯುವಿಯ ಬುಕ್ಕಿಂಗ್‌ಗಳನ್ನು 11,000 ರೂ.ಗಳಿಗೆ ಸ್ವೀಕರಿಸುತ್ತಿದೆ. ಹುಂಡೈ ಎಸ್‌ಯುವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:
ಆಕರ್ಷಕ ವಿನ್ಯಾಸ
ಎಕ್ಸ್‌ಟರ್ ಹ್ಯುಂಡೈನ ಹೊಸ ಪ್ರವೇಶ ಮಟ್ಟದ ಎಸ್‌ಯುವಿ ಆಫರಿಂಗ್ ಆಗಿದೆ. ಇದು ಆಕರ್ಷಕ ಮತ್ತು ವಿಶಿಷ್ಟವಾದ ಬಾಕ್ಸಿ ನೋಟವನ್ನು ಪಡೆಯುತ್ತದೆ, ಇದು ದಪ್ಪನಾದ ವ್ಹೀಲ್ ಆರ್ಚ್‌ಗಳು, ಬಾಡಿ ಕ್ಲಾಡಿಂಗ್ ಮತ್ತು ರೂಫ್ ರೈಲ್‌ಗಳವರೆಗೆ ಮುಂದುವರಿಯುತ್ತದೆ. ಇತರ ಆಸಕ್ತಿದಾಯಕ ಬಾಹ್ಯ ಲಕ್ಷಣಗಳಲ್ಲಿ H- ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್‌ಲೈಟ್‌ಗಳಲ್ಲಿನ ಎಲಿಮೆಂಟ್‌ಗಳು, ದೊಡ್ಡ ಸ್ಕಿಡ್ ಪ್ಲೇಟ್‌ಗಳು ಮತ್ತು ಪ್ರೊಜೆಕ್ಟರ್ ಹೆಡ್‌ಲೈಟ್‌ಗಳಿಗಾಗಿ ಕ್ರೋಮ್ ಸರೌಂಡ್ ಸೇರಿವೆ.
ಇಕ್ವಿಪ್‌ಮೆಂಟ್‌ಗಳು
ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್, ಕ್ರೂಸ್ ಕಂಟ್ರೋಲ್, 8-ಇಂಚಿನ ಟಚ್‌ಸ್ಕ್ರೀನ್, ಡಿಜಿಟೈಸ್ಡ್ ಡ್ರೈವರ್ ಡಿಸ್ಪ್ಲೇ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನಂತಹ ಎಕ್ಸ್‌ಟರ್‌ನ ಕೆಲವು ಹೆಡ್‌ಲೈನಿಂಗ್ ವೈಶಿಷ್ಟ್ಯಗಳನ್ನು ಹ್ಯುಂಡೈ ಬಹಿರಂಗಪಡಿಸಿದೆ.
ಎಕ್ಸ್‌ಟರ್‌ನ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಎಲ್ಲಾ ಆಸನಗಳಿಗೆ ರಿಮೈಂಡರ್‌ಗಳು ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಹೊಂದಿದೆ.
ಪವರ್‌ಟ್ರೇನ್
ಇದು ಗ್ರ್ಯಾಂಡ್ i10 ನಿಯೋಸ್‌ನ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ, ಇದು ಅದರ ಪವರ್‌ಟ್ರೇನ್‌ಗಳನ್ನು ಕೂಡ ಹಂಚಿಕೊಳ್ಳುತ್ತದೆ. ಇದು 5-ಸ್ಪೀಡ್ MT ಅಥವಾ AMT ನೊಂದಿಗೆ ಜೋಡಿಸಲಾದ 1.2-ಲೀಟರ್ ಪೆಟ್ರೋಲ್ ಎಂಜಿನ್ (83PS/114Nm) ಅನ್ನು ಪಡೆಯುತ್ತದೆ. ಅದೇ ಯುನಿಟ್ ಅನ್ನು ಕೇವಲ 5-ಸ್ಪೀಡ್ MT ಯೊಂದಿಗೆ ಐಚ್ಛಿಕ ಸಿಎನ್‌ಜಿ ಕಿಟ್‌ನೊಂದಿಗೆ ನೀಡಲಾಗುವುದು.
ಸಂಬಂಧಿತ: ಗ್ರ್ಯಾಂಡ್ i10 ನಿಯೋಸ್‌ಗಿಂತ ಈ 5 ಹೆಚ್ಚುವರಿ ಫೀಚರ್‌ಗಳನ್ನು ಹೊಂದಿರುವ ಹ್ಯುಂಡೈ ಎಕ್ಸ್‌ಟರ್
ಬಿಡುಗಡೆ, ಬೆಲೆ ಮತ್ತು ಸ್ಪರ್ಧೆ
ಎಕ್ಸ್‌ಟರ್ ಜುಲೈ 10 ರಂದು ಮಾರಾಟಕ್ಕೆ ಲಭ್ಯವಾಗಲಿದೆ, ಇದರ ಬೆಲೆ 6 ಲಕ್ಷ ರೂ.ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ). ಇದು ಟಾಟಾ ಪಂಚ್, ಸಿಟ್ರೊಯೆನ್ C3 ಮತ್ತು ಮಾರುತಿ ಫ್ರಾಂಕ್ಸ್‌ನೊಂದಿಗೆ ಸ್ಪರ್ಧಿಸುವುದರೊಂದಿಗೆ ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗೆ ಕೂಡ ಪ್ರತಿಸ್ಪರ್ಧಿಯಾಗಿದೆ.
0 out of 0 found this helpful