• English
  • Login / Register

ಹ್ಯುಂಡೈ ಎಕ್ಸ್‌ಟರ್ Vs ಇದರ ಪ್ರತಿಸ್ಪರ್ಧಿಗಳು: ವಿಶೇಷಣಗಳ ಹೋಲಿಕೆ

ಹುಂಡೈ ಎಕ್ಸ್‌ಟರ್ ಗಾಗಿ shreyash ಮೂಲಕ ಜುಲೈ 21, 2023 06:34 am ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯುಂಡೈ ಎಕ್ಸ್‌ಟರ್ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಯಾವ ರೀತಿಯ ಕಾರ್ಯದಕ್ಷತೆಯನ್ನು ಹೊಂದಿದೆ ಎಂಬುದನ್ನು ನಾವು ನೋಡೋಣ

Hyundai Exter vs Rivals: Specifications Compared

ಹ್ಯುಂಡೈ ಎಕ್ಸ್‌ಟರ್ ಈಗ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದ್ದು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳ ಜೊತೆಗೆ ಐದು ವಿಶಾಲ ವೇರಿಯೆಂಟ್‌ಗಳನ್ನು ಹೊಂದಿದೆ – EX, S, SX, SX (O), ಮತ್ತು SX (O) ಕನಕ್ಟ್. ಈ ಮೈಕ್ರೋ ಎಸ್‌ಯುವಿಯ ಗಾತ್ರ ಮತ್ತು ಬೆಲೆಯನ್ನು ಪರಿಗಣಿಸಿ, ನಾವು ಅದರ ವಿಶೇಷಣಗಳನ್ನು ಅದರ ನೇರ ಪ್ರತಿಸ್ಪರ್ಧಿಯಾದ ಟಾಟಾ ಪಂಚ್, ಜೊತೆಗೆ ಸಣ್ಣ ಎಸ್‌ಯುವಿ ಮತ್ತು ಕ್ರಾಸ್ಓವರ್ ಜಾಗದಲ್ಲಿ ಇತರ ನಿಕಟ ಪ್ರತಿಸ್ಪರ್ಧಿಗಳೊಂದಿಗೆ ಹೋಲಿಕೆ ಮಾಡಿದ್ದೇವೆ. ಅವುಗಳೆಲ್ಲವುಗಳ ಕಾರ್ಯದಕ್ಷತೆಯ ತುಲನೆ ನೋಡೋಣ:

ಆಯಾಮಗಳು

ಆಯಾಮಗಳು

ಹ್ಯುಂಡೈ ಎಕ್ಸ್‌ಟರ್

ಟಾಟಾ ಪಂಚ್

ಸಿಟ್ರಾನ್ C3

ಮಾರುತಿ ಇಗ್ನಿಸ್

ರೆನಾಲ್ಟ್ ಕೈಗರ್

ನಿಸಾನ್ ಮ್ಯಾಗ್ನೈಟ್

ಉದ್ದ

3,815mm

3,827mm

3,981mm

3,700mm

3,991mm

3,994mm

ಅಗಲ

1,710mm

1,742mm

1,733mm

1,690mm

1,750mm

1,758mm

ಎತ್ತರ

1,631mm

1,615mm

1,604mm ತನಕ

1,595mm

1,605mm

1,572mm

ವ್ಹೀಲ್‌ಬೇಸ್

2,450mm

2,445mm

2,540mm

2,435mm

2,500mm

2,500mm

ಬೂಟ್ ಸ್ಪೇಸ್

391 ಲೀಟರ್‌ಗಳು

366 ಲೀಟರ್‌ಗಳು

315 ಲೀಟರ್‌ಗಳು

260 ಲೀಟರ್‌ಗಳು

405 ಲೀಟರ್‌ಗಳು

336 ಲೀಟರ್‌ಗಳು

Hyundai Exter

  •  ಮೇಲಿನ ಕೋಷ್ಟಕದಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಡೆಲ್‌ಗಿಂತ ಹ್ಯುಂಡೈ ಎಕ್ಸ್‌ಟರ್ ಅತ್ಯಂತ ಎತ್ತರದ ಮಾಡೆಲ್ ಆಗಿದೆ. ಆದಾಗ್ಯೂ, ಉದ್ದದ ವಿಷಯದಲ್ಲಿ, ಇದು ಮಾರುತಿ ಇಗ್ನಿಸ್ ಹೊರತುಪಡಿಸಿ ಎಲ್ಲಕ್ಕಿಂತ ಚಿಕ್ಕದು ಮತ್ತು ಕಿರಿದಾಗಿದೆ.

  •  ಎಕ್ಸ್‌ಟರ್‌ನ ನೇರ ಪ್ರತಿಸ್ಪರ್ಧಿಯಾದ ಟಾಟಾ ಪಂಚ್ ಹ್ಯುಂಡೈನ ಮೈಕ್ರೋ ಎಸ್‌ಯುವಿಗಿಂತ ಉದ್ದವಾಗಿದೆ, ಆದರೆ ವ್ಹೀಲ್‌ಬೇಸ್ ಹಾಗೂ ಬೂಟ್‌ಸ್ಪೇಸ್ ಅಂಕಿಅಂಶಗಳ ವಿಷಯದಲ್ಲಿ ಇದು ಬೇರೆಯದನ್ನೇ ಹೇಳುತ್ತದೆ.

  •  ಅರ್ಥವಾಗುವಂತೆ,  ರೆನಾಲ್ಟ್ ಕೈಗರ್ ಮತ್ತು ನಿಸಾನ್ ಮ್ಯಾಗ್ನೈಟ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳು ಇಲ್ಲಿರುವ ಉಳಿದ ಕಾರುಗಳಿಗಿಂತ ಉದ್ದ ಮತ್ತು ಅಗಲವಾಗಿದೆ ಆದರೆ ಸಿಟ್ರಾನ್ C3 ಅತಿ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿದೆ.

  •  ಕೈಗರ್‌ನ ಬೂಟ್ ಅತ್ಯಧಿಕ ಲಗೇಜ್ ಲೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ, ನಂತರ ಹ್ಯುಂಡೈ ಎಕ್ಸ್‌ಟರ್, ಈ ಹೋಲಿಕೆಯಲ್ಲಿ ಎಲ್ಲಾ ಮಾಡೆಲ್‌ಗಳಲ್ಲಿ ಎರಡನೇ ಅತಿ ಹೆಚ್ಚು ಸ್ಥಳವನ್ನು ಹೊಂದಿದೆ.

 ಪವರ್‌ಟ್ರೇನ್

ಸ್ಪೆಕ್‌ಗಳು

ಹ್ಯುಂಡೈ ಎಕ್ಸ್‌ಟರ್

ಟಾಟಾ ಪಂಚ್

ಸಿಟ್ರಾನ್ C3

ಮಾರುತಿ ಇಗ್ನಿಸ್

ರೆನಾಲ್ಟ್ ಕೈಗರ್/ ನಿಸಾನ್ ಮ್ಯಾಗ್ನೈಟ್

ಎಂಜಿನ್

1.2-ಲೀಟರ್ ಪೆಟ್ರೋಲ್

1.2-ಲೀಟರ್ ಪೆಟ್ರೋಲ್ +ಸಿಎನ್‌ಜಿ

1.2- ಲೀಟರ್ ಪೆಟ್ರೋಲ್

1.2- ಲೀಟರ್ ಪೆಟ್ರೋಲ್

1.2-ಲೀಟರ್ ಟರ್ಬೋ ಪೆಟ್ರೋಲ್

1.2- ಲೀಟರ್ ಪೆಟ್ರೋಲ್

1- ಲೀಟರ್ ಪೆಟ್ರೋಲ್

1- ಲೀಟರ್ ಟರ್ಬೋ ಪೆಟ್ರೋಲ್

ಪವರ್

83PS

69PS

88PS

82PS

110PS

83PS

72PS

100PS

ಟಾರ್ಕ್

114Nm

95Nm

115Nm

115Nm

190Nm

113Nm

96Nm

Up to 160Nm

ಟ್ರಾನ್ಸ್‌ಮಿಷನ್

5MT,   5AMT

5MT

5MT,  5AMT

5MT

6MT

5MT,  5AMT

5MT, 5AMT/ 5MT

5MT, CVT

Tata Punch Engine

  •  ರೆನಾಲ್ಟ್-ನಿಸಾನ್ ಅವಳಿಗಳನ್ನು ಹೊರತುಪಡಿಸಿ ಈ ಎಲ್ಲಾ ಮಾಡೆಲ್‌ಗಳು 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿವೆ. ಆದಾಗ್ಯೂ ಹ್ಯುಂಡೈ ಎಕ್ಸ್‌ಟರ್‌ ಇಲ್ಲಿ ಸಿಎನ್‌ಜಿ ಆಯ್ಕೆಯನ್ನು ಪಡೆಯುವ ಏಕೈಕ ಮಾಡೆಲ್ ಆಗಿದೆ (ಈ ಸಮಯದಲ್ಲಿ)

  •  ಮಾರುತಿ ಇಗ್ನಿಸ್ ಮತ್ತು ಹ್ಯುಂಡೈ ಎಕ್ಸ್‌ಟರ್ ಪೆಟ್ರೋಲ್‌ನ ಔಟ್‌ಪುಟ್ ಅಂಕಿಅಂಶಗಳು ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಬಹುತೇಕ ಒಂದೇ ಆಗಿವೆ. ಇವುಗಳು ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ನೀಡುವ ಏಕೈಕ ಮಾದರಿಗಳಾಗಿದ್ದು ಇವು ಇತರ ಮೂರು-ಸಿಲಿಂಡರ್ ಯೂನಿಟ್‌ಗಳಿಗಿಂತ ಹೆಚ್ಚು ಪರಿಷ್ಕರಣೆಯನ್ನು ನೀಡುತ್ತದೆ.

  • ನೀವು ಕಾರ್ಯಕ್ಷಮತೆಯನ್ನು ಬಯಸುತ್ತೀರಾದರೆ, ಹೆಚ್ಚು ಶಕ್ತಿಶಾಲಿಯಾದ ಮತ್ತು ಟಾರ್ಕ್ ಹಾಗೂ 6-ಸ್ಪೀಡ್ ಟ್ರಾನ್ಸ್‌ಮಿಷನ್ ಅನ್ನು ಒದಗಿಸುವ ಏಕೈಕ ಆಯ್ಕೆ C3 ಯ ಟರ್ಬೋ-ಪೆಟ್ರೋಲ್ ಎಂಜಿನ್ ಆಗಿದೆ.

  • ಮತ್ತೊಂದೆಡೆ ರೆನಾಲ್ಟ್ ಕೈಗರ್ ಮತ್ತು ನಿಸಾನ್ ಮ್ಯಾಗ್ನೈಟ್‌ ಸಣ್ಣ 1 ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಪೆಟ್ರೋಲ್ (72PS and 96Nm) ಮತ್ತು 1-ಲೀಟರ್ ಟರ್ಬೋ-ಪೆಟ್ರೋಲ್ (100PS and up to 160Nm) ಎಂಜಿನ್‌ಗಳನ್ನು ಹೊಂದಿವೆ. ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳ ಟರ್ಬೋ ವೇರಿಯೆಂಟ್‌ಗಳು ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತವೆ ಹಾಗೂ ಇದು ಎಎಂಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿರುವ ಇತರ ಮಾದರಿಗಳಿಗಿಂತ ಭಿನ್ನವಾಗಿದೆ.

  • ಟಾಟಾ ಪಂಚ್ ಈ ವರ್ಷದ ಮುಂಬರುವ ದಿನಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ಪಡೆಯಲಿದೆ, ದೊಡ್ಡ ಬೂಟ್‌ಗಾಗಿ ಅದರ ಟ್ವಿನ್-ಸಿಲಿಂಡರ್ ಸೆಟಪ್‌ನೊಂದಿಗೆ ಎಕ್ಸ್‌ಟರ್ ಸಿಎನ್‌ಜಿಗಿಂತ ಇದು ಭಿನ್ನವಾಗಿದೆ.

 ಇದನ್ನೂ ನೋಡಿ: 20 ಚಿತ್ರಗಳಲ್ಲಿ ಹ್ಯುಂಡೈ ಎಕ್ಸ್‌ಟರ್ ವಿವರಗಳು

ಫೀಚರ್ ಪ್ರಮುಖಾಂಶಗಳು

ಹ್ಯುಂಡೈ ಎಕ್ಸ್‌ಟರ್

ಟಾಟಾ ಪಂಚ್

ಸಿಟ್ರಾನ್ C3

ಮಾರುತಿ ಇಗ್ನಿಸ್

ರೆನಾಲ್ಟ್ ಕೈಗರ್

ನಿಸಾನ್ ಮ್ಯಾಗ್ನೈಟ್

  • ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು (ದ್ವಿ-ಕಾರ್ಯ)

  • ಎಲ್‌ಇಡಿ ಡಿಆರ್‌ಎಲ್‌ಗಳು

  • ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು

  • ORVMS ನಲ್ಲಿ ಎಲ್‌ಇಡಿ ತಿರುವು ಇಂಡಿಕೇಟರ್‌ಗಳು

  • 15-ಇಂಚಿನ ಡ್ಯುಯಲ್ ಟೋನ್‌ ವ್ಹೀಲ್‌ಗಳು

  • ಸಿಂಗಲ್-ಪೇನ್ ಸನ್‌ರೂಫ್

  • ಎತ್ತರವನ್ನು ಹೊಂದಿಸುವ ಚಾಲಕರ ಸೀಟು

  • 8-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಯೂನಿಟ್ ಸಂಪರ್ಕಿತ  (ಬ್ಲ್ಯೂಲಿಂಕ್ ಮತ್ತು ಅಲೆಕ್ಸಾ)

  • ಡಿಜಿಟೈಸ್ಡ್ ಡ್ರೈವರ್ ಡಿಸ್‌ಪ್ಲೇ

  • ಕ್ರೂಸ್ ಕಂಟ್ರೋಲ್

  • ಸ್ಟಾರ್ಟ್/ಸ್ಟಾಪ್ ಪುಶ್ ಬಟನ್

  • ಆಟೋ ಹೆಡ್‌ಲ್ಯಾಂಪ್‌ಗಳು

  • ವೈರ್‌ಲೆಸ್ ಚಾರ್ಜಿಂಗ್

  • ಸ್ವಯಂಚಾಲಿತ ಎಸಿ

  • ಆರು ಏರ್‌ಬ್ಯಾಗ್‌ಗಳು (ಪ್ರಮಾಣಿತ)

  • ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

  • ಹಿಲ್ ಅಸಿಸ್ಟ್

  • ಹಗಲಿರುಳು IRVM

  • ಡ್ಯುಯಲ್-ಕ್ಯಾಮರಾ ಡ್ಯಾಶ್ ಕ್ಯಾಮ್

  • ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು

  • ರಿಯರ್ ಪಾರ್ಕಿಂಗ್ ಕ್ಯಾಮರಾ

  • ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್

  • ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು

  • ಎಲ್‌ಇಡಿ ಡಿಆರ್‌ಎಲ್‌ಗಳು

  • ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು

  • ಮುಂಭಾಗದ ಫಾಗ್-ಲ್ಯಾಂಪ್‌ಗಳು

  • 16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳು

  • 7-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಯೂನಿಟ್

  • ಸಂಪರ್ಕಿತ ಕಾರ್ ಫೀಚರ್‌ಗಳು

  • 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

  • ಆಟೋ ಹೆಡ್‌ಲ್ಯಾಂಪ್‌ಗಳು

  • ಮಳೆಯ ಸೆನ್ಸಿಂಗ್ ವೈಪರ್‌ಗಳು

  • ಆಟೋ ಎಸಿ

  • ಕ್ರೂಸ್ ಕಂಟ್ರೋಲ್

  • ಸ್ಟಾರ್ಟ್/ಸ್ಟಾಪ್ ಪುಶ್ ಬಟನ್

  • ಎತ್ತರವನ್ನು ಹೊಂದಿಸಬಹುದಾದ ಚಾಲಕಸೀಟುಗಳು

  • ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು

  • ರಿಯರ್ ಪಾರ್ಕಿಂಗ್ ಕ್ಯಾಮರಾ

  • ಟ್ರ್ಯಾಕ್ಷನ್ ಪ್ರೋ ಮೋಡ್ (AMT ಮಾತ್ರ)

  • ಆ್ಯಂಟಿ-ಗ್ಲೇರ್ IRVM

  • ಹ್ಯಾಲೋಜೆನ್ ಹೆಡ್‌ಲ್ಯಾಂಪ್‌ಗಳು

  • ಎಲ್‌ಇಡಿ ಡಿಆರ್‌ಎಲ್‌ಗಳು

  • ಮುಂಭಾಗದ ಫಾಗ್ ಲ್ಯಾಂಪ್‌ಗಳು

  • 15-ಇಂಚಿನ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು

  • ಎತ್ತರವನ್ನು ಹೊಂದಿಸಬಹುದಾದ ಚಾಲಕರ ಸೀಟು 

  • 10.2- ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಯೂನಿಟ್

  • ಸಂಪರ್ಕಿತ ಕಾರಿನ ಫೀಚರ್‌ಗಳು

  • ಡಿಜಿಟಲೈಸ್ಡ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್

  • ಪವರ್ ಹೊಂದಾಣಿಕೆಯ ORVMs

  • ಎಂಜಿನ್ ಆಟೋ ಸ್ಟಾಪ್/ಸ್ಟಾರ್ಟ್ ಟೈರ್ ಪ್ರೆಷರ್ ಮಾನಿಟರ್ 

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

  • ಹಿಲ್ ಅಸಿಸ್ಟ್

  • ಹಗಲಿರುಳು IRVM

  • ರಿಯರ್ ಪಾರ್ಕಿಂಗ್ ಕ್ಯಾಮರಾ

  • ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು

  • 15- ಇಂಚಿನ ಅಲಾಯ್ ವ್ಹೀಲ್‌ಗಳು

  • ಮುಂಭಾಗದ ಫಾಗ್ ಲ್ಯಾಂಪ್‌ಗಳು

  • 7- ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಯೂನಿಟ್

  • ಸ್ವಯಂಚಾಲಿತ ಎಸಿ

  • ಎತ್ತರವನ್ನು ಹೊಂದಿಸಬಹುದಾದ ಚಾಲಕರ ಸೀಟು 

  • ಸ್ಟಾರ್ಟ್/ಸ್ಟಾಪ್ ಪುಶ್ ಬಟನ್

  • ಕೀರಹಿತ ಪ್ರವೇಶ

  • ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು

  • ರಿಯರ್ ಪಾರ್ಕಿಂಗ್ ಕ್ಯಾಮರಾ

  • ಹಿಲ್ ಅಸಿಸ್ಟ್

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) 

  • ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೇಲ್‌ಲ್ಯಾಂಪ್‌ಗಳು

  • 16-ಇಂಚಿನ ಅಲಾಯ್ ವ್ಹೀಲ್‌ಗಳು

  •  8-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಯೂನಿಟ್

  • ಎತ್ತರವನ್ನು ಹೊಂದಿಸಬಹುದಾದ ಚಾಲಕರ ಸೀಟು

  • ಸ್ವಯಂಚಾಲಿತ ಎಸಿ

  • 7-ಇಂಚಿನ ಡಿಸ್‌ಪ್ಲೇ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್

  • PM 2.5 ಏರ್ ಫಿಲ್ಟರ್ 

  • ಕ್ರೂಸ್ ಕಂಟ್ರೋಲ್

  • ವೈರ್‌ಲೆಸ್ ಚಾರ್ಜಿಂಗ್

  • ನಾಲ್ಕು ಏರ್‌ಬ್ಯಾಗ್‌ಗಳು

  • ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • ಹಿಲ್ ಅಸಿಸ್ಟ್

  • ಟೈರ್ ಪ್ರೆಷರ್ಮಾನಿಟರ್

  • ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು

  • ಎಲ್‌ಇಡಿ ಫಾಗ್‌ಲ್ಯಾಂಪ್‌ಗಳು

  • 16- ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳು ಎತ್ತರವನ್ನು ಹೊಂದಿಸಬಹುದಾದ ಚಾಲಕರ ಸೀಟು 

  • 7-ಇಂಚಿನ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್

  • 8-ಇಂಚಿನ ಟಚ್‌ಸ್ಕ್ರೀನ್

  • 360-ಡಿಗ್ರಿ ಕ್ಯಾಮರಾ

  • ಕ್ರೂಸ್ ಕಂಟ್ರೋಲ್

  • ಸ್ವಯಂಚಾಲಿತ ಎಸಿ

  • PM 2.5 ಏರ್ ಫಿಲ್ಟರ್

  • ಐಚ್ಛಿಕ ಸಂಪರ್ಕಿತ ಕಾರ್ ಟೆಕ್

  • ಟೈರ್ ಪ್ರೆಷರ್ ಮಾನಿಟರ್

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • ಎಲ್ಲಾ ಪ್ರಯಾಣಿಕರಿಗೂ 3-ಪಾಯಿಂಟ್ ಸೀಟ್‌ ಬೆಲ್ಟ್

  • ವಾಹನ ಸ್ಟೆಬಿಲಿಟಿ ಕಂಟ್ರೋಲ್

Hyundai Exter Interior

  • ಸನ್‌ರೂಫ್, ಡ್ಯುಯಲ್ ಕ್ಯಾಮರಾಗಳ ಡ್ಯಾಶ್ ಕ್ಯಾಮ್, ಮತ್ತು ಪ್ರಮಾಣಿತವಾಗಿ ಪಡೆದಿರುವ ಆರು ಏರ್ ಬ್ಯಾಗ್‌ಗಳಂತಹ ಹೆಚ್ಚು ಸಮಗ್ರ ಫೀಚರ್‌ಗಳ ಪಟ್ಟಿಯನ್ನು ಒದಗಿಸುತ್ತಿರುವ ಈ ವಿಭಾಗದಲ್ಲಿಯೇ ಪ್ರಥಮ ಕಾರು ಹ್ಯುಂಡೈ ಎಕ್ಸ್‌ಟರ್ ಆಗಿದೆ.

  • ಟಾಟಾ ಪಂಚ್ ಕೂಡಾ ಉತ್ತಮವಾದ ಫೀಚರ್ ಪ್ಯಾಕ್‌ಗಳನ್ನು ಹೊಂದಿದ್ದು, ಮಳೆ ಸೆನ್ಸಿಂಗ್ ವೈಪರ್‌ಗಳು, ಟ್ರ್ಯಾಕ್ಷನ್ ಮೋಡ್‌ಗಳು ಮತ್ತು ಹ್ಯುಂಡೈ ಮೈಕ್ರೋ ಎಸ್‌ಯುವಿಗಿಂತ 16-ಇಂಚಿನ ಅಲಾಯ್ ವ್ಹೀಲ್ ಫೀಚರ್‌ಗಳನ್ನು ಹೊಂದಿದೆ.

  • ನಿಸಾನ್ ಮ್ಯಾಗ್ನೈಟ್ 360-ಡಿಗ್ರಿ ಕ್ಯಾಮರಾದೊಂದಿಗೆ ಬರುವ ಏಕೈಕ ಕೊಡುಗೆಯಾಗಿದೆ, ಇದೇವೇಳೆ ಸಿಟ್ರಾನ್ ಹ್ಯಾಚ್‌ಬ್ಯಾಕ್ ಎಲ್ಲಕ್ಕಿಂತ ದೊಡ್ಡ ಟಚ್‌ಸ್ಕ್ರೀನ್ ಯೂನಿಟ್ ಅನ್ನು ಪಡೆಯುತ್ತದೆ.

  • ರೆನಾಲ್ಟ್ ಕೈಗರ್ ನಾಲ್ಕು ಏರ್‌ಬ್ಯಾಗ್‌ಗಳನ್ನು ಹೊಂದಿದ್ದರೆ, ಟಾಟಾ ಪಂಚ್, ಮಾರುತಿ ಇಗ್ನಿಸ್ ಮತ್ತು ಸಿಟ್ರಾನ್ C3 ಕಡ್ಡಾಯವಾದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಮಾತ್ರ ಪಡೆಯುತ್ತವೆ. ಹಾಗಿದ್ದರೂ ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಯಲ್ಲಿ ಐದು-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿರುವ ಮಾದರಿ ಟಾಟಾ ಪಂಚ್ ಆಗಿದೆ.

  • ಮಾರುತಿ ಇಗ್ನಿಸ್ ಇಲ್ಲಿ ಹೆಚ್ಚು ಇತ್ತೀಚಿನ ಮಾಡೆಲ್ ಆಗಿದ್ದು, ಇನ್ನೂ ಅನೇಕ ಮೂಲಭೂತ ಅವಶ್ಯಕತೆಗಳನ್ನು ಒಳಗೊಂಡಿದೆ. ಮಾತ್ರವಲ್ಲದೆ, ಮಾರುತಿ ಮಾಡೆಲ್‌ನಲ್ಲಿ ಹೆಚ್ಚುವರಿ ತಂತ್ರಜ್ಞಾನದ ಹೊರತಾಗಿಯೂ C3 ಇನ್ನೂ ಕಡಿಮೆ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ.

ಬೆಲೆಗಳು

ಹ್ಯುಂಡೈ ಎಕ್ಸ್‌ಟರ್

ಟಾಟಾ ಪಂಚ್

ಸಿಟ್ರಾನ್ C3

ಮಾರುತಿ ಇಗ್ನಿಸ್

ರೆನಾಲ್ಟ್ ಕೈಗರ್

ನಿಸಾನ್ ಮ್ಯಾಗ್ನೈಟ್

ರೂ. 6 ಲಕ್ಷದಿಂದ ರೂ 10.10 ಲಕ್ಷಗಳು

ರೂ 6 ಲಕ್ಷದಿಂದ  ರೂ 9.52 ಲಕ್ಷಗಳು

ರೂ 6.16 ಲಕ್ಷದಿಂದ ರೂ 8.80 ಲಕ್ಷಗಳು

ರೂ 5.84 ಲಕ್ಷದಿಂದ ರೂ 8.16 ಲಕ್ಷಗಳು

ರೂ 6.50 ಲಕ್ಷದಿಂದ 11.23 ಲಕ್ಷಗಳು

ರೂ 6 ಲಕ್ಷದಿಂದ ರೂ 11.02 ಲಕ್ಷಗಳು

Hyundai Exter

ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಸರಿಸುಮಾರು ಒಂದೇ ರೀತಿಯ ಬೆಲೆಯನ್ನು ಹೊಂದಿವೆ. ಏತನ್ಮಧ್ಯೆ, ಇಗ್ನಿಸ್ ಅತ್ಯಂತ ಕಡಿಮೆ ವೆಚ್ಚದ ಮಾಡೆಲ್ ಆಗಿದೆ, ಇದರ ಮೇಲಿನ ಸ್ಥಾನದಲ್ಲಿ ಸಿಟ್ರಾನ್ C3 ನಿಲ್ಲುತ್ತದೆ. ನಾವು ಇಲ್ಲಿ ಹ್ಯುಂಡೈ ಎಕ್ಸ್‌ಟರ್ ಮತ್ತು ಅದರ ಪ್ರತಿಸ್ಪರ್ಧಿಗಳ ಬೆಲೆಯನ್ನು ವಿವರವಾಗಿ ವಿವರಿಸಿದ್ದೇವೆ. ಇವುಗಳಲ್ಲಿ ನೀವು ಯಾವ ಕಾರನ್ನು ಪರಿಗಣಿಸುತ್ತೀರಿ ಎಂಬುದನ್ನು ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ.

ಇನ್ನಷ್ಟು ಇಲ್ಲಿ ಓದಿ : ಹ್ಯುಂಡೈ ಎಕ್ಸ್‌ಟರ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಎಕ್ಸ್‌ಟರ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience