ಟಾಟಾ-ಪಂಚ್‌ನ ಪ್ರತಿಸ್ಪರ್ಧಿ ಎಸ್‌ಯುವಿಯಾಗಿರುವ ಎಕ್ಸ್‌ಟರ್ ಅನ್ನು ಅನಾವರಣಗೊಳಿಸಿ ಬುಕಿಂಗ್ ತೆರೆದ ಹ್ಯುಂಡೈ
ಹುಂಡೈ ಎಕ್ಸ್‌ಟರ್ ಗಾಗಿ tarun ಮೂಲಕ ಮೇ 12, 2023 03:53 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಈ ಸಂಪೂರ್ಣ-ಹೊಸ ಮೈಕ್ರೋ ಎಸ್‌ಯವಿಯ ಎಂಜಿನ್ ಆಯ್ಕೆಗಳನ್ನು ಪ್ರಕಟಿಸಲಾಗಿದ್ದು ಜೂನ್ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ
- ಹ್ಯುಂಡೈ ಎಕ್ಸ್‌ಟರ್ ವೆನ್ಯುವಿನ ಕೆಳಗಿನ ಸ್ಥಾನದಲ್ಲಿರಲಿದೆ.
- EX, S, SX, SX (O), ಮತ್ತು SX (O) ಕನೆಕ್ಟ್ ಎಂಬ ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ.
- 6 ಸಿಂಗಲ್-ಟೋನ್ ಮತ್ತು 3 ಡ್ಯುಯಲ್-ಟೋನ್ ಬಣ್ಣಗಳ ಎಕ್ಸ್‌ಟೀರಿಯರ್ ಆಯ್ಕೆಗಳನ್ನು ಹೊಂದಿರಲಿದೆ.
- ಐದು-ಸ್ಪೀಡ್ ಮ್ಯಾನ್ಯುವಲ್ ಮತ್ತು AMT ಟ್ರಾನ್ಸ್‌ಮಿಷನ್ ಜೊತೆಗೆ 83PS 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುವ ಸಾಧ್ಯತೆಯಿದೆ.
- ಬೆಲೆಗಳು ಸುಮಾರು ರೂ. 6 ಲಕ್ಷದಿಂದ (ಎಕ್ಸ್-ಶೋರೂಮ್) ಆರಂಭವಾಗುವ ಸಾಧ್ಯತೆಯಿದೆ.
ಹ್ಯುಂಡೈ ತನ್ನ ಮುಂಬರುವ ಮೈಕ್ರೋ ಎಸ್‌ಯುವಿಯಾದ ಎಕ್ಸ್‌ಟರ್‌ನ ಎಕ್ಸ್‌ಟೀರಿಯರ್ ಪ್ರೊಫೈಲ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಇದರೊಂದಿಗೆ, ರೂ. 11,000 ಮುಂಗಡ ಮೊತ್ತಕ್ಕೆ ಬುಕ್ಕಿಂಗ್‌ಗಳು ತೆರೆದಿವೆ. ಇದರ ಬೆಲೆಯು ಜೂನ್‌ನಲ್ಲಿ ಪ್ರಕಟಗೊಳ್ಳಬಹುದೆಂದು ನಾವು ನಿರೀಕ್ಷಿಸಿದ್ದೇವೆ.
ಹ್ಯುಂಡೈ ಎಕ್ಸ್‌ಟರ್ ದೃಢವಾದ ಮತ್ತು ಎದ್ದುಕಾಣುವ ಸ್ಟ್ಯಾನ್ಸ್ ಅನ್ನು ಹೊಂದಿದೆ. ದಪ್ಪವಾದ ಬಾನೆಟ್, ನೇರವಾದ ಮುಂಭಾಗ ಮತ್ತು ಸ್ಕಿಡ್ ಪ್ಲೇಟ್ ಇದಕ್ಕೆ ಬೋಲ್ಡ್ ಲುಕ್ ಅನ್ನು ನೀಡುತ್ತದೆ. ಮುಂಭಾಗದ ಗ್ರಿಲ್ ಅನನ್ಯವಾಗಿದ್ದು ಭಾರತದ ಯಾವುದೇ ಹ್ಯುಂಡೈ ಕಾರು ಇದನ್ನು ಹೊಂದಿಲ್ಲ. ಕೆಲವೊಂದು ಜ್ಯಾಮಿತೀಯ ವಿನ್ಯಾಸಗಳು ಚದರ ಹೆಡ್‌ಲ್ಯಾಂಪ್ ಕವರಿಂಗ್ ಮತ್ತು ಬಂಪರ್‌ನ ಕೆಳಗಡೆ ಪ್ರಾಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಹೆಚ್-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳಂತವುಗಳನ್ನು ಕಾಣಬಹುದು.
ಮುಂಭಾಗವು ಎಸ್‌ಯುವಿಯ ತರಹ ಕಾಣದಿದ್ದರೆ, ಇದರ ಪಾರ್ಶ್ವವನ್ನು ಪರಿಶೀಲಿಸಿ. ಚಾಚಿಕೊಂಡಂತಿರುವ ವ್ಹೀಲ್ ಆರ್ಚ್‌ಗಳು, ಬಾಡಿ ಕ್ಲಾಡಿಂಗ್, ಶಕ್ತಿಶಾಲಿ ಶೋಲ್ಡರ್ ಲೈನ್‌ಗಳು, ಮತ್ತು ರೂಫ್ ರೈಲ್‌ಗಳು ಇದರ ಎಸ್‌ಯುವಿ ನೋಟಕ್ಕೆ ಸಹಾಯ ಮಾಡುತ್ತವೆ. ಹಿಂದಿನ ಪ್ರೊಫೈಲ್ ಅನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಇದು ಎಚ್-ಆಕಾರದ ಅಂಶಗಳು ಮತ್ತು ಬಾಡಿ ಕ್ಲಾಡಿಂಗ್-ಇಂಟಿಗ್ರೇಟೆಡ್ ಬಂಪರ್‌ನೊಂದಿಗೆ ಅದೇ ರೀತಿಯ ನೇರವಾದ ಸ್ಟ್ಯಾನ್ಸ್ ಅನ್ನು ಪಡೆಯುತ್ತದೆ.
ಇದನ್ನೂ ಓದಿ: ಸಣ್ಣದಾದರೂ ಪ್ರಮುಖ ಸುರಕ್ಷತಾ ನವೀಕರಣವನ್ನು ಪಡೆದ ಎಲ್ಲಾ ಹ್ಯುಂಡೈ ಕಾರುಗಳು
ಹ್ಯುಂಡೈ ತನ್ನ ಈ ಎಕ್ಸ್‌ಟರ್ ಅನ್ನು 6 ಮೊನೊಟೋನ್ ಮತ್ತು 3 ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಬಣ್ಣಗಳೊಂದಿಗೆ ನೀಡುತ್ತಿದೆ. ಈ ಎಸ್‌ಯುವಿಯು, ಬ್ರ್ಯಾಂಡ್ ಶ್ರೇಣಿಗಳಿಗೆ ಸಂಪೂರ್ಣ ಹೊಸದಾಗಿರುವ ಕಾಸ್ಮಿಕ್ ಬ್ಲ್ಯೂ ಮತ್ತು ರೇಂಜರ್ ಖಾಕಿ ಆಯ್ಕೆಗಳನ್ನು (ಡ್ಯುಯಲ್-ಟೋನ್ ಶೇಡ್ ಜೊತೆಗೆ) ಪಡೆಯುತ್ತದೆ.
ಇದರ ಇಂಟೀರಿಯರ್ ಮತ್ತು ಫೀಚರ್ ಅನ್ನು ಇನ್ನೂ ಬಹಿರಂಗಪಡಿಸಬೇಕಾಗಿದ್ದು, ಇದು ಪ್ರೀಮಿಯಂ ಮತ್ತು ಫೀಚರ್-ಭರಿತ ಕ್ಯಾಬಿನ್ ಅನ್ನು ಪಡೆಯಬಹುದೆಂದು ನಾವು ನಿರೀಕ್ಷಿಸಿದ್ದೇವೆ. ಈ ಪಟ್ಟಿಯು ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ.
ಈ ಹ್ಯುಂಡೈ ಎಕ್ಸ್‌ಟರ್‌ನ ಪವರ್‌ಟ್ರೇನ್ ಆಯ್ಕೆಗಳು ಸಹ ಬಹಿರಂಗಗೊಂಡಿವೆ. ಇದು 83PS ಮತ್ತು 114PS ಕ್ಲೈಮ್ ಮಾಡಲಾದ 1.2-ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿರುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಮತ್ತು AMTಯು ಇದರ ಟ್ರಾನ್ಸ್‌ಮಿಷನ್ ಜವಾಬ್ದಾರಿಯನ್ನು ಪಡೆದುಕೊಳ್ಳಲಿದೆ. ಇದು, 5-ಸ್ಪೀಡ್ ಮ್ಯಾನ್ಯುವಲ್ ಸ್ಟಿಕ್ ಜೊತೆಗೆ ಸಿಎನ್‌ಜಿ ಆಯ್ಕೆಯನ್ನು ಸಹ ಇದು ಪಡೆಯುತ್ತದೆ.
ಹ್ಯುಂಡೈ ಎಕ್ಸ್‌ಟರ್ ಐದು ಟ್ರಿಮ್‌ಗಳಲ್ಲಿ ಲಭ್ಯವಿರುತ್ತದೆ - EX, S, SX, SX (O), ಮತ್ತು SX (O) ಕನೆಕ್ಟ್. ಇದರ ಬೆಲೆಗಳನ್ನು ರೂ. 6 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ. ಇದು ಟಾಟಾ ಪಂಚ್ ಮತ್ತು ಸಿಟ್ರಾನ್ C3 ಗೆ ಪ್ರತಿಸ್ಪರ್ಧಿ ಮಾತ್ರವಲ್ಲದೆ ನಿಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್, ಮತ್ತು ಮಾರುತಿ ಫ್ರಾಂಕ್ಸ್‌ಗೆ ಸ್ಪರ್ಧೆಯನ್ನು ಒಡ್ಡುತ್ತದೆ.