ಬಿಡುಗಡೆಗೆ ಮುಂಚಿತವಾಗಿ ತನ್ನ ಎಕ್ಸ್‌ಟರ್‌ನ ಹಿಂಭಾಗದ ವಿನ್ಯಾಸವನ್ನು ಬಹಿರಂಗಪಡಿಸಿದ ಹ್ಯುಂಡೈ
ಮೇ 31, 2023 02:00 pm ರಂದು shreyash ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಪಂಚ್‌ಗೆ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈನ ಮೈಕ್ರೋ ಎಸ್‌ಯುವಿ ಜುಲೈ 10 ಕ್ಕೆ ಬಿಡುಗಡೆಯಾಗಲಿದೆ
- ಹ್ಯುಂಡೈ ಈಗ ಎಕ್ಸ್‌ಟರ್‌ನ ಸಂಪೂರ್ಣ ಬಾಹ್ಯ ವಿನ್ಯಾಸವನ್ನು ಟೀಸರ್‌ಗಳ ಮೂಲಕ ಬಹಿರಂಗಪಡಿಸಿದೆ.
- ಇದೀಗ ಐದು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: EX, S, SX, SX (O), ಮತ್ತು SX (O) ಕನೆಕ್ಟ್.
- ಈ ಮೈಕ್ರೋ ಎಸ್‌ಯುವಿಯು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ಆಯ್ಕೆಗಳನ್ನು ಹೊಂದಿರುವ 1.2-ಲೀಟರ್ ಎಂಜಿನ್ ಅನ್ನು ಹೊಂದಿದೆ.
- ಸನ್‌ರೂಫ್ ಮತ್ತು ಡ್ಯುಯಲ್ ಡ್ಯಾಶ್ ಕ್ಯಾಮ್ ಸೆಟಪ್ ಅನ್ನು ಒಳಗೊಂಡಿರುವ ವಿಭಾಗದಲ್ಲಿ ಇದು ಮೊದಲ ಮೈಕ್ರೋ ಎಸ್‌ಯುವಿ ಆಗಿದೆ.
- ಹ್ಯುಂಡೈ ಇದನ್ನು ರೂ. 6 ಲಕ್ಷದಿಂದ (ಎಕ್ಸ್-ಶೋರೂಮ್) ಮಾರಾಟ ಮಾಡಬಹುದು
ಟೀಸರ್ ಬಿಡುಗಡೆಯಾಗಿ ವಾರಗಳ ನಂತರ, ಹ್ಯುಂಡೈ ಈಗ ಮೊದಲ ಬಾರಿಗೆ ಎಕ್ಸ್‌ಟರ್‌ನ ಹಿಂಭಾಗದ ವಿನ್ಯಾಸವನ್ನು ಪ್ರದರ್ಶಿಸಿದ್ದು, ಇದು ಮುಂಬರುವ ಈ ಮೈಕ್ರೋ ಎಸ್‌ಯುವಿಯ ಸಂಪೂರ್ಣ ಎಕ್ಸ್‌ಟೀರಿಯರ್ ವಿನ್ಯಾಸದ ಕಲ್ಪನೆಯನ್ನು ನಮಗೆ ನೀಡುತ್ತದೆ. ಹ್ಯುಂಡೈ ಎಕ್ಸ್‌ಟರ್ ಬಗ್ಗೆ ನಮಗೆ ತಿಳಿದಿರುವ ವಿಷಯದ ಬಗ್ಗೆ ತ್ವರಿತವಾಗಿ ಒಂದು ಅವಲೋಕನವನ್ನು ನೋಡೋಣ
ಹಿಂಭಾಗದ ವಿನ್ಯಾಸ
ಹುಂಡೈ ಹಿಂದಿನಿಂದಲೂ ಎಕ್ಸ್‌ಟರ್‌ನ ನೇರವಾದ ಎಸ್‌ಯುವಿ ತರಹದ ನಿಲುವನ್ನು ಉಳಿಸಿಕೊಂಡಿದೆ. ಈ ಮೈಕ್ರೋ ಎಸ್‌ಯುವಿಯ ಹಿಂಭಾಗದ ವಿನ್ಯಾಸವು ಎಚ್-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳಿಂದ ಹೈಲೈಟ್ ಆಗಿದ್ದು, ಮಧ್ಯದಲ್ಲಿ ಹ್ಯುಂಡೈ ಲೋಗೋದೊಂದಿಗೆ ಕಪ್ಪು ಪಟ್ಟಿಯಿಂದ ಕೂಡಿದೆ. ಎರಡೂ ವಿವರಗಳು ಮುಂಭಾಗದಲ್ಲಿ ಗ್ರಿಲ್ ಮತ್ತು ಎಚ್-ಮಾದರಿಯ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೋಲುತ್ತವೆ. ಹಿಂಭಾಗದ ಬಂಪರ್‌ನಲ್ಲಿನ ಬೃಹತ್ ಸಿಲ್ವರ್ ಸ್ಕಿಡ್ ಪ್ಲೇಟ್ ಎಕ್ಸ್‌ಟರ್‌ಗೆ ಒಂದು ಗಟ್ಟುಮುಟ್ಟಾದ ನೋಟವನ್ನು ನೀಡುತ್ತದೆ.
ಇಲ್ಲಿಯವರೆಗೆ ನಮಗೆ ತಿಳಿದದ್ದೇನು
ಎಕ್ಸ್‌ಟರ್‌ನ ಹಲವು ಫೀಚರ್‌ಗಳನ್ನು ಹ್ಯುಂಡೈ ಬಹಿರಂಗಪಡಿಸಿದ್ದರೂ, ಇಂಟೀರಿಯರ್ ಅನ್ನು ಪ್ರದರ್ಶಿಸಿಲ್ಲ. ಈ ಮೈಕ್ರೋ ಎಸ್‌ಯುವಿ ಸಿಂಗಲ್-ಪೇನ್ ಸನ್‌ರೂಫ್ ಮತ್ತು ಡ್ಯುಯಲ್ ಡ್ಯಾಶ್ ಕ್ಯಾಮ್‌ಗಳನ್ನು ನೀಡುತ್ತದೆ. ಹ್ಯುಂಡೈ ಎಕ್ಸ್‌ಟರ್‌ನಲ್ಲಿ ನಿರೀಕ್ಷಿತ ಫೀಚರ್‌ಗಳೆಂದರೆ, ದೊಡ್ಡ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್.
ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್‌ನ ನಿರೀಕ್ಷಿತ ಬೆಲೆಗಳು: ಇದು ಟಾಟಾ ಪಂಚ್‌ಗೆ ಹೇಗೆ ಹೋಲಿಕೆಯಾಗುತ್ತದೆ?
ಸುರಕ್ಷತೆಯ ವಿಷಯದಲ್ಲಿ, ಪ್ರಮಾಣಿತವಾಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್(ESC), ಹಿಲ್ ಅಸಿಸ್ಟ್, ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ಎಲ್ಲಾ ಐದು ಸೀಟುಗಳಿಗೆ ರಿಮೈಂಡರ್‌ಗಳನ್ನು ಪಡೆಯುತ್ತದೆ ಎಂದು ಹ್ಯುಂಡೈ ಈಗಾಗಲೇ ದೃಢೀಕರಿಸಿದೆ. ಈ ಎಸ್‌ಯುವಿಯ ಹೈಯರ್ ವೇರಿಯೆಂಟ್‌ಗಳು ಹೆಡ್‌ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್, ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ರಿಯರ್ ಡಿಫಾಗರ್, ರಿಯರ್ ಪಾರ್ಕಿಂಗ್ ಕ್ಯಾಮರಾಗಳು, ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)ಅನ್ನು ಹೊಂದಿದೆ.
ಎಂಜಿನ್ ಮತ್ತು ಟ್ರಾನ್ಸ್‌ಮಿಷನ್
ಈ ಹ್ಯುಂಡೈ ಎಕ್ಸ್‌ಟರ್ ಎರಡೂ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ:5-ಸ್ಪೀಡ್ ಮ್ಯಾನ್ಯುವಲ್ ಅಥವಾ 5-ಸ್ಪೀಡ್ ಎಎಂಟಿಗೆ ಜೋಡಿಸಲಾದ 1.2-ಲೀಟರ್ ಎಂಜಿನ್ ಮತ್ತು ಸಿಎನ್‌ಜಿ ಕಾನ್ಫಿಗರೇಷನ್ ಅಲ್ಲಿ ಜೋಡಿಸಲಾದ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಈ ಮೈಕ್ರೋ ಎಸ್‌ಯುವಿಯನ್ನು ಐದು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ – EX, S, SX, SX (O), ಮತ್ತು SX (O) ಕನೆಕ್ಟ್ – ಮತ್ತು ಬೆಲೆಯನ್ನು ರೂ 6 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸುವ ಸಾಧ್ಯತೆಯಿದೆ. ಬಿಡುಗಡೆಯಾದ ನಂತರ, ಇದು ಟಾಟಾ ಪಂಚ್, ಸಿಟ್ರಾನ್ C3, ನಿಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಮತ್ತು ಮಾರುತಿ ಫ್ರಾಂಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.