Login or Register ಅತ್ಯುತ್ತಮ CarDekho experience ಗೆ
Login

2023ರಲ್ಲಿ 12 ಎಲೆಕ್ಟ್ರಿಕ್‌ ಕಾರುಗಳ ಬಿಡುಗಡೆಗೆ ಸಾಕ್ಷಿಯಾದ ಭಾರತೀಯ ಕಾರು ಉದ್ಯಮ

published on ಡಿಸೆಂಬರ್ 26, 2023 01:02 pm by ansh for ಬಿಎಂಡವೋ i7

ಆರಂಭಿಕ ಹಂತದಿಂದ ಹಿಡಿದು ಐಷಾರಾಮಿ ಹಾಗೂ ಅಧಿಕ ಕಾರ್ಯಕ್ಷಮತೆಯ ವಾಹನಗಳ ತನಕ ಭಾರತದ ಎಲೆಕ್ಟ್ರಿಕ್‌ ಕಾರ್‌ ಮಾರುಕಟ್ಟೆಯು ಬೆಳೆದಿದೆ

ಭಾರತೀಯ ಎಲೆಕ್ಟ್ರಿಕ್‌ ಕಾರ್‌ ಮಾರುಕಟ್ಟೆಯ ಪ್ರಗತಿಗೆ ವೇಗ ದೊರೆತಿದ್ದು, ಹೊಸ ತಂತ್ರಜ್ಞಾನ ಮತ್ತು ಉತ್ತಮ EV ಮೂಲಸೌಕರ್ಯವನ್ನು ಪರಿಚಯಿಸಿರುವ ಕಾರಣ ಇನ್ನಷ್ಟು ಕಾರು ತಯಾರಕ ಸಂಸ್ಥೆಯು ಭಾರತೀಯ EV ಮಾರುಕಟ್ಟೆಗೆ ಕಾಲಿಡುತ್ತಿವೆ. ವರ್ಷ 2023 ಇದಕ್ಕೆ ಉದಾಹರಣೆ ಎನಿಸಿದ್ದು, ವಿವಿಧ ವಿಭಾಗಗಳಲ್ಲಿ 12 ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು ಇವುಗಳಲ್ಲಿ 11 ವಾಹನಗಳು ಹೊಸ ಮಾದರಿಗಳಾಗಿದ್ದು ಹೊಸ EV ಖರೀದಿದಾರರಿಗೆ ಎಲ್ಲಾ ಬೆಲೆ ಶ್ರೇಣಿಗಳು ಮತ್ತು ವಿವಿಧ ಉದ್ದೇಶಗಳಿಗಾಗಿ ವಿಸ್ತೃತ ಆಯ್ಕೆಗಳನ್ನು ಒದಗಿಸಲಾಗುತ್ತಿದೆ. ಈ ವರ್ಷದಲ್ಲಿ ಇಲ್ಲಿನ ಮಾರುಕಟ್ಟೆಗೆ ಕಾಲಿಟ್ಟ ಎಲ್ಲಾ ಎಲೆಕ್ಟ್ರಿಕ್‌ ಕಾರುಗಳ ವಿವರ ಇಲ್ಲಿದೆ:

BMW i7

ಬೆಲೆ: ರೂ. 2.03 ಕೋಟಿಯಿಂದ ರೂ. 2.50 ಕೋಟಿ

2023ರ ಈ ಮೊದಲ Evಯು ಜರ್ಮನಿಯ ಉನ್ನತ ಮಟ್ಟದ ಐಷಾರಾಮಿ ವಾಹನ ಎನಿಸಿದೆ. BMW ಸಂಸ್ಥೆಯು ಹೊಸ 7 ಸೀರೀಸ್‌ ಜೊತೆಗೆ ತನ್ನ ಐಷಾರಾಮಿ ಎಲೆಕ್ಟರಿಕ್‌ ಸೆಡಾನ್‌ ಅನ್ನು ಜನವರಿ ತಿಂಗಳಿನಲ್ಲಿ ಬಿಡುಗಡೆ ಮಾಡಿತು. BMW i7 ವಾಹನವು ದೊಡ್ಡದಾದ 101.7 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು ಇದನ್ನು 650 PS ಮತ್ತು 1015 Nm ಉಂಟು ಮಾಡುವ M ವೇರಿಯಂಟ್‌ ಸೇರಿದಂತೆ ಎರಡು ಪವರ್‌ ಟ್ರೇನ್‌ ಆಯ್ಕೆಗಳಲ್ಲಿ ಒದಗಿಸಲಾಗುತ್ತದೆ. ಈ ಐಷಾರಾಮಿ ಸೆಡಾನ್‌ ವಾಹನವು 625 km ತನಕದ ಶ್ರೇಣಿಯನ್ನು ನೀಡುತ್ತದೆ. ಈ ವಾಹನದ ಬಿಡುಗಡೆಯ ವರದಿಯಲ್ಲಿ ನೀವು ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.

ಹ್ಯುಂಡೈ ಅಯಾನಿಕ್ 5

ಬೆಲೆ: ರೂ 45.95 ಲಕ್ಷ

ಹ್ಯುಂಡೈ ಅಯಾನಿಕ್‌ 5 ಅನ್ನು ಈ ಕಾರು ತಯಾರಕ ಸಂಸ್ಥೆಯ ಅತ್ಯಂತ ದುಬಾರಿ ಮಾದರಿಯಾಗಿ ಭಾರತದಲ್ಲಿ 2023 ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಅಗ್ರಗಣ್ಯ ಎಲೆಕ್ಟ್ರಿಕ್‌ ಕ್ರಾಸ್‌ ಓವರ್ SUV ಯು 72.6 kWh ಬ್ಯಾಟರಿ ಪ್ಯಾಕ್‌ ಮತ್ತು 217 PS ಹಾಗೂ 350 Nm ಉಂಟು ಮಾಡುವ ರಿಯರ್‌ ವೀಲ್‌ ಡ್ರೈವ್‌ ಎಲೆಕ್ಟ್ರಿಕ್‌ ಮೋಟಾರ್‌ ಸೆಟಪ್‌ ನೊಂದಿಗೆ ಬರುತ್ತದೆ. ಹ್ಯುಂಡೈ IONIQ 5 ವಾಹನವು ARAI ಪ್ರಕಾರ 631 km ಶ್ರೇಣಿಯನ್ನು ಹೊಂದಿದ್ದು 21 ನಿಮಿಷಗಳೊಳಗೆ 0-80 ಶೇಕಡಾದಷ್ಟು ಚಾರ್ಜ್‌ ಮಾಡಬಹುದು. ರೆಟ್ರೊ ನೋಟವನ್ನು ಹೊಂದಿರುವ ಈ EVಯ ಕುರಿತು ಇನ್ನಷ್ಟು ಮಾಹಿತಿಯನ್ನು ಇದರ ಬಿಡುಗಡೆಯ ಕುರಿತ ವರದಿಯಲ್ಲಿ ಪಡೆಯಿರಿ.

ಮಹೀಂದ್ರಾ XUV400 EV

ಬೆಲೆ: ರೂ. 15.99 ಲಕ್ಷದಿಂದ ರೂ. 19.39 ಲಕ್ಷ

ಮಹೀಂದ್ರಾ ಸಂಸ್ಥೆಯು ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸಿಕೊಂಡಿರುವ ಟಾಟಾ ನೆಕ್ಸನ್‌ EV ಗೆ ಪ್ರತಿಸ್ಪರ್ಧಿಯಾಗಿ ಈ ವರ್ಷದ ಆರಂಭದಲ್ಲಿ XUV400 ವಾಹನದ ಬೆಲೆಗಳನ್ನು ಘೋಷಿಸಿತ್ತು. ಮಹೀಂದ್ರಾ ಎಲೆಕ್ಟ್ರಿಕ್‌ SUV ಯು ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರುತ್ತದೆ: 34.5 kWh ಮತ್ತು 39.5 kWh ಮತ್ತು 456 km ಶ್ರೇಣಿಯನ್ನು ಹೊಂದಿದೆ. ಈ EV ಯ ಶೈಲಿಯಲ್ಲಿ ಒಂದಷ್ಟು ಬದಲಾವಣೆಗಳು ಉಂಟಾಗಲಿದ್ದು ಇದರ ಪರಿಷ್ಕೃತ ಆವೃತ್ತಿಯು ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ. ಪರಿಷ್ಕೃತ XUV400 ಕುರಿತು ಇನ್ನಷ್ಟು ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದು.

ಸಿಟ್ರಾನ್ eC3

ಬೆಲೆ: ರೂ. 11.61 ಲಕ್ಷದಿಂದ ರೂ. 12.79 ಲಕ್ಷ

ಸಿಟ್ರಾನ್ eC3 ವಾಹನವು ಭಾರತದ ಮಾರುಕಟ್ಟೆಯಲ್ಲಿರುವ ಇನ್ನೊಂದು ಅಗ್ಗದ ಕಾರು ಎನಿಸಿದ್ದು ಇದು C3 ಹ್ಯಾಚ್‌ ಬ್ಯಾಕ್‌ ನ ಎಲೆಕ್ಟ್ರಿಕ್‌ ಆವೃತ್ತಿ ಎನಿಸಿದೆ. ಸಿಟ್ರಾನ್ ಸಂಸ್ಥೆಯು ಇದರಲ್ಲಿ 57 PS ಮತ್ತು 143 Nm ಉಂಟು ಮಾಡುವ ಎಲೆಕ್ಟ್ರಿಕ್‌ ಮೋಟಾರ್‌ ಜೊತೆಗೆ 29.2 kWh ಬ್ಯಾಟರಿ ಪ್ಯಾಕ್‌ ಅನ್ನು ಒದಗಿಸುತ್ತಿದ್ದು, ARAI ಪ್ರಕಾರ 320 km ಶ್ರೇಣಿಯನ್ನು ಹೊಂದಿದೆ. eC3 ಕುರಿತು ನೀವು ಇನ್ನಷ್ಟು ಮಾಹಿತಿಯನ್ನು ಪಡೆಯಲು ಬಯಸುವುದಾದರೆ, ಮೊದಲ ಚಾಲನಾ ಅವಲೋಕನವನ್ನು ಇಲ್ಲಿ ಓದಿರಿ.

MG ಕೋಮೆಟ್ EV

ಬೆಲೆ: ರೂ. 7.98 ಲಕ್ಷದಿಂದ ರೂ. 9.98 ಲಕ್ಷ

ಈ ವರ್ಷದ ಆರಂಭದಲ್ಲಿ MG ಕೋಮೆಟ್ EV ಯನ್ನು ಆರಂಭಿಕ ಹಂತದ ಎಲೆಕ್ಟ್ರಿಕ್‌ ವಾಹನವಾಗಿ ಬಿಡುಗಡೆ ಮಾಡಲಾಗಿದ್ದು, ಭಾರತದಲ್ಲಿ ಅತ್ಯಂತ ಅಗ್ಗದ EV ಯಾಗಿ ಟಾಟಾ ಟಿಯಾಗೊ EV ಯನ್ನು ಹಿಂದಿಕ್ಕಿದೆ. ಈ ಸಬ್-3 ಮೀಟರ್ 2-ಡೋರ್‌ ಎಲೆಕ್ಟ್ರಿಕ್‌ ಕಾರು 17.3 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು 230 km ಶ್ರೇಣಿಯನ್ನು ಹೊಂದಿದೆ. ಆದರೆ ಈ EVಯು ವೇಗದ ಚಾರ್ಜಿಂಗ್‌ ಅನ್ನು ಆಧರಿಸುವುದಿಲ್ಲ. ಹೀಗಾಗಿ 3.3 kW ಚಾರ್ಜರ್‌ ನಲ್ಲಿ 7 ಗಂಟೆಗಳು ಬೇಕಾಗುತ್ತವೆ. ಕೋಮೆಟ್ EV ಕುರಿತು ಇದರ ಬಿಡುಗಡೆಯ ವರದಿಯಿಂದ ಇನ್ನಷ್ಟು ಮಾಹಿತಿಯನ್ನು ನೀವು ಪಡೆಯಬಹುದು.

ಇದನ್ನು ಸಹ ಓದಿರಿ: 2024ರಲ್ಲಿ ಭಾರತಕ್ಕೆ ಬರಲಿರುವ ಎಲ್ಲಾ EV ಗಳ ವಿವರ ಇಲ್ಲಿದೆ

ಆಡಿ Q8 e-ಟ್ರಾನ್‌ ಮತ್ತು Q8 e-ಟ್ರಾನ್‌ ಸ್ಪೋರ್ಟ್‌ ಬ್ಯಾಕ್

ಬೆಲೆ (Q8 e-ಟ್ರಾನ್): ರೂ. 1.14 ಕೋಟಿಯಿಂದ ರೂ. 1.26 ಕೋಟಿ

ಬೆಲೆ (Q8 e-ಟ್ರಾನ್‌ ಸ್ಪೋರ್ಟ್‌ ಬ್ಯಾಕ್): ರೂ. 1.18 ಕೋಟಿಯಿಂದ ರೂ. 1.31 ಕೋಟಿ

ಪರಿಷ್ಕೃತ ಆಡಿ Q8 e-ಟ್ರಾನ್ ಅನ್ನು ಈ ವರ್ಷದಲ್ಲಿ ಬಿಡುಗಡೆ ಮಾಡಲಾಗಿದ್ದು ಇದು ಎರಡು ಬಾಡಿ ಪ್ರಕಾರಗಳಲ್ಲಿ ಬರುತ್ತದೆ: SUV ಮತ್ತು ಸ್ಪೋರ್ಟ್‌ ಬ್ಯಾಕ್ (ಕೂಪೆ-SUV). ಈ ಎರಡೂ ಆವೃತ್ತಿಗಳು ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳನ್ನು ಪಡೆದಿವೆ: 89 kWh ಮತ್ತು 114 kWh, ಎರಡೂ ಸಹ ಡ್ಯುವಲ್‌ ಮೋಟಾರ್‌ ಆಲ್‌ ವೀಲ್‌ ಡ್ರೈವ್‌ ಸೆಟಪ್‌ ಗಳನ್ನು ಹೊಂದಿವೆ. Q8 e-ಟ್ರಾನ್ ವಾಹನವು WLTP ಪ್ರಕಾರ 600 km ಶ್ರೇಣಿಯನ್ನು ಹೊಂದಿದ್ದು 31 ನಿಮಿಷಗಳೊಳಗೆ 10-80 ಶೇಕಡಾದಷ್ಟು ಚಾರ್ಜ್‌ ಮಾಡಬಹುದು. ಆಡಿ Q8 e-ಟ್ರಾನ್‌ ಕುರಿತು ನೀವು ಇದರ ಬಿಡುಗಡೆಯ ವರದಿಯಲ್ಲಿ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.

ವೋಲ್ವೊ C40 ರೀಚಾರ್ಜ್

ಬೆಲೆ: ರೂ 62.95 ಕೋಟಿ

ವೋಲ್ವೊ ಸಂಸ್ಥೆಯು ಸೆಪ್ಟೆಂಬರ್‌ ತಿಂಗಳಿನಲ್ಲಿ C40 ರೀಚಾರ್ಜ್ ಎಲೆಕ್ಟ್ರಿಕ್‌ SUV ಯನ್ನು ಬಿಡುಗಡೆ ಮಾಡಿದ್ದು ಇದು XC40 ರೀಚಾರ್ಜ್‌ ಅನ್ನು ಆಧರಿಸಿದೆ. ಕೂಪೆ ಶೈಲಿಯ ಈ ಎಲೆಕ್ಟ್ರಿಕ್ SUVಯು 78 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು ಇದನ್ನು 408 PS ಮತ್ತು 660 Nm ಉಂಟು ಮಾಡುವ ಡ್ಯುವಲ್‌ ಮೋಟಾರ್‌ ಆಲ್‌ ವೀಲ್‌ ಡ್ರೈವ್‌ ಸೆಟಪ್‌ ಜೊತೆಗೆ ಹೊಂದಿಸಲಾಗಿದೆ. C40 ರೀಚಾರ್ಜ್‌ ವಾಹನವು 4.7 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದು, WLTP ಪ್ರಕಾರ 530 km ಶ್ರೇಣಿಯನ್ನು ಹೊಂದಿದೆ. ನಮ್ಮ ಮೊದಲ ಚಾಲನಾ ಅವಲೋಕನದ ಮೂಲಕ ಇದರ ಚಾಲನಾ ಅನುಭವದ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಿರಿ.

ಟಾಟಾ ನೆಕ್ಸನ್‌ EV ಫೇಸ್‌ ಲಿಫ್ಟ್

ಬೆಲೆ: ರೂ. 14.74 ಲಕ್ಷದಿಂದ ರೂ. 19.94 ಲಕ್ಷ

ಟಾಟಾ ನೆಕ್ಸಾನ್ EVಯು 2020ರಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದ್ದು, ನಾವು ಇಂದು ನೋಡುತ್ತಿರುವ EV ಕ್ರಾಂತಿಗೆ ಇದು ಮುನ್ನುಡಿ ಬರೆಯಿತು. ಈ ವರ್ಷದಲ್ಲಿ ಈ ಎಲೆಕ್ಟ್ರಿಕ್ SUVಯು ತನ್ನ ICE (ಇಂಟರ್ನಲ್‌ ಕಂಬಷನ್‌ ಎಂಜಿನ್) ಸಂಗಾತಿ ಜೊತೆಗೆ ಅಗತ್ಯ ಪರಿಷ್ಕರಣೆಗಳನ್ನು ಕಂಡಿದೆ. ನೆಕ್ಸಾನ್ EV ಯು ಈಗಲೂ 2 ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರುತ್ತದೆ: 30 kWh ಮತ್ತು 40.5 kWh, ಹಾಗೂ 465 km ನಷ್ಟು ಚಾಲನಾ ಶ್ರೇಣಿಯನ್ನು ಹೊಂದಿದೆ. ಟಾಟಾ ನೆಕ್ಸಾನ್ EV‌ ಕುರಿತು ನೀವು ಇಲ್ಲಿರುವ ಮೊದಲ ಚಾಲನಾ ಅವಲೋಕನದಲ್ಲಿ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.

ಮರ್ಸಿಡಿಸ್-ಬೆಂಜ್ EQE SUV

ಬೆಲೆ: ರೂ 1.39 ಕೋಟಿ

ಭಾರತದಲ್ಲಿ ತನ್ನ EV ವ್ಯಾಪ್ತಿಯನ್ನು ವಿಸ್ತರಿಸುತ್ತಾ, ಮರ್ಸಿಡಿಸ್-‌ಬೆಂಜ್ ಸಂಸ್ಥೆಯು ಈ ವರ್ಷದಲ್ಲಿ EQE SUV ಯನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಈ ಎಲೆಕ್ಟ್ರಿಕ್ SUV ಯು 408 PS ಮತ್ತು 858 Nm ಉಂಟು ಮಾಡುವ ಡ್ಯುವಲ್‌ ಮೋಟಾರ್‌ ಸೆಟಪ್‌ ಜೊತೆಗೆ 90.56 kWh ಬ್ಯಾಟರಿ ಪ್ಯಾಕ್‌ ಜೊತೆಗೆ ಬರುತ್ತದೆ. ಇದು 210 kmph ನಷ್ಟು ಗರಿಷ್ಠ ವೇಗವನ್ನು ಹೊಂದಿದ್ದು WLTP ಪ್ರಕಾರ 550 km ಶ್ರೇಣಿಯನ್ನು ನೀಡಲಿದೆ. ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಬಿಡುಗಡೆ ವರದಿಯಲ್ಲಿ ಪಡೆಯಿರಿ.

ಇದನ್ನು ಸಹ ಓದಿರಿ: ಭಾರತದಲ್ಲಿ ಹೊಸ ಮರ್ಸಿಡಿಸ್-AMG C43 ಸೆಡಾನ್‌ ಬಿಡುಗಡೆ, ಬೆಲೆ ರೂ. 98 ಲಕ್ಷ

BMW iX1

ಬೆಲೆ: ರೂ 66.90 ಲಕ್ಷ

ಜಾಗತಿಕವಾಗಿ ಬಿಡುಗಡೆಯಾದ ಒಂದು ವರ್ಷದ ನಂತರ BMW iX1 ಅನ್ನು ಅಕ್ಟೋಬರ್‌ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಎಲೆಕ್ಟ್ರಿಕ್ SUVಯು ತನ್ನ ಪ್ಲಾಟ್‌ ಫಾರ್ಮ್‌ ಅನ್ನು ICE ಸಂಗಾತಿ ಆಗಿರುವ BMW X1 ಜೊತೆಗೆ ಹಂಚಿಕೊಂಡಿದ್ದು, 66.4 kWh ಬ್ಯಾಟರಿ ಪ್ಯಾಕ್‌ ಜೊತೆಗೆ ಬರುತ್ತದೆ. ಇದು 313 PS ಮತ್ತು 494 Nm ಉಂಟು ಮಾಡುವ ಡ್ಯುವಲ್‌ ಎಲೆಕ್ಟ್ರಿಕ್‌ ಮೋಟಾರುಗಳ ಜೊತೆಗೆ ಆಲ್‌ ವೀಲ್‌ ಡ್ರೈವ್‌ ಸೆಟಪ್‌ ಜೊತೆಗೆ ಬರುತ್ತಿದ್ದು, 440 km ಶ್ರೇಣಿಯನ್ನು ಹೊಂದಿದೆ. BMW iX1 ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಲು, ಇಲ್ಲಿ ಕ್ಲಿಕ್‌ ಮಾಡಿರಿ.

ಲೋಟಸ್‌ ಎಲೆಟ್ರೆ

ಬೆಲೆ: ರೂ. 2.55 ಕೋಟಿಯಿಂದ ರೂ. 2.99 ಕೋಟಿ

ಲೋಟಸ್ ಸಂಸ್ಥೆಯು ಇತ್ತೀಚೆಗಷ್ಟೇ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದ್ದು, ಲೋಟಸ್‌ ಎಲೆಟ್ರೆಯು ಇದು ಬಿಡುಗಡೆ ಮಾಡಿದ ಮೊದಲ ಕಾರು ಆಗಿದೆ. ಅಧಿಕ ಕಾರ್ಯಕ್ಷಮತೆಯ ಈ ಎಲೆಕ್ಟ್ರಿಕ್ SUV ಯು 112 kWh ಬ್ಯಾಟರಿ ಪ್ಯಾಕ್‌ ಜೊತೆಗೆ ಬರುತ್ತಿದ್ದು 2 ಪವರ್‌ ಟ್ರೇನ್‌ ಆಯ್ಕೆಗಳನ್ನು ಒದಗಿಸುತ್ತದೆ. ಅಲ್ಲದೆ ಇದರ ಔಟ್ಪುಟ್‌ 918 PS ಮತ್ತು 985 Nm ತನಕ ಹೋಗುತ್ತದೆ. ಎಲೆಟ್ರೆಯು 600 km ಶ್ರೇಣಿಯನ್ನು ಹೊಂದಿದ್ದು, ಈ ವಾಹನದ ಕುರಿತು ನಿಮಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಇಲ್ಲಿ ಕ್ಲಿಕ್‌ ಮಾಡಿರಿ.

ರೋಲ್ಸ್‌ ರಾಯ್ಸ್‌ ಸ್ಪೆಕ್ಟ್ರೆ

ಬೆಲೆ: ನೀವು ಕೇಳುವುದಾದರೆ...

ರೋಲ್ಸ್‌ ರಾಯ್ಸ್ ಸಂಸ್ಥೆಯ ಶುದ್ಧ ಎಲೆಕ್ಟ್ರಿಕ್‌ ಐಷಾರಾಮಿ ಮಾದರಿಯು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗದೆ ಇದ್ದರೂ, ಆಮದು ಮಾಡಿಕೊಳ್ಳುವ ಮೂಲಕ ಕೆಲವು ಜನರು ಈ ವಾಹನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರೋಲ್ಸ್‌ ರಾಯ್ಸ್‌ ಸ್ಪೆಕ್ಟ್ರೆ ವಾಹನವು 100 kWh ಶಕ್ತಿ ಸಾಮರ್ಥ್ಯವನ್ನುಂಟು ಮಾಡುವ 700 kg ಬ್ಯಾಟರಿ ಪ್ಯಾಕ್‌ ಮತ್ತು 595 PS ಮತ್ತು 900 Nm ಉಂಟು ಮಾಡುವ ಎಲೆಕ್ಟ್ರಿಕ್‌ ಮೋಟಾರ್‌ ಜೊತೆಗೆ ಬರುತ್ತದೆ. ಈ ವಾಹನವು WLTP ಪ್ರಕಾರ 520 km ಶ್ರೇಣಿಯನ್ನು ಹೊಂದಿದೆ. ಎಲೆಕ್ಟ್ರಿಕ್‌ ರೋಲ್ಸ್‌ ರಾಯ್ಸ್‌ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: i7 ಅಟೋಮ್ಯಾಟಿಕ್

a
ಅವರಿಂದ ಪ್ರಕಟಿಸಲಾಗಿದೆ

ansh

  • 47 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಬಿಎಂಡವೋ i7

Read Full News

explore similar ಕಾರುಗಳು

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.24 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ