Kia Sonet Facelift ನೀಡುವ ಇಂಧನ ದಕ್ಷತೆಯ ಅಂಕಿಅಂಶಗಳು ಬಹಿರಂಗ
ಕಿಯಾ ಸೊನೆಟ್ ಗಾಗಿ rohit ಮೂಲಕ ಜನವರಿ 08, 2024 04:23 pm ರಂದು ಪ್ರಕಟಿಸಲಾಗಿದೆ
- 41 Views
- ಕಾಮೆಂಟ್ ಅನ್ನು ಬರೆಯಿರಿ
ಡೀಸೆಲ್-iMT ಯ ಕಾಂಬೊ ಆಗಿರುವ ಸೋನೆಟ್ ಫೇಸ್‌ಲಿಫ್ಟ್ ಅತ್ಯಂತ ಕಡಿಮೆ ವೆಚ್ಚದ ಕೊಡುಗೆಯಾಗಿದೆ, ಆದರೆ ಡೀಸೆಲ್-ಮ್ಯಾನ್ಯುವಲ್‌ನ ದಕ್ಷತೆಯ ಅಂಕಿಅಂಶಗಳು ಇನ್ನೂ ದೃಢೀಕರಿಸಲ್ಪಟ್ಟಿಲ್ಲ.
- ಸೋನೆಟ್ ಫೇಸ್‌ಲಿಫ್ಟ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ: ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್.
- ಇದರ ಡೀಸೆಲ್-iMT ಕಾಂಬೊ 22.3 kmpl ನೀಡುವ ಮೂಲಕ ಹೆಚ್ಚು ಇಂಧನ-ದಕ್ಷ ಪವರ್‌ಟ್ರೇನ್ ಆಗಿದೆ.
- 2024 ರ ಸೋನೆಟ್‌ನಲ್ಲಿ ಹೊಸ ಗ್ರಿಲ್, ಶಾರ್ಪ್ ಆಗಿರುವ LED ಹೆಡ್‌ಲೈಟ್‌ಗಳು ಮತ್ತು ಹೊಸ ಅಲಾಯ್ ಚಕ್ರಗಳನ್ನು ಒಳಗೊಂಡ ಡಿಸೈನ್ ಬದಲಾವಣೆಗಳು ಸೇರಿವೆ.
- ಇದರ ಜೊತೆಗೆ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ADAS ಅನ್ನು ಕೂಡ ಒಳಗೊಂಡಿರುತ್ತದೆ.
- ಇದರ ಬೆಲೆಯು ರೂ. 8 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಮತ್ತು ಕಿಯಾ ಈಗಾಗಲೇ ತನ್ನ ಈ ಹೊಸ SUVಯ ವೇರಿಯಂಟ್ ಶ್ರೇಣಿ ಮತ್ತು ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳ ವಿವಿಧ ವಿವರಗಳನ್ನು ಬಹಿರಂಗಪಡಿಸಿದೆ. ಕಿಯಾ ಈಗ ಫೇಸ್‌ಲಿಫ್ಟ್ ಆಗಿರುವ ಸಬ್-4m SUV ಯ ಎಲ್ಲಾ ಪವರ್‌ಟ್ರೇನ್ ವಿಧದ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಸಹ ಬಹಿರಂಗಪಡಿಸಿದೆ.
ಪವರ್‌ಟ್ರೇನ್ ಮತ್ತು ಮೈಲೇಜ್ ವಿವರಗಳು
ನಿರ್ದಿಷ್ಟ ಅಂಶ |
1.2-ಲೀಟರ್ N.A.* ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 PS |
120 PS |
116 PS |
ಟೋರ್ಕ್ |
115 Nm |
172 Nm |
250 Nm |
ಟ್ರಾನ್ಸ್ಮಿಷನ್ |
5-ಸ್ಪೀಡ್ MT |
6- ಸ್ಪೀಡ್ iMT, 7- ಸ್ಪೀಡ್ DCT |
6- ಸ್ಪೀಡ್ iMT, 6- ಸ್ಪೀಡ್ MT, 6- ಸ್ಪೀಡ್ AT |
ಹೇಳಿರುವ ಇಂಧನ ದಕ್ಷತೆ |
18.83 ಕೆಎಂಪಿಎಲ್ |
18.7 ಕೆಎಂಪಿಎಲ್, 19.2 ಕೆಎಂಪಿಎಲ್ |
22.3 ಕೆಎಂಪಿಎಲ್, T.B.D.^, 18.6 ಕೆಎಂಪಿಎಲ್ |
*N.A. - ನಾಚುರಲಿ ಆಸ್ಪಿರೇಟೆಡ್
^ - ಟು ಬಿ ಡಿಕ್ಲೇರ್ಡ್
ಫೇಸ್‌ಲಿಫ್ಟ್‌ನೊಂದಿಗೆ, ಸೋನೆಟ್ ತನ್ನ ಡೀಸೆಲ್-MT ಆಯ್ಕೆಯನ್ನು ಮರಳಿ ಪಡೆಯಲಿದೆ. ಕಿಯಾ ಡೀಸೆಲ್ ಮ್ಯಾನುವಲ್‌ನ ಮೈಲೇಜ್ ಅಂಕಿಅಂಶವನ್ನು ಇನ್ನೂ ಬಹಿರಂಗಪಡಿಸಿಲ್ಲ. ನಾವು ನಿರೀಕ್ಷಿಸಿದಂತೆ, ಡೀಸೆಲ್ ಪವರ್‌ಟ್ರೇನ್ ಇಲ್ಲಿ ಕಡಿಮೆ ವೆಚ್ಚದ ಕೊಡುಗೆಯಾಗಿದೆ, ಆದರೆ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್, SUV ಗಾಗಿ ಅತ್ಯಂತ ಪರಿಣಾಮಕಾರಿ ಪೆಟ್ರೋಲ್ ಆಯ್ಕೆಯಾಗಿದೆ.
2024 ರ ಸೋನೆಟ್ ನಲ್ಲಿ ಹೊಸತೇನಿದೆ?
ಸೋನೆಟ್ ಸಬ್‌ಕಾಂಪ್ಯಾಕ್ಟ್ SUV 2020 ರಲ್ಲಿ ಮಾರುಕಟ್ಟೆಗೆ ಬಂದ ನಂತರ ಮೊಟ್ಟ ಮೊದಲ ಬಾರಿಗೆ ಪ್ರಮುಖ ಅಪ್ಡೇಟ್ ಅನ್ನು ಪಡೆಯುತ್ತಿದೆ. ಕಾರಿನ ಹೊರಭಾಗದ ಬದಲಾವಣೆಗಳಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಶಾರ್ಪ್ ಆಗಿರುವ LED ಹೆಡ್ ಲೈಟ್ ಗಳು, ಉದ್ದವಾದ ಕೋರೆಹಲ್ಲಿನ ಆಕಾರದ LED DRL ಗಳು, ಹೊಳೆಯುವ LED ಫಾಗ್ ಲ್ಯಾಂಪ್ ಗಳು, ಅಪ್ಡೇಟ್ ಆಗಿರುವ ಕನೆಕ್ಟೆಡ್ LED ಟೈಲ್ ಲೈಟ್ ಗಳು ಮತ್ತು ಟ್ವೀಕ್ ಮಾಡಿದ ಬಂಪರ್ ಗಳನ್ನು ಒಳಗೊಂಡಿರುತ್ತದೆ.
ರಿವೈಸ್ ಆಗಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಬಿಟ್ಟರೆ ಅದರ ಇಂಟೀರಿಯರ್ ನಿರ್ಗಮಿಸುತ್ತಿರುವ ಮಾಡೆಲ್ ನಂತೆಯೇ ಇರುತ್ತದೆ. ಇದು ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಈಗಾಗಲೇ ಇರುವ ಫೀಚರ್ ಗಳನ್ನು ಒಳಗೊಂಡಿದೆ. ಅದರ ಜೊತೆಗೆ, ಕಿಯಾ ತನ್ನ ಸೆಲ್ಟೋಸ್‌ನಲ್ಲಿ ಇರುವ 10.25-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ ಮತ್ತು ಹ್ಯುಂಡೈ ವೆನ್ಯೂನಿಂದ ಸ್ಫೂರ್ತಿ ಪಡೆದ 4-ವೇ ಚಾಲಿತ ಡ್ರೈವರ್ ಸೀಟ್ ಅನ್ನು ಪರಿಚಯಿಸಿದೆ.
ಸುರಕ್ಷತೆಗಾಗಿ, ಹೊಸ ಸೋನೆಟ್ 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಈ ಎರಡು ಪ್ರಮುಖ ಫೀಚರ್ ಗಳನ್ನು ಪಡೆಯಲಿದೆ. ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳಂತಹ ಇತರ ಸುರಕ್ಷತಾ ತಂತ್ರಜ್ಞಾನಗಳನ್ನು ನೀಡುವುದನ್ನು ಕಿಯಾ ಮುಂದುವರೆಸಿದೆ.
ಇದಕ್ಕೆ ಸಂಬಂಧಿಸಿದಂತೆ: 2024 ಕಿಯಾ ಸೋನೆಟ್: ನೀವು ಇದಕ್ಕಾಗಿ ಕಾಯುವುದು ಉತ್ತಮವೇ ಅಥವಾ ಅದರ ಪ್ರತಿಸ್ಪರ್ಧಿ ಕಾರುಗಳು ಚೆನ್ನಾಗಿದೆಯೇ?
ಮಾರುಕಟ್ಟಗೆ ಬರಬಹುದಾದ ನಿರೀಕ್ಷಿತ ಸಮಯ ಮತ್ತು ಬೆಲೆ
ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ ಅನ್ನು ಜನವರಿ 2024 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದರ ಬೆಲೆಯು ರೂ 8 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ). ಇದು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರ XUV300, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಮತ್ತು ಸಬ್-4m ಕ್ರಾಸ್ಒವರ್ ಮಾರುತಿ ಫ್ರಾಂಕ್ಸ್ ಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಕಿಯಾ ಸೋನೆಟ್ ಆಟೋಮ್ಯಾಟಿಕ್