• English
  • Login / Register

5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್‌ನ ವಿವರ

ಕಿಯಾ ಸೊನೆಟ್ ಗಾಗಿ shreyash ಮೂಲಕ ಜನವರಿ 23, 2024 03:33 pm ರಂದು ಪ್ರಕಟಿಸಲಾಗಿದೆ

  • 105 Views
  • ಕಾಮೆಂಟ್‌ ಅನ್ನು ಬರೆಯಿರಿ

2024 ಕಿಯಾ ಸೋನೆಟ್ ನ HTK+ ವೇರಿಯಂಟ್ LED ಫಾಗ್ ಲ್ಯಾಂಪ್‌ಗಳು, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ AC ಯಂತಹ ಫೀಚರ್ ಗಳನ್ನು ನೀಡುತ್ತದೆ.

Kia Sonet 2024 HTK+

ಕಿಯಾ ಸೋನೆಟ್ ಫೇಸ್‌ಲಿಫ್ಟ್ ಇತ್ತೀಚೆಗೆ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS) ಸೇರಿದಂತೆ ಹೊಚ್ಚ ಹೊಸ ಲುಕ್ ಮತ್ತು ಹೆಚ್ಚಿನ ತಂತ್ರಜ್ಞಾನವನ್ನು ಒಳಗೊಂಡ ಮಿಡ್‌ಲೈಫ್ ಅಪ್ಡೇಟ್ ಅನ್ನು ಪಡೆದುಕೊಂಡಿದೆ. 2024 ರ ಸೋನೆಟ್ ಅನ್ನು ಏಳು ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ: HTE, HTK, HTK+, HTX, HTX+, GTX+ ಮತ್ತು X-ಲೈನ್. ಈ ಲೇಖನದಲ್ಲಿ, 2024 ರ ಸೋನೆಟ್‌ನ ಮಿಡ್-ಸ್ಪೆಕ್ HTK+ ವೇರಿಯಂಟ್ ಹೇಗೆ ಕಾಣುತ್ತದೆ ಮತ್ತು ಅದರಲ್ಲಿ ಏನೇನಿದೆ ಎಂಬುದನ್ನು ನಾವು 5 ಚಿತ್ರಗಳಲ್ಲಿ ನೋಡೋಣ.

Kia Sonet 2024 HTK+ Front

 ಮುಂಭಾಗದಲ್ಲಿ, 2023 ಕಿಯಾ ಸೋನೆಟ್ ನ HTK+ ವೇರಿಯಂಟ್ ಮ್ಯಾಟ್ ಕ್ರೋಮ್ ನೊಂದಿಗೆ ಸುತ್ತುವರಿದಿರುವ ರಿವೈಸ್ ಆಗಿರುವ ಗ್ರಿಲ್ ಮತ್ತು ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಪಡೆದುಕೊಂಡಿದೆ. ಇದು LED ಹೆಡ್‌ಲೈಟ್‌ಗಳನ್ನು ಪಡೆಯದಿದ್ದರೂ ಕೂಡ, ಇದನ್ನು ಕೆಳಮಟ್ಟದ-ಸ್ಪೆಕ್ ವೇರಿಯಂಟ್ ಗಳಿಂದ ಪ್ರತ್ಯೇಕಿಸಲು LED DRL ಗಳು ಮತ್ತು LED ಫಾಗ್ ಲ್ಯಾಂಪ್ ಗಳನ್ನು ನೀಡಲಾಗಿದೆ.

Kia Sonet 2024 HTK+ Profile

 ಪ್ರೊಫೈಲ್ ಕುರಿತು ಹೇಳುವುದಾದರೆ, ಸೋನೆಟ್ HTK+ 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಅನ್ನು ಹೊಂದಿದೆ, ಇದು HTX+ ವೇರಿಯಂಟ್ ನೊಂದಿಗೆ ನೀಡಲಾಗುವ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಗಿಂತ ಸ್ವಲ್ಪ ಭಿನ್ನವಾಗಿದೆ. HTK+ ನೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಆಯ್ಕೆ ಮಾಡಿಕೊಂಡರೆ, ನೀವು ಸನ್‌ರೂಫ್ ಅನ್ನು ಕೂಡ ಪಡೆಯುತ್ತೀರಿ.

 ಇದನ್ನು ಕೂಡ ಓದಿ: 5 ಚಿತ್ರಗಳಲ್ಲಿ ಹೊಸ ಕಿಯಾ ಸೋನೆಟ್ ಬೇಸ್-ಸ್ಪೆಕ್ HTE ವೇರಿಯಂಟ್ ಅನ್ನು ನೋಡಿ

Kia Sonet 2024 HTK+ Rear

 ಕನೆಕ್ಟೆಡ್ LED ಟೈಲ್‌ಲ್ಯಾಂಪ್‌ಗಳನ್ನು ಪಡೆದುಕೊಂಡಿರುವ ಎಂಟ್ರಿ ಲೆವೆಲ್ ವೇರಿಯಂಟ್ ಆಗಿ 2024 ಕಿಯಾ ಸೋನೆಟ್ HTK+ ಹೊರಹೊಮ್ಮಿದೆ. ಇದು ಕಪ್ಪು ಬಣ್ಣದ ಹಿಂಭಾಗದ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಕೂಡ ಪಡೆದಿದೆ, ಇದು ಸೋನೆಟ್‌ಗೆ ಒರಟಾದ ಲುಕ್ ಅನ್ನು ನೀಡುತ್ತದೆ.

Kia Sonet 2024 HTK+ Interior

 ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ HTK+ ವೇರಿಯಂಟ್, ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಆಲ್-ಬ್ಲಾಕ್ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಸಣ್ಣ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ AC, ಸೆಮಿ-ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ, ಟೈಪ್-C ಚಾರ್ಜಿಂಗ್ ಪೋರ್ಟ್‌ಗಳು, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು ಆಟೋ ಅಪ್/ಡೌನ್ ಡ್ರೈವರ್‌ ಸೈಡ್ ವಿಂಡೋ ಮತ್ತು ಸ್ಮಾರ್ಟ್ ಕೀಯೊಂದಿಗೆ ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಕೂಡ ಪಡೆಯುತ್ತದೆ.

 ಸೋನೆಟ್‌ನ ಈ ವೇರಿಯಂಟ್ ಸಂಪೂರ್ಣ ಡಿಜಿಟಲ್ 10.25-ಇಂಚಿನ ಡ್ರೈವರ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿಲ್ಲ. ಅದರ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಸಪೋರ್ಟ್ ಮಾಡುತ್ತದೆ, ಹಾಗೆ ನೋಡಿದರೆ ಸಬ್‌ಕಾಂಪ್ಯಾಕ್ಟ್ SUVಯ ಮೇಲ್ಮಟ್ಟದ-ಸ್ಪೆಕ್ಡ್ ವೇರಿಯಂಟ್ ನೊಂದಿಗೆ ನೀಡಲಾಗಿರುವ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾತ್ರ ನೀಡುತ್ತದೆ.

 ಇದನ್ನು ಕೂಡ ಓದಿ: 2024 ಹ್ಯುಂಡೈ ಕ್ರೆಟಾ EX ವೇರಿಯಂಟ್ ಅನ್ನು 5 ಚಿತ್ರಗಳಲ್ಲಿ ವಿವರಿಸಲಾಗಿದೆ

2024 Kia Sonet HTK+ Rear seat

 ಹಿಂಭಾಗದ ಸೀಟಿನಲ್ಲಿ ಕುಳಿತವರಿಗೆ, ಸೋನೆಟ್ ಫೇಸ್‌ಲಿಫ್ಟ್ ರಿಯರ್ AC ವೆಂಟ್‌ಗಳು, ರಿಯರ್ ಸನ್‌ಶೇಡ್‌ಗಳು ಮತ್ತು USB ಟೈಪ್-C ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡುತ್ತದೆ. ಆದರೆ ಹಿಂಬದಿಯ ಸೀಟ್‌ಗಳಿಗೆ ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ನೀಡಲಾಗಿಲ್ಲ.

 ಸೋನೆಟ್‌ನ ಈ ವೇರಿಯಂಟ್ ನಲ್ಲಿರುವ ಸುರಕ್ಷತಾ ಫೀಚರ್ ಗಳ ಕುರಿತು ಹೇಳುವುದಾದರೆ, ಇದು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್-ಸ್ಟಾರ್ಟ್ ಅಸಿಸ್ಟ್, ಸೆನ್ಸರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲ್ಲಾ ಪ್ಯಾಸೆಂಜರ್ ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ನೀಡಲಾಗಿದೆ.

 ಪವರ್‌ಟ್ರೇನ್ ಆಯ್ಕೆ

 ಕಿಯಾ ತನ್ನ ಸೋನೆಟ್‌ನ HTK+ ವೇರಿಯಂಟ್ ಅನ್ನು ಎಲ್ಲಾ ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ ಆದರೆ ಆಟೋಮ್ಯಾಟಿಕ್ ಆಯ್ಕೆ ಮಾತ್ರ ಲಭ್ಯವಿಲ್ಲ. ಆಯ್ಕೆಗಳಲ್ಲಿ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು(120 PS / 172 Nm) 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದೆ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಗೆ ಜೋಡಿಸಲಾಗಿದೆ, 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು (83 PS / 115 Nm) 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ, ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು(116 PS / 250 Nm) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

 ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ HTK+ ವೇರಿಯಂಟ್ ಬೆಲೆಗಳು ರೂ 9.89 ಲಕ್ಷದಿಂದ ಶುರುವಾಗಿ ರೂ 11.39 ಲಕ್ಷದವರೆಗೆ ಇದೆ, ಹಾಗೂ ಅದರ ಟಾಪ್-ಸ್ಪೆಕ್ ವೇರಿಯಂಟ್ ಬೆಲೆಯು ರೂ 15.69 ಲಕ್ಷವಾಗಿದೆ (ಪರಿಚಯಾತ್ಮಕ, ಎಕ್ಸ್-ಶೋರೂಮ್ ಪ್ಯಾನ್ ಇಂಡಿಯಾ). ಇದು ಟಾಟಾ ನೆಕ್ಸಾನ್, ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ಮಾರುತಿ ಸುಜುಕಿ ಬ್ರೆಝಾ ಮತ್ತು ರೆನಾಲ್ಟ್ ಕಿಗರ್ ಮುಂತಾದವುಗಳ ಜೊತೆಗೆ ಸ್ಪರ್ಧಿಸಲಿದೆ.

 ಇನ್ನಷ್ಟು ಓದಿ: ಸೋನೆಟ್ ಆನ್ ರೋಡ್ ಬೆಲೆ

was this article helpful ?

Write your Comment on Kia ಸೊನೆಟ್

1 ಕಾಮೆಂಟ್
1
A
abhishek thakur
Mar 31, 2024, 3:19:39 PM

I want kia sonet htk plus variant but this variant doesn't have sunroof now I want to buy venue sx with sunroof If kia gives sunroof on htk plus variant then I buy.

Read More...
    ಪ್ರತ್ಯುತ್ತರ
    Write a Reply

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    • ಟಾಟಾ ಸಿಯೆರಾ
      ಟಾಟಾ ಸಿಯೆರಾ
      Rs.10.50 ಲಕ್ಷಅಂದಾಜು ದಾರ
      ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
    • ಕಿಯಾ syros
      ಕಿಯಾ syros
      Rs.9.70 - 16.50 ಲಕ್ಷಅಂದಾಜು ದಾರ
      ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
    • ಬಿವೈಡಿ sealion 7
      ಬಿವೈಡಿ sealion 7
      Rs.45 - 49 ಲಕ್ಷಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    • ಎಂಜಿ majestor
      ಎಂಜಿ majestor
      Rs.46 ಲಕ್ಷಅಂದಾಜು ದಾರ
      ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
    • ಟಾಟಾ ಹ್ಯಾರಿಯರ್ ಇವಿ
      ಟಾಟಾ ಹ್ಯಾರಿಯರ್ ಇವಿ
      Rs.30 ಲಕ್ಷಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    ×
    We need your ನಗರ to customize your experience