ಮೊದಲ ಬಾರಿಗೆ Kia Syrosನ ಇಂಟೀರಿಯರ್‌ನ ಟೀಸರ್ ಬಿಡುಗಡೆ, ಅದರಲ್ಲಿ ಯಾವ ಅಂಶಗಳು ಬಹಿರಂಗ?
ಕಿಯಾ syros ಗಾಗಿ rohit ಮೂಲಕ ಡಿಸೆಂಬರ್ 10, 2024 08:23 pm ರಂದು ಮಾರ್ಪಡಿಸಲಾಗಿದೆ
- 89 Views
- ಕಾಮೆಂಟ್ ಅನ್ನು ಬರೆಯಿರಿ
ಸಿರೋಸ್ ಕಪ್ಪು ಮತ್ತು ಬೂದು ಬಣ್ಣದ ಕ್ಯಾಬಿನ್ ಥೀಮ್ ಜೊತೆಗೆ ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ದೊಡ್ಡ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ ಎಂದು ಇತ್ತೀಚಿನ ಟೀಸರ್ ತೋರಿಸುತ್ತದೆ
-
ಕಿಯಾದ ಭಾರತೀಯ ಕಾರುಗಳ ಪಟ್ಟಿಯಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ಎಸ್‌ಯುವಿಗಳ ನಡುವೆ ಸೈರೋಸ್ ಸ್ಲಾಟ್ ಆಗಲಿದೆ ಎಂದು ವರದಿಯಾಗಿದೆ.
-
ಇತರ ಕ್ಯಾಬಿನ್ ಹೈಲೈಟ್‌ಗಳಲ್ಲಿ ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಹೊಸ ಗೇರ್ ಶಿಫ್ಟರ್ ಸೇರಿವೆ.
-
ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು, ಬಹು ಏರ್‌ಬ್ಯಾಗ್‌ಗಳು ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯಬಹುಂದೆಂದು ನಿರೀಕ್ಷಿಸಲಾಗಿದೆ.
-
ಅದೇ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಸೋನೆಟ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಪಡೆಯಬಹುದು.
-
ಡಿಸೆಂಬರ್ 19 ರಂದು ಇದು ಬಿಡುಗಡೆಯಾಗಲಿದ್ದು, ಇದರ ಬೆಲೆಗಳು ರೂ 9 ಲಕ್ಷ ರೂ.ನಿಂದ(ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ನಮ್ಮ ಮಾರುಕಟ್ಟೆಗೆ ಕೊರಿಯನ್ ಕಾರು ತಯಾರಕರ ಮುಂಬರುವ ಕಾರು ಆದ ಕಿಯಾ ಸಿರೋಸ್‌ನ ಟೀಸರ್ ಅನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಇದರ ಇತ್ತೀಚಿನ ಟೀಸರ್ ನಮಗೆ ಅದರ ಕ್ಯಾಬಿನ್ ಕುರಿತ ಸಣ್ಣ ಸುಳಿವನ್ನು ನೀಡುತ್ತದೆ, ಹಾಗೆಯೇ ಬೋರ್ಡ್‌ನಲ್ಲಿ ಕೆಲವು ಹೊಸ ಫೀಚರ್‌ಗಳನ್ನು ನೀಡುವುದನ್ನು ಖಚಿತಪಡಿಸುತ್ತದೆ. ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಸ್ಥಾನ ಪಡೆದಿರುವ ಸಿರೋಸ್ ಡಿಸೆಂಬರ್ 19 ರಂದು ತನ್ನ ಜಾಗತಿಕವಾಗಿ ಚೊಚ್ಚಲ ಪ್ರವೇಶವನ್ನು ಮಾಡಲು ಸಿದ್ಧವಾಗಿದೆ.
ನಾವು ಗಮನಿಸಿದ್ದು ಏನು ?
ಹೊಸ ಟೀಸರ್ ಆಧರಿಸಿ, ಹೊಸ ಏರ್‌ಕ್ರಾಫ್ಟ್ ಥ್ರೊಟಲ್‌ನಂತಹ ಗೇರ್ ಶಿಫ್ಟರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಡ್ರೈವ್ ಮತ್ತು ಟೆರೈನ್ ಮೋಡ್‌ಗಳಿಗೆ ನಿಯಂತ್ರಣ ಹೊಂದಿರುವ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಬಹು ಟೈಪ್-ಸಿ ಯುಎಸ್‌ಬಿ ಪೋರ್ಟ್‌ಗಳನ್ನು ನಾವು ಗಮನಿಸಬಹುದು. ಚಿಕ್ಕ ವೀಡಿಯೊ ಕ್ಲಿಪ್ ಇದು ಎಂಜಿನ್ ಸ್ಟಾರ್ಟ್/ಸ್ಟಾಪ್ ಕಂಟ್ರೋಲರ್‌ನ ಕೆಳಗೆ ಎರಡು ಬಟನ್‌ಗಳೊಂದಿಗೆ ಬರುತ್ತದೆ ಎಂದು ತಿಳಿಸುತ್ತದೆ ಅದು ಕ್ರಮವಾಗಿ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾಕ್ಕಾಗಿವೆ. ಟೀಸರ್ ಅನ್ನು ಗಮನಿಸುವಾಗ, ಸೈರೋಸ್‌ನ ಕ್ಯಾಬಿನ್ ಕಪ್ಪು ಮತ್ತು ಬೂದು ಬಣ್ಣದ ಥೀಮ್ ಅನ್ನು ಹೊಂದಿರುತ್ತದೆ ಎಂದು ತೋರುತ್ತದೆ.
ಫೀಚರ್‌ಗಳ ಕುರಿತು
![Kia Syros wireless phone charger](https://stimg.cardekho.com/pwa/img/spacer3x2.png)
![Kia Syros big touchscreen](https://stimg.cardekho.com/pwa/img/spacer3x2.png)
ವೀಡಿಯೊದಲ್ಲಿ ಗಮನಿಸುವಾಗ, ಸೈರೋಸ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ದೊಡ್ಡ ಟಚ್‌ಸ್ಕ್ರೀನ್ (ಸೋನೆಟ್‌ನಿಂದ ಅದೇ 10.25-ಇಂಚಿನ ಸ್ಕ್ರೀನ್ ಎಂದು ನಿರೀಕ್ಷಿಸಲಾಗಿದೆ) ಆಗಾಗ್ಗೆ ಕಾರ್ಯನಿರ್ವಹಿಸುವ ಫಂಕ್ಷನ್‌ಗಳಿಗಾಗಿ ಬಟನ್ ಕಂಟ್ರೋಲ್‌ಗಳನ್ನು ಪಡೆಯುತ್ತದೆ ಎಂದು ನಾವು ನೋಡಬಹುದು. ಇತರ ನಿರೀಕ್ಷಿತ ಫೀಚರ್‌ಗಳಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ, ಪನರೋಮಿಕ್ ಸನ್‌ರೂಫ್ ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಸೇರಿವೆ.
ಸ್ಟೀರಿಂಗ್ ವೀಲ್‌ನಲ್ಲಿರುವ ಲೇನ್-ಕೀಪ್ ಅಸಿಸ್ಟ್ ಬಟನ್‌ಅನ್ನು ಖಚಿತಪಡಿಸಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ಎಡಿಎಎಸ್) ಸೂಟ್ ಸಿರೋಸ್ ಪಡೆಯುವ ಅತಿದೊಡ್ಡ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇತರ ನಿರೀಕ್ಷಿತ ಸುರಕ್ಷತಾ ತಂತ್ರಜ್ಞಾನಗಳಲ್ಲಿ ಬಹು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್‌ಗಳು ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.
ಇದನ್ನು ಸಹ ಓದಿ: 2024ರ ನವೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಟಾಪ್-15 ಕಾರುಗಳ ಪಟ್ಟಿ ಇಲ್ಲಿದೆ..
ನಿರೀಕ್ಷಿತ ಪವರ್‌ಟ್ರೇನ್ ಆಯ್ಕೆಗಳು
ಇನ್ನೂ ಅಧಿಕೃತವಾಗಿ ದೃಢೀಕರಿಸದಿದ್ದರೂ, ನಾವು Syros ಸೋನೆಟ್‌ನಂತೆಯೇ ಅದೇ ಎಂಜಿನ್ ಆಯ್ಕೆಗಳನ್ನು ಪಡೆಯಬಹುದೆಂದು ನಿರೀಕ್ಷಿಸುತ್ತಿದ್ದೇವೆ, ಅದರ ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ N/A ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 ಪಿಎಸ್ |
120 ಪಿಎಸ್ |
116 ಪಿಎಸ್ |
ಟಾರ್ಕ್ |
115 ಎನ್‌ಎಮ್ |
172 ಎನ್‌ಎಮ್ |
250 ಎನ್‌ಎಮ್ |
ಗೇರ್‌ಬಾಕ್ಸ್ |
5-ಸ್ಪೀಡ್ ಮ್ಯಾನ್ಯುವಲ್ |
6-ಸ್ಪೀಡ್ iMT*, 7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ iMT*, 6-ಸ್ಪೀಡ್ ಆಟೋಮ್ಯಾಟಿಕ್ |
iMT (ಕ್ಲಚ್‌ಲೆಸ್ ಮ್ಯಾನ್ಯುಯಲ್) ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ಸೇರಿದಂತೆ ಸೋನೆಟ್‌ನಂತೆಯೇ ಅದೇ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಇದು ಪಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಇದಕ್ಕಿಂತ ಮೇಲಿನ ಸೆಗ್ಮೆಂಟ್‌ನ ಕಾರುಗಳಲ್ಲಿ ಕಂಡುಬರುವಂತೆ ಇದು ಸಹ ವಿಭಿನ್ನ ಟೆರ್ರೈನ್ ಮತ್ತು ಡ್ರೈವ್ ಮೋಡ್‌ಗಳನ್ನು ಪಡೆಯುತ್ತದೆ ಎಂದು ನಾವು ಇತ್ತೀಚಿನ ವೀಡಿಯೊದಲ್ಲಿ ಗುರುತಿಸಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ, ಆದರೆ ಇದು ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3XO, ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದ ಸಬ್‌ಕಾಂಪ್ಯಾಕ್ಟ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪರ್ಯಾಯವಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ