Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ
ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 08, 2023 04:24 pm ರಂದು ಪ್ರಕಟಿಸಲಾಗಿದೆ
- 70 Views
- ಕಾಮೆಂಟ್ ಅನ್ನು ಬರೆಯಿರಿ
ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಮತ್ತು AT ಆಯ್ಕೆಗಳೊಂದಿಗೆ ನೀಡಲಾಗುವುದು
- ಪರಿಷ್ಕೃತ ಕಿಯಾ ಸೋನೆಟ್ ವಾಹನವು ಭಾರತದಲ್ಲಿ ಡಿಸೆಂಬರ್ 14ರಂದು ಬಿಡುಗಡೆಯಾಗಲಿದೆ.
- ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ 6 ಸ್ಪೀಡ್ ಮ್ಯಾನುವಲ್ ಆಯ್ಕೆಯು (ಮೂರು ಪೆಡಲ್ ಗಳು) ಸೋನೆಟ್ ನ ಡೀಸೆಲ್ ವೇರಿಯಂಟ್ ಗಳಿಗೆ ವಾಪಸ್ ಬರಲಿದೆ.
- ಪರಿಷ್ಕೃತ ಸೋನೆಟ್ ಕಾರು ಡೀಸೆಲ್ ಎಂಜಿನ್ ಜೊತೆಗೆ 6 ಸ್ಪೀಡ್ iMT ಆಯ್ಕೆಯನ್ನು ಸಹ ಉಳಿಸಿಕೊಳ್ಳಲಿದೆ.
- ಇದು ಅದೇ 1.2 ಲೀಟರ್ N.A. ಮತ್ತು 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಗಳ ಜೊತೆಗೆ ದೊರೆಯಲಿದೆ.
- ಚಾಲಕನ ಡಿಜಿಟಲ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮರಾ ಮತ್ತು ADAS ಮುಂತಾದ ಹೊಸ ವೈಶಿಷ್ಟ್ಯಗಳನ್ನು ಇದು ಒಳಗೊಂಡಿರಲಿದೆ.
- ಇದು 2024ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.
ಸುಮಾರು ಮೂರು ವರ್ಷಗಳ ಮಾರಾಟದ ನಂತರ ಕಿಯಾ ಸೋನೆಟ್ ಕಾರು ಮೊದಲ ಬಾರಿಗೆ ದೊಡ್ಡ ಪ್ರಮಾಣದ ಬದಲಾವಣೆಗೆ ಒಳಗಾಗುತ್ತಿದೆ. ಈ ಕಾರು ತಯಾರಕ ಸಂಸ್ಥೆಯು ಪರಿಷ್ಕೃತ ಕಿಯಾ ಸೋನೆಟ್ ವಾಹನದ ಕುರಿತು ಬಿಡುಗಡೆ ಮಾಡಿರುವ ಅನೇಕ ಟೀಸರ್ ಗಳು, ಇದರಲ್ಲಿ ಅನೇಕ ಹೊಸ ವೈಶಿಷ್ಟ್ಯಗಳಿರುವುದನ್ನು ಖಚಿತಪಡಿಸಿದೆ. ಸೋರಿಕೆಯಾಗಿರುವ ಅನೇಕ ಸುದ್ದಿಗಳ ಪ್ರಕಾರ, ಕಿಯಾ ಸಂಸ್ಥೆಯು 2024 ಸೋನೆಟ್ ಕಾರಿನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸುವುದು ಖಚಿತವಾಗಿದೆ.
ಬೇಡಿಕೆಯ ಮೇರೆಗೆ ಮತ್ತೆ ವಾಪಸ್
ಕಿಯಾ ಸಂಸ್ಥೆಯು 2023ರ ಆರಂಭದಲ್ಲಿ ಸೋನೆಟ್ ಕಾರಿನಲ್ಲಿ ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು ನಿಲ್ಲಿಸಿ iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಗೇರ್ ಬಾಕ್ಸ್ ಆಯ್ಕೆಯನ್ನು ಪರಿಚಯಿಸಿತ್ತು. ಆದರೆ ಈ ನಿರ್ಧಾರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯು ದೊರೆಯದ ಕಾರಣ ಮೂರು ಪೆಡಲ್ ಗಳ ಸಾಂಪ್ರದಾಯಿಕ ಡೀಸೆಲ್ ಮ್ಯಾನುವಲ್ ಆಯ್ಕೆಯು ವಾಪಾಸಾಗುತ್ತಿದೆ. ಆದರೆ ಕಿಯಾ ಸಂಸ್ಥೆಯು ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ iMT ಯನ್ನೂ ನೀಡಲಿದೆ. ಈ ವಿಭಾಗದಲ್ಲಿ ಡೀಸೆಲ್ ಪವರ್ ಟ್ರೇನ್ ಅನ್ನು ಒದಗಿಸುವ ವಾಹನಗಳ ಪಟ್ಟಿಯಲ್ಲಿ ಹ್ಯುಂಡೈ ವೆನ್ಯು, ಟಾಟಾ ನೆಕ್ಸನ್ ಮತ್ತು ಮಹೀಂದ್ರಾ XUV300 ಜೊತೆಗೆ ಸೋನೆಟ್ ಸಹ ಸೇರಿದೆ.
ಮುಂದೇನು?
ಮುಖ್ಯವಾಗಿ ಕಿಯಾ ಸೆಲ್ಟೋಸ್ ಮತ್ತು ಕಿಯಾ ಕಾರೆನ್ಸ್ ಸೇರಿದಂತೆ 1.5 ಲೀಟರ್ ಯೂನಿಟ್ ನ ಇತರ ಮಾದರಿಗಳಲ್ಲಿ ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು ನೀಡುವುದನ್ನು ಕಿಯಾ ಸಂಸ್ಥೆಯು ನಿಲ್ಲಿಸಿದ್ದು, ಈ ವಾಹನಗಳು ಸಹ ಇದೇ ಕೋಂಬೊ ಅನ್ನು ಸದ್ಯದಲ್ಲೇ ಪಡೆಯುವ ಸಾಧ್ಯತೆ ಇದೆ.
ಇದನ್ನು ಸಹ ಓದಿರಿ: ಭಾರತದಲ್ಲಿ 2024ರಲ್ಲಿ ಹೊರಬರಲಿರುವ ಕಾರುಗಳು: ಮುಂದಿನ ವರ್ಷ ನೀವು ರಸ್ತೆಯಲ್ಲಿ ಕಾಣಲಿರುವ ಕಾರುಗಳ ಎಲ್ಲಾ ಮಾಹಿತಿ ಇಲ್ಲಿದೆ
ಪವರ್ ಟ್ರೇನ್ ವಿವರಗಳು
ಹೊಸ ಸೋನೆಟ್ ವಾಹನವು ಮೊದಲಿನ ಎಂಜಿನ್ ಆಯ್ಕೆಗಳನ್ನೇ ಮುಂದುವರಿಸಲಿದ್ದು, ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆ ಇರದು. ಈ ವಾಹನದ ತಾಂತ್ರಿಕ ವಿವರಗಳು ಇಲ್ಲಿವೆ:
ವಿವರಗಳು |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೊ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 PS |
120 PS |
116 PS |
ಟಾರ್ಕ್ |
115 Nm |
172 Nm |
250 Nm |
ಟ್ರಾನ್ಸ್ ಮಿಶನ್ |
5-ಸ್ಪೀಡ್ MT |
6-ಸ್ಪೀಡ್ iMT, 7-ಸ್ಪೀಡ್ DCT |
6-ಸ್ಪೀಡ್ MT (ಹೊಸ), 6-ಸ್ಪೀಡ್ iMT, 6-ಸ್ಪೀಡ್ AT |
ವೇರಿಯಂಟ್ ವಾರು ಪವರ್ ಟ್ರೇನ್ ಆಯ್ಕೆಗಳು
ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು 2024 ಕಿಯಾ ಸೋನೆಟ್ ಕಾಋಿನ ಎಲ್ಲಾ ಟೆಕ್ ಲೈನ್ ವೇರಿಯಂಟ್ ಗಳಲ್ಲಿ ನೀಡುವ ಸಾಧ್ಯತೆ ಇದ್ದು, iMT ಯು ಕೇವಲ ಎರಡು ವೇರಿಯಂಟ್ ಗಳಿಗೆ ಸೀಮಿತವಾಗಲಿದೆ. ಆದರೆ ಟಾಪ್ ಸ್ಪೆಕ್ GT ಲೈನ್ ಮತ್ತು X ಲೈನ್ ವೇರಿಯಂಟ್ ಗಳನ್ನು ಡೀಸೆಲ್ ಅಟೋಮ್ಯಾಟಿಕ್ ಆಯ್ಕೆಯೊಂದಿಗೆ ಮಾತ್ರವೇ ನೀಡಲಾಗುತ್ತದೆ.
ವೇರಿಯಂಟ್ |
HTE |
HTK |
HTK+ |
HTX |
HTX+ |
GTX+ |
X-Line |
1.5-ಲೀಟರ್ ಡೀಸೆಲ್ 6-ಸ್ಪೀಡ್ MT |
✅ |
✅ |
✅ |
✅ |
✅ |
– |
– |
1.5-ಲೀಟರ್ ಡೀಸೆಲ್ 6-ಸ್ಪೀಡ್ iMT |
– |
– |
– |
✅ |
✅ |
– |
– |
1.5-ಲೀಟರ್ ಡೀಸೆಲ್ 6-ಸ್ಪೀಡ್ AT |
– |
– |
– |
✅ |
– |
✅ |
✅ |
ಏನೆಲ್ಲ ವೈಶಿಷ್ಟ್ಯತೆಗಳನ್ನು ಇದು ಪಡೆಯಲಿದೆ?
ಇದು 10.25 ಇಂಚಿನ ಟಚ್ ಸ್ಕ್ರೀನ್, 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ (ಸೆಲ್ಟೋಸ್ ಕಾರಿನಿಂದ ಪಡೆಯಲಾಗಿದೆ), 360 ಡಿಗ್ರಿ ಕ್ಯಾಮರಾವನ್ನು ಪಡೆಯಲಿದೆ ಎಂಬುದನ್ನು ಎರಡು ಅಧಿಕೃತ ಟೀಸರ್ ಗಳು ದೃಢೀಕರಿಸಿವೆ. ಈಗ ಇರುವ ಸನ್ ರೂಫ್, ಕ್ರೂಸ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ವೈರ್ ಲೈಸ್ ಫೋನ್ ಚಾರ್ಜರ್ ಮುಂತಾದ ಸೌಲಭ್ಯಗಳು ಹೊಸ ಸೋನೆಟ್ ಕಾರಿನಲ್ಲಿಯೂ ಕಾಣಿಸಿಕೊಳ್ಳಲಿವೆ.
ಸುರಕ್ಷತೆಯ ದೃಷ್ಟಿಯಿಂದ ಹೇಳುವುದಾದರೆ ಹೊಸ ಸೋನೆಟ್ ಕಾರು ಲೇನ್ ಕೀಪ್ ಅಸಿಸ್ಟ್, ಮತ್ತು ಫಾರ್ವರ್ಡ್ ಕೊಲಿಷನ್ ಅವಾಯ್ಡೆನ್ಸ್ ಮುಂತಾದ ಕೆಲವೊಂದು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳನ್ನು ಹೊಂದಿರಲಿದೆ. ಜತೆಗೆ ಕಿಯಾ ಸಂಸ್ಥೆಯು ಇದರಲ್ಲಿ ಆರು ಏರ್ ಬ್ಯಾಗ್ ಗಳು (ಪ್ರಮಾಣಿತ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ಒದಗಿಸಲಿದೆ.
ನಿರೀಕ್ಷಿತ ಬೆಲೆ ಮತ್ತು ಸ್ಪರ್ಧೆ
ಹೊಸ ಕಿಯಾ ಸೋನೆಟ್ ಕಾರು 2023ರ ಡಿಸೆಂಬರ್ 14ರಂದು ಅನಾವರಣಗೊಳ್ಳಲಿದ್ದು 2024ರ ಆರಂಭದಲ್ಲಿ ಇದರ ಮಾರಾಟವು ಪ್ರಾರಂಭವಾಗಲಿದೆ. ಇದು ರೂ. 8 ಲಕ್ಷದಷ್ಟು (ಎಕ್ಸ್ - ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಲಿದೆ. ಈ ಪರಿಷ್ಕೃತ SUV ಯು ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ಮಹೀಂದ್ರಾ XUV300, ಟಾಟಾ ನೆಕ್ಸನ್, ರೆನೋ ಕೈಗರ್, ನಿಸಾನ್ ಮ್ಯಾಗ್ನೈಟ್, ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ ಜೊತೆಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್ ಅಟೋಮ್ಯಾಟಿಕ್