• English
    • Login / Register

    2023 ಇತ್ತೀಚಿನ ಕಿಯಾ ಸೆಲ್ಟೋಸ್ ಟೀಸರ್‌ನಲ್ಲಿ ಹೊಸ ಬಣ್ಣದ ಆಯ್ಕೆಯ ಸುಳಿವು

    ಕಿಯಾ ಸೆಲ್ಟೋಸ್ ಗಾಗಿ shreyash ಮೂಲಕ ಜುಲೈ 05, 2023 09:53 am ರಂದು ಪ್ರಕಟಿಸಲಾಗಿದೆ

    • 41 Views
    • ಕಾಮೆಂಟ್‌ ಅನ್ನು ಬರೆಯಿರಿ

    ಈ ನವೀಕೃತ ಕಿಯಾ ಸೆಲ್ಟೋಸ್ ಎಕ್ಸ್‌ಟೀರಿಯರ್‌ನಲ್ಲಿ ಡಿಸೈನ್ ಟ್ವೀಕ್‌ಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆದಿದೆ

    Latest 2023 Kia Seltos Teaser Hints At Its New Colour Option

    •  2023 ಕಿಯಾ ಸೆಲ್ಟೋಸ್ ನಾಳೆ ಭಾರತಕ್ಕೆ ಪಾದಾರ್ಪಣೆ ಮಾಡಲಿದೆ.
    •  ಟೀಸರ್‌ಗಳು ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್‌ಗೆ ಪ್ರಮುಖ ಡಿಸೈನ್ ಅಪ್‌ಡೇಟ್‌ಗಳನ್ನು ಬಹಿರಂಗಪಡಿಸಿದೆ.
    •  ಇದು ಹ್ಯುಂಡೈ ಮೂಲದ 1.5-ಲೀಟರ್ T-TGDi (ಟರ್ಬೋ) ಪೆಟ್ರೋಲ್ ಇಂಜಿನ್‌ನೊಂದಿಗೆ ಸಜ್ಜುಗೊಂಡಿರುವ ನಿರೀಕ್ಷೆ ಇದೆ .
    •  ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್‌ನಿಂದ(ADAS) ನಿಂದ ಸುರಕ್ಷತೆಯು ಸುಧಾರಿಸಿದೆ.
    •  ಬೆಲೆ ರೂ 10 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

     2023 ಕಿಯಾ ಸೆಲ್ಟೋಸ್ ಭಾರತದಲ್ಲಿ ನಾಳೆ ಪ್ರಥಮ ಪ್ರದರ್ಶನ ನೀಡಲಿದ್ದು, ಕಾರುತಯಾರಕರು ಇದರ ಹೊಸ "ಪ್ಲುಟಾನ್ ಬ್ಲ್ಯೂ " ಬಣ್ಣದ ನೋಟವನ್ನು ನೀಡುವ ಇನ್ನೊಂದು ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.  ಈ ಬಣ್ಣವು ಈ ನವೀಕೃತ SUVಯ ಇಂಟರ್ನ್ಯಾಷನಲ್ ಸ್ಪೆಕ್ ಮಾಡೆಲ್‌ಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

     

    ಬೇರೇನು ನೋಡಬಹುದು?

     ಹೊಸ ಬಣ್ಣದ ಹೊರತಾಗಿ, ಈ ಟೀಸರ್ ಮರುವಿನ್ಯಾಸಗೊಳಿಸಿದ LED DRLಗಳು ಮತ್ತು LED ಟೇಲ್‍ಲ್ಯಾಂಪ್‌ಗಳನ್ನು ಪ್ರದರ್ಶಿಸುತ್ತದೆ. ಇತರ ಬದಲಾವಣೆಗಳೆಂದರೆ, ಈ ನವೀಕೃತ ಸೆಲ್ಟೋಸ್, ನವೀಕರಿಸಿದ ಗ್ರಿಲ್ ಮತ್ತು ಬಂಪರ್ ಡಿಸೈನ್ ಮತ್ತು ಗ್ಲೋಬಲ್ ಮಾಡೆಲ್‌ನಿಂದ ಪ್ರೇರೇಪಣೆ ಹೊಂದಿದ ಅಲಾಯ್ ವ್ಹೀಲ್‌ಗಳ ಜೋಡಿಯನ್ನು ಪಡೆದಿದೆ.

     

    ರಿಫ್ರೆಶ್ ಮಾಡಲಾದ ಕ್ಯಾಬಿನ್
     

    Kia Seltos Gets A Facelift On Its Home Ground With A New Tiger Nose Grille

     2023 ಸೆಲ್ಟೋಸ್‌ನ ಒಳಗೆ, ನಿರ್ಗಮಿತ ಮಾಡೆಲ್‌ಗಿಂತ ಪ್ರೀಮಿಯಂ ಆಗಿರುವ ಹೊಸ ಡ್ಯಾಶ್‌ಬೋರ್ಡ್ ಅನ್ನು ಅಳವಡಿಸಲಾಗಿದೆ. ಫೀಚರ್‌ಗಳ ವಿಷಯಕ್ಕೆ ಬಂದಾಗ, ಈ ಸೆಲ್ಟೋಸ್ ಇನ್‌ಫೋಟೇನ್‌ಮೆಂಟ್ ಮತ್ತು ಇನ್ಸ್‌ಟ್ರುಮೆಂಟೇಶನ್‌ಗಾಗಿ 10.25-ಇಂಚು ಸಿಸ್ಟಮ್‌, ವಿಹಂಗಮ ಸನ್‌ರೂಫ್ ಮತ್ತು ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಹೆಚ್ಚುವರಿಯಾಗಿ ಈ ಸೆಲ್ಟೋಸ್ ವೈರ್‌ಲೆಸ್‍ ಫೋನ್ ಚಾರ್ಜಿಂಗ್, ವಾತಾಯನದ ಮುಂಭಾಗದ ಸೀಟುಗಳು, ಸಂಪರ್ಕಿತ ಕಾರ್ ಟೆಕ್ನಾಲಜಿ ಮತ್ತು ಕ್ರೂಸ್ ಕಂಟ್ರೋಲ್‌ನಿಂದ ಸಜ್ಜುಗೊಂಡಿದೆ.

     ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌(ADAS) ಫೀಚರ್‌ಗಳು, ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)‌ನಿಂದ ಸುರಕ್ಷತೆಯು ಸುಧಾರಿಸಿದೆ.

     ಇದನ್ನೂ ಓದಿ: ನವೀಕೃತ ಹ್ಯುಂಡೈ ಕ್ರೆಟಾ ಭಾರತದಲ್ಲಿ ಮೊದಲ ಬಾರಿಗೆ ಸ್ಪೈ ಮಾಡಲಾಗಿದೆ

     

    ಹೊಸ ಪವರ್‌ಟ್ರೇನ್ ಪಡೆದಿದೆ

    You Can Now Pre-Book The Kia Seltos Facelift At Dealerships
    ಪ್ರಸ್ತುತ ಇರುವ 1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ (115PS/144Nm) ಮತ್ತು 1.5-ಲೀಟರ್ ಡೀಸೆಲ್ (116PS/250Nm) ಇಂಜಿನ್ ಅನ್ನೇ ಉಳಿಸಿಕೊಳ್ಳಲಿದೆ. ಈ ನವೀಕರಿಸಿದ ಸೆಲ್ಟೋಸ್, ಕಿಯಾ ಕಾರೆನ್ಸ್‌ನಿಂದ .5-ಲೀಟರ್ T-GDi (ಟರ್ಬೋ) ಪೆಟ್ರೋಲ್ ಇಂಜಿನ್ ಅನ್ನು ಪಡೆಯಬಹುದು (160PS/253Nm)

     

    ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

    ಈ ಕಾರುತಯಾರಕರು 2023 ಸೆಲ್ಟೋಸ್ ಬೆಲೆಯನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದು, ಅನಾವರಣದ ನಂತರ ಬುಕಿಂಗ್‌ಗಳು ತೆರೆದುಕೊಳ್ಳಲಿವೆ. ಇದರ ಬೆಲೆಯನ್ನು ರೂ 10 ಲಕ್ಷದಿಂದ ಪ್ರಾರಂಭಿಸುವ ನಿರೀಕ್ಷೆ ಇದೆ. ಈ ನವೀಕೃತ ಸೆಲ್ಟೋಸ್ ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಕ್, MG ಎಸ್ಟರ್, ಟೊಯೋಟಾ ಹೈರೈಡರ್, ಫೋಕ್ಸ್‌ವಾಗನ್ ಟೈಗನ್, ಮತ್ತು ಮುಂಬರುವ ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ.

    ಇನ್ನಷ್ಟು ಓದಿ : ಸೆಲ್ಟೋಸ್ ಡೀಸೆಲ್

     

    was this article helpful ?

    Write your Comment on Kia ಸೆಲ್ಟೋಸ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience