Login or Register ಅತ್ಯುತ್ತಮ CarDekho experience ಗೆ
Login

2023 ಇತ್ತೀಚಿನ ಕಿಯಾ ಸೆಲ್ಟೋಸ್ ಟೀಸರ್‌ನಲ್ಲಿ ಹೊಸ ಬಣ್ಣದ ಆಯ್ಕೆಯ ಸುಳಿವು

published on ಜುಲೈ 05, 2023 09:53 am by shreyash for ಕಿಯಾ ಸೆಲ್ಟೋಸ್

ಈ ನವೀಕೃತ ಕಿಯಾ ಸೆಲ್ಟೋಸ್ ಎಕ್ಸ್‌ಟೀರಿಯರ್‌ನಲ್ಲಿ ಡಿಸೈನ್ ಟ್ವೀಕ್‌ಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆದಿದೆ

  • 2023 ಕಿಯಾ ಸೆಲ್ಟೋಸ್ ನಾಳೆ ಭಾರತಕ್ಕೆ ಪಾದಾರ್ಪಣೆ ಮಾಡಲಿದೆ.
  • ಟೀಸರ್‌ಗಳು ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್‌ಗೆ ಪ್ರಮುಖ ಡಿಸೈನ್ ಅಪ್‌ಡೇಟ್‌ಗಳನ್ನು ಬಹಿರಂಗಪಡಿಸಿದೆ.
  • ಇದು ಹ್ಯುಂಡೈ ಮೂಲದ 1.5-ಲೀಟರ್ T-TGDi (ಟರ್ಬೋ) ಪೆಟ್ರೋಲ್ ಇಂಜಿನ್‌ನೊಂದಿಗೆ ಸಜ್ಜುಗೊಂಡಿರುವ ನಿರೀಕ್ಷೆ ಇದೆ .
  • ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್‌ನಿಂದ(ADAS) ನಿಂದ ಸುರಕ್ಷತೆಯು ಸುಧಾರಿಸಿದೆ.
  • ಬೆಲೆ ರೂ 10 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

2023 ಕಿಯಾ ಸೆಲ್ಟೋಸ್ ಭಾರತದಲ್ಲಿ ನಾಳೆ ಪ್ರಥಮ ಪ್ರದರ್ಶನ ನೀಡಲಿದ್ದು, ಕಾರುತಯಾರಕರು ಇದರ ಹೊಸ "ಪ್ಲುಟಾನ್ ಬ್ಲ್ಯೂ " ಬಣ್ಣದ ನೋಟವನ್ನು ನೀಡುವ ಇನ್ನೊಂದು ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಬಣ್ಣವು ಈ ನವೀಕೃತ SUVಯ ಇಂಟರ್ನ್ಯಾಷನಲ್ ಸ್ಪೆಕ್ ಮಾಡೆಲ್‌ಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ಬೇರೇನು ನೋಡಬಹುದು?

ಹೊಸ ಬಣ್ಣದ ಹೊರತಾಗಿ, ಈ ಟೀಸರ್ ಮರುವಿನ್ಯಾಸಗೊಳಿಸಿದ LED DRLಗಳು ಮತ್ತು LED ಟೇಲ್‍ಲ್ಯಾಂಪ್‌ಗಳನ್ನು ಪ್ರದರ್ಶಿಸುತ್ತದೆ. ಇತರ ಬದಲಾವಣೆಗಳೆಂದರೆ, ಈ ನವೀಕೃತ ಸೆಲ್ಟೋಸ್, ನವೀಕರಿಸಿದ ಗ್ರಿಲ್ ಮತ್ತು ಬಂಪರ್ ಡಿಸೈನ್ ಮತ್ತು ಗ್ಲೋಬಲ್ ಮಾಡೆಲ್‌ನಿಂದ ಪ್ರೇರೇಪಣೆ ಹೊಂದಿದ ಅಲಾಯ್ ವ್ಹೀಲ್‌ಗಳ ಜೋಡಿಯನ್ನು ಪಡೆದಿದೆ.

ರಿಫ್ರೆಶ್ ಮಾಡಲಾದ ಕ್ಯಾಬಿನ್

2023 ಸೆಲ್ಟೋಸ್‌ನ ಒಳಗೆ, ನಿರ್ಗಮಿತ ಮಾಡೆಲ್‌ಗಿಂತ ಪ್ರೀಮಿಯಂ ಆಗಿರುವ ಹೊಸ ಡ್ಯಾಶ್‌ಬೋರ್ಡ್ ಅನ್ನು ಅಳವಡಿಸಲಾಗಿದೆ. ಫೀಚರ್‌ಗಳ ವಿಷಯಕ್ಕೆ ಬಂದಾಗ, ಈ ಸೆಲ್ಟೋಸ್ ಇನ್‌ಫೋಟೇನ್‌ಮೆಂಟ್ ಮತ್ತು ಇನ್ಸ್‌ಟ್ರುಮೆಂಟೇಶನ್‌ಗಾಗಿ 10.25-ಇಂಚು ಸಿಸ್ಟಮ್‌, ವಿಹಂಗಮ ಸನ್‌ರೂಫ್ ಮತ್ತು ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಹೆಚ್ಚುವರಿಯಾಗಿ ಈ ಸೆಲ್ಟೋಸ್ ವೈರ್‌ಲೆಸ್‍ ಫೋನ್ ಚಾರ್ಜಿಂಗ್, ವಾತಾಯನದ ಮುಂಭಾಗದ ಸೀಟುಗಳು, ಸಂಪರ್ಕಿತ ಕಾರ್ ಟೆಕ್ನಾಲಜಿ ಮತ್ತು ಕ್ರೂಸ್ ಕಂಟ್ರೋಲ್‌ನಿಂದ ಸಜ್ಜುಗೊಂಡಿದೆ.

ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌(ADAS) ಫೀಚರ್‌ಗಳು, ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)‌ನಿಂದ ಸುರಕ್ಷತೆಯು ಸುಧಾರಿಸಿದೆ.

ಇದನ್ನೂ ಓದಿ: ನವೀಕೃತ ಹ್ಯುಂಡೈ ಕ್ರೆಟಾ ಭಾರತದಲ್ಲಿ ಮೊದಲ ಬಾರಿಗೆ ಸ್ಪೈ ಮಾಡಲಾಗಿದೆ

ಹೊಸ ಪವರ್‌ಟ್ರೇನ್ ಪಡೆದಿದೆ


ಪ್ರಸ್ತುತ ಇರುವ 1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ (115PS/144Nm) ಮತ್ತು 1.5-ಲೀಟರ್ ಡೀಸೆಲ್ (116PS/250Nm) ಇಂಜಿನ್ ಅನ್ನೇ ಉಳಿಸಿಕೊಳ್ಳಲಿದೆ. ಈ ನವೀಕರಿಸಿದ ಸೆಲ್ಟೋಸ್, ಕಿಯಾ ಕಾರೆನ್ಸ್‌ನಿಂದ .5-ಲೀಟರ್ T-GDi (ಟರ್ಬೋ) ಪೆಟ್ರೋಲ್ ಇಂಜಿನ್ ಅನ್ನು ಪಡೆಯಬಹುದು (160PS/253Nm)

ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

ಈ ಕಾರುತಯಾರಕರು 2023 ಸೆಲ್ಟೋಸ್ ಬೆಲೆಯನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದು, ಅನಾವರಣದ ನಂತರ ಬುಕಿಂಗ್‌ಗಳು ತೆರೆದುಕೊಳ್ಳಲಿವೆ. ಇದರ ಬೆಲೆಯನ್ನು ರೂ 10 ಲಕ್ಷದಿಂದ ಪ್ರಾರಂಭಿಸುವ ನಿರೀಕ್ಷೆ ಇದೆ. ಈ ನವೀಕೃತ ಸೆಲ್ಟೋಸ್ ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಕ್, MG ಎಸ್ಟರ್, ಟೊಯೋಟಾ ಹೈರೈಡರ್, ಫೋಕ್ಸ್‌ವಾಗನ್ ಟೈಗನ್, ಮತ್ತು ಮುಂಬರುವ ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ.

ಇನ್ನಷ್ಟು ಓದಿ : ಸೆಲ್ಟೋಸ್ ಡೀಸೆಲ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 41 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೆಲ್ಟೋಸ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ