• English
  • Login / Register

ಲಾಂಚ್ ಆಗುವ ಮುನ್ನವೇ ಡೀಲರ್‌ಶಿಪ್‌ಗಳನ್ನು ತಲುಪಿದೆ Mahindra Scorpio N ಬ್ಲಾಕ್ ಎಡಿಷನ್

ಮಹೀಂದ್ರಾ ಸ್ಕಾರ್ಪಿಯೋ ಎನ್ ಗಾಗಿ dipan ಮೂಲಕ ಫೆಬ್ರವಾರಿ 24, 2025 01:10 pm ರಂದು ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಬ್ಲಾಕ್ ಎಡಿಷನ್ ಕಪ್ಪು ಬಣ್ಣದ ಅಲಾಯ್ ವೀಲ್‌ಗಳು ಮತ್ತು ರೂಫ್ ರೈಲ್‌ಗಳ ಜೊತೆಗೆ ಸಂಪೂರ್ಣ- ಕಪ್ಪು  ಬಣ್ಣದ ಕ್ಯಾಬಿನ್ ಥೀಮ್ ಮತ್ತು ಕಪ್ಪು ಲೆದರೆಟ್ ಸೀಟುಗಳೊಂದಿಗೆ ಬರುತ್ತದೆ

Mahindra Scorpio N Black Edition Reaches Dealerships Ahead Of Its Launch

ಮಹೀಂದ್ರಾ ಇತ್ತೀಚೆಗೆ ಸ್ಕಾರ್ಪಿಯೊ N ಬ್ಲಾಕ್ ಎಡಿಷನ್‌ನ ಟೀಸರ್ ಅನ್ನು ಹೊರಬಿಟ್ಟಿದೆ. ಈ ಬ್ಲಾಕ್ ಎಡಿಷನ್ ಈಗ ಡೀಲರ್‌ಶಿಪ್‌ಗಳಿಗೆ ಬರಲು ಪ್ರಾರಂಭಿಸಿದೆ, ಇದು ಇದರ ಲಾಂಚ್ ಹತ್ತಿರದಲ್ಲಿದೆ ಎಂದು ಸೂಚಿಸುತ್ತದೆ. ಈ ವಿಶೇಷ ಎಡಿಷನ್ ಟಾಪ್ ಎಂಡ್ ವೇರಿಯಂಟ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು 4-ವೀಲ್-ಡ್ರೈವ್ ಆಯ್ಕೆಯನ್ನು ಕೂಡ ನೀಡಬಹುದು.

A post shared by Mahindra Scorpio (@mahindra.scorpio.official) 

 ನಮ್ಮಲ್ಲಿ ಮಹೀಂದ್ರಾ ಸ್ಕಾರ್ಪಿಯೊ N ಬ್ಲಾಕ್ ಎಡಿಷನ್‌ನ ವಿಶೇಷ ಚಿತ್ರಗಳು ಡೀಲರ್‌ಶಿಪ್ ಮೂಲದಿಂದ ಬಂದಿವೆ. ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿದೆ:

ಏನೇನನ್ನು ನೋಡಬಹುದು?

 ಬ್ಲಾಕ್ ಎಡಿಷನ್ ರೆಗ್ಯುಲರ್ ಮಾಡೆಲ್‌ನಂತೆಯೇ ಕಾಣುತ್ತದೆ ಎಂದು ಚಿತ್ರಗಳು ತೋರಿಸುತ್ತವೆ. ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳು, LED DRLಗಳು ಮತ್ತು LED ಫಾಗ್ ಲ್ಯಾಂಪ್‌ಗಳು ಎರಡೂ ಎಡಿಷನ್‌ಗಳಲ್ಲಿ ಒಂದೇ ರೀತಿ ಇವೆ.

 ನೋಡಲಾಗಿರುವ ವ್ಯತ್ಯಾಸವೆಂದರೆ ಅಲಾಯ್ ವೀಲ್‌ಗಳು, ರೂಫ್ ರೈಲ್‌ಗಳು, ಸೈಡ್ ಮಿರರ್‌ಗಳು (ORVM ಗಳು), ಮತ್ತು ವಿಂಡೋ ಕ್ಲಾಡಿಂಗ್ ಎಲ್ಲವೂ ಕಪ್ಪು ಬಣ್ಣದ್ದಾಗಿವೆ.

 ಅಲ್ಲದೆ, ರೆಗ್ಯುಲರ್ ಸ್ಕಾರ್ಪಿಯೋ N ನಲ್ಲಿ ಸಿಲ್ವರ್ ಬಣ್ಣದಲ್ಲಿರುವ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು ಮತ್ತು ಡೋರ್ ಕ್ಲಾಡಿಂಗ್ ಈಗ ಬ್ಲಾಕ್ ಎಡಿಷನ್‌ನಲ್ಲಿ ಡಾರ್ಕ್ ಗ್ರೇ ಬಣ್ಣದ ಫಿನಿಶ್ ಹೊಂದಿದೆ.

 ಬ್ಯಾಡ್ಜ್‌ಗಳು, ಗ್ರಿಲ್‌ನಲ್ಲಿರುವ ಕ್ರೋಮ್ ಸ್ಲ್ಯಾಟ್‌ಗಳು ಮತ್ತು ಹೊರಗಿನ ಡೋರ್ ಹ್ಯಾಂಡಲ್‌ಗಳು ಈಗ ಡಾರ್ಕ್ ಕ್ರೋಮ್ ಫಿನಿಶ್ ಅನ್ನು ಹೊಂದಿವೆ.

 ಹೊರಭಾಗದ ಬದಲಾವಣೆಗಳು ಚಿಕ್ಕದಾಗಿದ್ದರೂ, ಒಳಭಾಗವು ಆಲ್ ಬ್ಲಾಕ್ ಥೀಮ್‌ನೊಂದಿಗೆ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತದೆ. ಆದರೆ, ಡಿಸೈನ್ ರೆಗ್ಯುಲರ್ ಮಾಡೆಲ್‌ನಂತೆಯೇ ಇದೆ. ಉದಾಹರಣೆಗೆ, ಸ್ಟ್ಯಾಂಡರ್ಡ್ ಮಹೀಂದ್ರಾ ಸ್ಕಾರ್ಪಿಯೊ N ಬ್ಲಾಕ್/ಬ್ರೌನ್ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ.

 ಬ್ಲಾಕ್ ಎಡಿಷನ್ ಕಪ್ಪು ಲೆಥೆರೆಟ್ ಸೀಟುಗಳು ಮತ್ತು AC ವೆಂಟ್‌ಗಳು ಮತ್ತು ಟಚ್‌ಸ್ಕ್ರೀನ್ ಪ್ಯಾನೆಲ್ ಸುತ್ತಲೂ ಬ್ರಷ್ಡ್ ಅಲ್ಯೂಮಿನಿಯಂ ಟ್ರಿಮ್ ಅನ್ನು ಕೂಡ ಒಳಗೊಂಡಿದೆ.

 ಈ ಮಾಡೆಲ್ 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡಿಸ್ಪ್ಲೇ ಹೊಂದಿರುವ ಅನಲಾಗ್ ಡಯಲ್‌ಗಳು, ಆಟೋಮ್ಯಾಟಿಕ್ AC ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ. ಇದು ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಆಟೋ-ಡಿಮ್ಮಿಂಗ್ ಇನ್ಸೈಡ್ ರಿಯರ್‌ವ್ಯೂ ಮಿರರ್ (IRVM) ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಕೂಡ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

 ಇತರ ಫೀಚರ್ ಗಳು ಮತ್ತು ಸುರಕ್ಷತಾ ತಂತ್ರಜ್ಞಾನ

 ಮೇಲೆ ತಿಳಿಸಿರುವ ಫೀಚರ್‌ಗಳ ಜೊತೆಗೆ, ಇದು 12-ಸ್ಪೀಕರ್ ಸೋನಿ ಸೌಂಡ್ ಸಿಸ್ಟಮ್, 6-ವೇ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟು ಮತ್ತು ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳೊಂದಿಗೆ ಬರುತ್ತದೆ.

 ಸುರಕ್ಷತಾ ಸೂಟ್ ಕೂಡ ಒಂದೇ ರೀತಿಯದ್ದಾಗಿದ್ದು, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಡ್ರೈವರ್ ಡ್ರೌಸಿನೆಸ್ ಡಿಟೆಕ್ಷನ್ ಮುಂತಾದ ಫೀಚರ್‌ಗಳನ್ನು ಒಳಗೊಂಡಿದೆ. ಇದು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ಎಲ್ಲಾ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಕೂಡ ಹೊಂದಿದೆ. ಮಹೀಂದ್ರಾ ಸ್ಕಾರ್ಪಿಯೋ N ನಲ್ಲಿ ಯಾವುದೇ ADAS ಫೀಚರ್‌ಗಳನ್ನು ನೀಡಲಾಗಿಲ್ಲ.

 ಪವರ್‌ಟ್ರೇನ್ ಆಯ್ಕೆಗಳು

 ಮಹೀಂದ್ರಾ ಸ್ಕಾರ್ಪಿಯೊ N ಬ್ಲಾಕ್ ಎಡಿಷನ್ ರೆಗ್ಯುಲರ್ ಮಾಡೆಲ್‌ನಲ್ಲಿ ಇರುವ ಅದೇ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ. ವಿವರವಾದ ಸ್ಪೆಸಿಫಿಕೇಷನ್‌ಗಳು ಇಲ್ಲಿವೆ:

 ಎಂಜಿನ್

 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

 2.2 ಲೀಟರ್ ಡೀಸೆಲ್ ಎಂಜಿನ್

 ಪವರ್

203 ಪಿಎಸ್‌

175 ಪಿಎಸ್‌

ಟಾರ್ಕ್

370 ಎನ್‌ಎಮ್‌(ಮ್ಯಾನ್ಯುವಲ್‌) / 380 ಎನ್‌ಎಮ್‌ (ಆಟೋಮ್ಯಾಟಿಕ್‌)

370 ಎನ್‌ಎಮ್‌ (ಮ್ಯಾನ್ಯುವಲ್‌) / 400 ಎನ್‌ಎಮ್‌ (ಆಟೋಮ್ಯಾಟಿಕ್‌)

 ಟ್ರಾನ್ಸ್‌ಮಿಷನ್‌*

6-ಸ್ಪೀಡ್ MT / 6-ಸ್ಪೀಡ್ AT

 6-ಸ್ಪೀಡ್ MT / 6-ಸ್ಪೀಡ್ AT

 ಡ್ರೈವ್‌ಟ್ರೇನ್^

RWD

RWD / 4WD

*AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌; MT = ಮ್ಯಾನುವಲ್ ಟ್ರಾನ್ಸ್‌ಮಿಷನ್‌

 ^RWD = ರಿಯರ್-ವೀಲ್-ಡ್ರೈವ್; 4WD = ಫೋರ್-ವೀಲ್-ಡ್ರೈವ್

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಸ್ಕಾರ್ಪಿಯೋ N ಬ್ಲಾಕ್ ವರ್ಷನ್ ರೆಗ್ಯುಲರ್ ಮಾಡೆಲ್‌ಗಿಂತ ಹೆಚ್ಚು ಬೆಲೆಯನ್ನು ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ, ಪ್ರಸ್ತುತ ರೆಗ್ಯುಲರ್ ಮಾಡೆಲ್ ಬೆಲೆಯು ರೂ. 13.99 ಲಕ್ಷದಿಂದ ರೂ. 24.69 ಲಕ್ಷ ಗಳವರೆಗೆ(ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ) ಇದೆ. ಇದು ಟಾಟಾ ಸಫಾರಿ ಮತ್ತು ಹುಂಡೈ ಅಲ್ಕಾಜರ್‌ನಂತಹ ಮಧ್ಯಮ ಗಾತ್ರದ ಎಸ್‌ಯುವಿಗಳೊಂದಿಗೆ ಸ್ಪರ್ಧಿಸುತ್ತದೆ.

was this article helpful ?

Write your Comment on Mahindra ಸ್ಕಾರ್ಪಿಯೊ ಎನ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience