ಭಾರಿ ಮರೆಮಾಚುವಿಕೆಯೊಂದಿಗೆ ಜಪಾನ ್ನಲ್ಲಿ ಕಂಡುಬಂದಿದೆ ಮಹೀಂದ್ರಾ ಸ್ಕಾರ್ಪಿಯೋ ಎನ್
ಮಹೀಂದ್ರಾ ಸ್ಕಾರ್ಪಿಯೋ ಎನ್ ಗಾಗಿ rohit ಮೂಲಕ ಮಾರ್ಚ್ 06, 2023 04:18 pm ರಂದು ಪ್ರಕಟಿಸಲಾಗಿದೆ
- 15 Views
- ಕಾಮೆಂಟ್ ಅನ್ನು ಬರೆಯಿರಿ
ಮಹೀಂದ್ರಾದ ಪೂರೈಕೆದಾರರೊಬ್ಬರಿಗಾಗಿ ಕೆಲವು ಕಾಂಪೋನೆಂಟ್ ಪರೀಕ್ಷೆಯ ಭಾಗವಾಗಿ ಈ ಎಸ್‌ಯುವಿ ಅಲ್ಲಿರಬಹುದೆಂದು ನಾವು ಭಾವಿಸಿದ್ದೇವೆ.
- ಮಹೀಂದ್ರಾ ಈ ಮೂರನೇ-ಪೀಳಿಗೆ ಸ್ಕಾರ್ಪಿಯೋ (ಸ್ಕಾರ್ಪಿಯೋ ಎನ್ ಎಂದು ಕರೆಯಲಾಗುತ್ತದೆ) ಅನ್ನು ಭಾರತದಲ್ಲಿ 2022 ರ ಮಧ್ಯದಲ್ಲಿ ಬಿಡುಗಡೆ ಮಾಡಿತು.
- ಗೌಪ್ಯವಾಗಿ ಕಂಡುಬಂದ ಈ ಮಾಡೆಲ್ ಅನ್ನು ಭಾರಿ ಮರೆಮಾಚುವಿಕೆ ಮಾಡಲಾಗಿತ್ತು.
- LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು 18-ಇಂಚಿನ ಮಿಶ್ರಲೋಹದ ವ್ಹೀಲ್‌ಗಳಿಂದಾಗಿ ಇದು ಟಾಪ್-ಎಂಡ್ Z8 ವೇರಿಯೆಂಟ್ ಎಂದು ಗುರುತಿಸಲ್ಪಟ್ಟಿದೆ.
- ಇದು 2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅಥವಾ 2.2-ಲೀಟರ್ ಡೀಸೆಲ್ ಯೂನಿಟ್ ಅನ್ನು ಹೊಂದಿದೆ.
- ಇದು RWD ಮತ್ತು 4WD ಆಯ್ಕೆಗಳನ್ನು ಹೊಂದಿದೆ.
- ಭಾರತದಲ್ಲಿ ಇದರ ಬೆಲೆಯನ್ನು ರೂ 12.74 ಲಕ್ಷ ಮತ್ತು ರೂ 24.05 ಲಕ್ಷದ (ಎಕ್ಸ್-ಶೋರೂಂ ದೆಹಲಿ) ನಡುವೆ ನಿಗದಿಪಡಿಸಲಾಗಿದೆ.
ಮಹೀಂದ್ರಾದ ಇತ್ತೀಚಿನ ಆಫ್-ರೋಡರ್ SUV, ಸ್ಕಾರ್ಪಿಯೋ N, ಸಾಕಷ್ಟು ಜನಪ್ರಿಯ ಮಾಡೆಲ್ ಆಗಿದೆ. ದಕ್ಷಿಣ ಆಫ್ರಿಕಾದಲ್ಲಿ ಇದನ್ನು ಪರಿಚಯಿಸಿದ ನಂತರ ಇದು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋದರೂ, ಜಪಾನಿನಲ್ಲಿ ಗುರುತಿಸಲಾದ ಭಾರಿ ಮರೆಮಾಚುವ ಯುನಿಟ್‌ನ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ಎಲ್ಲರನ್ನೂ ಇದು ಅಚ್ಚರಿಗೊಳಿಸಿತ್ತು.
ಅದು ಅಲ್ಲೇನು ಮಾಡುತ್ತಿತ್ತು?
ಈಗಲೇ ಏನನ್ನೂ ಹೇಳಲಾಗದಿದ್ದರೂ, ಮಹೀಂದ್ರಾದ ಹೊಸ ಮತ್ತು ಜನಪ್ರಿಯ ಪರೀಕ್ಷಾ ಮಾದರಿಯು ಮಹೀಂದ್ರಾದ ಪೂರೈಕೆದಾರರಲ್ಲಿ ಒಬ್ಬರ ಕೆಲವು ಘಟಕ ಪರೀಕ್ಷೆಯ ಭಾಗವಾಗಿ ಅಲ್ಲಿರಬಹುದೆಂದು ನಾವು ಊಹಿಸಬಹುದು. ಅಷ್ಟಕ್ಕೂ, ಎಲ್ಲಾ ಕಾರುಗಳೂ ಜಗತ್ತಿನಲ್ಲಿರುವ ವಿಶೇಷ ಬ್ರ್ಯಾಂಡ್‌ಗಳು ಪೂರೈಸುವ ಬ್ರೇಕ್ ಕಾಂಪೋನೆಂಟ್‌ಗಳು, ಇಲೆಕ್ಟ್ರಾನಿಕ್ ಚಿಪ್‌ಗಳು, ಬೇರಿಂಗ್‌ಗಳು ಮತ್ತು ಗೇರ್‌ಗಳಂತಹ ವಿಶಿಷ್ಟ ಭಾಗಗಳನ್ನು ಬಳಸುತ್ತವೆ.
ಇದನ್ನೂ ಓದಿ: ಮಹೀಂದ್ರಾ ಸ್ಕಾರ್ಪಿಯೋ ಎನ್ ದಕ್ಷಿಣ ಆಫ್ರಿಕಾದಲ್ಲಿ ಬರುತ್ತಿದೆ ಕೇವಲ ಡೀಸೆಲ್-ಆಟೋಮ್ಯಾಟಿಕ್ ಕಾಂಬೋದೊಂದಿಗೆ
ಭಾರತದಲ್ಲಿ ಸ್ಕಾರ್ಪಿಯೋ ಎನ್
ಮಹೀಂದ್ರಾ ತನ್ನ ಮೂರನೇ-ಪೀಳಿಗೆ ಸ್ಕಾರ್ಪಿಯೋ, ಸ್ಕಾರ್ಪಿಯೋ ಎನ್ ಅನ್ನು 2022ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತು. ಈ SUV ಅನ್ನು Z2, Z4, Z6 ಮತ್ತು Z8 ಎಂಬ ನಾಲ್ಕು ವಿಶಾಲ ಟ್ರಿಮ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇವುಗಳ ಬೆಲೆ 12.74 ಲಕ್ಷದಿಂದ ರೂ 24.05 ಲಕ್ಷದ (ಎಕ್ಸ್-ಶೋರೂಂ ದೆಹಲಿ) ತನಕ ಇದೆ. ಮಹೀಂದ್ರಾ ಇದನ್ನು ಆರು- ಮತ್ತು ಏಳು-ಸೀಟ್ ಕಾನ್ಫಿಗರೇಶನ್‌ಗಳಲ್ಲಿ ನೀಡುತ್ತಿದೆ.
ಸಂಬಂಧಿತ: ಮಹೀಂದ್ರಾ ಸ್ಕಾರ್ಪಿಯೋದಲ್ಲಿ ನೀರು ಸೋರಿಕೆ ವೀಡಿಯೋ ವೈರಲ್, ಎಡವಟ್ಟಾಗಿದ್ದೆಲ್ಲಿ?
ಈ ಸ್ಕಾರ್ಪಿಯೋ ಎನ್ ಎರಡು ಇಂಜಿನ್ ಆಯ್ಕೆಗಳಲ್ಲಿ ಬರುತ್ತದೆ: 2.2-ಲೀಟರ್ ಡೀಸೆಲ್ ಯೂನಿಟ್ (132PS/300Nm or 175PS/up to 400Nm) ಮತ್ತು 2-ಲೀಟರ್ –ಟರ್ಬೋ ಪೆಟ್ರೋಲ್ ಇಂಜಿನ್ (203PS/up to 380Nm). ಈ ಎರಡೂ ಇಂಜಿನ್‌ಗಳು ಸಿಕ್ಸ್-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿವೆ. ಹೆಚ್ಚು ಶಕ್ತಿಯುತ ಡೀಸೆಲ್ ಮತ್ತು ಪೆಟ್ರೋಲ್ ಘಟಕಗಳು ಸಿಕ್ಸ್-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನೂ ಹೊಂದಿದೆ. ಈ ಸ್ಕಾರ್ಪಿಯೋ ಎನ್ ರಿಯರ್-ವ್ಹೀಲ್-ಡ್ರೈವ್ ಸೆಟಪ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು, ಫೋರ್ ವ್ಹೀಲ್‌ನೊಂದಿಗೆ 175PS ಡೀಸೆಲ್‌ನಲ್ಲೂ ಲಭ್ಯವಿದೆ.
ಇದು ಟಾಟಾ ಹ್ಯಾರಿಯರ್/ಸಫಾರಿ ಮತ್ತು ಹ್ಯುಂಡೈ ಕ್ರೆಟಾ/ಅಲ್ಕಾಝಾರ್‌ಗೆ ಪ್ರತಿಸ್ಪರ್ಧಿಯಾಗಿದೆ, ಹಾಗೆಯೇ ಟೊಯೋಟಾ ಫಾರ್ಚೂನರ್ ಮತ್ತು MG ಗ್ಲಾಸ್ಟರ್‌ಗೆ ಹೋಲಿಸಿದರೆ ಕೈಗೆಟುಕುವ ಆಯ್ಕೆಯಾಗಿದೆ.
ಇನ್ನಷ್ಟು : ಮಹೀಂದ್ರಾ ಸ್ಕಾರ್ಪಿಯೋದ ಆನ್ ರೋಡ್ ಬೆಲೆ
0 out of 0 found this helpful