Mahindra Scorpio N Z8 ಸೆಲೆಕ್ಟ್ ವೇರಿಯಂಟ್ ಬಿಡುಗಡೆ, ಬೆಲೆಗಳು 16.99 ಲಕ್ಷರೂ.ನಿಂದ ಪ್ರಾರಂಭ
ಮಹೀಂದ್ರಾ ಸ್ಕಾರ್ಪಿಯೋ ಎನ್ ಗಾಗಿ rohit ಮೂಲಕ ಫೆಬ್ರವಾರಿ 23, 2024 07:43 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಮಿಡ್-ವೇರಿಯೆಂಟ್ Z6 ಮತ್ತು ಟಾಪ್-ಎಂಡ್ ವೇರಿಯೆಂಟ್ Z8 ಟ್ರಿಮ್‌ಗಳ ನಡುವೆ ಹೊಸ Z8 ಸೆಲೆಕ್ಟ್ ವೇರಿಯಂಟ್ ಸ್ಥಾನ ಪಡೆಯಲಿದೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ
-
ಹೊಸ Z8 ಸೆಲೆಕ್ಟ್ ವೇರಿಯೆಂಟ್‌ಗಳ ಬೆಲೆಗಳು 16.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.
-
ಇದು ಇದರ ನಂತರದ Z8 ಟ್ರಿಮ್‌ಗಿಂತ 1.66 ಲಕ್ಷ ರೂ.ವರೆಗೆ ಬೆಲೆಯಲ್ಲಿ ಕಡಿತವನ್ನು ಹೊಂದಿದೆ.
-
ಮಹೀಂದ್ರಾವು ತನ್ನ ಎಕ್ಸ್‌ಯುವಿ700 ನಲ್ಲಿರುವ ಮಿಡ್‌ನೈಟ್ ಬ್ಲ್ಯಾಕ್ ಕಲರ್‌ನಲ್ಲಿ Z8 ಸೆಲೆಕ್ಟ್ ಅನ್ನು ಎಕ್ಸ್‌ಕ್ಲೂಸಿಬ್ ಆಗಿ ನೀಡುತ್ತಿದೆ.
-
ಇದು Z8 ಟ್ರಿಮ್‌ನಂತೆಯೇ ಅದೇ ಎಲ್‌ಇಡಿ ಲೈಟಿಂಗ್ ಮತ್ತು ಕಪ್ಪು ಮತ್ತು ಕಂದು ಕ್ಯಾಬಿನ್ ಅನ್ನು ಪಡೆಯುತ್ತದೆ.
-
Z8 ನ ವೈಶಿಷ್ಟ್ಯಗಳಾದ ಸನ್‌ರೂಫ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.
-
ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 2-ಲೀಟರ್ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಪವರ್‌ಟ್ರೇನ್‌ಗಳನ್ನು ಪಡೆಯುತ್ತದೆ; ಆದರೂ 4WD ಆಯ್ಕೆ ಇಲ್ಲ.
-
ಭಾರತದಾದ್ಯಂತ ಸ್ಕಾರ್ಪಿಯೋ ಎನ್‌ನ ಎಕ್ಸ್ ಶೋರೂಂ ಬೆಲೆಗಳು 13.60 ಲಕ್ಷ ರೂ.ನಿಂದ ಪ್ರಾರಂಭವಾಗಿ 24.54 ಲಕ್ಷ ರೂ.ವರೆಗೆ ಇದೆ.
ವರ್ಷದ ಆರಂಭದಲ್ಲಿ ವೈಶಿಷ್ಟ್ಯವನ್ನು ಮರುಜೋಡಿಸಿದ ನಂತರ, ಮಹೀಂದ್ರಾ ಸ್ಕಾರ್ಪಿಯೊ N ಈಗ ಹೊಸ Z8 ಸೆಲೆಕ್ಟ್ ಆವೃತ್ತಿಯನ್ನು ಪಡೆದುಕೊಂಡಿದೆ, ಅದು ಮಿಡ್ ವೇರಿಯೆಂಟ್ Z6 ಮತ್ತು ಟಾಪ್-ಎಂಡ್ ವೇರಿಯೆಂಟ್ Z8 ಟ್ರಿಮ್‌ಗಳ ನಡುವೆ ಸ್ಲಾಟ್‌ಗಳನ್ನು ಹೊಂದಿದೆ. ಇದರ ಬೆಲೆಗಳು 16.99 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ ಮತ್ತು ಸ್ಕಾರ್ಪಿಯೋ N ನ ಎಲ್ಲಾ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಆದರೆ 4WD ಇದರಲ್ಲಿ ಲಭ್ಯವಿಲ್ಲ. ಮಹೀಂದ್ರಾ ಹೇಳುವಂತೆ ಈ SUV ಯ ಹೊಸ Z8 ಸೆಲೆಕ್ಟ್ ವೇರಿಯೆಂಟ್ ಮಾರ್ಚ್ 1, 2024 ರಿಂದ ಲಭ್ಯವಿರುತ್ತದೆ.
ವೇರಿಯೆಂಟ್-ವಾರು ಬೆಲೆಗಳು
ವೇರಿಯಂಟ್ |
ಜೆಡ್8 ಸೆಲೆಕ್ಟ್ |
ಜೆಡ್8 |
ವ್ಯತ್ಯಾಸ |
ಪೆಟ್ರೋಲ್ ಮ್ಯಾನುಯಲ್ |
16.99 ಲಕ್ಷ ರೂ. |
18.64 ಲಕ್ಷ ರೂ. |
(1.65 ಲಕ್ಷ ರೂ.) |
ಪೆಟ್ರೋಲ್ ಆಟೋಮ್ಯಾಟಿಕ್ |
18.49 ಲಕ್ಷ ರೂ. |
20.15 ಲಕ್ಷ ರೂ. |
(1.66 ಲಕ್ಷ ರೂ.) |
ಡೀಸೆಲ್ ಮ್ಯಾನುಯಲ್ |
17.99 ಲಕ್ಷ ರೂ. |
19.10 ಲಕ್ಷ ರೂ. |
(1.11 ಲಕ್ಷ ರೂ.) |
ಡೀಸೆಲ್ ಆಟೋಮ್ಯಾಟಿಕ್ |
18.99 ಲಕ್ಷ ರೂ. |
20.63 ಲಕ್ಷ ರೂ. |
(1.64 ಲಕ್ಷ ರೂ.) |
ಸ್ಕೋರ್ಪಿಯೋ ಎನ್‌ನ Z8 ಸೆಲೆಕ್ಟ್ ವೆರೆಯೆಂಟ್ ಆವೃತ್ತಿಯು ಇದರ ನಂತರದ ಟಾಪ್ ಎಂಡ್ Z8 ಟ್ರಿಮ್‌ಗಿಂತ 1.66 ಲಕ್ಷ ರೂ.ವರೆಗೆ ಬೆಲೆಯಲ್ಲಿ ಕಡಿತವನ್ನು ಹೊಂದಿದೆ.
ವಿನ್ಯಾಸದಲ್ಲಿನ ನವೀಕರಣಗಳ ವಿವರ
ಇದು ಮುಂದಿನ ಸಾಲಿನ Z8 ಟ್ರಿಮ್‌ನಿಂದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಡ್ಯುಯಲ್-ಬ್ಯಾರೆಲ್ ಎಲ್‌ಇಡಿ ಹೆಡ್‌ಲೈಟ್‌ಗಳು, 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಎಲ್‌ಇಡಿ ಪ್ರೊಜೆಕ್ಟರ್ ಫಾಗ್ ಲ್ಯಾಂಪ್‌ಗಳಂತಹ ಅನೇಕ ಬಾಹ್ಯ ವೈಶಿಷ್ಟ್ಯಗಳನ್ನು ಎರವಲು ಪಡೆಯುತ್ತದೆ. ಈ ಕಾರು ತಯಾರಕರು ಈಗ XUV700 ನ ಮಿಡ್‌ನೈಟ್ ಬ್ಲ್ಯಾಕ್ ಬಾಡಿ ಕಲರ್‌ನೊಂದಿಗೆ ಸಹ ಎಸ್‌ಯುವಿಯನ್ನು ನೀಡುತ್ತಿದ್ದಾರೆ, ಇದು ಇದೀಗ ಹೊಸ Z8 ಸೆಲೆಕ್ಟ್ ವೇರಿಯೆಂಟ್‌ನಲ್ಲಿ ಎಕ್ಸ್‌ಕ್ಲೂಸಿಬ್ ಆಗಿ ಇರಲಿದೆ.
ಇದೇ ರೀತಿಯ ಕ್ಯಾಬಿನ್ ಮತ್ತು ವೈಶಿಷ್ಟ್ಯಗಳು
ಇದು ಸಾಮಾನ್ಯ ಸ್ಕಾರ್ಪಿಯೋ N Z8 ನ ಕ್ಯಾಬಿನ್‌ನೊಂದಿಗೆ ಹೋಲಿಕೆಗಳನ್ನು ಹೊಂದಿದೆ ಏಕೆಂದರೆ Z8 ಸೆಲೆಕ್ಟ್ ಅದೇ ಕಪ್ಪು ಮತ್ತು ಕಂದು ಕ್ಯಾಬಿನ್ ಥೀಮ್‌ನೊಂದಿಗೆ ಲೆಥೆರೆಟ್ ಅಪ್ಹೋಲ್ಸ್ಟರಿಯೊಂದಿಗೆ ಬರುತ್ತದೆ. Z8 ಟ್ರಿಮ್‌ನಂತೆ, Z8 ಸೆಲೆಕ್ಟ್ ಕೂಡ 7-ಸೀಟರ್ ಲೇಔಟ್‌ನಲ್ಲಿ ಮಾತ್ರ ಲಭ್ಯವಿದೆ.
ಆಫರ್‌ನಲ್ಲಿರುವ ಸೌಕರ್ಯಗಳ ವಿಷಯದಲ್ಲಿ, ಜೆಡ್8 ಸೆಲೆಕ್ಟ್ ಆವೃತ್ತಿಯು 8-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕನೆಕ್ಟೆಡ್ ಕಾರ್ ಟೆಕ್ ಮತ್ತು ಸನ್‌ರೂಫ್ ಅನ್ನು ಪಡೆಯುತ್ತದೆ. ಜೆಡ್8 ಗೆ ಹೋಲಿಸಿದರೆ, Z8 ಸೆಲೆಕ್ಟ್‌ನಲ್ಲಿ ಡ್ಯುಯಲ್-ಝೋನ್ AC, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಆಟೋ ಹೆಡ್‌ಲೈಟ್‌ಗಳು ಲಭ್ಯವಿರುವುದಿಲ್ಲ.
Z8 ಸೆಲೆಕ್ಟ್‌ನ ಸುರಕ್ಷತಾ ಕಿಟ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆರು ಏರ್‌ಬ್ಯಾಗ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳನ್ನು ಒಳಗೊಂಡಿದೆ.
ಇದನ್ನು ಸಹ ಓದಿ: Mahindra Scorpio N ಆಧಾರಿತ ಗ್ಲೋಬಲ್ ಪಿಕ್ ಅಪ್ ಅನ್ನು ಮಹೀಂದ್ರ ಸ್ಕಾರ್ಪಿಯೋ ಎಕ್ಸ್ ಎಂದು ಕರೆಯಬಹುದು
ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಇರಲಿದೆ
ಮಹೀಂದ್ರಾ ತಮ್ಮ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯೊಂದಿಗೆ Z8 ಸೆಲೆಕ್ಟ್ ಆವೃತ್ತಿಯನ್ನು ನೀಡುತ್ತಿದೆ. ಈ ಇತ್ತೀಚಿನ ಆವೃತ್ತಿಗಾಗಿ ನೀಡುತ್ತಿರುವ ತಾಂತ್ರಿಕ ಕೊಡುಗೆಗಳ ವಿವರಗಳನ್ನು ಇಲ್ಲಿ ನೋಡಿ:
ವಿಶೇಷತೆಗಳು |
2-ಲೀಟರ್ ಟರ್ಬೊ-ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
203 ಪಿಎಸ್ |
175 ಪಿಎಸ್ |
ಟಾರ್ಕ್ |
370 ಎನ್‌ಎಮ್/ 380 ಎನ್‌ಎಮ್ |
400 ಎನ್ಎಂ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನುಯಲ್/ 6-ಸ್ಪೀಡ್ ಆಟೋಮ್ಯಾಟಿಕ್ |
ಮಹೀಂದ್ರಾ ಎಸ್‌ಯುವಿ ಅನ್ನು 4-ವೀಲ್-ಡ್ರೈವ್ (4WD) ಅನ್ನು ಅದರ ಟಾಪ್-ಎಂಡ್ ವೇರಿಯೆಂಟ್ Z8Lನ ಡೀಸೆಲ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ವೇರಿಯೆಂಟ್‌ನೊಂದಿಗೆ ಮಾತ್ರ ನೀಡುತ್ತದೆ.
ಬೆಲೆಯ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಸ್ಕಾರ್ಪಿಯೊ ಎನ್‌ನ ಬೆಲೆಯು 13.60 ಲಕ್ಷ ರೂ.ನಿಂದ ಪ್ರಾರಂಭವಾಗಿ 24.54 ಲಕ್ಷ ರೂ.ವರೆಗೆ ಇರಲಿದೆ. ಇದು ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್/ಸಫಾರಿ ಮತ್ತು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಸೇರಿದಂತೆ ಕೆಲವು ಕಾಂಪ್ಯಾಕ್ಟ್ ಎಸ್‌ಯುವಿಗಳ ಟಾಪ್-ಎಂಡ್ ವೇರಿಯೆಂಟ್‌ಗಳ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ. ಸ್ಕಾರ್ಪಿಯೊ ಎನ್ ಕಾರು ತಯಾರಕರ ಶ್ರೇಣಿಯಲ್ಲಿನ ಸೌಕರ್ಯ-ಆಧಾರಿತ ಮಹೀಂದ್ರಾ ಎಕ್ಸ್‌ಯುವಿ700 ಗೆ ಆಫ್-ರೋಡ್-ಸಾಮರ್ಥ್ಯದ ಪರ್ಯಾಯವಾಗಿದೆ.
ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ
ಇನ್ನಷ್ಟು ಓದಿ : ಸ್ಕಾರ್ಪಿಯೋ ಎನ್ ಆಟೋಮ್ಯಾಟಿಕ್
0 out of 0 found this helpful