Mahindra Thar 5-door ಲೋವರ್-ಸ್ಪೆಕ್ ಆವೃತ್ತಿ ಮತ್ತೊಮ್ಮೆ ಪ್ರತ್ಯಕ್ಷ
ಮಹೀಂದ್ರ ಥಾರ್ ರಾಕ್ಸ್ ಗಾಗಿ shreyash ಮೂಲಕ ಏಪ್ರಿಲ್ 01, 2024 04:22 pm ರಂದು ಪ್ರಕಟಿಸಲಾಗಿದೆ
- 34 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಸ್ಪೈ ಶಾಟ್‌ಗಳು ಥಾರ್ 5-ಡೋರ್‌ನ ಲೊವರ್-ವೇರಿಯೆಂಟ್‌ನ ಒಳಭಾಗವನ್ನು ಸಹ ಬಹಿರಂಗಪಡಿಸಿದೆ.
- ಮಹೀಂದ್ರಾ ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಥಾರ್‌ನ ದೀರ್ಘ ಆವೃತ್ತಿಯನ್ನು ನೀಡುತ್ತದೆ.
- ಇದನ್ನು ರಿಯರ್-ವೀಲ್-ಡ್ರೈವ್ (RWD) ಮತ್ತು 4-ವೀಲ್-ಡ್ರೈವ್ (4WD) ಆವೃತ್ತಿಗಳಲ್ಲಿ ನೀಡುವ ಸಾಧ್ಯತೆಯಿದೆ.
- ದೊಡ್ಡ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಸನ್‌ರೂಫ್ ಸೇರಿದಂತೆ ಅದರ 3-ಬಾಗಿಲಿನ ಆವೃತ್ತಿಗಿಂತ ಹೆಚ್ಚುವರಿ ಸೌಕರ್ಯಗಳನ್ನು ಪಡೆಯಬಹುದು.
- ಇದರ ಬೆಲೆ 15 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಮಹೀಂದ್ರಾ ಥಾರ್ 5-ಡೋರ್ ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲ ಅಭಿವೃದ್ಧಿಯ ಹಂತದಲ್ಲಿದ್ದು, ಇದು ಈ ವರ್ಷ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ SUV ಗಳಲ್ಲಿ ಒಂದಾಗಿದೆ. ದೊಡ್ದ ಗಾತ್ರದ ಥಾರ್‌ನ ಪರೀಕ್ಷಾ ಆವೃತ್ತಿಯನ್ನು ಅನೇಕ ಬಾರಿ ರಸ್ತೆಗಳಲ್ಲಿ ಗುರುತಿಸಲಾಗಿದೆ, ಇದು ಹೊಸ ಬಾಹ್ಯ ಮತ್ತು ಇಂಟಿರೀಯರ್‌ನ ವಿವರಗಳನ್ನು ಬಹಿರಂಗಪಡಿಸುತ್ತದೆ. ಈ ಬಾರಿಯೂ ನಾವು ಥಾರ್ 5-ಡೋರ್ ಮೊಡೆಲ್‌ನ್ನು ಪತ್ತೆ ಹಚ್ಚಿದ್ದೆವೆ. ಪ್ರಾಯಶಃ ಇದು ಲೊವರ್-ವೇರಿಯೆಂಟ್ ಆಗಿರಬಹುದು. ನಾವು ಕಂಡ ಅದರ ಒಳಗಿನ ಮತ್ತು ಹೊರಗಿನ ಅಂಶಗಳನ್ನು ವಿವರಿಸಿದ್ದೇವೆ. T
ನಾವು ಏನನ್ನು ಕಂಡಿದ್ದೇವೆ?
ಸ್ಪೈ ಶಾಟ್‌ನ ಆಧಾರದ ಮೇಲೆ, ಮಹೀಂದ್ರಾ ಥಾರ್ 5-ಡೋರ್‌ನ ಡ್ಯಾಶ್‌ಬೋರ್ಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರುವುದಿಲ್ಲ ಮತ್ತು ಬದಲಿಗೆ ಅನಲಾಗ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಹಾಗಾಗಿ ಇದು ಥಾರ್ 5-ಡೋರ್‌ನ ಲೋವರ್-ವೇರಿಯೆಂಟ್‌ಗಳಲ್ಲಿ ಒಂದಾಗಿರಬಹುದು ಎಂದು ಅನಿಸುತ್ತದೆ. ಎಸ್‌ಯುವಿಯ ಈ ನಿರ್ದಿಷ್ಟ ಪರೀಕ್ಷಾ ಆವೃತ್ತಿ ಇನ್ನೂ ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಸ್ಟೀರಿಂಗ್-ಮೌಂಟೆಡ್ ನಿಯಂತ್ರಣಗಳನ್ನು ಉಳಿಸಿಕೊಂಡಿದೆ, ಇದು ಬೇಸ್ ಮೊಡೆಲ್ ಆಗಿಲ್ಲದಿದ್ದರೂ ಲೋವರ್-ಸ್ಪೆಕ್ ವೇರಿಯೆಂಟ್ ಆಗಿರಬಹುದು ಎಂದು ಸೂಚಿಸುತ್ತದೆ.
ಇದನ್ನು ಸಹ ಓದಿ: Force Gurkha 5-door ಮೊದಲ ಟೀಸರ್ ಔಟ್, 2024 ರ ಕೊನೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ
ನಾವು ಥಾರ್ 5 ಡೋರ್‌ನ ಎರಡನೇ ಸಾಲನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಪತ್ತೇದಾರಿ ಚಿತ್ರದಲ್ಲಿ ಆರ್ಮ್‌ಸ್ಟ್ರೆಸ್ಟ್ ಕಾಣಿಸುತ್ತದೆ. ಹೊರಗಿನಿಂದ ಗಮನಿಸಿದ ಅಂಶಗಳಲ್ಲಿ, ಇದು ಥಾರ್‌ನ 3-ಡೋರ್ ಆವೃತ್ತಿಯಲ್ಲಿ ಕಂಡುಬರುವ ಅದೇ ಅಲಾಯ್ ವೀಲ್‌ಗಳನ್ನು ಹೊಂದಿದೆ.
ನಿರೀಕ್ಷಿತ ವೈಶಿಷ್ಟ್ಯಗಳು
ಮಹೀಂದ್ರಾ ಥಾರ್ 5 ಡೋರ್‌ನ ಟಾಪ್-ಎಂಡ್ ಆವೃತ್ತಿಗಳು ಅದರ ಅಸ್ತಿತ್ವದಲ್ಲಿರುವ 3-ಡೋರ್ ಆವೃತ್ತಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವ ನಿರೀಕ್ಷೆಯಿದೆ. ಇವುಗಳಲ್ಲಿ ದೊಡ್ಡ ಟಚ್‌ಸ್ಕ್ರೀನ್, ಡ್ರೈವರ್‌ಗಾಗಿ 10.25-ಇಂಚಿನ ಡಿಜಿಟಲ್ ಡಿಸ್‌ಪ್ಲೇ, ಸಿಂಗಲ್ ಪೇನ್ ಸನ್‌ರೂಫ್, ಹಿಂಭಾಗದ ಎಸಿ ವೆಂಟ್‌ಗಳು ಮತ್ತು ಆಟೋ-ಡಿಮ್ಮಿಂಗ್ ಇನ್‌ಸೈಡ್ ರಿಯರ್‌ವ್ಯೂ ಮಿರರ್ (IRVM) ಸೇರಿವೆ. ಥಾರ್ 3-ಡೋರ್‌ಗಿಂತ ಥಾರ್ 5-ಡೋರ್ ಆವೃತ್ತಿ ಹೆಚ್ಚುವರಿಯಾಗಿ ಏನನ್ನು ಪಡೆಯಬಹುದು ಎಂಬುದರ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ರಿಯರ್‌ವ್ಯೂ ಕ್ಯಾಮೆರಾವನ್ನು ಒಳಗೊಂಡಿರಬಹುದು ಮತ್ತು ಇದು ಟಾಪ್ ವೇರಿಯೆಂಟ್‌ಗಳಲ್ಲಿ 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯಬಹುದು. ಟ್ರಾಕ್ಷನ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಎಲ್ಲಾ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ರಿಮೈಂಡರ್‌ನಂತಹ ವೈಶಿಷ್ಟ್ಯಗಳನ್ನು ಅಸ್ತಿತ್ವದಲ್ಲಿರುವ ಮಹೀಂದ್ರ ಥಾರ್‌ನಿಂದ ಉಳಿಸಿಕೊಳ್ಳಲಾಗುತ್ತದೆ.
ಇದನ್ನು ಸಹ ಓದಿ: ಭಾರತಕ್ಕಾಗಿ ಸಿದ್ಧವಾಗುತ್ತಿರುವ ಹೊಸ Renault ಮತ್ತು Nissan ಎಸ್‌ಯುವಿಗಳ ಟೀಸರ್ ಮೊದಲ ಬಾರಿಗೆ ಔಟ್, 2025 ರಲ್ಲಿ ಬಿಡುಗಡೆ ಆಗುವ ಸಾಧ್ಯತೆ
ಅದೇ ಎಂಜಿನ್ ಆಯ್ಕೆಗಳು
ಮಹೀಂದ್ರಾ ಥಾರ್‌ನ ದೊಡ್ಡ ಆವೃತ್ತಿಯೊಂದಿಗೆ ಅದೇ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ, ಆದರೆ ಅವೆಲ್ಲವೂ ಅಸ್ತಿತ್ವದಲ್ಲಿರುವ 3-ಡೋರ್ ಥಾರ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ಆಯ್ಕೆಗಳಲ್ಲಿ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಸೇರಿವೆ. ಈ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತವೆ.
ಥಾರ್ 5-ಡೋರ್ ಆವೃತ್ತಿಯು ರಿಯರ್-ವೀಲ್-ಡ್ರೈವ್ (RWD) ಮತ್ತು 4-ವೀಲ್-ಡ್ರೈವ್ (4WD) ಡ್ರೈವ್‌ಟ್ರೇನ್‌ಗಳ ಆಯ್ಕೆಯನ್ನು ಪಡೆಯಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಥಾರ್ 5-ಡೋರ್ ಅನ್ನು 2024 ರ ಆಗಸ್ಟ್ 15 ರಂದು ಅನಾವರಣಗೊಳಿಸಲಾಗುವುದು ಮತ್ತು 2024ರ ಅಂತಿಮ ತ್ರೈಮಾಸಿಕದಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು. ಇದರ ಎಕ್ಸ್ ಶೋರೂಂ ಬೆಲೆಗಳು 15 ಲಕ್ಷದಿಂದ ರೂ.ನಿಂದ ಪ್ರಾರಂಭವಾಗಬಹುದು. ಇದು ಮಾರುಕಟ್ಟೆಯಲ್ಲಿ ಫೋರ್ಸ್ ಗೂರ್ಖಾ 5-ಡೋರ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಿದೆ.
ಇಲ್ಲಿ ಹೆಚ್ಚು ಓದಿ: ಥಾರ್ ಆಟೋಮ್ಯಾಟಿಕ್