ಭಾರತದಲ್ಲಿ 1 ಲಕ್ಷ ಮನೆಗಳನ್ನು ತಲುಪಿದ ಮಹೀಂದ್ರಾ XUV700
ಮಹೀಂದ್ರಾ XUV700 ಯ ಕೊನೆಯ 50,000 ಯೂನಿಟ್‌ಗಳನ್ನು ಕಳೆದ 8 ತಿಂಗಳುಗಳಲ್ಲಿ ಡೆಲಿವರಿ ಮಾಡಲಾಗಿದೆ
ಈ XUV700 ಕೇವಲ 20 ತಿಂಗಳ ಅತ್ಯಲ್ಪ ಅವಧಿಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದೆ, ಇದು ಸುಮಾರು 20 ಲಕ್ಷ ಬೆಲೆಯನ್ನು ಹೊಂದಿರುವ ಅತ್ಯಂತ ಜನಪ್ರಿಯ ವೇರಿಯೆಂಟ್‌ಗಳೊಂದಿಗೆ ಸಾಕಷ್ಟು ಪ್ರೀಮಿಯಂ ಕೊಡುಗೆಯಾಗಿದೆ. ಬಿಡುಗಡೆಯಾದಾಗಿನಿಂದ, ಈ XUV700 ಗಮನಾರ್ಹ ಕಾಯುವಿಕೆಯ ಅವಧಿಯನ್ನು ಹೊಂದಿದೆ. ಮಹೀಂದ್ರಾ ಮೊದಲ ಮೂರು ಗಂಟೆಗಳಲ್ಲಿ 50,000 ಬುಕ್ಕಿಂಗ್‌ಗಳನ್ನು ಪಡೆದು ಆ ಯೂನಿಟ್‌ಗಳನ್ನು ಡೆಲಿವರಿ ಮಾಡಲು 12 ತಿಂಗಳುಗಳ ಸಮಯವನ್ನು ತೆಗೆದುಕೊಂಡರೆ, ಮುಂದಿನ 50,000 ಯೂನಿಟ್‌ಗಳನ್ನು 8 ತಿಂಗಳುಗಳಲ್ಲಿ ಹಸ್ತಾಂತರಿಸಲಾಯಿತು. XUV700 ನ ಕಾಯುವಿಕೆ ಅವಧಿಯು ಇನ್ನೂ ಹೆಚ್ಚಿವೆ ಮತ್ತು ಮಹೀಂದ್ರಾ ಈಗ ತಮ್ಮ ಹೇಳಿಕೆಯ ಪ್ರಕಾರ ಮುಂದಿನ 50,000 ಯೂನಿಟ್‌ಗಳ ವಿತರಣೆಯನ್ನು ತ್ವರಿತಗೊಳಿಸಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನಹರಿಸಿದೆ.
ಇದು ಏನನ್ನು ನೀಡುತ್ತಿದೆ
ಈ XUV700 ಬಿಡುಗಡೆಯಾದಾಗಿನಿಂದ ಯಾವುದೇ ಪ್ರಮುಖ ಬದಲಾವಣೆಗಳನ್ನು ಪಡೆದಿಲ್ಲ, ಮತ್ತು ಅದರ ಫೀಚರ್ ಲಿಸ್ಟ್ ಆ್ಯಂಡ್ರಾಯ್ಡ್ ಆಟೋ ಡಿಸ್‌ಪ್ಲೇ ಮತ್ತು ಆ್ಯಪಲ್ ಕಾರ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್, ವಿಹಂಗಮವಾದ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸೋನಿಯ 12-ಸ್ಪೀಕರ್ 3D ಸೌಂಡ್ ಸಿಸ್ಟಮ್‌ನೊಂದಿಗೆ ಸಂಯೋಜಿತ 10.25-ಇಂಚಿನ ಸ್ಕ್ರೀನ್ ಸೆಟಪ್ ಅನ್ನು ಒಳಗೊಂಡಿದೆ.
ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಇದು ಏಳು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮರಾ, ರಿವರ್ಸಿಂಗ್ ಕ್ಯಾಮರಾ, ಇಷ್ಟು ಮಾತ್ರವಲ್ಲದೇ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಮತ್ತು ಹೈ-ಬೀಮ್ ಅಸಿಸ್ಟ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಯನ್ನು ಒಳಗೊಂಡಿದೆ.
ಇದನ್ನೂ ಓದಿ: 9 ಲಕ್ಷ ಉತ್ಪಾದನಾ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಸ್ಕಾರ್ಪಿಯೋ
ಪವರ್‌ಟ್ರೇನ್ ವಿವರಗಳು
ಮಹೀಂದ್ರಾ XUV700 ಎರಡು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ: 2-ಲೀಟರ್ ಪೆಟ್ರೋಲ್ ಎಂಜಿನ್ (200PS/380Nm) ಮತ್ತು 2.2-ಲೀಟರ್ ಡಿಸೇಲ್ ಎಂಜಿನ್ (185PS/450Nm ವರೆಗೆ), ಎರಡೂ 6-ಸ್ಪೀಡ್ ಮ್ಯಾನ್ಯುವಲ್ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೊತೆಯಾಗಿವೆ. ಟಾಪ್-ಸ್ಪೆಕ್ ಡಿಸೇಲ್ ವೇರಿಯೆಂಟ್‌ಗಳನ್ನು ಆಲ್-ವ್ಹೀಲ್ ಡ್ರೈವ್ ಡ್ರೈವ್‌ಟ್ರೇನ್‌ನೊಂದಿಗೆ ನೀಡುಲಾಗುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
XUV700 ಯ ಬೆಲೆಯನ್ನು ರೂ.14.04 ಲಕ್ಷದಿಂದ ರೂ 26.18 ಲಕ್ಷಗಳ ನಡುವೆ (ಎಕ್ಸ್-ಶೋರೂಮ್, ಪ್ಯಾನ್ ಇಂಡಿಯಾ) ನಿಗದಿಪಡಿಸಲಾಗಿದೆ. ಇದು ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಝರ್‌ಗೆ ಪ್ರತಿಸ್ಪರ್ಧಿಯಾಗಲಿದೆ. XUV700 ನ ಕೆಳಮಟ್ಟದ ವೇರಿಯೆಂಟ್‌ಗಳು 5-ಸೀಟರ್ ಸಂರಚನೆಯನ್ನು ಹೊಂದಿದ್ದು, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾದಂತಹ 5-ಸೀಟರ್ ಎಸ್‌ಯುವಿಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.
ಇನ್ನಷ್ಟು ಇಲ್ಲಿ ಓದಿ : ಮಹೀಂದ್ರಾ XUV700 ಆನ್ ರೋಡ್ ಬೆಲೆ