2024 ರ ಫೆಬ್ರವರಿಯಲ್ಲಿ Tata Nexon ಮತ್ತು Kia Sonet ಅನ್ನು ಹಿಂದಿಕ್ಕಿ ಅತ್ಯುತ್ತಮ ಮ ಾರಾಟವಾದ ಸಬ್-4m SUV ಎನಿಸಿಕೊಂಡ Maruti Brezza
ಮಾರುತಿ ಬ್ರೆಜ್ಜಾ ಗಾಗಿ rohit ಮೂಲಕ ಮಾರ್ಚ್ 12, 2024 08:12 pm ರಂದು ಪ್ರಕಟಿಸಲಾಗಿದೆ
- 104 Views
- ಕಾಮೆಂಟ್ ಅನ್ನು ಬರೆಯಿರಿ
ಇಲ್ಲಿ ಕೇವಲ ಎರಡು ಎಸ್‌ಯುವಿಗಳು ತಮ್ಮ ತಿಂಗಳಿನಿಂದ ತಿಂಗಳ (MoM) ಮಾರಾಟ ಸಂಖ್ಯೆಯಲ್ಲಿ ಬೆಳವಣಿಗೆಯನ್ನು ಕಂಡಿವೆ
ಸಬ್-4ಮೀ ಎಸ್‌ಯುವಿ ಸೆಗ್ಮೆಂಟ್ ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಝಾ ಮುಂತಾದ ಕಾರು ಪ್ರೀಯರ ಫೇವರಿಟ್ ಅನ್ನು ಒಳಗೊಂಡಂತೆ ಏಳು ಪ್ರಮುಖ ಕಾರು ಮೊಡೆಲ್‌ಗಳನ್ನು ಹೊಂದಿದೆ. ನೆಕ್ಸಾನ್ ಕಳೆದ ಎರಡು ತಿಂಗಳುಗಳಲ್ಲಿ ಸೆಗ್ಮೆಂಟ್‌ನ ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದರೆ, 2024ರ ಫೆಬ್ರವರಿಯಲ್ಲಿ ಮಾರುತಿಯ ಎಸ್‌ಯುವಿ ಈ ಅಗ್ರ ಸ್ಥಾನವನ್ನು ಮರಳಿ ಪಡೆಯಿತು. ಈ ಸೆಗ್ಮೆಂಟ್ ಒಟ್ಟಾರೆಯಾಗಿ, 55,000 ಕಾರುಗಳ ಮಾರಾಟಕ್ಕೆ ಸಾಕ್ಷಿಯಾಗಿದೆ, ಆದರೆ ಇದು ಈ ಜನವರಿಗೆ ಹೋಲಿಸಿದರೆ 12.5 ಶೇಕಡಾಕ್ಕಿಂತ ಹೆಚ್ಚು ಇಳಿಕೆ ಕಂಡಿದೆ.
2024ರ ಫೆಬ್ರವರಿಯ ಮಾರಾಟದಲ್ಲಿ ಈ ಎಸ್‌ಯುವಿಗಳು ಹೇಗೆ ಕಾರ್ಯನಿರ್ವಹಿಸಿದವು ಎಂಬುದರ ವಿವರವಾದ ನೋಟ ಇಲ್ಲಿದೆ:
ಸಬ್-ಕಾಂಪ್ಯಾಕ್ಟ್ ಎಸ್‌ಯುವಿಗಳು ಮತ್ತು ಕ್ರಾಸ್ಒವರ್‌ಗಳು |
|||||||
2024ರ ಫೆಬ್ರವರಿ |
2024ರ ಜನವರಿ |
MoM ಬೆಳವಣಿಗೆ |
ಮಾರುಕಟ್ಟೆ ಪಾಲು ಪ್ರಸ್ತುತ (%) |
ಮಾರುಕಟ್ಟೆ ಪಾಲು (% ಕಳೆದ ವರ್ಷ) |
YoY ಮಾರುಕಟ್ಟೆ ಪಾಲು (%) |
ಸರಾಸರಿ ಮಾರಾಟ (6 ತಿಂಗಳು) |
|
ಮಾರುತಿ ಬ್ರೆಜ್ಜಾ |
15765 |
15303 |
3.01 |
28.04 |
27.53 |
0.51 |
14527 |
ಟಾಟಾ ನೆಕ್ಸಾನ್ |
14395 |
17182 |
-16.22 |
25.6 |
24.27 |
1.33 |
14607 |
ಕಿಯಾ ಸೋನೆಟ್ |
9102 |
11530 |
-21.05 |
16.19 |
17.15 |
-0.96 |
5595 |
ಹುಂಡೈ ವೆನ್ಯೂ |
8933 |
11831 |
-24.49 |
15.89 |
17.43 |
-1.54 |
11355 |
ಮಹೀಂದ್ರಾ ಎಕ್ಸ್‌ಯುವಿ300 |
4218 |
4817 |
-12.43 |
7.5 |
6.64 |
0.86 |
4643 |
ನಿಸ್ಸಾನ್ ಮ್ಯಾಗ್ನೈಟ್ |
2755 |
2863 |
-3.77 |
4.9 |
3.8 |
1.1 |
2504 |
ರೆನಾಲ್ಟ್ ಕೈಗರ್ |
1047 |
750 |
39.6 |
1.86 |
3.14 |
-1.28 |
828 |
ಒಟ್ಟು |
56215 |
64276 |
-12.54 |
ಗಮನಿಸಿದ ಪ್ರಮುಖ ಆಂಶಗಳು
-
15,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಡೆಲಿವರಿ ಮಾಡುವುದರೊಂದಿಗೆ, ಮಾರುತಿ ಬ್ರೆಝಾ ಹೆಚ್ಚು ಮಾರಾಟವಾದ ಸಬ್-4ಮೀ ಎಸ್‌ಯುವಿಯ ಕಿರೀಟವನ್ನು ಮರಳಿಪಡೆಯಿತು. ಇದರ ಮಾರುಕಟ್ಟೆ ಪಾಲು 28 ಪ್ರತಿಶತಕ್ಕಿಂತ ಸ್ವಲ್ಪ ಹೆಚ್ಚಾಗಿದೆ.
-
ಟಾಟಾ ನೆಕ್ಸಾನ್ ಒಟ್ಟು 14,000 ಯುನಿಟ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಅದರ ತಿಂಗಳಿನಿಂದ ತಿಂಗಳ (MoM) ಅಂಕಿ ಅಂಶವು 16 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಅದರ 6-ತಿಂಗಳ ಸರಾಸರಿ ಮಾರಾಟ ಸಂಖ್ಯೆಗಳನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಒಟ್ಟು ಮಾರಾಟದ ಅಂಕಿ ಅಂಶವು ಟಾಟಾ ನೆಕ್ಸಾನ್ ಇವಿಯ ಯ ಮಾರಾಟದ ಡೇಟಾವನ್ನು ಸಹ ಒಳಗೊಂಡಿರುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ.
-
ಕಿಯಾ ಸೊನೆಟ್‌ನ 2024ರ ಫೆಬ್ರವರಿಯ ಮಾರಾಟವು ಅದರ ಸರಾಸರಿ 6-ತಿಂಗಳ ಮಾರಾಟದ ಅಂಕಿಅಂಶಗಳಿಗಿಂತ ಸುಧಾರಣೆಯನ್ನು ಕಂಡರೆ, ಈ ಎಸ್‌ಯುವಿ ತನ್ನ ತಿಂಗಳಿನಿಂದ ತಿಂಗಳ ಸಂಖ್ಯೆಯಲ್ಲಿ 21 ಪ್ರತಿಶತಕ್ಕಿಂತ ಹೆಚ್ಚು ಕುಸಿತವನ್ನು ಕಂಡಿದೆ. ಅದರ ವರ್ಷದಿಂದ ವರ್ಷಕ್ಕೆ (YoY) ಮಾರುಕಟ್ಟೆ ಪಾಲು ಸುಮಾರು 1 ಪ್ರತಿಶತದಷ್ಟು ಕಡಿಮೆಯಾಗಿದೆ.
-
ಹುಂಡೈ ವೆನ್ಯೂವು ಸೋನೆಟ್‌ನ ನಂತರದ ಸ್ಥಾನದಲ್ಲಿದೆ, ಏಕೆಂದರೆ ಅದು ಸುಮಾರು 9,000 ಯುನಿಟ್‌ಗಳ ಒಟ್ಟು ಮಾರಾಟವನ್ನು ನೋಂದಾಯಿಸಿದೆ. ಇದರ ಮಾರುಕಟ್ಟೆ ಪಾಲು 2024ರ ಫೆಬ್ರವರಿಯಲ್ಲಿ 16 ಪ್ರತಿಶತದ ಸಮೀಪದಲ್ಲಿದೆ. ವೆನ್ಯೂವಿನ ಮಾರಾಟದ ಅಂಕಿಅಂಶಗಳು ಹ್ಯುಂಡೈ ವೆನ್ಯೂ ಎನ್ ಲೈನ್‌ನ ಮಾರಾಟದ ಡೇಟಾವನ್ನು ಸಹ ಒಳಗೊಂಡಿವೆ ಎಂಬುದನ್ನು ಗಮನಿಸಬೇಕು.
-
ಮಹೀಂದ್ರಾ ಎಕ್ಸ್‌ಯುವಿ300 4,000-ಯೂನಿಟ್ ಮಾರಾಟದ ಮಾರ್ಕ್ ಅನ್ನು ದಾಟಲು ಯಶಸ್ವಿಯಾಗಿದ್ದರೂ, ಅದರ ಸರಾಸರಿ 6-ತಿಂಗಳ ಮಾರಾಟದ ಅಂಕಿಅಂಶಗಿಂತ ಮುನ್ನಡೆ ಸಾಧಿಸಲು ವಿಫಲವಾಗಿದೆ. ಇದರ ಮಾರುಕಟ್ಟೆ ಪಾಲು ಶೇಕಡಾ 7.5 ರಷ್ಟಿತ್ತು.
-
ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್‌ನ ಎರಡರ ಒಟ್ಟು ಮಾರಾಟವು 4,000-ಯೂನಿಟ್ ಮಾರಾಟದ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ಈ ಮೂಲಕ XUV300 ಪಟ್ಟಿಯಲ್ಲಿ ತನಗಿಂತ ಈ ಎರಡೂ ಎಸ್‌ಯುವಿಗಳನ್ನು ಕೆಳಗೆ ಇರಿಸಿತು. ಆದರೆ, ಕೈಗರ್ ಮಾತ್ರ ಇತರ ಎಸ್‌ಯುವಿಗಳಿಗಿಂತ (ಇಲ್ಲಿ ಬ್ರೆಝಾ ನಂತರ) ಸುಮಾರು 40 ಪ್ರತಿಶತದಷ್ಟು ಧನಾತ್ಮಕ ಮಾಸಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಇದನ್ನು ಸಹ ಓದಿ: ಇದನ್ನೂ ಓದಿ: ಈ ಮಾರ್ಚ್‌ನಲ್ಲಿ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಡೆಲಿವರಿ ಪಡೆಯಲು ಎಷ್ಟು ಸಮಯ ಕಾಯಬೇಕು ಎಂಬುವುದು ಇಲ್ಲಿದೆ
ಇನ್ನಷ್ಟು ಓದಿ: ಬ್ರೆಜ್ಜಾ ಆನ್‌ರೋಡ್ ಬೆಲೆ