• English
  • Login / Register

2024ರ ಮೇ ತಿಂಗಳ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ Tata Nexonನ ಹಿಂದಿಕ್ಕಿದ Maruti Brezza

published on ಜೂನ್ 15, 2024 06:48 am by shreyash for ಮಾರುತಿ ಬ್ರೆಜ್ಜಾ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಮಾಸಿಕ ಮಾರಾಟದಲ್ಲಿ ಅತ್ಯಧಿಕ ಏರಿಕೆಯನ್ನು ಪಡೆಯಿತು, ಇದು ಹ್ಯುಂಡೈ ವೆನ್ಯೂಗಿಂತ ಮುಂದಿದೆ.

Maruti Brezza Stays Ahead Of Tata Nexon In May 2024 Subcompact SUV Sales

2024ರ ಮೇ ತಿಂಗಳ ಭಾರತೀಯ ಕಾರು ಮಾರಾಟದ ಫಲಿತಾಂಶಗಳು ಈಗಾಗಲೇ ಹೊರಬಿದ್ದಿವೆ, ಇದರಲ್ಲಿ ಮಾರುತಿ ಬ್ರೆಜ್ಜಾವು ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಮತ್ತು ಹ್ಯುಂಡೈ ವೆನ್ಯೂಗಳನ್ನು ಹಿಂದಿಕ್ಕಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಹೊರಹೊಮ್ಮಿದೆ.  ಒಟ್ಟಾರೆಯಾಗಿ, ಕಳೆದ ತಿಂಗಳು ದೇಶದಲ್ಲಿ 55,000 ಕ್ಕೂ ಹೆಚ್ಚು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದೆ ಮತ್ತು ಈ ಸೆಗ್ಮೆಂಟ್‌ ತಿಂಗಳಿನಿಂದ ತಿಂಗಳ (MoM) ಮಾರಾಟದಲ್ಲಿ 5 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಅದರಲ್ಲಿ  ಒಂದು ನಿರ್ದಿಷ್ಟ ಮೊಡೆಲ್‌ನ ಬೇಡಿಕೆಯು ಹೆಚ್ಚಾದ್ದರಿಂದ ಹೆಚ್ಚಿನವುಗಳ ಮಾರಾಟದ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 

ಸಬ್‌-ಕಾಂಪ್ಯಾಕ್ಟ್ ಎಸ್‌ಯುವಿಗಳು ಮತ್ತು ಕ್ರಾಸ್ಓವರ್‌ಗಳು

 

2024 ರ ಮೇ

2024ರ ಏಪ್ರಿಲ್

ತಿಂಗಳಿನಿಂದ ತಿಂಗಳ ಬೆಳವಣಿಗೆ

ಮಾರುಕಟ್ಟೆ ಪಾಲು ಪ್ರಸ್ತುತ (%)

ಮಾರುಕಟ್ಟೆ ಪಾಲು ( ಕಳೆದ ವರ್ಷದ %)

ವರ್ಷದಿಂದ ವರ್ಷದ ಮಾರುಕಟ್ಟೆ ಪಾಲು (%)

ಸರಾಸರಿ ಮಾರಾಟ (6 ತಿಂಗಳು)

ಮಾರುತಿ ಬ್ರೆಜ್ಜಾ

14186

17113

-17.1

25.57

24.03

1.54

14839

ಟಾಟಾ ನೆಕ್ಸಾನ್

11457

11168

2.58

20.65

25.87

-5.22

14501

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ

10000

4003

149.81

18.02

9.19

8.83

3889

ಹುಂಡೈ ವೆನ್ಯೂ

9327

9120

2.26

16.81

18.32

-1.51

10177

ಕಿಯಾ ಸೋನೆಟ್

7433

7901

-5.92

13.4

14.8

-1.4

7288

ನಿಸ್ಸಾನ್ ಮ್ಯಾಗ್ನೈಟ್

2211

2404

-8.02

3.98

4.69

-0.71

2555

ರೆನಾಲ್ಟ್ ಕೈಗರ್

850

1059

-19.73

1.53

3.07

-1.54

884

ಒಟ್ಟು

55464

52768

5.1

99.96

     

ಗಮನಿಸಿದ ಪ್ರಮುಖ ಅಂಶಗಳು

Maruti Brezza

  •  ಮಾಸಿಕ ಮಾರಾಟದಲ್ಲಿ 17 ಪ್ರತಿಶತದಷ್ಟು ನಷ್ಟವನ್ನು ಅನುಭವಿಸುತ್ತಿದ್ದರೂ ಸಹ, ಮಾರುತಿ ಬ್ರೆಝಾ ಹಿಂದಿನ ತಿಂಗಳಲ್ಲಿ ಈ ಸೆಗ್ಮೆಂಟ್‌ನಲ್ಲಿ ಹೆಚ್ಚು ಮಾರಾಟವಾದ ಕಾರು ಮೊಡೆಲ್‌ ಆಗಿದೆ. ಮಾರುತಿ ಕಳೆದ ತಿಂಗಳು ಬ್ರೆಝಾದ 14,000 ಕಾರುಗಳನ್ನು ಡೆಲಿವೆರಿ ನೀಡಿದೆ. ಬ್ರೆಝಾ ಪ್ರಸ್ತುತ ಈ ಸೆಗ್ಮೆಂಟ್‌ನಲ್ಲಿ ಗರಿಷ್ಠ 25 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದೆ.
  • 11,000 ಕಾರುಗಳ ಮಾರಾಟದೊಂದಿಗೆ, ಟಾಟಾ ನೆಕ್ಸಾನ್ ಸತತ ಮೂರನೇ ತಿಂಗಳಿಗೆ ಎರಡನೇ ಅತಿ ಹೆಚ್ಚು ಮಾರಾಟವಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಿ ಹೊರಹೊಮ್ಮಿದೆ. ಇದರ ಮಾಸಿಕ ಬೇಡಿಕೆಯು ಸ್ಥಿರವಾಗಿ ಉಳಿಯಿತು, ಆದರೆ ವರ್ಷದಿಂದ ವರ್ಷದ(YoY) ಮಾರುಕಟ್ಟೆ ಪಾಲು 5 ಪ್ರತಿಶತದಷ್ಟು ಕಡಿಮೆಯಾಗಿದೆ. ಈ ಅಂಕಿಅಂಶಗಳಲ್ಲಿ ಟಾಟಾ ನೆಕ್ಸಾನ್ ಮತ್ತು ಟಾಟಾ ನೆಕ್ಸಾನ್ ಇವಿ ಎರಡರ ಮಾರಾಟವನ್ನು ಒಳಗೊಂಡಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. 

Mahindra XUV 3XO Front

  • 2024ರ ಮೇನಲ್ಲಿ ಮಹೀಂದ್ರಾವು ಎಕ್ಸ್‌ಯುವಿ300ಗೆ ಫೇಸ್‌ಲಿಫ್ಟ್ ಆಗಿ ಎಕ್ಸ್‌ಯುವಿ 3XO ವಿತರಣೆಯನ್ನು ಪ್ರಾರಂಭಿಸಿದಾಗಿನಿಂದ, ಅದರ ತಿಂಗಳಿನಿಂದ ತಿಂಗಳ ಮಾರಾಟವು 150 ಪ್ರತಿಶತದಷ್ಟು ಹೆಚ್ಚಾಗಿದೆ. ಮಹೀಂದ್ರಾ ಕಳೆದ ತಿಂಗಳು ಎಕ್ಸ್‌ಯುವಿ 3XO ನ 10,000 ಕಾರುಗಳ ಡೆಲಿವೆರಿ ನೀಡಿದೆ. 

  • ಹುಂಡೈ ವೆನ್ಯೂವು ಸ್ಥಿರವಾದ ಮಾಸಿಕ ಬೇಡಿಕೆಯನ್ನು ಆನಂದಿಸುತ್ತಾ, 2024ರ ಮೇನಲ್ಲಿ 9,000 ಯುನಿಟ್‌ಗಳ ಮಾರಾಟದ ಮಾರ್ಕ್ ಅನ್ನು ದಾಟಿದೆ, ಆದರೂ ಅವು ಕಳೆದ ಆರು ತಿಂಗಳ ಸರಾಸರಿ ಮಾರಾಟಕ್ಕಿಂತ ಕಡಿಮೆಯಾಗಿದೆ. ಈ ಅಂಕಿಅಂಶಗಳು ರೆಗುಲರ್‌ ವೆನ್ಯೂ ಮತ್ತು ವೆನ್ಯೂನ ಎನ್‌ ಲೈನ್ ಎರಡನ್ನೂ ಒಳಗೊಂಡಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. 

Kia Sonet

  • ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕಿಯಾ ಸೊನೆಟ್‌ 2024ರ ಮೇನಲ್ಲಿ 7,000 ಕಾರು ಮಾರಾಟವನ್ನು ದಾಟಿದೆ. ಅದರ ಮಾಸಿಕ ಮಾರಾಟವು 5 ಪ್ರತಿಶತದಷ್ಟು ಕುಸಿದಿದ್ದರೂ, ಅದರ 2024ರ ಮೇ ಮಾರಾಟವು ಕಳೆದ ಆರು ತಿಂಗಳ ಸರಾಸರಿ ಮಾರಾಟದಂತೆಯೇ ಇದೆ.

  • ನಿಸ್ಸಾನ್ ಮ್ಯಾಗ್ನೈಟ್ 2024ರ ಮೇನಲ್ಲಿ 2211 ಖರೀದಿದಾರರನ್ನು ಆಕರ್ಷಿಸಲಷ್ಟೇ ಶಕ್ತವಾಗಿದೆ, ಈ ಮೂಲಕ MoM ಮಾರಾಟದಲ್ಲಿ ಇನ್ನೂ 8 ಪ್ರತಿಶತದಷ್ಟು ನಷ್ಟಕ್ಕೆ ಸಾಕ್ಷಿಯಾಗಿದೆ. ಮತ್ತೊಂದೆಡೆ ರೆನಾಲ್ಟ್ ಕೈಗರ್ 1,000 ಕಾರುಗಳ ಮಾರಾಟದ ಗಡಿಯನ್ನು ಸಹ ದಾಟಲಿಲ್ಲ. ರೆನಾಲ್ಟ್‌ನ ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಪ್ರಸ್ತುತ ಭಾರತದಲ್ಲಿನ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಕೇವಲ 1.5 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದೆ.

ಇನ್ನಷ್ಟು ಓದಿ: ಮಾರುತಿ ಬ್ರೆಝಾ ಆನ್‌ರೋಡ್‌ ಬೆಲೆ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಬ್ರೆಜ್ಜಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience