Login or Register ಅತ್ಯುತ್ತಮ CarDekho experience ಗೆ
Login

2024ರ ಜನವರಿಯಿಂದ ದುಬಾರಿಯಾಗಲಿರುವ ಮಾರುತಿ ಕಾರುಗಳು

published on ನವೆಂಬರ್ 28, 2023 05:37 pm by shreyash for ಮಾರುತಿ ಆಲ್ಟೊ ಕೆ10

ಬೆಲೆಯೇರಿಕೆಯು ಇತ್ತೀಚೆಗಷ್ಟೇ ಬಿಡುಗಡೆಯಾದ ಮಾರುತಿ ಫ್ರಾಂಕ್ಸ್‌ ಮತ್ತು ಮಾರುತಿ ಜಿಮ್ನಿ ಸೇರಿದಂತೆ ಎಲ್ಲಾ ಮಾದರಿಗಳನ್ನು ಬಾಧಿಸಲಿದೆ.

  • ವಿವಿಧ ಮಾದರಿಗಳು ಮತ್ತು ವೇರಿಯಂಟ್‌ ಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಬೆಲೆಯೇರಿಕೆ ಉಂಟಾಗಿದೆ.
  • ಸರಕುಗಳ ಬೆಲೆಯಲ್ಲಿ ಹೆಚ್ಚಳ ಮತ್ತು ಒಟ್ಟಾರೆ ಹಣದುಬ್ಬರದ ಕಾರಣ ಬೆಲೆಯೇರಿಕೆ ಮಾಡಲಾಗಿದೆ ಎನ್ನಲಾಗಿದೆ.
  • ಮಾರುತಿಯು ಪ್ರಸ್ತುತ 17 ಮಾದರಿಗಳನ್ನು ಹೊಂದಿದ್ದು ಇವುಗಳನ್ನು ಅರೇನಾ ಮತ್ತು ನೆಕ್ಸಾ ಶೋರೂಂಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಕ್ಯಾಲೆಂಡರ್‌ ವರ್ಷದ ಕೊನೆಗೆ ಕಾರು ತಯಾರಕ ಸಂಸ್ಥೆಗಳು ಬೆಲೆಯೇರಿಕೆಯನ್ನು ಘೋಷಿಸುವುದು ಸಾಮಾನ್ಯವಾಗಿದ್ದು, ಈ ಏರಿಕೆಯು ಮುಂದಿನ ವರ್ಷದಿಂದ ಜಾರಿಗೆ ಬರುತ್ತದೆ. ಹೊಸ ವರ್ಷವಾಗಿರುವ 2024 ಅನ್ನು ಸ್ವಾಗತಿಸಲು ಕ್ಷಣಗಣನೆಯು ಪ್ರಾರಂಭವಾಗಿರುವಂತೆಯೇ, ಮಾರುತಿ ಸಂಸ್ಥೆಯು 2024ರ ಜನವರಿ ತಿಂಗಳಿನಿಂದ ಅನ್ವಯವಾಗುವಂತೆ ತನ್ನ ಎಲ್ಲಾ ಶ್ರೇಣಿಗಳ ಬೆಲೆಯಲ್ಲಿ ಹೆಚ್ಚಳ ಘೋಷಿಸಿದೆ. ವಿವಿಧ ಮಾದರಿಗಳು ಮತ್ತು ವೇರಿಯಂಟ್‌ ಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಬೆಲೆಯೇರಿಕೆ ಉಂಟಾಗಿದೆ.

ಬೆಲೆಯೇರಿಕೆಯ ಹಿಂದಿನ ಕಾರಣಗಳು

ಸರಕುಗಳ ಬೆಲೆಯಲ್ಲಿ ಉಂಟಾಗಿರುವ ಹೆಚ್ಚಳ ಮತ್ತು ಒಟ್ಟಾರೆ ಹಣದುಬ್ಬರದಿಂದಾಗಿ ಇನ್ಪುಟ್‌ ವೆಚ್ಚಗಳಲ್ಲಿ ಏರಿಕೆ ಉಂಟಾಗಿರುವ ಕಾರಣ ವಾಹನಗಳ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾರುತಿ ಸಂಸ್ಥೆಯು ಹೇಳಿಕೊಂಡಿದೆ. ಆದರೆ ಬೆಲೆಯೇರಿಕೆಯ ಪ್ರಮಾಣವನ್ನು ಇನ್ನೂ ಘೋಷಿಸಲಾಗಿಲ್ಲ. ನಿಮ್ಮ ಉಲ್ಲೇಖಕ್ಕಾಗಿ ಮಾರುತಿಯ ವಾಹನಗಳ ಈಗಿನ ಬೆಲೆಯನ್ನು ಈ ಕೆಳಗೆ ನೀಡಲಾಗಿದೆ:

ಅರೇನಾ ಮಾದರಿಗಳು

ಮಾದರಿ

ಬೆಲೆ ಶ್ರೇಣಿ

ಮಾರುತಿ ಆಲ್ಟೊ K10

ರೂ. 3.99 ಲಕ್ಷದಿಂದ ರೂ. 5.96 ಲಕ್ಷ

ಮಾರುತಿ S-ಪ್ರೆಸ್ಸೊ

ರೂ. 4.26 ಲಕ್ಷದಿಂದ ರೂ. 6.12 ಲಕ್ಷ

ಮಾರುತಿ ಈಕೊ

ರೂ. 5.27 ಲಕ್ಷದಿಂದ ರೂ. 6.53 ಲಕ್ಷ

ಮಾರುತಿ ಸೆಲೆರಿಯೊ

ರೂ. 5.37 ಲಕ್ಷದಿಂದ ರೂ. 7.14 ಲಕ್ಷ

ಮಾರುತಿ ವ್ಯಾಗನ್ R

ರೂ. 5.54 ಲಕ್ಷದಿಂದ ರೂ. 7.42 ಲಕ್ಷ

ಮಾರುತಿ ಸ್ವಿಫ್ಟ್‌

ರೂ. 5.99 ಲಕ್ಷದಿಂದ ರೂ. 9.03 ಲಕ್ಷ

ಮಾರುತಿ ಡಿಜಾಯರ್

ರೂ. 6.51 ಲಕ್ಷದಿಂದ ರೂ. 9.39 ಲಕ್ಷ

ಮಾರುತಿ ಎರ್ಟಿಗಾ

ರೂ. 8.64 ಲಕ್ಷದಿಂದ ರೂ. 13.08 ಲಕ್ಷ

ಮಾರುತಿ ಬ್ರೆಜ್ಜಾ

ರೂ. 8.29 ಲಕ್ಷದಿಂದ ರೂ. 14.14 ಲಕ್ಷ

ಇದನ್ನು ಸಹ ನೋಡಿರಿ: ಹ್ಯುಂಡೈ ಗ್ರಾಂಡ್‌ i10 ನಿಯೋಸ್‌ ಗೆ ಹೋಲಿಸಿದರೆ 2024 ಮಾರುತಿ ಸುಜುಕಿ ಸ್ವಿಫ್ಟ್‌ ಕಾರು ಈ 5 ಸೌಲಭ್ಯಗಳನ್ನು ನೀಡಲಿದೆ

ನೆಕ್ಸಾ ಮಾದರಿಗಳು

ಮಾದರಿ

ಬೆಲೆ ಶ್ರೇಣಿ

ಮಾರುತಿ ಇಗ್ನಿಸ್

ರೂ. 5.84 ಲಕ್ಷದಿಂದ ರೂ. 8.16 ಲಕ್ಷ

ಮಾರುತಿ ಬಲೇನೊ

ರೂ. 6.61 ಲಕ್ಷದಿಂದ ರೂ. 9.88 ಲಕ್ಷ

ಮಾರುತಿ ಫ್ರಾಂಕ್ಸ್

ರೂ. 6.61 ಲಕ್ಷದಿಂದ ರೂ. 9.88 ಲಕ್ಷ

ಮಾರುತಿ ಸಿಯಾಜ್

ರೂ. 9.30 ಲಕ್ಷದಿಂದ ರೂ. 12.29 ಲಕ್ಷ

ಮಾರುತಿ XL6

ರೂ. 11.46 ಲಕ್ಷದಿಂದ ರೂ. 14.82 ಲಕ್ಷ

ಮಾರುತಿ ಜಿಮ್ನಿ

ರೂ. 12.74 ಲಕ್ಷದಿಂದ ರೂ. 15.05 ಲಕ್ಷ

ಮಾರುತಿ ಗ್ರಾಂಡ್‌ ವಿಟಾರ

ರೂ. 10.70 ಲಕ್ಷದಿಂದ ರೂ. 19.99 ಲಕ್ಷ

ಮಾರುತಿ ಇನ್ವಿಕ್ಟೊ

ರೂ. 24.82 ಲಕ್ಷದಿಂದ ರೂ. 28.42 ಲಕ್ಷ

ಮಾರುತಿಯು ಪ್ರಸ್ತುತ ಅರೇನಾ ಮತ್ತು ನೆಕ್ಸಾ ವಿಭಾಗಗಳನ್ನು ಸೇರಿದಂತೆ 17 ಮಾದರಿಗಳನ್ನು ಹೊಂದಿದೆ. ಇವುಗಳಲ್ಲಿ ಮಾರುತಿ ಆಲ್ಟೊ K10 ಕಾರು ಅತ್ಯಂತ ಅಗ್ಗದ ಕಾರೆನಿಸಿದ್ದು ರೂ. 3.99 ಲಕ್ಷಕ್ಕೆ ದೊರೆತರೆ, ರೂ. 28.42 ಲಕ್ಷದ ಇನ್ವಿಕ್ಟೊ ಕಾರು ಅತ್ಯಂತ ದುಬಾರಿ ಮಾದರಿ ಎನಿಸಿದೆ.

ಇದನ್ನು ಸಹ ನೋಡಿರಿ: ಕ್ಯಾಲೆಂಡರ್‌ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು

ಮಾರುತಿಯ ಭವಿಷ್ಯದ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ

ಮಾರುತಿ ಸಂಸ್ಥೆಯ ಹೊಸ ಕಾರುಗಳ ಬಿಡುಗಡೆಯ ಕುರಿತು ನಾವು ಇನ್ನಷ್ಟು ಮಾಹಿತಿಯನ್ನು ಪಡೆದಿದ್ದು, 2031ರ ಒಳಗೆ 5 ಹೊಸ ಇಂಟರ್ನಲ್‌ ಕಂಬಷನ್‌ ಎಂಜಿನ್ (ICE)‌ ಚಾಲಿತ ಕಾರುಗಳನ್ನು ಇದು ಹೊರತರಲಿದೆ. ಇದರಲ್ಲಿ ಒಂದು ಹೊಸ MPV, 2 ಹೊಸ ಹ್ಯಾಚ್‌ ಬ್ಯಾಕ್‌ ಗಳು ಮತ್ತು ಒಂದು ಮೈಕ್ರೋ SUV ಸೇರಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಆಲ್ಟೊ K10 ಕಾರಿನ ಆನ್‌ ರೋಡ್‌ ಬೆಲೆ

s
ಅವರಿಂದ ಪ್ರಕಟಿಸಲಾಗಿದೆ

shreyash

  • 29 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Alto K10

Read Full News

explore similar ಕಾರುಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಫ್ರಾಂಕ್ಸ್‌

ಪೆಟ್ರೋಲ್21.79 ಕೆಎಂಪಿಎಲ್
ಸಿಎನ್‌ಜಿ28.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಎಸ್-ಪ್ರೆಸ್ಸೊ

ಪೆಟ್ರೋಲ್24.76 ಕೆಎಂಪಿಎಲ್
ಸಿಎನ್‌ಜಿ32.73 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಸೆಲೆರಿಯೊ

ಪೆಟ್ರೋಲ್25.24 ಕೆಎಂಪಿಎಲ್
ಸಿಎನ್‌ಜಿ34.43 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ವ್ಯಾಗನ್ ಆರ್‌

ಪೆಟ್ರೋಲ್24.35 ಕೆಎಂಪಿಎಲ್
ಸಿಎನ್‌ಜಿ34.05 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಇಕೋ

ಪೆಟ್ರೋಲ್19.71 ಕೆಎಂಪಿಎಲ್
ಸಿಎನ್‌ಜಿ26.78 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಡಿಜೈರ್

ಪೆಟ್ರೋಲ್22.41 ಕೆಎಂಪಿಎಲ್
ಸಿಎನ್‌ಜಿ31.12 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಎರ್ಟಿಗಾ

ಪೆಟ್ರೋಲ್20.51 ಕೆಎಂಪಿಎಲ್
ಸಿಎನ್‌ಜಿ26.11 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಆಲ್ಟೊ ಕೆ10

ಪೆಟ್ರೋಲ್24.39 ಕೆಎಂಪಿಎಲ್
ಸಿಎನ್‌ಜಿ33.85 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ