ಬಿಡುಗಡೆಯಾದ ಎರಡು ವರ್ಷಗಳಲ್ಲಿ 2 ಲಕ್ಷ ಮಾರಾಟದ ಮೈಲಿಗಲ್ಲು ದಾಟಿದ Maruti Grand Vitara
ಗ್ರ್ಯಾಂಡ್ ವಿಟಾರಾ ಬಿಡುಗಡೆಯಾದ ಸುಮಾರು 1 ವರ್ಷದಲ್ಲಿ 1 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಮುಂದಿನ ಲಕ್ಷದಷ್ಟು ಮಾರಾಟವನ್ನು ಕೇವಲ 10 ತಿಂಗಳಲ್ಲಿ ಪೂರೈಸಿದೆ
-
ಮಾರುತಿ ಗ್ರಾಂಡ್ ವಿಟಾರಾವನ್ನು 2022ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು.
-
ಇದು ಬಿಡುಗಡೆಗೊಂಡ ಸುಮಾರು ಎರಡು ವರ್ಷಗಳಲ್ಲಿ ಈ ಮೈಲಿಗಲ್ಲು ಸಾಧಿಸಲಾಯಿತು, ಇದರ ಸ್ಟ್ರಾಂಗ್ ಹೈಬ್ರಿಡ್ ಮತ್ತು ಸಿಎನ್‌ಜಿ ಪವರ್‌ಟ್ರೇನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.
-
ಇದು 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ.
-
ಇದು ಹಲವು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತದೆ, ಮೈಲ್ಡ್-ಹೈಬ್ರಿಡ್‌ನೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್, ಸ್ಟ್ರಾಂಗ್ ಹೈಬ್ರಿಡ್‌ನೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಪಡೆಯುತ್ತದೆ.
-
ದೆಹಲಿಯಲ್ಲಿ ಇದರ ಎಕ್ಸ್‌ಶೋ ಬೆಲೆಗಳು 10.99 ಲಕ್ಷ ರೂ.ನಿಂದ 20.09 ಲಕ್ಷ ರೂ.ವರೆಗೆ ಇದೆ.
ಮಾರುತಿ ಗ್ರ್ಯಾಂಡ್ ವಿಟಾರಾವನ್ನು 2022ರ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಕಾರು ತಯಾರಕರ ಮೊದಲ ಸ್ಟ್ರಾಂಗ್ ಹೈಬ್ರಿಡ್ ಮೊಡೆಲ್ ಆಗಿ ಬಿಡುಗಡೆ ಮಾಡಲಾಯಿತು. ಈಗ ಅದು 2 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ, ಬಿಡುಗಡೆಯಾದ ಕೇವಲ ಎರಡು ವರ್ಷಗಳಲ್ಲಿ ಈ ದಾಖಲೆಯನ್ನು ಬರೆದಿದೆ. ಮಾರುತಿಯು ಸುಮಾರು ಒಂದು ವರ್ಷದಲ್ಲಿ 1 ಲಕ್ಷ ಯುನಿಟ್ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮುಂದಿನ ಲಕ್ಷದಷ್ಟು ಮಾರಾಟವನ್ನು ಕೇವಲ 10 ತಿಂಗಳಲ್ಲಿ ಪೂರೈಸಿದೆ. ಮಾರುತಿಯ ಪ್ರಕಾರ, ಗ್ರ್ಯಾಂಡ್ ವಿಟಾರಾವನ್ನು ಆಯ್ಕೆ ಮಾಡುವ ಖರೀದಿದಾರರಲ್ಲಿ ಸ್ಟ್ರಾಂಗ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳು ಅತ್ಯಂತ ಜನಪ್ರಿಯ ಆಯ್ಕೆಗಳಾಗಿವೆ.
ಮಾರುತಿಯ ಈ ಎಸ್‌ಯುವಿಯ ಒಂದು ಅವಲೋಕನ
ಮಾರುತಿಯು ಟೊಯೋಟಾ ಜೊತೆಗಿನ ಪಾಲುದಾರಿಕೆಯ ಭಾಗವಾಗಿ ಗ್ರಾಂಡ್ ವಿಟಾರಾವನ್ನು ಪರಿಚಯಿಸಿತು ಮತ್ತು ಇದು ಕಾರ್ ತಯಾರಕರ ನೆಕ್ಸಾ ಕಾರುಗಳ ಪಟ್ಟಿಯಲ್ಲಿದ್ದ ಹಳೆಯ ಎಸ್-ಕ್ರಾಸ್‌ನ ಜಾಗವನ್ನು ತುಂಬಿದೆ. ಭಾರತದ ಹೆಮ್ಮೆಯ ಮಾರುತಿಯು ಗ್ರ್ಯಾಂಡ್ ವಿಟಾರಾವನ್ನು ಸಿಗ್ಮಾ, ಡೆಲ್ಟಾ, ಝೀಟಾ, ಝೀಟಾ ಪ್ಲಸ್, ಆಲ್ಫಾ ಮತ್ತು ಆಲ್ಫಾ ಪ್ಲಸ್ ಎಂಬ ಆರು ವಿಶಾಲವಾದ ಆವೃತ್ತಿಗಳಲ್ಲಿ ಮಾರಾಟ ಮಾಡುತ್ತದೆ.
ಫೀಚರ್ ಮತ್ತು ಸುರಕ್ಷತೆ
ಮಾರುತಿಯ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಹಿಂಬದಿಯ ದ್ವಾರಗಳೊಂದಿಗೆ ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ವೈಶಿಷ್ಟ್ಯಗಳೊಂದಿಗೆ ನೀಡಲಾಗುತ್ತದೆ.
ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಆಂಕಾರೇಜ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ.
ಪವರ್‌ಟ್ರೈನ್‌ಗಳು
ಗ್ರ್ಯಾಂಡ್ ವಿಟಾರಾವನ್ನು ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ, ಇದರಲ್ಲಿ 1.5-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಯುನಿಟ್ 103 ಪಿಎಸ್ ಮತ್ತು 136.8 ಎನ್‌ಎಮ್ ನಷ್ಟು ಉತ್ಪಾದಿಸುತ್ತಿದ್ದು, ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಟಾಪ್-ಮೊಡೆಲ್ ಮ್ಯಾನ್ಯುವಲ್ ಆವೃತ್ತಿಯಲ್ಲಿ, ಇದು ಆಲ್-ವೀಲ್ ಡ್ರೈವ್ (AWD) ಆಯ್ಕೆಯನ್ನು ಸಹ ಪಡೆಯುತ್ತದೆ. ಮತ್ತೊಂದು ಆಯ್ಕೆಯೆಂದರೆ 1.5-ಲೀಟರ್ ಪೆಟ್ರೋಲ್ ಸ್ಟ್ರಾಂಗ್-ಹೈಬ್ರಿಡ್ ಯುನಿಟ್ 115.56 ಪಿಎಸ್ (ಸಂಯೋಜಿತ) ಮತ್ತು 122 ಎನ್‌ಎಮ್ ಉತ್ಪಾದಿಸುತ್ತದೆ ಮತ್ತು ಕೇವಲ ಇ-ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.
ಗ್ರ್ಯಾಂಡ್ ವಿಟಾರಾವು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯೊಂದಿಗೆ ಬರುತ್ತದೆ, ಇದು 87.83 ಪಿಎಸ್ ಮತ್ತು 121.5 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಸಂಯೋಜಿಸಲಾಗಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ದೆಹಲಿಯಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾದ ಎಕ್ಸ್‌ಶೋರೂಮ್ ಬೆಲೆಗಳು 10.99 ಲಕ್ಷ ರೂ.ನಿಂದ 20.09 ಲಕ್ಷ ರೂ.ವರೆಗೆ ಇದೆ. ಇದು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಎಮ್‌ಜಿ ಆಸ್ಟರ್ ಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.
ಇತ್ತೀಚಿನ ಎಲ್ಲಾ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಹೆಚ್ಚು ಓದಿ : ಮಾರುತಿ ಗ್ರಾಂಡ್ ವಿಟಾರಾ ಆನ್ ರೋಡ್ ಬೆಲೆ