2024ರ ಜನವರಿಯಲ್ಲಿ Hyundai Creta ಮತ್ತು Kia Seltos ಅನ್ನು ಹಿಂದಿಕ್ಕಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆದ Maruti Grand Vitara
ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹ್ಯುಂಡೈ ಕ್ರೆಟಾ, ಈ ಎರಡು SUVವಿಗಳು ಮಾತ್ರ 10,000 ಯುನಿಟ್‌ಗಳ ಮಾರಾಟದ ಸಂಖ್ಯೆಯನ್ನು ದಾಟಿವೆ.
ಜನವರಿಯಲ್ಲಿ, ಭಾರತದಲ್ಲಿ 46,000 ಕ್ಕೂ ಹೆಚ್ಚು ಕಾಂಪ್ಯಾಕ್ಟ್ SUV ಗಳನ್ನು ಮಾರಾಟ ಮಾಡಲಾಯಿತು, ಈ ಸೆಗ್ಮೆಂಟ್ ತಿಂಗಳಿನಿಂದ ತಿಂಗಳಿಗೆ (MoM) 12 ಪ್ರತಿಶತದಷ್ಟು ಬೆಳವಣಿಗೆಯನ್ನು ನೋಡುತ್ತಿದೆ. ಮಾರುತಿ ಗ್ರ್ಯಾಂಡ್ ವಿಟಾರಾ ತನ್ನ ಸೆಗ್ಮೆಂಟ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿದೆ, ಹ್ಯುಂಡೈ ಕ್ರೆಟಾ ಇಲ್ಲಿ ಎರಡನೇ ಸ್ಥಾನದಲ್ಲಿದೆ. ಈಗ, ಕಳೆದ ತಿಂಗಳ ಪ್ರತಿ ಕಾಂಪ್ಯಾಕ್ಟ್ SUV ಯ ಮಾರಾಟದ ಪರ್ಫಾರ್ಮೆನ್ಸ್ ಅನ್ನು ನೋಡೋಣ.
ಕಾಂಪ್ಯಾಕ್ಟ್ SUV ಗಳು ಮತ್ತು ಕ್ರಾಸ್ಒವರ್ ಗಳು |
|||||||
ಜನವರಿ 2024 |
ಡಿಸೆಂಬರ್ 2023 |
MoM ಬೆಳವಣಿಗೆ |
ಮಾರುಕಟ್ಟೆ ಪಾಲು ಪ್ರಸ್ತುತ (%) |
ಮಾರುಕಟ್ಟೆ ಪಾಲು (% ಕಳೆದ ವರ್ಷ) |
YoY ಮಾರುಕಟ್ಟೆ ಪಾಲು (%) |
ಸರಾಸರಿ ಮಾರಾಟ (6 ತಿಂಗಳು) |
|
ಮಾರುತಿ ಗ್ರ್ಯಾಂಡ್ ವಿಟಾರಾ |
13438 |
6988 |
92.3 |
28.76 |
23.94 |
4.82 |
9732 |
ಹ್ಯುಂಡೈ ಕ್ರೆಟಾ |
13212 |
9243 |
42.94 |
28.27 |
41.55 |
-13.28 |
12458 |
ಕಿಯಾ ಸೆಲ್ಟೋಸ್ |
6391 |
9957 |
-35.81 |
13.67 |
28.93 |
-15.26 |
10833 |
ಟೊಯೋಟಾ ಹೈರೈಡರ್ |
5543 |
4976 |
11.39 |
11.86 |
11.59 |
0.27 |
3880 |
ಹೋಂಡಾ ಎಲಿವೇಟ್ |
4586 |
4376 |
4.79 |
9.81 |
0 |
9.81 |
3766 |
ಫೋಕ್ಸ್‌ವ್ಯಾಗನ್ ಟೈಗನ್ |
1275 |
2456 |
-48.08 |
2.72 |
4.02 |
-1.3 |
1981 |
ಸ್ಕೋಡಾ ಕುಶಾಕ್ |
1082 |
2485 |
-56.45 |
2.31 |
5.56 |
-3.25 |
2317 |
MG ಆಸ್ಟರ್ |
966 |
821 |
17.66 |
2.06 |
2.64 |
-0.58 |
868 |
ಸಿಟ್ರೊನ್ C3 ಏರ್ ಕ್ರಾಸ್ |
231 |
339 |
-31.85 |
0.49 |
0 |
0.49 |
98 |
ಒಟ್ಟು |
46724 |
41641 |
12.2 |
99.95 |
ಪ್ರಮುಖ ಟೇಕ್ಅವೇಗಳು
-
ಮಾರುತಿ ಗ್ರ್ಯಾಂಡ್ ವಿಟಾರಾ ಜನವರಿ 2024 ರಲ್ಲಿ 13,400 ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗುವ ಮೂಲಕ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿ ಹೊರಹೊಮ್ಮಿತು. ಗ್ರಾಂಡ್ ವಿಟಾರಾ 92 ಪ್ರತಿಶತದಷ್ಟು ಹೆಚ್ಚಿನ MoM ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಸೆಗ್ಮೆಂಟ್ ನಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ.
-
ಗ್ರ್ಯಾಂಡ್ ವಿಟಾರಾ ನಂತರ, 10,000 ಯುನಿಟ್‌ಗಳ ಮಾರಾಟದ ಸಂಖ್ಯೆಯನ್ನು ದಾಟಿದ ಏಕೈಕ SUV ಹ್ಯುಂಡೈ ಕ್ರೆಟಾ ಆಗಿದೆ. ಜನವರಿಯಲ್ಲಿ ಒಟ್ಟು 13,212 ಯುನಿಟ್‌ಗಳು ಮಾರಾಟವಾಗಿವೆ. ಮಾಸಿಕ ಮಾರಾಟದಲ್ಲಿ ಸುಮಾರು 43 ಪ್ರತಿಶತದಷ್ಟು ಪಾಸಿಟಿವ್ ಬೆಳವಣಿಗೆಯನ್ನು ದಾಖಲಿಸಿದ ಹೊರತಾಗಿಯೂ, ಕ್ರೆಟಾ ತನ್ನ ವರ್ಷದಿಂದ ವರ್ಷದ ಮಾರುಕಟ್ಟೆ ಪಾಲಿನಲ್ಲಿ 13 ಪ್ರತಿಶತಕ್ಕಿಂತ ಜಾಸ್ತಿ ಕುಸಿತ ಕಂಡಿದೆ.
-
ಕಿಯಾ ಸೆಲ್ಟೋಸ್‌ನ ಮಾರಾಟವು ಕಡಿಮೆಯಾಗಿದೆ. ಜನವರಿ 2024 ರಲ್ಲಿ ಕೇವಲ 6,400 ಯೂನಿಟ್ ಗಳು ಮಾರಾಟವಾದವು, ಇದು ಡಿಸೆಂಬರ್ 2023 ಕ್ಕೆ ಹೋಲಿಸಿದರೆ 3,500 ಯುನಿಟ್‌ಗಳಿಗಿಂತ ಕಡಿಮೆಯಾಗಿದೆ. ವಾಸ್ತವವಾಗಿ, ಅದರ ಜನವರಿ 2024 ಮಾರಾಟವು ಕಳೆದ ಆರು ತಿಂಗಳ ಸರಾಸರಿ ಮಾರಾಟಕ್ಕಿಂತ ಸರಿಸುಮಾರು 4,500 ಯುನಿಟ್‌ಗಳು ಕಡಿಮೆಯಾಗಿದೆ.
-
ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟೇಬಲ್‌ಮೇಟ್ ಆಗಿರುವ, ಟೊಯೊಟಾ ಹೈರೈಡರ್ 5,543 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರಾಟ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಟೊಯೋಟಾ SUV 11 ಪ್ರತಿಶತಕ್ಕಿಂತ ಹೆಚ್ಚು ಪಾಸಿಟಿವ್ MoM ಬೆಳವಣಿಗೆಯನ್ನು ದಾಖಲಿಸಿದೆ.
ಇದನ್ನು ಕೂಡ ಓದಿ: ಮಾರುತಿ ಎರ್ಟಿಗಾ ವರ್ಸಸ್ ಟೊಯೋಟಾ ರೂಮಿಯನ್ ವರ್ಸಸ್ ಮಾರುತಿ XL6: ಫೆಬ್ರವರಿ 2024 ರಲ್ಲಿ ಕಾಯುವ ಅವಧಿಯ ಹೋಲಿಕೆ ವಿವರಗಳು
-
4,500 ಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟದೊಂದಿಗೆ, ಹೋಂಡಾ ಎಲಿವೇಟ್ ಜನವರಿ 2024 ರ ಮಾರಾಟದಲ್ಲಿ ಶೇಕಡಾ 4.5 ಕ್ಕಿಂತ ಹೆಚ್ಚು MoM ಬೆಳವಣಿಗೆಯನ್ನು ದಾಖಲಿಸಿದೆ. ಎಲಿವೇಟ್ ಅನ್ನು ಸೆಪ್ಟೆಂಬರ್ 2023 ರಲ್ಲಿ ಹೋಂಡಾದಿಂದ ಹೊಸ ಕೊಡುಗೆಯಾಗಿ ಪ್ರಾರಂಭಿಸಲಾಯಿತು ಮತ್ತು ಅದರ ಪ್ರಸ್ತುತ ಮಾರುಕಟ್ಟೆ ಪಾಲು ಶೇಕಡಾ 9.8 ರಷ್ಟಿದೆ.
-
ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್ ಎರಡೂ, ಜನವರಿ 2024 ರ ಮಾರಾಟದಲ್ಲಿ ಕ್ರಮವಾಗಿ ಸುಮಾರು 48 ಪ್ರತಿಶತ ಮತ್ತು ಸುಮಾರು 56 ಪ್ರತಿಶತದಷ್ಟು MoM ನಷ್ಟವನ್ನು ಅನುಭವಿಸಿವೆ. ಕಳೆದ ತಿಂಗಳು ಟೈಗುನ್ ಮತ್ತು ಕುಶಾಕ್‌ನ ಒಟ್ಟು 2,300 ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ.
-
ಮಾಸಿಕ ಮಾರಾಟದಲ್ಲಿ ಸುಮಾರು 18 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡರೂ ಕೂಡ, MG ಆಸ್ಟರ್ 1,000 ಯುನಿಟ್‌ಗಳ ಮಾರಾಟದ ಸಂಖ್ಯೆಯನ್ನು ತಲುಪಲಿಲ್ಲ.
-
ಸಿಟ್ರೊನ್ C3 ಏರ್‌ಕ್ರಾಸ್ ಜನವರಿ 2024 ರಲ್ಲಿ ಈ ಸೆಗ್ಮೆಂಟ್ ನ ಅತ್ಯಂತ ಕಡಿಮೆ ಅಂದರೆ 231 ಯೂನಿಟ್ ಗಳು ಮಾರಾಟವಾದ ಮಾಡೆಲ್ ಆಗಿದೆ.
ಇನ್ನಷ್ಟು ಓದಿ: ಮಾರುತಿ ಗ್ರಾಂಡ್ ವಿಟಾರಾ ಆನ್ ರೋಡ್ ಬೆಲೆ