Login or Register ಅತ್ಯುತ್ತಮ CarDekho experience ಗೆ
Login

MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..!

published on ಜೂನ್ 18, 2024 05:21 pm by dipan for ಎಂಜಿ ಕಾಮೆಟ್ ಇವಿ

ಈ ಎರಡೂ ಇವಿಗಳ ಬೇಸ್‌ ಆವೃತ್ತಿಗಳ ಬೆಲೆಗಳು ಬದಲಾಗದೆ ಉಳಿಯುತ್ತವೆ

  • ಎಮ್‌ಜಿ ಜೆಡ್‌ಎಸ್‌ ಇವಿಯ ಬೆಲೆಗಳಲ್ಲಿ 25,000 ರೂ.ವರೆಗೆ ಏರಿಕೆಯಾಗಿದೆ.

  • ಇದರ ಬೆಲೆ ಈಗ 18.98 ಲಕ್ಷ ರೂ.ನಿಂದ 25.44 ಲಕ್ಷ ರೂಪಾಯಿಗಳಷ್ಟಿದೆ.

  • ಮತ್ತೊಂದೆಡೆ, ಎಮ್‌ಜಿ ಕಾಮೆಟ್ ಇವಿಯು 13,000 ರೂ.ವರೆಗೆ ಬೆಲೆ ಏರಿಕೆಗೆ ಸಾಕ್ಷಿಯಾಗಿದೆ.

  • ಇದರ ಬೆಲೆ ಈಗ 6.99 ಲಕ್ಷದಿಂದ 9.53 ಲಕ್ಷ ರೂಪಾಯಿಗಳಷ್ಟಿದೆ.

ಕಾರು ತಯಾರಕರು ಪ್ರಾರಂಭಿಸಿದ ಇತ್ತೀಚಿನ ಸುತ್ತಿನ ಬೆಲೆ ಏರಿಕೆಯಿಂದಾಗಿ ಎಮ್‌ಜಿ ಕಾಮೆಟ್ ಇವಿ ಮತ್ತು ಎಮ್‌ಜಿ ಜೆಡ್‌ಎಸ್‌ ಇವಿ ಈಗ ಹೆಚ್ಚು ದುಬಾರಿಯಾಗಿದೆ. ಆದಾಗಿಯೂ, ಬೆಲೆ ಹೆಚ್ಚಳವು ಎರಡೂ ಮೊಡೆಲ್‌ನ ಲೋವರ್‌-ಸ್ಪೆಕ್ ಆವೃತ್ತಿಗಳ ಮೇಲೆ ಪರಿಣಾಮ ಬೀರಿಲ್ಲ. ಹೆಚ್ಚಳದ ನಂತರ ಈ ಪ್ರತಿಯೊಂದು ಮೊಡೆಲ್‌ನ ಬೆಲೆ ವ್ಯತ್ಯಾಸಗಳನ್ನು ನಾವು ಹೆಚ್ಚು ವಿವರವಾಗಿ ಪರಿಶೀಲಿಸೋಣ:

ಎಮ್‌ಜಿ ಕಾಮೆಟ್‌

ಆವೃತ್ತಿಗಳು

ಹಳೆಯ ಬೆಲೆ

ಹೊಸ ಬೆಲೆಗಳು

ಬೆಲೆಯಲ್ಲಿನ ವ್ಯತ್ಯಾಸ

ಎಕ್ಷ್‌ಕ್ಯೂಟಿವ್‌

6.99 ಲಕ್ಷ ರೂ.

6.99 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಎಕ್ಸೈಟ್‌

7.98 ಲಕ್ಷ ರೂ.

7.98 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಎಕ್ಸೈಟ್‌ ಎಫ್‌ಸಿ

8.34 ಲಕ್ಷ ರೂ.

8.45 ಲಕ್ಷ ರೂ.

  • 11,000 ರೂ.

ಎಕ್ಸ್‌ಕ್ಲೂಸಿವ್‌

8.88 ಲಕ್ಷ ರೂ.

9 ಲಕ್ಷ ರೂ.

  • 12,000 ರೂ.

ಎಕ್ಸ್‌ಕ್ಲೂಸಿವ್‌ ಎಫ್‌ಸಿ

9.24 ಲಕ್ಷ ರೂ.

9.37 ಲಕ್ಷ ರೂ.

+ 13,000 ರೂ.

100ನೇ ವರ್ಷದ ಲಿಮಿಟೆಡ್‌ ಎಡಿಷನ್‌

9.40 ಲಕ್ಷ ರೂ.

9.53 ಲಕ್ಷ ರೂ.

+ 13,000 ರೂ.

(ಭಾರತದಾದ್ಯಂತದ ಎಕ್ಸ್ ಶೋ ರೂಂ ಬೆಲೆಗಳು)

  • ಎಮ್‌ಜಿ ಕಾಮೆಟ್‌ನ ಬೇಸ್ ಅವೃತ್ತಿಯಾದ ಎಕ್ಸಿಕ್ಯೂಟಿವ್ ಮತ್ತು ಎಕ್ಸೈಟ್ ಟ್ರಿಮ್‌ಗಳ ಬೆಲೆಗಳು ಬದಲಾಗದೆ ಉಳಿದಿವೆ.

  • ಆದಾಗಿಯೂ, ಟಾಪ್‌ ಆವೃತ್ತಿಗಳಾದ ಎಕ್ಸೈಟ್ ಎಫ್‌ಸಿ, ಎಕ್ಸ್‌ಕ್ಲೂಸಿವ್, ಎಕ್ಸ್‌ಕ್ಲೂಸಿವ್ ಎಫ್‌ಸಿ ಮತ್ತು 100ನೇ ವರ್ಷದ ಲಿಮಿಟೆಡ್ ಎಡಿಷನ್ ಟ್ರಿಮ್‌ಗಳ ಬೆಲೆಯಲ್ಲಿಯೂ ಈಗ 11,000 ರಿಂದ 13,000 ರೂ.ವರೆಗೆ ಏರಿಕೆ ಕಂಡಿದೆ.

  • ಗಮನಾರ್ಹವಾಗಿ, ಬೆಲೆ ಏರಿಕೆಯೊಂದಿಗೆ ಯಾವುದೇ ಫೀಚರ್‌ ಆಪ್‌ಡೇಟ್‌ಗಳನ್ನು ನೀಡುತ್ತಿಲ್ಲ.

ಎಮ್‌ಜಿ ಕಾಮೆಟ್ ಇವಿಯು ನಾಲ್ಕು ಆಸನಗಳ ಹ್ಯಾಚ್‌ಬ್ಯಾಕ್ ಆಗಿದ್ದು 17.3 kWh ಬ್ಯಾಟರಿ ಪ್ಯಾಕ್ ಮತ್ತು 230 ಕಿ.ಮೀ.ವರೆಗೆ ARAI ಕ್ಲೈಮ್ಡ್‌ ರೇಂಜ್‌ ಅನ್ನು ಹೊಂದಿದೆ. ಇದು 42 ಪಿಎಸ್‌ ಮತ್ತು 110 ಎನ್‌ಎಮ್‌ ಉತ್ಪಾದಿಸುವುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಹಿಂದಿನ-ಚಕ್ರ ಡ್ರೈವ್ ಆಗಿದೆ. ಎಮ್‌ಜಿ ಕಾಮೆಟ್ ಇವಿಯು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ ಇಸಿ3 ಗೆ ಕೈಗೆಟುಕುವ ಪರ್ಯಾಯವಾಗಿದೆ.

ಇದನ್ನೂ ಓದಿ: MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ

ಎಮ್‌ಜಿ ಜೆಡ್‌ಎಸ್‌ ಇವಿ

ಆವೃತ್ತಿಗಳು

ಹಳೆಯ ಬೆಲೆ

ಹೊಸ ಬೆಲೆಗಳು

ಬೆಲೆಯಲ್ಲಿನ ವ್ಯತ್ಯಾಸ

ಎಕ್ಷ್‌ಕ್ಯೂಟಿವ್‌

18.98 ಲಕ್ಷ ರೂ.

18.98 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಎಕ್ಸೈಟ್‌ ಪ್ರೋ

19.98 ಲಕ್ಷ ರೂ.

19.98 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಎಕ್ಸ್‌ಕ್ಲೂಸಿವ್‌ ಪ್ಲಸ್‌

23.98 ಲಕ್ಷ ರೂ.

24.23 ಲಕ್ಷ ರೂ.

25,000 ರೂ.

100ನೇ ವರ್ಷದ ಲಿಮಿಟೆಡ್‌ ಎಡಿಷನ್‌

24.18 ಲಕ್ಷ ರೂ.

24.43 ಲಕ್ಷ ರೂ.

25,000 ರೂ.

ಎಕ್ಸ್‌ಕ್ಲೂಸಿವ್‌ ಪ್ಲಸ್‌ ಡ್ಯುಯಲ್‌ ಟೋನ್‌

24.20 ಲಕ್ಷ ರೂ.

24.44 ಲಕ್ಷ ರೂ.

24,000 ರೂ.

ಎಸೆನ್ಸ್‌

24.98 ಲಕ್ಷ ರೂ.

25.23 ಲಕ್ಷ ರೂ.

25,000 ರೂ.

ಎಸೆನ್ಸ್‌ ಡ್ಯುಯಲ್‌ ಟೋನ್‌

25.20 ಲಕ್ಷ ರೂ.

25.44 ಲಕ್ಷ ರೂ.

24,000 ರೂ.

(ಭಾರತದಾದ್ಯಂತದ ಎಕ್ಸ್ ಶೋ ರೂಂ ಬೆಲೆಗಳು)

  • ಎಮ್‌ಜಿ ಜೆಡ್‌ಎಸ್‌ ಇವಿಯ ಬೇಸ್ ಎಕ್ಸಿಕ್ಯೂಟಿವ್ ಮತ್ತು ಎಕ್ಸೈಟ್ ಪ್ರೊ ಟ್ರಿಮ್‌ಗಳು ಮೊದಲಿನಂತೆಯೇ ಬೆಲೆಯನ್ನು ಹೊಂದಿವೆ, ಆದ್ದರಿಂದ ಗ್ರಾಹಕರು ಬೇಸ್ ಟ್ರಿಮ್‌ಗಳನ್ನು ಪಡೆಯಲು ಹೆಚ್ಚು ಪಾವತಿಸಬೇಕಾಗಿಲ್ಲ.

  • ಆದಾಗ್ಯೂ, ಟಾಪ್‌-ಎಂಡ್‌ ಎಕ್ಸ್‌ಕ್ಲೂಸಿವ್ ಪ್ಲಸ್ ಮತ್ತು ಎಸೆನ್ಸ್ ಟ್ರಿಮ್‌ಗಳು, ಹಾಗೆಯೇ 100ನೇ ವರ್ಷದ ಲಿಮಿಟೆಡ್‌ ಎಡಿಷನ್‌ಗಳಲ್ಲಿಯೂ ಈಗ ರೂ 25,000 ವರೆಗೆ ಬೆಲೆ ಏರಿಕೆಯಾಗಿದೆ.

  • ಈಮೊಡೆಲ್‌ಗಳ ಡ್ಯುಯಲ್ ಟೋನ್ ಆವೃತ್ತಿಗಳು ಈಗ ಮೊದಲಿಗಿಂತ 24,000 ರೂ.ಗಳಷ್ಟು ದುಬಾರಿಯಾಗಿದೆ

  • ಯಾವುದೇ ವೈಶಿಷ್ಟ್ಯಗಳು ಅಥವಾ ವಿನ್ಯಾಸದಲ್ಲಿ ಆಪ್‌ಡೇಟ್‌ಗಳಿಲ್ಲ.

ಎಮ್‌ಜಿ ಜೆಡ್‌ಎಸ್‌ಇವಿಯು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಮೊದಲ ಕೆಲವು ಲಾಂಗ್‌-ರೇಂಜ್‌ನ ಇವಿಗಳಲ್ಲಿ ಒಂದಾಗಿದೆ. ಇದು 50.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಮತ್ತು 177 ಪಿಎಸ್‌ ಮತ್ತು 280 ಎನ್‌ಎಮ್‌ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು 461 ಕಿಮೀ.ವರೆಗೆ ಐಸಿಎಟಿ ಕ್ಲೈಮ್‌ ಮಾಡಿದ ರೇಂಜ್‌ ಅನ್ನು ಹೊಂದಿದೆ. ಎಮ್‌ಜಿ ಜೆಡ್‌ಎಸ್‌ ಇವಿಯು ಹ್ಯುಂಡೈ ಕೋನಾ ಎಲೆಕ್ಟ್ರಿಕ್, ಬಿವೈಡಿ ಅಟ್ಟೊ 3 ಮತ್ತು ಮುಂಬರುವ ಮಾರುತಿ ಇವಿಎಕ್ಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗೆ ಇದು ದುಬಾರಿ ಪರ್ಯಾಯವೆಂದು ಪರಿಗಣಿಸಬಹುದು, ಅವುಗಳು ಇದಕ್ಕಿಂತ ಕೆಳಗಿನ ಸೆಗ್ಮೆಂಟ್‌ನಲ್ಲಿವೆ.

ಇದನ್ನೂ ಓದಿ: WWDC 2024 ರಲ್ಲಿ ಮುಂದಿನ ಜನರೇಶನ್‌ನ ಆಪಲ್ ಕಾರ್‌ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್‌ಪ್ಲೇ

ಇಲ್ಲಿ ಇನ್ನಷ್ಟು ಓದಿ : ಕಾಮೆಟ್‌ ಇವಿ ಆಟೋಮ್ಯಾಟಿಕ್‌

d
ಅವರಿಂದ ಪ್ರಕಟಿಸಲಾಗಿದೆ

dipan

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಎಂಜಿ Comet EV

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.60.97 - 65.97 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.53 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ