• English
  • Login / Register

ಮೊದಲ ಬಾರಿಗೆ MG Comet EV ಬ್ಲಾಕ್‌ಸ್ಟಾರ್ಮ್ ಎಡಿಷನ್‌ನ ಟೀಸರ್‌ ಔಟ್‌, ಕಪ್ಪು ಬಣ್ಣ ಮತ್ತು ಕೆಂಪು ಆಕ್ಸೆಂಟ್‌ನೊಂದಿಗೆ ಎಕ್ಸ್‌ಟೀರಿಯರ್‌ ವಿನ್ಯಾಸದ ಪ್ರದರ್ಶನ

ಎಂಜಿ ಕಾಮೆಟ್ ಇವಿ ಗಾಗಿ dipan ಮೂಲಕ ಫೆಬ್ರವಾರಿ 26, 2025 04:49 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಂಪೂರ್ಣ ಕಪ್ಪು ಬಣ್ಣದ ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ಥೀಮ್ ಸೇರಿದಂತೆ ಬದಲಾವಣೆಗಳನ್ನು ಹೊರತುಪಡಿಸಿ, ಮೆಕ್ಯಾನಿಕಲ್‌ಗಳು ಮತ್ತು ಫೀಚರ್‌ಗಳ ಸೂಟ್ ರೆಗ್ಯುಲರ್‌ ಮೊಡೆಲ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ

MG Comet EV Blackstorm Edition Teased For The First Time, Exterior Design Showcased With Black Colour And Red Accents

  • ಕೆಂಪು ಬಣ್ಣದ ಆಕ್ಸೆಂಟ್‌ನೊಂದಿಗೆ ಸಂಪೂರ್ಣ ಕಪ್ಪು ಬಣ್ಣದ ಎಕ್ಸ್‌ಟೀರಿಯರ್‌ ಥೀಮ್ ಅನ್ನು ಟೀಸರ್  ಪ್ರದರ್ಶಿಸುತ್ತದೆ.

  • ಅಲಾಯ್ ವೀಲ್‌ಗಳು, ಮುಂಭಾಗದ ಬಂಪರ್ ಮತ್ತು ಹುಡ್ ಮೇಲಿನ 'ಮೋರಿಸ್ ಗ್ಯಾರೇಜಸ್' ಅಕ್ಷರಗಳ ಮೇಲೆ ಕೆಂಪು ಬಣ್ಣದ ಆಕ್ಸೆಂಟ್‌ಗಳಿವೆ.

  • ಇಂಟೀರಿಯರ್‌ ವಿನ್ಯಾಸ ಇನ್ನೂ ಬಹಿರಂಗಗೊಂಡಿಲ್ಲ, ಆದರೆ ಇದು ಕಾರು ತಯಾರಕರ ಇತರ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್‌ಗಳಂತೆಯೇ ಸಂಪೂರ್ಣ ಕಪ್ಪು ಥೀಮ್ ಅನ್ನು ಒಳಗೊಂಡಿರಬಹುದು.

  • 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು ಮತ್ತು ಮ್ಯಾನ್ಯುವಲ್‌ AC ಸೇರಿದಂತೆ ಫೀಚರ್‌ಗಳ ಸೂಟ್ ರೆಗ್ಯುಲರ್‌ ಮೊಡೆಲ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

  • ಇದು ರೆಗ್ಯುಲರ್‌ ಕಾಮೆಟ್ ಇವಿಯಲ್ಲಿ ನೀಡಲಾಗುವಂತೆಯೇ, ಹಿಂಭಾಗದ ಆಕ್ಸಲ್ ಮೌಂಟೆಡ್ ಮೋಟಾರ್ (42 ಪಿಎಸ್‌/110 ಎನ್‌ಎಮ್‌) ನೊಂದಿಗೆ ಜೋಡಿಸಲಾದ ಅದೇ 17.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ.

  • ಇದು ರೆಗ್ಯುಲರ್‌ ಮೊಡೆಲ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದುವ ನಿರೀಕ್ಷೆಯಿದೆ.

ಇಲ್ಲಿಯವರೆಗೆ ಎಮ್‌ಜಿ ಹೆಕ್ಟರ್, ಎಮ್‌ಜಿ ಗ್ಲೋಸ್ಟರ್ ಮತ್ತು ಎಮ್‌ಜಿ ಆಸ್ಟರ್‌ಗಳು ಬ್ಲಾಕ್‌ಸ್ಟಾರ್ಮ್ ಎಡಿಷನ್‌ಅನ್ನು ಪಡೆದುಕೊಂಡಿದ್ದು, ಇದು ಈ ಎಸ್‌ಯುವಿಗಳಲ್ಲಿ ಕೆಂಪು ಬಣ್ಣದ ಆಕ್ಸೆಂಟ್‌ಗಳೊಂದಿಗೆ ಸಂಪೂರ್ಣ ಕಪ್ಪು ಬಣ್ಣದ ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ವಿನ್ಯಾಸವನ್ನು ಪರಿಚಯಿಸಿತು. ಹಾಗೆಯೇ, ಎಮ್‌ಜಿ ಕಾಮೆಟ್ ಇವಿ ಕೂಡ ಇದೇ ರೀತಿಯ ಸ್ಪೇಷಲ್‌ ಎಡಿಷನ್‌ಅನ್ನು ಪಡೆಯಲಿದೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು ಮತ್ತು ಆ ನಿಟ್ಟಿನಲ್ಲಿ, ಎಮ್‌ಜಿ ಕಾಮೆಟ್ ಬ್ಲಾಕ್‌ಸ್ಟಾರ್ಮ್‌ನ ಟೀಸರ್‌ ಅನ್ನು ಮೊದಲ ಬಾರಿಗೆ ಕಾರು ತಯಾರಕರು ಬಿಡುಗಡೆ ಮಾಡಿದ್ದಾರೆ.

A post shared by Morris Garages India (@mgmotorin)

ಎಂಜಿ ಇಂಡಿಯಾ ಹಂಚಿಕೊಂಡಿರುವ ಟೀಸರ್‌ನಲ್ಲಿ ನಾವು ಗುರುತಿಸಬಹುದಾದ ಎಲ್ಲಾ ಅಂಶಗಳನ್ನು ವಿವರವಾಗಿ ತಿಳಿಯೋಣ:

ಏನನ್ನು ಗಮನಿಸಿದ್ದೇವೆ ?

MG Comet Blackstorm Edition

ಟೀಸರ್ ಆಧರಿಸಿ, MG ಕಾಮೆಟ್ ಕಾರಿನ ಹುಡ್ ಮತ್ತು ಬಂಪರ್‌ನ ಕೆಳಗಿನ ಭಾಗದಲ್ಲಿ ಮೋರಿಸ್ ಗ್ಯಾರೇಜ್ ಬ್ಯಾಡ್ಜ್‌ನಲ್ಲಿ ಕೆಂಪು ಬಣ್ಣದ ಆಕ್ಸೆಂಟ್‌ಗಳೊಂದಿಗೆ ಸಂಪೂರ್ಣ ಕಪ್ಪು ಬಣ್ಣದ ಎಕ್ಸ್‌ಟೀರಿಯರ್‌ ಥೀಮ್ ಅನ್ನು ಹೊಂದಿದೆ. ಸ್ಟೀಲ್‌ ವೀಲ್‌ಗಳು ಸಂಪೂರ್ಣ ಕಪ್ಪು ಬಣ್ಣದ ಕವರ್‌ಗಳೊಂದಿಗೆ ಕೆಂಪು ನಕ್ಷತ್ರದಂತಹ ಪ್ಯಾಟರ್ನ್‌ನೊಂದಿಗೆ ಕಾಣಬಹುದಾಗಿದೆ.

ಟೀಸರ್ ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಪ್ರಕಾಶಿತ MG ಲೋಗೋವನ್ನು ಸಹ ಪ್ರದರ್ಶಿಸುತ್ತದೆ, ಇವೆರಡೂ ರೆಗ್ಯುಲರ್‌ ಮೊಡೆಲ್‌ಗೆ ಹೋಲುತ್ತವೆ.

ಹಿಂಭಾಗದ ವಿನ್ಯಾಸ ಇನ್ನೂ ಬಹಿರಂಗಗೊಳ್ಳದಿದ್ದರೂ, ಎಮ್‌ಜಿ ಕಾಮೆಟ್ ಬ್ಲಾಕ್‌ಸ್ಟಾರ್ಮ್ ಕಾಮೆಟ್ ಬ್ಯಾಡ್ಜಿಂಗ್ ಸೇರಿದಂತೆ ಕೆಲವು ಕೆಂಪು ಅಂಶಗಳನ್ನು ಮತ್ತು ಹಿಂಭಾಗದ ಬಂಪರ್‌ನಲ್ಲಿ ಅದೇ ರೀತಿಯ ಬಣ್ಣದ ಅಕ್ಸೆಂಟ್‌ಗಳನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸಬಹುದು.

ಇಂಟೀರಿಯರ್‌ನಲ್ಲಿನ ನಿರೀಕ್ಷಿತ ಬದಲಾವಣೆಗಳು

ಕಾರು ತಯಾರಕರು ಇನ್ನೂ ಇಂಟೀರಿಯರ್‌ನ ಟೀಸರ್‌ ಅನ್ನು ಬಿಡುಗಡೆ ಮಾಡಿಲ್ಲ, ಆದರೆ ಇತರ ಎಮ್‌ಜಿ ಕಾರುಗಳ ಬ್ಲ್ಯಾಕ್‌ಸ್ಟಾರ್ಮ್ ಆವೃತ್ತಿಗಳಲ್ಲಿ ನೀಡಲಾಗುವ ಬದಲಾವಣೆಗಳನ್ನು ಗಮನಿಸಿದರೆ, ಕಾಮೆಟ್ ಬ್ಲ್ಯಾಕ್‌ಸ್ಟಾರ್ಮ್ ಕಪ್ಪು ಸೀಟ್ ಕವರ್‌ನೊಂದಿಗೆ ಸಂಪೂರ್ಣ ಕಪ್ಪು ಇಂಟೀರಿಯರ್‌ ಥೀಮ್ ಅನ್ನು ಒಳಗೊಂಡಿರಬಹುದು. ಹಾಗೆಯೇ, ಒಟ್ಟಾರೆ ಕ್ಯಾಬಿನ್ ವಿನ್ಯಾಸವು ರೆಗ್ಯುಲರ್‌ ಕಾಮೆಟ್‌ನಂತೆಯೇ ಇರುತ್ತದೆ.

ಇದನ್ನೂ ಓದಿ: Tata Harrier ಮತ್ತು Tata Safari ಸ್ಟೆಲ್ತ್ ಎಡಿಷನ್‌ನ ಬೆಲೆಗಳು ಬಿಡುಗಡೆ, ಆರಂಭಿಕ ಬೆಲೆ ರೂ. 25.09 ಲಕ್ಷ ರೂ.ನಿಗದಿ

ಫೀಚರ್‌ಗಳು ಮತ್ತು ಸುರಕ್ಷತೆ

MG Comet EV Displays

ಕಾಮೆಟ್ ಇವಿಯ ಸಂಪೂರ್ಣ ಬ್ಲ್ಯಾಕ್‌ ಎಡಿಷನ್‌ 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ರೆಗ್ಯುಲರ್‌ ಕಾಮೆಟ್‌ನಂತೆಯೇ ಮ್ಯಾನುವಲ್ ಎಸಿ ಮುಂತಾದ ಫೀಚರ್‌ಗಳನ್ನು ಎರವಲು ಪಡೆಯುವ ಸಾಧ್ಯತೆಯಿದೆ. ಇದು ಎರಡು ಸ್ಪೀಕರ್‌ಗಳು, ಬಟನ್‌ನಲ್ಲಿ ಮಡಚಬಹುದಾದ ORVM ಗಳು (ಹೊರಗಿನ ರಿಯರ್‌ವ್ಯೂ ಮಿರರ್‌ಗಳು) ಮತ್ತು ಕೀಲಿ ರಹಿತ ಎಂಟ್ರಿಯೊಂದಿಗೆ ಸಜ್ಜುಗೊಳ್ಳಬಹುದು.

ಎರಡು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ABS ಜೊತೆಗೆ EBD, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಸೆನ್ಸರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ವೈಶಿಷ್ಟ್ಯಗಳೊಂದಿಗೆ ಇದರ ಸುರಕ್ಷತಾ ಸೂಟ್ ಸಹ ರೆಗ್ಯುಲರ್‌ ಮೊಡೆಲ್‌ನಂತೆ ಇರುವ ನಿರೀಕ್ಷೆಯಿದೆ. 

ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲ

MG ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಯಾವುದೇ ಯಾಂತ್ರಿಕ ಬದಲಾವಣೆಗಳಿಗೆ ಒಳಗಾಗುವುದಿಲ್ಲ. ಇದು 17.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಳ್ಳಲಿದ್ದು, ಇದು 42 ಪಿಎಸ್‌ ಮತ್ತು 110 ಎನ್‌ಎಮ್‌ ಉತ್ಪಾದಿಸುವ ಹಿಂಭಾಗದ ಆಕ್ಸಲ್ ಮೌಂಟೆಡ್ (RWD) ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತದೆ. ಇದು ARAI- ಕ್ಲೈಮ್‌ ಮಾಡಿದ 230 ಕಿ.ಮೀ. ರೇಂಜ್‌ ಅನ್ನು ಹೊಂದಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಎಮ್‌ಜಿ ಕಾಮೆಟ್ ಬ್ಲಾಕ್‌ಸ್ಟಾರ್ಮ್ ಎಡಿಷನ್‌ ರೆಗ್ಯುಲರ್‌ ಮೊಡೆಲ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದುವ ನಿರೀಕ್ಷೆಯಿದೆ, ಇದರ ಬೆಲೆ 7 ಲಕ್ಷ ರೂ.ನಿಂದ 9.84 ಲಕ್ಷ ರೂ.ಗಳವರೆಗೆ ಇರುತ್ತದೆ.ಅದರೆ, ನೀವು ಎಮ್‌ಜಿ ನೀಡುವ ಬ್ಯಾಟರಿ ಚಂದಾದಾರಿಕೆ ಯೋಜನೆಯನ್ನು ಕಾಮೆಟ್‌ನೊಂದಿಗೆ ಆರಿಸಿದರೆ, ಬೆಲೆಗಳು ಮತ್ತಷ್ಟು ಕಡಿಮೆಯಾಗುತ್ತವೆ ಮತ್ತು 5 ಲಕ್ಷದಿಂದ 7.66 ಲಕ್ಷ ರೂ.ಗಳವರೆಗೆ ಇರುತ್ತವೆ. ಆದರೆ, ಅಂತಹ ಚಂದಾದಾರಿಕೆ ಯೋಜನೆಯೊಂದಿಗೆ, ನೀವು ಬ್ಯಾಟರಿ ಚಂದಾದಾರಿಕೆ ವೆಚ್ಚವಾಗಿ ಎಮ್‌ಜಿಗೆ ಪ್ರತಿ ಕಿ.ಮೀ.ಗೆ 2.5 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಹಾಗೆ ಹೇಳುತ್ತಾ ಹೋದರೆ, MG ಕಾಮೆಟ್ EV ಗೆ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲ, ಆದರೆ ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ eC3 ಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.

ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ. 

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on M g ಕಾಮೆಟ್ ಇವಿ

explore ಇನ್ನಷ್ಟು on ಎಂಜಿ ಕಾಮೆಟ್ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience