ಕಾಮೆಟ್ ಇವಿಗೆ ಬುಕ್ಕಿಂಗ್ ತೆರೆದ ಎಂಜಿ
ಎಂಜಿ ಕಾಮೆಟ್ ಇವಿ ಗಾಗಿ shreyash ಮೂಲಕ ಮೇ 17, 2023 02:00 pm ರಂದು ಪ್ರಕಟಿಸಲಾಗಿದೆ
- 22 Views
- ಕಾಮೆಂಟ್ ಅನ್ನು ಬರೆಯಿರಿ
ಇದರ ಪ್ರಾಸ್ತಾವಿಕ ಬೆಲೆ ರೂ. 7.98 ಲಕ್ಷದಿಂದ ರೂ. 9.98 ಲಕ್ಷ (ಎಕ್ಸ್-ಶೋರೂಮ್ ಭಾರತದಾದ್ಯಂತ) ಮೊದಲ 5,000 ಬುಕ್ಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.
- ಈ ಅಲ್ಟ್ರಾ-ಕಾಮೆಟ್ ಇವಿಯನ್ನು ರೂ. 11,000 ಕ್ಕೆ ಮುಂಗಡ ಕಾಯ್ದಿರಿಸಬಹುದು.
- ಈ ಕಾಮೆಟ್ ಇವಿಗಾಗಿ ಟೆಸ್ಟ್ ಡ್ರೈವ್‌ಗಳು ಈಗಾಗಲೇ ನಡೆಯುತ್ತಿವೆ.
- ಎಂಜಿ ತನ್ನ 2-ಡೋರ್ ಎಲೆಕ್ಟ್ರಿಕ್ ವಾಹನವನ್ನು ಪೇಸ್, ಪ್ಲೇ, ಮತ್ತು ಪ್ಲಶ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ.
- ಇದು 230km ಕ್ಲೈಮ್ ಮಾಡಲಾದ 17.3kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತಿದೆ.
- ಇದರ ಹಿಂಭಾಗದ ಆ್ಯಕ್ಸೆಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ 42PS ಮತ್ತು 110Nm ಉತ್ಪಾದಿಸುತ್ತದೆ.
- ಇದರ ಡೆಲಿವರಿಯು ಮೇ 22 ರಿಂದ ಪ್ರಾರಂಭವಾಗುತ್ತದೆ.
ಎಂಜಿ ಕಾಮೆಟ್ ಇವಿಯ ಬುಕ್ಕಿಂಗ್ ಅಂತಿಮವಾಗಿ ರೂ. 11,000 ಠೇವಣಿಯೊಂದಿಗೆ ನಡೆಯುತ್ತಿದೆ. ಇದು – ಪೇಸ್, ಪ್ಲೇ ಮತ್ತು ಪ್ಲಶ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ – ಮತ್ತು ಇದರ ಬೆಲೆಯನ್ನು ರೂ. 7.98 ಲಕ್ಷದಿಂದ ರೂ. 9.98 ಲಕ್ಷಕ್ಕೆ ನಿಗದಿಪಡಿಸಲಾಗಿದೆ (ಪ್ರಾಸ್ತಾವಿಕ ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ). ಆದರೆ ಈ ಬೆಲೆಯು ಮೊದಲ 5,000 ಬುಕ್ಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನಿಸಿ. ಎಂಜಿ ಕಾಮೆಟ್ ಇವಿ ಖರೀದಿದಾರರು ತಮ್ಮ ಮೊಬೈಲ್ ಆ್ಯಪ್ ಮೂಲಕ ಬುಕ್ ಮಾಡಿದ ಸಮಯದಿಂದ ಡೆಲಿವರಿ ಸಮಯದವರೆಗೆ ತಮ್ಮ ಆರ್ಡರ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದು.
ಅಲ್ಟ್ರಾ ಕಾಂಪ್ಯಾಕ್ಟ್ ಆಯಾಮಗಳು
ಈ ಎಂಜಿ ಕಾಮೆಟ್ ಇವಿ 2-ಡೋರ್ ಅಲ್ಟ್ರಾ-ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರ್ ಆಗಿದ್ದು, ಒಳಗೆ ನಾಲ್ಕು ಜನರಿಗೆ ಸ್ಥಳಾವಕಾಶವಿದೆ. ಇದು ಸಬ್-3m ಉದ್ದವನ್ನು ಹೊಂದಿರುವುದರಿಂದ ಇದು ಮಾರುಕಟ್ಟೆಯ ಅತಿ ಚಿಕ್ಕ ಕಾರಾಗಿದೆ, 4.2 ಮೀಟರ್ ಟರ್ನಿಂಗ್ ರೇಡಿಯೆಸ್ ಅನ್ನು ಹೊಂದಿದೆ.
ನೀಡಲಾಗುವ ಫೀಚರ್‌ಗಳು
ಈ ಕಾಮೆಟ್ ಇವಿ 10.25-ಇಂಚಿನ ಸಂಯೋಜಿತ ಡ್ಯುಯಲ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ (ಒಂದು ಇನ್‌ಫೊಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಷನ್‌ಗಾಗಿ). ಇದರ ಇನ್‌ಫೊಟೈನ್‌ಮೆಂಟ್ ಯೂನಿಟ್ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ 55 ಸಂಪರ್ಕಿತ ಕಾರ್ ಫೀಚರ್‌ಗಳನ್ನು ಹೊಂದಿದ್ದು, ಇದನ್ನು ಮೊಬೈಲ್ ಆ್ಯಪ್ ಮತ್ತು ಇದರ ಧ್ವನಿ ನಿಯಂತ್ರಣ ಫೀಚರ್‌ಗಳ ಮೂಲಕ ಕಾರ್ಯಾಚರಣೆ ಮೂಲಕ ನಿಯಂತ್ರಿಸಬಹುದು.
ಇದನ್ನೂ ಓದಿ: ಎಂಜಿ ಮೋಟಾರ್ ಇಂಡಿಯಾ 5-ವರ್ಷದ ಮಾರ್ಗಸೂಚಿಗಳನ್ನು ರೂಪಿಸುತ್ತಿದ್ದು, ಇವಿಗಳಿಗೆ ಪ್ರಮುಖ ಗಮನ ನೀಡುತ್ತಿದೆ
ಸುರಕ್ಷತೆಯ ದೃಷ್ಟಿಯಿಂದ, ಎಂಜಿಯ 2-ಡೋರ್ ಇವಿಯು ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೇಷರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಹೊಂದಿದೆ.
ಬ್ಯಾಟರಿ ಮತ್ತು ರೇಂಜ್
ಎಂಜಿ ಕಾಮೆಟ್ ಇವಿಯು 230km ರೇಂಜ್ ಕ್ಲೈಮ್ ಮಾಡುವ 17.3kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು 42PS ಮತ್ತು 110Nm ಉತ್ಪಾದಿಸುವ ಆ್ಯಕ್ಸೆಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಈ ಇವಿಯು, 0-100 ಪ್ರತಿಶತ ಚಾರ್ಜ್‌ಗೆ ಏಳು ಗಂಟೆಗಳನ್ನು ತೆಗೆದುಕೊಳ್ಳುವ ಮತ್ತು 10-80 ಪ್ರತಿಶತ ಚಾರ್ಜ್‌ಗೆ ಐದು ಗಂಟೆಗಳನ್ನು ತೆಗೆದುಕೊಳ್ಳುವ 3.3kW ಎಸಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಪ್ರತಿಸ್ಪರ್ಧಿಗಳು
ಈ 2-ಡೋರ್ ಅಲ್ಟ್ರಾ ಕಾಂಪ್ಯಾಕ್ಟ್ ಇವಿ ಟಾಟಾ ಟಿಯಾಗೋ ಇವಿ ಮತ್ತು ಸಿಟ್ರಾನ್ eC3ಗೆ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಇಲ್ಲಿ ಓದಿ : ಕಾಮೆಟ್ ಇವಿ ಆಟೋಮ್ಯಾಟಿಕ್
0 out of 0 found this helpful