Login or Register ಅತ್ಯುತ್ತಮ CarDekho experience ಗೆ
Login

ಬಹುನಿರೀಕ್ಷಿತ ಹೊಸ Maruti Swift ಬಿಡುಗಡೆ, ಬೆಲೆಗಳು 6.49 ಲಕ್ಷ ರೂ.ನಿಂದ ಪ್ರಾರಂಭ

ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ಮೇ 09, 2024 04:35 pm ರಂದು ಪ್ರಕಟಿಸಲಾಗಿದೆ

ಹೊಸ ಸ್ವಿಫ್ಟ್ ಶಾರ್ಪ್‌ ಆಗಿ ಕಾಣುತ್ತದೆ ಮತ್ತು ಒಳಭಾಗದಲ್ಲಿ ಹೆಚ್ಚು ಪ್ರೀಮಿಯಂ ಆಗಿದೆ, ಹಾಗೆಯೇ ಹೊಸದಾದ ಪೆಟ್ರೋಲ್ ಎಂಜಿನ್ ಅನ್ನು ಸಹ ಹೊಂದಿದೆ.

  • ಇದು LXi, VXi, VXi (O), ZXi, ಮತ್ತು ZXi+ ಎಂಬ ಐದು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ.
  • ಮಾರುತಿ ಇದರ ಬೆಲೆಯನ್ನು 6.49 ಲಕ್ಷ ರೂ.ನಿಂದ 9.65 ಲಕ್ಷ ರೂ.ವರೆಗೆ (ಪರಿಚಯಾತ್ಮಕ, ಎಕ್ಸ್ ಶೋರೂಂ-ಪ್ಯಾನ್ ಇಂಡಿಯಾ) ನಿಗದಿಪಡಿಸಿದೆ.
  • ವಿನ್ಯಾಸದಲ್ಲಿನ ಪ್ರಮುಖ ಅಂಶಗಳು ತೀಕ್ಷ್ಣವಾದ ಎಲ್‌ಇಡಿ ಡಿಆರ್‌ಎಲ್‌ಗಳು, ಹೊಸ ಅಲಾಯ್‌ ವೀಲ್‌ಗಳು ಮತ್ತು ಬದಲಾವಣೆ ಮಾಡಲಾಗಿರುವ ಲೈಟಿಂಗ್‌ ಸೆಟಪ್ ಅನ್ನು ಒಳಗೊಂಡಿವೆ.
  • ಕ್ಯಾಬಿನ್ ಈಗ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿರುವ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ.
  • ಇತರ ಸೌಲಭ್ಯಗಳಲ್ಲಿ ವೈರ್‌ಲೆಸ್ ಫೋನ್ ಚಾರ್ಜಿಂಗ್, 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ) ಮತ್ತು ಕ್ರೂಸ್ ಕಂಟ್ರೋಲ್ ಸೇರಿವೆ.
  • ಇದನ್ನು ಹೊಸ 1.2-ಲೀಟರ್ Z ಸರಣಿಯ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ MT ಮತ್ತು AMT ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ಭಾರತದಲ್ಲಿನ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾದ ಮಾರುತಿ ಸ್ವಿಫ್ಟ್ ಇದೀಗ ಜನರೇಶನ್‌ನ ಆಪ್‌ಡೇಟ್‌ಗಳನ್ನು ಪಡೆದುಕೊಂಡಿದೆ ಮತ್ತು ಇದು ಈಗ ನಾಲ್ಕನೇ-ಜನ್ ಅವತಾರ್‌ನಲ್ಲಿ ಲಭ್ಯವಿದೆ. ಈ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರೊಂದಿಗೆ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ.

ವೇರಿಯಂಟ್-ವಾರು ಬೆಲೆಗಳು

ವೇರಿಯೆಂಟ್‌

ಬೆಲೆ ಮ್ಯಾನುಯಲ್‌*

ಬೆಲೆ AMT*

LXi MT

6.49 ಲಕ್ಷ ರೂ.

VXi

7.30 ಲಕ್ಷ ರೂ.

7.80 ಲಕ್ಷ ರೂ.

VXi (O)

7.57 ಲಕ್ಷ ರೂ.

8.07 ಲಕ್ಷ ರೂ.

ZXi

8.30 ಲಕ್ಷ ರೂ.

8.80 ಲಕ್ಷ ರೂ.

ZXi+

9 ಲಕ್ಷ ರೂ.

9.50 ಲಕ್ಷ ರೂ.

*ಇವುಗಳು ಭಾರತದಾದ್ಯಂತ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು

ಹೊಸ ಸ್ವಿಫ್ಟ್ ಹೊಸ ಮಿಡ್-ಸ್ಪೆಕ್ VXi (O) ಟ್ರಿಮ್ ಅನ್ನು ಸಹ ಪಡೆಯುತ್ತದೆ. ಟಾಪ್-ಸ್ಪೆಕ್ ZXi+ ಆವೃತ್ತಿ ಮಾತ್ರ ಡ್ಯುಯಲ್-ಟೋನ್ ಆಯ್ಕೆಯಲ್ಲಿ ಲಭ್ಯವಿದೆ, ಇದರ ಬೆಲೆ 15,000 ರೂ.ವರೆಗೆ ಹೆಚ್ಚು ಇರಲಿದೆ.

ಹೊಸ ಪೆಟ್ರೋಲ್ ಎಂಜಿನ್

ಮಾರುತಿ ಹೊಸ ಸ್ವಿಫ್ಟ್ ಅನ್ನು ತಾಜಾ 1.2-ಲೀಟರ್ Z ಸರಣಿಯ ಪೆಟ್ರೋಲ್ ಎಂಜಿನ್‌ನೊಂದಿಗೆ (82 PS/112 Nm ವರೆಗೆ) ನೀಡುತ್ತಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಮ್‌ಟಿ ಆಯ್ಕೆಗಳೊಂದಿಗೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಮಾರುತಿಯು ಹೊಸ ಸ್ವಿಫ್ಟ್‌ನ ಲೈನ್‌ಅಪ್‌ಗೆ ಸಿಎನ್‌ಜಿ ಪವರ್‌ಟ್ರೇನ್ ಅನ್ನು ಸೇರಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ.

ಹೊಸ ಸ್ವಿಫ್ಟ್ ವಿನ್ಯಾಸ

ಮೊದಲ ನೋಟದಲ್ಲಿ, ಹೊಸ ಸ್ವಿಫ್ಟ್ ಜನರೇಶನ್‌ನ ಆಪ್‌ಡೇಟ್‌ಗಿಂತ ಹೊರಹೋಗುವ ಮೊಡೆಲ್‌ನ ಆಪ್‌ಡೇಟ್‌ನಂತೆ ಕಾಣುತ್ತದೆ, ಆದರೆ ಇದನ್ನು ಸುಳ್ಳು ಎನ್ನುವ ಹಾಗೆಯೂ ಇಲ್ಲ. ಇದು ಪರಿಷ್ಕೃತ ಹೆಡ್‌ಲೈಟ್ ಕ್ಲಸ್ಟರ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಗ್ರಿಲ್‌ನಂತಹ ಚಿಕ್ಕದಾದ ಆದರೆ ಪರಿಣಾಮಕಾರಿ ಆಪ್‌ಡೇಟ್‌ಗಳು ಇದಕ್ಕೆ ಹೊಸ ಲುಕ್‌ಅನ್ನು ಸೇರಿಸುತ್ತವೆ.

ಇತರ ಕಾಸ್ಮೆಟಿಕ್ ಬದಲಾವಣೆಗಳಲ್ಲಿ ರಿಫ್ರೆಶ್ ಮಾಡಿದ ಬಂಪರ್‌ಗಳು, ಬದಲಾವಣೆ ಮಾಡಲಾದ ಎಲ್‌ಇಡಿ ಟೈಲ್ ಲೈಟ್‌ಗಳು (ಹೊಸ ಆಂತರಿಕ ಲೈಟಿಂಗ್‌ ಅಂಶಗಳೊಂದಿಗೆ), ಮತ್ತು ಹೊಸದಾದ ಶೈಲಿಯ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು ಸೇರಿವೆ. ಯುಕೆ-ಸ್ಪೆಕ್ ಮತ್ತು ಜಪಾನ್-ಸ್ಪೆಕ್ ಮೊಡೆಲ್‌ಗಳಿಗಿಂತ ಇಂಡಿಯಾ-ಸ್ಪೆಕ್ ನಾಲ್ಕನೇ-ಜೆನ್ ಸ್ವಿಫ್ಟ್ ಸಣ್ಣ ವಿನ್ಯಾಸ ಬದಲಾವಣೆಗಳನ್ನು ಪಡೆಯುತ್ತದೆ, ಕ್ರಮವಾಗಿ ಎಲ್ಇಡಿ ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು ಸ್ವಲ್ಪಮಟ್ಟಿಗೆ ಪರಿಷ್ಕೃತ ಗ್ರಿಲ್‌ಗೆ ನಾವಿಲ್ಲಿ ಧನ್ಯವಾದ ಹೇಳಲೇಬೇಕು.

ಇಂಟಿರೀಯರ್‌ನಲ್ಲಿ ಏನೆಲ್ಲಾ ಬದಲಾಗಿದೆ?

ಒಳಭಾಗದಲ್ಲಿರುವ ಬದಲಾವಣೆಗಳು ಡ್ಯಾಶ್‌ಬೋರ್ಡ್‌ನ ಸುತ್ತಲೂ ಕೇಂದ್ರೀಕೃತವಾಗಿವೆ, ಏಕೆಂದರೆ ಇದು ಈಗ ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ಬದಲಾವಣೆ ಮಾಡಿದ ಸೆಂಟ್ರಲ್ ಎಸಿ ವೆಂಟ್‌ಗಳು ಮತ್ತು ಆಪ್‌ಡೇಟ್‌ ಮಾಡಲಾದ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಅನ್ನು ಹೊಂದಿದೆ. ಈ ಬದಲಾವಣೆಗಳು ಹೊಸ ಮಾರುತಿ ಬಲೆನೊದ ಡ್ಯಾಶ್‌ಬೋರ್ಡ್‌ನೊಂದಿಗೆ ಹೆಚ್ಚು ಸಾಮ್ಯತೆ ಇದೆ.

ಈ ಹಿಂದಿನ ಮೊಡೆಲ್‌ನ ಕ್ಯಾಬಿನ್‌ನೊಂದಿಗೆ ಹೋಲಿಕೆಗಳನ್ನು ನೀವು ಗಮನಿಸುವುದು ಕ್ಯಾಬಿನ್‌ನ ಚಾಲಕ ಬದಿಯಿಂದ, ಹೌದು, ಇದು ಅದೇ 3-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಡ್ಯುಯಲ್-ಪಾಡ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ ಅನ್ನು (ಮಧ್ಯದಲ್ಲಿ ಬಣ್ಣದ TFT ಮಲ್ಟಿ-ಇಂಫಾರ್ಮೆನ್ಸ್‌-ಡಿಸ್‌ಪ್ಲೇ ಅನ್ನು ಇರಿಸುವುದು) ಹೊಂದಿದೆ.

ಇದನ್ನು ಓದಿ: ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ

ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಸುರಕ್ಷತೆ ತಂತ್ರಜ್ಞಾನ

ಮೊದಲೇ ಹೇಳಿದಂತೆ, ಹೊಸ ಸ್ವಿಫ್ಟ್ ಆಟೋ ಎಸಿ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಕನೆಕ್ಟೆಡ್‌ ಕಾರ್ ಟೆಕ್ ಜೊತೆಗೆ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್‌ ಅನ್ನು ಪಡೆಯುತ್ತದೆ.

ಇದರ ಸುರಕ್ಷತಾ ಜಾಲವು ಈಗ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳನ್ನು ಒಳಗೊಂಡಿದೆ.

ಹೊಸ ಮಾರುತಿ ಸ್ವಿಫ್ಟ್‌ನ ಪ್ರತಿಸ್ಪರ್ಧಿಗಳು

2024 ರ ಮಾರುತಿ ಸ್ವಿಫ್ಟ್ ಹ್ಯುಂಡೈ ಗ್ರಾಂಡ್ i10 ನಿಯೋಸ್ ಗೆ ನೇರಸ್ಪರ್ಧೆಯನ್ನು ಒಡ್ಡುವುದನ್ನು ಮುಂದುವರಿಸಲಿದೆ, ಆದರೆ ಕ್ರಾಸ್‌ಒವರ್ ಎಮ್‌ಪಿವಿಯಾಗಿರುವ ರೆನಾಲ್ಟ್ ಟ್ರೈಬರ್ ಗೆ ಮತ್ತು ಹ್ಯುಂಡೈ ಎಕ್ಸ್‌ಟರ್ ಹಾಗು ಟಾಟಾ ಪಂಚ್‌ನಂತಹ ಮೈಕ್ರೋ ಎಸ್‌ಯುವಿಗಳಿಗೆ ಹ್ಯಾಚ್‌ಬ್ಯಾಕ್ ಪರ್ಯಾಯವಾಗಿ ಇದು ಕಾರ್ಯನಿರ್ವಹಿಸುತ್ತದೆ.

Share via

Write your Comment on Maruti ಸ್ವಿಫ್ಟ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ