Login or Register ಅತ್ಯುತ್ತಮ CarDekho experience ಗೆ
Login

ಬಿಡುಗಡೆಗೆ ಮೊದಲು ಡೀಲರ್‌ ಸ್ಟಾಕ್‌ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್‌..!

ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ಮೇ 07, 2024 06:51 pm ರಂದು ಪ್ರಕಟಿಸಲಾಗಿದೆ

ಈ ಮಾದರಿ ಚಿತ್ರಗಳು ಮಿಡ್‌-ಸ್ಪೆಕ್‌ ವೇರಿಯಂಟ್‌ ಗೆ ಸೇರಿದ್ದು, ಅಲೋಯ್‌ ವೀಲ್‌ ಮತ್ತು ಮುಂಭಾಗದ ಫಾಗ್‌ ಲ್ಯಾಂಪ್‌ ಗಳ ಅನುಪಸ್ಥಿಯನ್ನು ಇದರಲ್ಲಿ ಕಾಣಬಹುದು. ಅಲ್ಲದೆ ಸಾಮಾನ್ಯ ಕ್ಯಾಬಿನ್‌ ಅನ್ನು ಇದು ಹೊಂದಿದೆ

ಡೀಲರ್‌ ಯಾರ್ಡ್‌ ನಿಂದ ನಾಲ್ಕನೇ ತಲೆಮಾರಿನ ಮಾರುತಿ ಸುಝುಕಿ ಸ್ವಿಫ್ಟ್ ‌ ಕಾರಿನ ವಿವರವಾದ ಚಿತ್ರಗಳು ಈ ವಾಹನದ ಬಿಡುಗಡೆಗೆ ಮೊದಲೇ ಆನ್ಲೈನ್‌ ನಲ್ಲಿ ಕಾಣಿಸಿಕೊಂಡಿವೆ. ಈ ಹೊಸ ಮಾರುತಿ ಹ್ಯಾಚ್‌ ಬ್ಯಾಕ್‌ ವಾಹನದ ಬುಕಿಂಗ್‌ ಈಗಾಗಲೇ ತೆರೆದಿದ್ದು, ರೂ. 11,000 ಕ್ಕೆ ಆನ್ಲೈನ್‌ ನಲ್ಲಿ ಮತ್ತು ಮಾರುತಿಯ ಅರೇನಾ ಡೀಲರ್‌ ಗಳಲ್ಲಿ ಮಾಡಬಹುದಾಗಿದೆ.

ಏನೆಲ್ಲ ಗಮನಿಸಬಹುದು?

ವೀಡಿಯೋ ದಲ್ಲಿ ಹೊಸ ಸ್ವಿಫ್ಟ್‌ ಅನ್ನು ಯಾವುದೇ ಹೊದಿಕೆ ಇಲ್ಲದೆ ನಾವು ನೋಡಬಹುದಾಗಿದೆ. ಅಲ್ಲದೆ ಈ ಹ್ಯಾಚ್‌ ಬ್ಯಾಕ್‌ ನ ಎರಡು ಮಿಡ್‌ ಸ್ಪೆಕ್‌ ವೇರಿಯಂಟ್‌ ಗಳಿವೆ. ಆದರೆ ಎರಡೂ ವೇರಿಯಂಟ್‌ ಗಳು ಅಲೋಯ್‌ ವೀಲ್‌ ಮತ್ತು ಮುಂಭಾಗದ ಫಾಗ್‌ ಲ್ಯಾಂಪ್‌ ಗಳನ್ನು ಹೊಂದಿಲ್ಲ. ಮಾರುತಿ ಸಂಸ್ಥೆಯು 2024 ಸ್ವಿಫ್ಟ್‌ ಕಾರಿನ ಹೈಯರ್‌ ಸ್ಪೆಕ್‌ ವೇರಿಯಂಟ್‌ ನಲ್ಲಿ 16 ಇಂಚಿನ ಡ್ಯುವಲ್‌ ಟೋನ್‌ ಅಲೋಯ್‌ ವೀಲ್‌ ಮತ್ತು ಎಲ್‌.ಇ.ಡಿ ಫ್ರಂಟ್‌ ಫಾಗ್‌ ಲ್ಯಾಂಪ್‌ ಗಳನ್ನು ಒದಗಿಸಲಿದೆ.

ಕ್ಯಾಬಿನ್‌ ಮತ್ತು ವೈಶಿಷ್ಟ್ಯಗಳು

ಚಿತ್ರೀಕರಣಗೊಂಡ ಮಿಡ್‌ ಸ್ಪೆಕ್‌ ವೇರಿಯಂಟ್‌ ನ ಕ್ಯಾಬಿನ್‌ ನಲ್ಲಿ ಬಟ್ಟೆಯ ಸೀಟುಗಳು ಮತ್ತು ಸುತ್ತಲೂ ಮಂಕಾದ ಬೂದು ಬಣ್ಣದ ಸಾಮಗ್ರಿಗಳಿದ್ದು, ಬೆಳ್ಳಿಯ ಮತ್ತು ಕ್ರೋಂ ಹೈಲೈಟುಗಳು ಇದರಲ್ಲಿ ಕಂಡುಬಂದಿಲ್ಲ. ಅಲ್ಲದೆ 7 ಇಂಚಿನ ಸಣ್ಣ ಟಚ್‌ ಸ್ಕ್ರೀನ್‌, ಅಟೋ ಎ.ಸಿ, ಸ್ಟೀಯರಿಂಗ್‌ ಮೌಂಟೆಡ್‌ ಕಂಟ್ರೋಲ್‌ ಗಳು ಮತ್ತು ಎಲ್ಲಾ ನಾಲ್ಕು ಪವರ್‌ ವಿಂಡೋಗಳು ಇತ್ಯಾದಿ ಕೆಲ ಮೂಲಭೂತ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಹೈಯರ್‌ ಸ್ಪೆಕ್‌ ವೇರಿಯಂಟ್‌ ಗಳು 9 ಇಂಚಿನ ಟಚ್‌ ಸ್ಕ್ರೀನ್‌ ಘಟಕ, ಪುಶ್‌ ಬಟನ್‌ ಸ್ಟಾರ್ಟ್/ಸ್ಟಾಪ್‌, ಕ್ರೂಸ್‌ ಕಂಟ್ರೋಲ್‌ ಮತ್ತು ವೈರ್‌ ಲೆಸ್‌ ಫೋನ್‌ ಚಾರ್ಜರ್‌ ಜೊತೆಗೆ ಬರಲಿದೆ. ಸುರಕ್ಷತೆಗಾಗಿ ಮಾರುತಿ ಸಂಸ್ಥೆಯು ಹೊಸ ಸ್ವಿಫ್ಟ್‌ ವಾಹನದಲ್ಲಿ ಆರು ಏರ್‌ ಬ್ಯಾಗುಗಳು (ಪ್ರಮಾಣಿತ), ರಿವರ್ಸಿಂಗ್‌ ಕ್ಯಾಮರಾ, ISOFIX ಚೈಲ್ಡ್‌ ಸೀಟ್‌ ಆಂಕರೇಜ್‌ ಮತ್ತು ಹಿಲ್‌ ಹೋಲ್ಡ್‌ ಅಸಿಸ್ಟ್‌ ಅನ್ನು ನೀಡಿದೆ.

2024 ಮಾರುತಿ ಸ್ವಿಫ್ಟ್‌ ಎಂಜಿನ್‌ ವಿವರಗಳು

ಹೊಸ ಸ್ವಿಫ್ಟ್‌ ಕಾರು‌, 5-ಸ್ಪೀಡ್ MT ಮತ್ತು 5-ಸ್ಪೀಡ್ AMT‌ ಆಯ್ಕೆಗಳೊಂದಿಗೆ ನವೀನ 1.2-ಲೀಟರ್ 3-ಸಿಲಿಂಡರ್ Z ಸರಣಿ ಪೆಟ್ರೋಲ್‌ ಎಂಜಿನ್ (82 PS/up to 112 Nm) ಜೊತೆಗೆ ಬರಲಿದೆ. ಮಾರುತಿ ಸಂಸ್ಥೆಯು ಬಿಡುಗಡೆಯ ವೇಳೆ ಈ ವಾಹನದಲ್ಲಿ ಸಿ.ಎನ್‌.ಜಿ ಪವರ್‌ ಟ್ರೇನ್‌ ಆಯ್ಕೆಯನ್ನು ನೀಡದಿದ್ದರೂ, ನಂತರ ಈ ಆಯ್ಕೆಯನ್ನು ನೀಡುವ ಸಾಧ್ಯತೆ ಇದೆ.

ಇದನ್ನು ಸಹ ಓದಿರಿ: ಏಪ್ರಿಲ್‌ 2024ರಲ್ಲಿ ಬಿಡುಗಡೆ ಮಾಡಲಾದ ಎಲ್ಲಾ ಹೊಸ ಕಾರುಗಳು

ಬಿಡುಗಡೆ ಮತ್ತು ಬೆಲೆ

ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಕಾರು ಮೇ 9ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಬೆಲೆಯು ರೂ. 6.5 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಇದು ಹ್ಯುಂಡೇ ಗ್ರಾಂಡ್ i10 ನಿಯೋಸ್‌ ಕಾರಿಗೆ ಸ್ಪರ್ಧೆಯನ್ನು ನೀಡಲಿದ್ದು, ರೆನೋ ಟ್ರೈಬರ್, ಟಾಟಾ ಪಂಚ್, ಮತ್ತು ಹ್ಯುಂಡೇ ಎಕ್ಸ್ಟರ್ಗಳಿಗೆ ಬದಲಿ ಅಯ್ಕೆ ಎನಿಸಲಿದೆ.

ಚಿತ್ರದ ಮೂಲ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ವಿಫ್ಟ್ AMT

Share via

Write your Comment on Maruti ಸ್ವಿಫ್ಟ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ