ಸೋರಿಕೆಯಾದ ಚಿತ್ರಗಳಲ್ಲಿ ಕಂಡು ಬಂದ ಹ್ಯುಂಡೈ ಎಕ್ಸ್‌ಟರ್ ಡ್ಯಾಶ್‌ಬೋರ್ಡ್‌ನ ಫಸ್ಟ್ ಲುಕ್
ಜೂನ್ 14, 2023 02:00 pm ರಂದು shreyash ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಇದು ಇತರ ಹ್ಯುಂಡೈ ಮಾಡೆಲ್‌ಗಳಾದ ಗ್ರ್ಯಾಂಡ್ i10 Nios ಮತ್ತು ವೆನ್ಯೂಗಳ ಸ್ಕ್ರೀನ್ ಮಿಶ್ರಣವನ್ನು ಪಡೆಯುತ್ತದೆ.
-
ಹ್ಯುಂಡೈ ಎಕ್ಸ್‌ಟರ್ ಜುಲೈ 10 ರಂದು ಬಿಡುಗಡೆಯಾಗಲಿದ್ದು, ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ.
-
ಡ್ಯುಯಲ್ ಡ್ಯಾಶ್ ಕ್ಯಾಮ್ ಸೆಟಪ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನಂತಹ ಕೆಲವು ವಿಭಾಗಗಳಲ್ಲೇ ಪ್ರಥಮ ಫೀಚರ್‌ಗಳನ್ನು ಪಡೆದಿದೆ.
-
ಸೋರಿಕೆಯಾಗಿರುವ ಇಂಟೀರಿಯರ್ ಚಿತ್ರಗಳ ಆಧಾರದ ಮೇಲೆ, ಇದು ಡಿಜಿಟೈಸ್ಡ್ ಡ್ರೈವರ್ ಡಿಸ್‌ಪ್ಲೇ, (ವೆನ್ಯೂವಿನಲ್ಲಿರುವಂತೆಯೇ) ಮತ್ತು ಟಚ್‌ಸ್ಕ್ರೀನ್ ಯೂನಿಟ್ ಅನ್ನು ಸಹ ಪಡೆಯುತ್ತದೆ.
-
ಇದು ಐದು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: EX, S, SX, SX (O), ಮತ್ತು SX (O) ಕನೆಕ್ಟ್.
-
ಇದು, ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ಆಯ್ಕೆಗಳಲ್ಲಿ ನೀಡಲಾದ 1.2 ಲೀಟರ್ ಎಂಜಿನ್ ಅನ್ನು ಪಡೆದಿದೆ.
-
ಹ್ಯುಂಡೈ ಎಕ್ಸ್‌ಟರ್‌ನ ಬೆಲೆಯನ್ನು ರೂ. 6 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸುವ ಸಾಧ್ಯತೆಯಿದೆ.
ಹ್ಯುಂಡೈ ಎಕ್ಸ್‌ಟರ್‌ನ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ನಾವು ಈ ಮೈಕ್ರೋ ಎಸ್‌ಯುವಿಯ ವಿಶೇಷಣಗಳು ಮತ್ತು ಫೀಚರ್‌ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಈಗ ನಾವು ಅದರ ಇಂಟೀರಿಯರ್‌ನ ಒಂದು ನೋಟವನ್ನು ಪಡೆದಿದ್ದು, ಅದರ ಹಲವಾರು ಫೀಚರ್‌ಗಳನ್ನು ದೃಢೀಕರಿಸುವ ಕೆಲವು ಲೀಕ್ ಆದ ಚಿತ್ರಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಆ ಚಿತ್ರಗಳ ಕುರಿತು ಸ್ಪಲ್ಪ ಚರ್ಚಿಸೋಣ.
ಗ್ರ್ಯಾಂಡ್ i10 ನಿಯೋಸ್-ಪ್ರೇರಿತ ಡ್ಯಾಶ್‌ಬೋರ್ಡ್
ಈ ಎಕ್ಸ್‌ಟರ್‌ನ ಇಂಟೀರಿಯರ್, ಅದರಲ್ಲೂ ಅದರಲ್ಲಿನ ಲೇಔಟ್ ನಿಮಗೆ ಗ್ರ್ಯಾಂಡ್ i10 ನಿಯೋಸ್ ಅನ್ನು ನೆನಪಿಸುತ್ತದೆ. ಹ್ಯುಂಡೈ ಹ್ಯಾಚ್‌ಬ್ಯಾಕ್‌ನಂತೆಯೇ, ಎಕ್ಸ್‌ಟರ್‌ನ ಇನ್‌ಫೊಟೇನ್‌ಮೆಂಟ್ ಯೂನಿಟ್ ಮತ್ತು ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ಗಾಗಿ ಸಂಯೋಜಿತ ಹೌಸಿಂಗ್ ವಿನ್ಯಾಸವನ್ನು ಪಡೆದಿದೆ ಮತ್ತು ಡಿಸ್‌ಪ್ಲೇಯ ಕೆಳಗೆ ಅದರಲ್ಲಿರುವಂತೆಯೇ ಸೆಂಟ್ರಲ್ ಎಸಿ ವೆಂಟ್‌ಗಳನ್ನು ಹೊಂದಿದೆ. ಸೋರಿಕೆಯಾದ ಚಿತ್ರದಲ್ಲಿಯೂ ಸಹ, ಟಚ್‌ಸ್ಕ್ರೀನ್ ಗಾತ್ರವನ್ನು ನಿರ್ಧರಿಸುವುದು ಕಷ್ಟ. ಇದು ಗ್ರ್ಯಾಂಡ್ i10 ನಿಯೋಸ್‌ನಲ್ಲಿ ನೀಡಲಾದ ಅದೇ 8-ಇಂಚಿನ ಸೆಟಪ್ ಅಲ್ಲ ಆದರೆ ಖಂಡಿತವಾಗಿಯೂ i20ಯಲ್ಲಿರುವಂತೆಯೇ 10.25-ಇಂಚಿನ ಯೂನಿಟ್‌ಗಿಂತ ಚಿಕ್ಕದಾಗಿರಬಹುದು.
ಎಕ್ಸ್‌ಟರ್ ಡಿಸಿಟೈಸ್ಡ್ ಡ್ರೈವರ್ ಡಿಸ್‌ಪ್ಲೇಯನ್ನು ನೀಡುತ್ತದೆ ಎಂದು ಅವರು ಈಗಾಗಲೇ ಖಚಿತಪಡಿಸಿದ್ದು ಇದು ಹ್ಯುಂಡೈನ ಇತರ ಕಾರುಗಳಾದ ವೆನ್ಯೂ ಮತ್ತು ವರ್ನಾದಲ್ಲಿಯೂ ಕಂಡುಬರುತ್ತದೆ. ನಮಗೇನು ಕಂಡುಬಂದಿದೆಯೋ ಅದನ್ನು ಆಧರಿಸಿ ಹೇಳಬೇಕೆಂದರೆ ಎಕ್ಸ್‌ಟರ್ ಆಟೋ ಎಸಿ ಮತ್ತು ಕ್ರೂಸ್ ಕಂಟ್ರೋಲ್‌ನೊಂದಿಗೆ ಬರುತ್ತದೆ.
ನಮಗೆ ಈಗಾಗಲೇ ತಿಳಿದಿರುವ ಹೆಚ್ಚಿನ ಫೀಚರ್‌ಗಳು
ಹ್ಯುಂಡೈ ಎಕ್ಸ್‌ಟರ್‌ನ ಹಲವಾರು ಫೀಚರ್‌ಗಳನ್ನು ಈಗಾಗಲೇ ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ಈ ಮೈಕ್ರೋ ಎಸ್‌ಯುವಿಯು ಡ್ಯುಯಲ್ ಡ್ಯಾಶ್ ಕ್ಯಾಮ್ ಸೆಟಪ್ ಮತ್ತು ವಾಯ್ಸ್ ಅಸಿಸ್ಟೆಡ್ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಹೊಂದಿರಲಿದೆ. ಮಾತ್ರವಲ್ಲದೇ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್, ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಎಲ್ಲಾ ಐದು ಸೀಟುಗಳಿಗೂ ರಿಮೈಂಡರ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಸಹ ಪಡೆಯುತ್ತದೆ.
ಹ್ಯುಂಡೈ ಈ ಎಕ್ಸ್‌ಟರ್ ಅನ್ನು ಐದು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ: EX, S, SX, SX (O), ಮತ್ತು SX (O) ಕನೆಕ್ಟ್. ವೇರಿಯೆಂಟ್ ವಾರು ವಿವರಗಳನ್ನು ಮಾಡೆಲ್ ಬಿಡುಗಡೆಯು ಸಮೀಪಿಸುತ್ತಿದ್ದಂತೆ ತಿಳಿಯುತ್ತದೆ.
ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡ ಹಾರ್ದಿಕ್ ಪಾಂಡ್ಯ
ಪ್ರೊಪಲ್ಷನ್ ಕೆಲಸಗಳು
ಎಕ್ಸ್‌ಟರ್ ಪೆಟ್ರೋಲ್‌ನಲ್ಲಿ ಕೇವಲ ಒಂದು 1.2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಅಥವಾ 5-ಸ್ಪೀಡ್ ಎಎಂಟಿಯನ್ನು ಪಡೆಯುತ್ತದೆ. ಇದು ಬಿಡುಗಡೆಯ ಸಮಯದಲ್ಲಿ ಸಿಎನ್‌ಜಿಯೊಂದಿಗೆ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಸಹ ಪಡೆಯುತ್ತದೆ.
ಇದನ್ನೂ ಓದಿ: ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆಯಾದ ಹ್ಯುಂಡೈ i20 ಎನ್ ಲೈನ್
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಈ ಹ್ಯುಂಡೈ ಎಕ್ಸ್‌ಟರ್‌ನ ಆರಂಭಿಕ ಬೆಲೆಯನ್ನು ರೂ. 6 ಲಕ್ಷ (ಎಕ್ಸ್-ಶೋರೂಮ್) ನಿಗದಿಪಡಿಸುವ ಸಾಧ್ಯತೆಯಿದೆ. ಬಿಡುಗಡೆಯಾದ ನಂತರ, ಇದು ಟಾಟಾ ಪಂಚ್, ಸಿಟ್ರಾನ್ C3, ನಿಸಾನ್ ಮ್ಯಾಗ್ನೆಟ್, ರೆನಾಲ್ಟ್ ಕೈಗರ್ ಮತ್ತು ಮಾರುತಿ ಫ್ರಾಂಕ್ಸ್ ಜೊತೆಗೆ ಪೈಪೋಟಿಯನ್ನು ಹೊಂದುತ್ತದೆ.