ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್‌ನ ವಾಹನಗಳ ಪಟ್ಟಿಗೆ Renault Triber ಮತ್ತು Kiger ಸೇರ್ಪಡೆ
ರೆನಾಲ್ಟ್ ಟ್ರೈಬರ್ ಗಾಗಿ rohit ಮೂಲಕ ಅಕ್ಟೋಬರ್ 23, 2024 09:53 pm ರಂದು ಪ್ರಕಟಿಸಲಾಗಿದೆ
- 45 Views
- ಕಾಮೆಂಟ್ ಅನ್ನು ಬರೆಯಿರಿ
ರೆನಾಲ್ಟ್‌ನ ಇತ್ತೀಚಿನ ಸುತ್ತಿನ ಕಾರುಗಳನ್ನು ಹಸ್ತಾಂತರಿಸಿದ ಒಂದು ತಿಂಗಳ ನಂತರ, ಇದೀಗ ಕಾರು ತಯಾರಕರು ತನ್ನ ಭಾರತೀಯ ರೇಂಜ್‌ನಲ್ಲಿನ ಮೂರು ಮೊಡೆಲ್‌ಗಳ ಕೆಲವು ಕಾರುಗಳನ್ನು ಭಾರತೀಯ ಸೇನೆಯ 14 ಹೆಮ್ಮೆಯ ಸೈನಿಕರಿಗೆ ಉಡುಗೊರೆಯಾಗಿ ನೀಡಿದ್ದಾರೆ
2024ರ ಸೆಪ್ಟೆಂಬರ್‌ನಲ್ಲಿ, ರೆನಾಲ್ಟ್ ಇಂಡಿಯಾ ತನ್ನ ಮೊಡೆಲ್‌ಗಳ ಕೆಲವು ಕಾರುಗಳಾದ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಕಿಗರ್ ಅನ್ನು ಭಾರತೀಯ ಸೇನೆಯ 14 ಕಾರ್ಪ್ಸ್‌ಗಳಿಗೆ (ಅಂದರೆ ಫೈರ್ ಮತ್ತು ಫ್ಯೂರಿ ಕಾರ್ಪ್ಸ್) ಉಡುಗೊರೆಯಾಗಿ ನೀಡಿತ್ತು. ಇದೀಗ ಕಾರು ತಯಾರಕರು ಮತ್ತೊಮ್ಮೆ ಅದೇ ಮಾದರಿ ಕೆಲಸವನ್ನು ಮುಂದುವರೆಸಿದ್ದು, ಟ್ರೈಬರ್ ಮತ್ತು ಕಿಗರ್ ಮೊಡೆಲ್‌ಗಳನ್ನು ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ ವಿಂಗ್‌ಗೆ ಹಸ್ತಾಂತರಿಸಿದ್ದಾರೆ.
ರೆನಾಲ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ದೇಶದ ಸಿಇಓ ಆಗಿರುವ ವೆಂಕಟರಾಮ್ ಎಂ. ಹೇಳುತ್ತಾ, “ಈ ಕಾರುಗಳನ್ನು ಒದಗಿಸುವ ಮೂಲಕ ಭಾರತೀಯ ಸೇನೆಯ ಇಸ್ಟರ್ನ್ ಕಮಾಂಡ್ ಅನ್ನು ಬೆಂಬಲಿಸಲು ನಿಜವಾಗಿಯೂ ನಮಗೆ ಸಂತೋಷವಾಗುತ್ತಿದೆ. ಟ್ರೈಬರ್ ಮತ್ತು ಕಿಗರ್ ಗುಣಮಟ್ಟ, ಸುರಕ್ಷತೆ ಮತ್ತು ಮೇಕ್ ಇನ್ ಇಂಡಿಯಾದ ಉದ್ದೇಶಕ್ಕಾಗಿ ರೆನಾಲ್ಟ್‌ಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ವಾಹನಗಳು ಈಸ್ಟರ್ನ್ ಕಮಾಂಡ್‌ನ ಚಲನಶೀಲತೆ ಮತ್ತು ವ್ಯವಸ್ಥಾಪನಾ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ರೆನಾಲ್ಟ್ ಇಂಡಿಯಾವು ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ನಮ್ಮ ರಾಷ್ಟ್ರವನ್ನು ರಕ್ಷಿಸುವವರನ್ನು ಬೆಂಬಲಿಸಲು ಮುಡಿಪಾಗಿದೆ. ಈ ಕೊಡುಗೆಯು ಅವರ ಅಮೂಲ್ಯ ಸೇವೆಗಾಗಿ ನಮ್ಮ ಮೆಚ್ಚುಗೆಯ ಸಣ್ಣ ಸೂಚಕವಾಗಿದೆ” ಎಂದರು.
ರೆನಾಲ್ಟ್ ಟ್ರೈಬರ್‌ನ ಅವಲೋಕನ
ಟ್ರೈಬರ್ ಸಬ್-4ಎಮ್ ಕ್ರಾಸ್‌ಒವರ್ ಎಮ್‌ಪಿವಿ ಆಗಿ ರೆನಾಲ್ಟ್‌ನ ವಿಶಿಷ್ಟ ಪ್ರತಿಪಾದನೆಯಾಗಿದೆ, ಇದು RXE, RXL, RXT ಮತ್ತು RXZ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದು ಮಾಡ್ಯುಲರ್ ಆಸನ ವ್ಯವಸ್ಥೆಯನ್ನು ಹೊಂದಿದೆ ಮತ್ತು ಏಳು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯಬಹುದು.
ರೆನಾಲ್ಟ್ ಇದನ್ನು 1-ಲೀಟರ್ ಪೆಟ್ರೋಲ್ ಎಂಜಿನ್ (72 ಪಿಎಸ್/96 ಎನ್‌ಎಮ್) ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿಗೆ ಜೋಡಿಸಿದೆ. ಆಫರ್‌ನಲ್ಲಿರುವ ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿವೆ. ಇದರ ಸುರಕ್ಷತಾ ಪ್ಯಾಕೇಜ್ ನಾಲ್ಕರವರೆಗೆ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ರಿಯರ್‌ವ್ಯೂ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.
ಇದನ್ನೂ ಓದಿ: 2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್
ರೆನಾಲ್ಟ್ ಕಿಗರ್: ಒಂದು ಸಣ್ಣ ಪರಿಚಯ
ರೆನಾಲ್ಟ್ ಕಿಗರ್ ಸಬ್-4ಎಮ್ ಎಸ್‌ಯುವಿ ಆಗಿದ್ದು, ಇದನ್ನು RXE, RXL, RXT, RXT (O), ಮತ್ತು RXZ ಎಂಬ ಐದು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಪಡೆಯುತ್ತದೆ: 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ (72 ಪಿಎಸ್/96 ಎನ್‌ಎಮ್, 5-ಸ್ಪೀಡ್ ಮ್ಯಾನ್ಯುವಲ್ ಅಥವಾ 5-ಸ್ಪೀಡ್ ಎಎಮ್‌ಟಿ) ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100 ಪಿಎಸ್/160 ಎನ್‌ಎಮ್‌ವರೆಗೆ, 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿಯೊಂದಿಗೆ ಸಂಯೋಜಿಸಲಾಗಿದೆ).
ಪ್ರಮುಖ ಫೀಚರ್‌ಗಳೆಂದರೆ 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್ (ಟರ್ಬೊ ವೇರಿಯೆಂಟ್‌ಗಳಲ್ಲಿ ಮಾತ್ರ). ರೆನಾಲ್ಟ್ ನಾಲ್ಕು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಕ್ಯಾಮೆರಾ ಮತ್ತು ಟಿಪಿಎಮ್‌ಎಸ್‌ನಂತಹ ಸುರಕ್ಷತಾ ಫೀಚರ್‌ಗಳನ್ನು ಒದಗಿಸಿದೆ.
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ರೆನಾಲ್ಟ್ ಟ್ರೈಬರ್ ಬೆಲೆ 6 ಲಕ್ಷ ರೂ.ನಿಂದ 8.97 ಲಕ್ಷ ರೂ. ವರೆಗೆ ಇದೆ, ಆದರೆ ಕಿಗರ್‌ನ ಬೆಲೆ 6 ಲಕ್ಷ ರೂ.ನಿಂದ 11.23 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ ದೆಹಲಿ) ಇದೆ. ಟ್ರೈಬರ್ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ಗೆ ಪರ್ಯಾಯವಾಗಿದೆ. ಇದನ್ನು ಮಾರುತಿ ಎರ್ಟಿಗಾ ಮತ್ತು ಎಕ್ಸ್‌ಎಲ್6, ಟೊಯೊಟಾ ರೂಮಿಯಾನ್, ಮತ್ತು ಕಿಯಾ ಕ್ಯಾರೆನ್ಸ್‌ಗಳಿಗೆ ಆಯ್ಕೆಯಾಗಿ ಪರಿಗಣಿಸಬಹುದು.
ಮತ್ತೊಂದೆಡೆ, ರೆನಾಲ್ಟ್ ಎಸ್‌ಯುವಿ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್‌ಗಳ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಸಬ್-4ಎಮ್ ಕ್ರಾಸ್‌ಒವರ್‌ಗಳಿಗೆ ಸಹ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಟ್ರೈಬರ್ ಎಎಮ್‌ಟಿ