Skoda Kylaqನ ಇನ್ನೊಂದು ಟೀಸರ್ ಔಟ್, ಈ ಬಾರಿ ಕಂಡಿದ್ದೇನು ?
ಸ್ಕೋಡಾ kylaq ಗಾಗಿ dipan ಮೂಲಕ ಅಕ್ಟೋಬರ್ 14, 2024 11:09 am ರಂದು ಪ್ರಕಟಿಸಲಾಗಿದೆ
- 52 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕೋಡಾ ಕೈಲಾಕ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ನವೆಂಬರ್ 6, 2024 ರಂದು ವಿಶ್ವದಾದ್ಯಂತ ಲಾಂಚ್ ಅಗಲಿದ್ದು, ಇದರ ಬೆಲೆ ರೂ 8.5 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ
- ಇತ್ತೀಚಿನ ಟೀಸರ್ ಹೊರಭಾಗದ ಡಿಸೈನ್ ಅನ್ನು ಕೆಮಫ್ಲೋಜ್ ಮಾಡಿ ತೋರಿಸಿದೆ.
- ಸ್ಪ್ಲಿಟ್ ಹೆಡ್‌ಲೈಟ್ ಡಿಸೈನ್, ಸುತ್ತುವರಿದ ಟೈಲ್‌ಲೈಟ್‌ಗಳು ಮತ್ತು ಬ್ಲಾಕ್ ಅಲೊಯ್ ವೀಲ್ ಡಿಸೈನ್ ಅನ್ನು ನೀಡಲಾಗಿದೆ.
- ಇದು ಕುಶಾಕ್‌ನಲ್ಲಿ ಇರುವಂತಹ ಕ್ಯಾಬಿನ್, 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು ಸನ್‌ರೂಫ್ ಅನ್ನು ಪಡೆಯಬಹುದು.
- 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 PS/178 Nm) ಅನ್ನು ಬಳಸುವ ಸಾಧ್ಯತೆಯಿದೆ.
- ಬೆಲೆಯು ರೂ. 8.50 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಸ್ಕೋಡಾ ಕೈಲಾಕ್ ಅನ್ನು 2025 ರ ಆರಂಭದಲ್ಲಿ ಲಾಂಚ್ ಮಾಡಲು ನಿರ್ಧರಿಸಲಾಗಿದೆ ಮತ್ತು ಕಾರು ತಯಾರಕರು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಇನ್ನೊಂದು ಟೀಸರ್ ಅನ್ನು ಹೊರಬಿಟ್ಟಿದ್ದಾರೆ. ಇತ್ತೀಚಿನ ಟೀಸರ್‌ನಲ್ಲಿ, ಕೆಮಫ್ಲೋಜ್ ಮಾಡಿರುವ ಕೈಲಾಕ್ ಹೆಡ್‌ಲೈಟ್‌ಗಳು, ಟೈಲ್‌ಲೈಟ್‌ಗಳು ಮತ್ತು ಅಲೊಯ್ ವೀಲ್‌ಗಳನ್ನು ಒಳಗೊಂಡಂತೆ ಅದರ ಹೊರಭಾಗದ ಡಿಸೈನ್ ಅನ್ನು ತೋರಿಸುತ್ತದೆ. ಬನ್ನಿ, ಸ್ಕೋಡಾ ಕೈಲಾಕ್‌ನ ಇತ್ತೀಚಿನ ಟೀಸರ್‌ನಲ್ಲಿ ನೋಡಲಾಗಿರುವ ಎಲ್ಲಾ ಫೀಚರ್‌ಗಳನ್ನು ನೋಡೋಣ.
ಏನೇನು ಫೀಚರ್‌ಗಳನ್ನು ತೋರಿಸಲಾಗಿದೆ?


ಮುಂಭಾಗವು ಕುಶಾಕ್ ಮತ್ತು ಸ್ಲಾವಿಯಾದಲ್ಲಿ ಈಗಾಗಲೇ ಇರುವ ಸ್ಕೋಡಾದ ಸಿಗ್ನೇಚರ್ ಗ್ರಿಲ್ ಅನ್ನು ತೋರಿಸುತ್ತದೆ. ಇದು LED DRL ಗಳು ಮತ್ತು LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳೊಂದಿಗೆ ಸ್ಪ್ಲಿಟ್- ಹೆಡ್‌ಲೈಟ್ ಡಿಸೈನ್ ಅನ್ನು ಹೊಂದಿದೆ. ಮುಂಭಾಗದ ಬಂಪರ್ ಮೇಲೆ, ಹೆಕ್ಸಗೋನಲ್ ಡಿಸೈನ್‌ನೊಂದಿಗೆ ಕೆಳಮಟ್ಟದ ಗ್ರಿಲ್ ಅನ್ನು ನೋಡಬಹುದು.


ಪ್ರೊಫೈಲ್‌ನಲ್ಲಿ, ಇದು ಕುಶಾಕ್ ಸ್ಪೋರ್ಟ್‌ಲೈನ್ ವೇರಿಯಂಟ್‌ನೊಂದಿಗೆ ನೀಡಲಾದ 16-ಇಂಚಿನ ಅಲೊಯ್ ವೀಲ್‌ಗಳನ್ನು ಹೋಲುವ ಬ್ಲಾಕ್-ಔಟ್ ಮಲ್ಟಿ-ಸ್ಪೋಕ್ ಅಲೊಯ್ ವೀಲ್‌ಗಳನ್ನು ಹೊಂದಿದೆ. ಟರ್ನ್ ಇಂಡಿಕೇಟರ್‌ಗಳನ್ನು ORVM ಗಳಲ್ಲಿ ಇಂಟಿಗ್ರೇಟ್ ಮಾಡಲಾಗಿದೆ (ಹೊರಗಿನ ರಿಯರ್ ವ್ಯೂ ಮಿರರ್‌ಗಳು), ಮತ್ತು ನೀವು ರೂಫ್ ರೈಲ್ಸ್‌ಗಳನ್ನು ಕೂಡ ನೋಡಬಹುದು
ಹಿಂಭಾಗದಲ್ಲಿ, ಒಂದು ಟೈಲ್ ಲೈಟ್ ಯೂನಿಟ್‌ನಿಂದ ಇನ್ನೊಂದಕ್ಕೆ ಟೈಲ್‌ಗೇಟ್‌ನಲ್ಲಿ ಬಂಪ್ ಇದೆ, ಇದು ಕನೆಕ್ಟೆಡ್ ಟೈಲ್ ಲೈಟ್ ಡಿಸೈನ್ ಇರುವ ಸುಳಿವನ್ನು ನೀಡುತ್ತದೆ.
ಇದನ್ನೂ ಓದಿ: ಈ ಹಬ್ಬದ ಸೀಸನ್‌ನಲ್ಲಿ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಖರೀದಿಗೆ ನೀವು ಕಾಯಬೇಕಾಗಬಹುದು ಸುಮಾರು ಆರು ತಿಂಗಳುಗಳು
ನಿರೀಕ್ಷಿಸಲಾಗಿರುವ ಒಳಭಾಗ ಮತ್ತು ಫೀಚರ್‌ಗಳು
ಸ್ಕೋಡಾ ಇನ್ನೂ ಕೈಲಾಕ್‌ನ ಒಳಭಾಗದ ನೋಟವನ್ನು ನಮಗೆ ನೀಡಿಲ್ಲ. ಇತ್ತೀಚಿನ ಟೀಸರ್ ಬ್ಲಾಕ್ ಸೀಟ್‌ಗಳು ಮತ್ತು ಬೀಜ್ ಟಾಪ್ ಅನ್ನು ತೋರಿಸುತ್ತದೆ, ಆದರೆ ಪ್ರೊಡಕ್ಷನ್-ಸ್ಪೆಕ್ ಮಾಡೆಲ್ ಇದಕ್ಕಿಂತ ಭಿನ್ನವಾದ ಥೀಮ್ ಅನ್ನು ಹೊಂದಿರಬಹುದು.
ಡ್ಯಾಶ್‌ಬೋರ್ಡ್ ಡಿಸೈನ್ ಅನ್ನು ಸ್ಕೋಡಾ ಕುಶಾಕ್‌ನಲ್ಲಿ ಇರುವಂತೆ ನೀಡುವ ಸಾಧ್ಯತೆಯಿದೆ. ಇದು 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್‌ನೊಂದಿಗೆ 10.1-ಇಂಚಿನ ಟಚ್‌ಸ್ಕ್ರೀನ್ ಯೂನಿಟ್ ಅನ್ನು ಪಡೆಯಬಹುದು. ಕೈಲಾಕ್ 8-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋ AC, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಅನ್ನು ಕೂಡ ಪಡೆಯುವ ನಿರೀಕ್ಷೆಯಿದೆ.
ಇದು ಸುರಕ್ಷತೆಯ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ನೀಡಬಹುದು.
ನಿರೀಕ್ಷಿಸಲಾಗಿರುವ ಪವರ್‌ಟ್ರೇನ್
ಕೈಲಾಕ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಬಹುಶಃ ಕುಶಾಕ್ ಮತ್ತು ಸ್ಲಾವಿಯಾದ ಕೆಳ ಮಟ್ಟದ ವರ್ಷನ್ ಗಳಲ್ಲಿ ಕಂಡುಬರುವ 1-ಲೀಟರ್ ಟರ್ಬೋಚಾರ್ಜ್ ಆಗಿರುವ TSI ಪೆಟ್ರೋಲ್ ಎಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ. ಈ ಎಂಜಿನ್ 115 PS ಮತ್ತು 178 Nm ಅನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
ಇದನ್ನು ಕೂಡ ಓದಿ: ದೇಶದ ಸ್ಫೂರ್ತಿಯ ಸೆಲೆ ರತನ್ ಟಾಟಾ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಕುರಿತು
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ತನ್ನ ಕೈಲಾಕ್ ಎಸ್‌ಯುವಿಯ ಬೆಲೆಯನ್ನು ರೂ. 8.50 ಲಕ್ಷಗಳಿಂದ (ಎಕ್ಸ್ ಶೋ ರೂಂ) ಶುರುಮಾಡುವ ನಿರೀಕ್ಷೆಯಿದೆ. ಇದು ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ XUV 3XO ನಂತಹ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4m ಕ್ರಾಸ್‌ಒವರ್‌ಗಳೊಂದಿಗೆ ಕೂಡ ಸ್ಪರ್ಧಿಸುತ್ತದೆ.
ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.