Login or Register ಅತ್ಯುತ್ತಮ CarDekho experience ಗೆ
Login

ಹೊಸ ವಿಶೇಷ ಆವೃತ್ತಿಗಳನ್ನು ಪಡೆಯುತ್ತಿರುವ ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್

published on ಏಪ್ರಿಲ್ 15, 2023 06:41 am by ansh for ಸ್ಕೋಡಾ ಸ್ಕೋಡಾ ಕುಶಾಕ್

ಈ ವಿಶೇಷ ಆವೃತ್ತಿಗಳು ಸುಪರ್ಬ್, ಆಕ್ಟೇವಿಯಾ ಮತ್ತು ಕೊಡಿಯಾಕ್‌ನಿಂದ ಎರವಲು ಪಡೆದ ಪ್ರೀಮಿಯಂ ನೀಲಿ ಬಣ್ಣದಲ್ಲಿ ಬರುತ್ತವೆ.

  • ಸ್ಲಾವಿಯಾ ಹೊಸ ವಾರ್ಷಿಕೋತ್ಸವ ಆವೃತ್ತಿಯನ್ನು ಪಡೆಯುತ್ತದೆ ಮತ್ತು ಕುಶಾಕ್ ಲಾವಾ ಬ್ಲ್ಯೂ ಆವೃತ್ತಿಯನ್ನು ಪಡೆಯುತ್ತದೆ.
  • ಈ ವಿಶೇಷ ಆವೃತ್ತಿಗಳು ಎರಡೂ ಮಾಡೆಲ್‌ಗಳ 1.5-ಲೀಟರ್ ಟರ್ಬೋ-ಪೆಟ್ರೋಲ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
  • ಎರಡೂ ಮಾಡೆಲ್‌ಗಳು ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ವ್ಯತ್ಯಾಸಗಳನ್ನು ಪಡೆಯುತ್ತವೆ.
  • ಸ್ಲಾವಿಯಾದ ವಾರ್ಷಿಕೋತ್ಸವ ಆವೃತ್ತಿಯ ಬೆಲೆಗಳು ರೂ. 17.28 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ಕುಶಾಕ್‌ನ ಲಾವಾ ಬ್ಲ್ಯೂ ಆವೃತ್ತಿಯು ರೂ. 17.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಎರಡೂ ಎಕ್ಸ್-ಶೋರೂಮ್ ಬೆಲೆಗಳು).

ಸ್ಕೋಡಾ ಭಾರತದಲ್ಲಿ ತನ್ನ ಉಳಿದಿರುವ ಎರಡೂ ಮಾಡೆಲ್‌ಗಳಿಗೆ ಹೊಸ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ: ಸ್ಲಾವಿಯಾ ಮತ್ತು ಕುಶಾಕ್. ಮೊದಲನೆಯದು, ಮಾರ್ಚ್ 2022 ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ಹೊಸ ವಾರ್ಷಿಕೋತ್ಸವದ ಆವೃತ್ತಿಯನ್ನು ಪಡೆದರೆ, ಎರಡನೆಯದು ಲಾವಾ ಬ್ಲ್ಯೂ ಆವೃತ್ತಿಯನ್ನು ಪಡೆದಿದೆ. ಹೊಸ ವಿಶೇಷ ಆವೃತ್ತಿಗಳು ಏನನ್ನು ನೀಡುತ್ತಿವೆ ಮತ್ತು ಅವುಗಳ ಬೆಲೆ ಹೇಗಿದೆ ಎಂಬುದನ್ನು ನೋಡೋಣ:

ಬೆಲೆಗಳು

ಸ್ಲಾವಿಯಾ

ವೇರಿಯೆಂಟ್

ಸ್ಟೈಲ್

ವಾರ್ಷಿಕೋತ್ಸವ ಆವೃತ್ತಿ

ವ್ಯತ್ಯಾಸ

1.5-ಲೀಟರ್ ಟರ್ಬೋ-ಪೆಟ್ರೋಲ್ MT

ರೂ. 17 ಲಕ್ಷ

ರೂ. 17.28 ಲಕ್ಷ

+ ರೂ. 28,000

1.5- ಲೀಟರ್ ಟರ್ಬೋ-ಪೆಟ್ರೋಲ್ DCT

ರೂ. 18.40 ಲಕ್ಷ

ರೂ. 18.68 ಲಕ್ಷ

+ ರೂ. 28,000

ಕುಶಾಕ್

ವೇರಿಯೆಂಟ್

ಸ್ಟೈಲ್

ಲಾವಾ ಬ್ಲ್ಯೂ ಆವೃತ್ತಿ

ವ್ಯತ್ಯಾಸ

1.5- ಲೀಟರ್ ಟರ್ಬೋ-ಪೆಟ್ರೋಲ್ MT

ರೂ. 17.79 ಲಕ್ಷ

ರೂ. 17.99 ಲಕ್ಷ

+ ರೂ. 20,000

1.5- ಲೀಟರ್ ಟರ್ಬೋ-ಪೆಟ್ರೋಲ್ DCT

ರೂ. 18.99 ಲಕ್ಷ

ರೂ. 19.19 ಲಕ್ಷ

+ ರೂ. 20,000

ಎಲ್ಲಾ ಬೆಲೆಗಳು ಎಕ್ಸ್‌-ಶೋರೂಮ್

ಈ ಸ್ಲಾವಿಯಾದ ವಾರ್ಷಿಕೋತ್ಸವ ಆವೃತ್ತಿ ಮತ್ತು ಕುಶಾಕ್‌ನ ಲಾವಾ ಬ್ಲ್ಯೂ ಆವೃತ್ತಿಯು ಎರಡೂ ಮಾದರಿಗಳ 1.5-ಲೀಟರ್ ಸ್ಟೈಲ್ ವೇರಿಯೆಂಟ್‌ಗಳನ್ನು ಆಧರಿಸಿದೆ. ಕುಶಾಕ್‌ಗಾಗಿ, ಈ ಹೊಸ ಸೀಮಿತ ಆವೃತ್ತಿಯು ಇನ್ನೂ ಮಾಂಟೆ ಕಾರ್ಲೋಗಿಂತ ಕೆಳಗಿನ ಸ್ಥಾನದಲ್ಲಿದೆ.

ಹೊಸದೇನಿದೆ?

ಈಗ ಹೊಸ ಬಣ್ಣದಿಂದ ಪ್ರಾರಂಭವಾಗುತ್ತಿರುವ ಎರಡೂ ವಿಶೇಷ ಆವೃತ್ತಿಗಳ ಸಾಮಾನ್ಯ ಫೀಚರ್‌ಗಳ ಬಗ್ಗೆ ನೋಡೋಣ. ಸೆಡಾನ್ ಮತ್ತು ಎಸ್‌ಯುವಿ ಎರಡಕ್ಕೂ ಹೊಸ ಲಾವಾ ಬ್ಲ್ಯೂ ಬಣ್ಣವನ್ನು ತಮ್ಮ ಹೆಚ್ಚು ಪ್ರೀಮಿಯಂ ಸ್ಥಿರಸಂಗಾತಿಗಳಾದ ಸುಪರ್ಬ್, ಆಕ್ಟೆವಿಯಾ ಮತ್ತು ಕೊಡಿಯಾಕ್‌ನಿಂದ ಎರವಲು ಪಡೆಯಲಾಗಿದೆ. ಎರಡೂ ಮಾದರಿಗಳು ಕ್ರೋಮ್ ರಿಬ್‌ಗಳೊಂದಿಗೆ ಆರು ಬದಿಗಳುಳ್ಳ ಗ್ರಿಲ್, ಮುಂಭಾಗ ಮತ್ತು ಹಿಂಭಾಗದ ಮಡ್ ಫ್ಲಾಟ್‌ಗಳು, ಉತ್ತಮ ಕುಶನ್ ದಿಂಬುಗಳು ಮತ್ತು ಬ್ಯಾಡ್ಜ್‌ಗಳ ಜೊತೆಗೆ ಬಾಗಿಲುಗಳು ಮತ್ತು ಟ್ರಂಕ್‌ಗಳ ಮೇಲೆ ಲೋವರ್ ಕ್ರೋಮ್ ಅಲಂಕಾರವನ್ನು ಸಹ ಪಡೆಯುತ್ತವೆ. ಕುಶಾಕ್‌ನ ಬಿ-ಪಿಲ್ಲರ್‌ನಲ್ಲಿ ಸರಳವಾಗಿ ‘ಎಡಿಷನ್’ ಎಂದು ಬರೆದಿದ್ದರೆ, ಸ್ಲಾವಿಯಾದ ಸಿ-ಪಿಲ್ಲರ್‌ನಲ್ಲಿ ‘ಆ್ಯನಿವರ್ಸರಿ ಎಡಿಷನ್’ ಎದು ಬರೆಯಲಾಗಿದೆ.

ಈ ಸ್ಲಾವಿಯಾದ ವಾರ್ಷಿಕೋತ್ಸವ ಆವೃತ್ತಿಯು ಸ್ಕಫ್ ಪ್ಲೇಟ್ ಮತ್ತು ಸ್ಟಿಯರಿಂಗ್ ವ್ಹೀಲ್‌ನ ಕೆಳಭಾಗದಲ್ಲಿ ಆ್ಯನಿವರ್ಸರಿ ಎಡಿಷನ್ ಬ್ಯಾಡ್ಜಿಂಗ್ ಅನ್ನು ಸಹ ಪಡೆಯುತ್ತದೆ. ಈ ಸ್ಲಾವಿಯಾದ ವಾರ್ಷಿಕೋತ್ಸವ ಆವೃತ್ತಿಯು ಅಲ್ಯೂಮಿನಿಯಂ ಪೆಡಲ್‌ಗಳನ್ನು ಸಹ ಪಡೆಯುತ್ತದೆ ಮತ್ತು ಇದು 10-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಸಬ್ ಸಬ್‌ವೂಫರ್ ಮತ್ತು 380-ವ್ಯಾಟ್ ಸೌಂಡ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ. ಕುಶಾಕ್ ಲಾವಾ ಬ್ಲ್ಯೂ ಆವೃತ್ತಿಯು ಎಲ್ಲಾ ಡೋರ್‌ಗಳಲ್ಲಿ ಸ್ಕಫ್ ಪ್ಲೇಟ್ ಮತ್ತು ಪಡಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಇದನ್ನೂ ಓದಿ: ಸ್ಕೋಡಾ ಇಂಡಿಯಾ ಆಕ್ಟೇವಿಯಾ ಮತ್ತು ಸುಪರ್ಬ್ ಅನ್ನು ಸ್ಟಾಕ್‌ನಿಂದ ತೆಗೆದುಕೊಂಡ ಸ್ಕೋಡಾ ಇಂಡಿಯಾ

ಪ್ರಸ್ತುತ, ಎರಡೂ ಮಾದರಿಗಳು ಎಂಟು-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸಿಂಗಲ್-ಪೇನ್ ಸನ್‌ರೂಫ್, ವೇಂಟಿಲೇಟೆಡ್ ಮುಂಭಾಗದ ಸೀಟುಗಳು, ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಸಾಮಾನ್ಯ ಫೀಚರ್‌ಗಳನ್ನು ಅವುಗಳ ಟಾಪ್-ಸ್ಪೆಕ್ ಸ್ಟೈಲ್ ವೇರಿಯೆಂಟ್‌ಗಳಲ್ಲಿ ನೀಡುತ್ತಿವೆ.

ಪವರ್‌ಟ್ರೇನ್

ಈ ಎರಡೂ ಸ್ಕೋಡಾ ಮಾದರಿಗಳ ವಿಶೇಷ ಆವೃತ್ತಿಗಳು 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು ಅವು 150PS ಮತ್ತು 250Nm ಹೊರಹಾಕುತ್ತವೆ. ಈ ಯೂನಿಟ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ DCT ಯೊಂದಿಗೆ ಜೋಡಿಸಲಾಗಿದೆ.

ಇದನ್ನೂ ಓದಿ: ಭಾರತದ ಅತ್ಯಂತ ಸುರಕ್ಷಿತ ಕಾರುಗಳಾಗಿ ಟೈಗನ್ ಮತ್ತು ಕುಶಾಕ್ ಅನ್ನು ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ

ಲೋವರ್-ಸ್ಪೆಕ್ ವೆರಿಯೆಂಟ್ ಆಗಿರುವ ಈ ಮಾಡೆಲ್ ಗಳು 115PS ಮತ್ತು 178Nm ಮಾಡುವ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತವೆ.

ಪ್ರತಿಸ್ಪರ್ಧಿಗಳು

ಈ ಸ್ಕೋಡಾ ಸ್ಲಾವಿಯಾ ರೂ. 11.39 ಲಕ್ಷ ಮತ್ತು ರೂ. 18.45 ಲಕ್ಷ (ಎಕ್ಸ್-ಶೋರೂಮ್), ಬೆಲೆಯ ಫೋಕ್ಸ್‌ವ್ಯಾಗನ್ ವರ್ಟಸ್, ಹೋಂಡಾ ಸಿಟಿ ಮತ್ತು ಹ್ಯುಂಡೈ ವರ್ನಾ ಗೆ ಪ್ರತಿಸ್ಪರ್ಧಿಯಾಗಿದೆ. ರೂ. 11.59 ಲಕ್ಷದಿಂದ ರೂ. 18.99 ಲಕ್ಷದವರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರುವ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗನ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ. ಜೊತೆಗೆ ಸ್ಪರ್ಧಿಸುತ್ತವೆ.

ಇನ್ನಷ್ಟು ಇಲ್ಲಿ ಓದಿ : ಕುಶಾಕ್ ಆನ್ ರೋಡ್ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 14 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸ್ಕೋಡಾ ಸ್ಕೋಡಾ ಕುಶಾಕ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ