• English
  • Login / Register

ಈ ಹಬ್ಬದ ಸೀಸನ್‌ನಲ್ಲಿ ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್‌ ಕಾರುಗಳ ಬೆಲೆಯಲ್ಲಿ ಇಳಿಕೆ

ಸ್ಕೋಡಾ ಸ್ಲಾವಿಯಾ ಗಾಗಿ shreyash ಮೂಲಕ ಅಕ್ಟೋಬರ್ 05, 2023 04:09 pm ರಂದು ಪ್ರಕಟಿಸಲಾಗಿದೆ

  • 55 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಕೋಡಾ ಸಂಸ್ಥೆಯು ಎರಡೂ ಮಾದರಿಗಳ ಟಾಪ್‌ ಸ್ಪೆಕ್‌ ವೇರಿಯಂಟ್‌ ಗಳಲ್ಲಿ ಇನ್ನಷ್ಟು ಹೊಸ ವೈಶಿಷ್ಟ್ಯಗಳನ್ನು ನೀಡಲಿದ್ದು, ಸ್ಲಾವಿಯಾವು ಸದ್ಯವೇ ಮ್ಯಾಟ್‌ ಆವೃತ್ತಿಯನ್ನು ಪಡೆಯಲಿದೆ

Skoda Slavia And Skoda Kushaq Starting Prices Reduced This Festive Season

  • ಸ್ಲಾವಿಯಾದ ಬೇಸ್‌ ಸ್ಪೆಕ್‌ ದರದಲ್ಲಿ ರೂ. 50,000 ದಷ್ಟು ಇಳಿಕೆ ಉಂಟಾದರೆ, ಕುಶಾಕ್‌ ಮಾದರಿಯ ಬೇಸ್‌ ಸ್ಪೆಕ್‌ ಟ್ರಿಮ್‌ ನಲ್ಲಿ ರೂ. 70,000 ದಷ್ಟು ಇಳಿಕೆ ಉಂಟಾಗಲಿದೆ.
  • ಎರಡೂ ಮಾದರಿಗಳ ಉನ್ನತ ವೇರಿಯಂಟ್‌ ಗಳಲ್ಲಿ ರೂ. 32,000 ದಷ್ಟು ಬೆಲೆ ಹೆಚ್ಚಳ ಉಂಟಾಗಿದೆ.
  • ಸ್ಕೋಡಾ ಸಂಸ್ಥೆಯು ಎರಡೂ ಮಾದರಿಗಳ ಟಾಪ್‌ ಸ್ಪೆಕ್‌ ವೇರಿಯಂಟ್‌ ಗಳಲ್ಲಿ ಪವರ್ಡ್‌ ಫ್ರಂಟ್‌ ಸೀಟುಗಳು ಮತ್ತು ಫೂಟ್‌ ವೆಲ್‌ ಇಲ್ಯುಮಿನೇಶನ್‌ ಇತ್ಯಾದಿ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಿದೆ.
  • ಸ್ಕೋಡಾ ಸ್ಲಾವಿಯಾ ಕಾರು ಸದ್ಯವೇ ಮ್ಯಾಟ್‌ ಆವೃತ್ತಿಯನ್ನು ಪಡೆಯಲಿದೆ.

ಹಬ್ಬದ ಋತು ಪ್ರಾರಂಭಗೊಳ್ಳುವ ಮೊದಲೇ ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ಮಾದರಿಗಳ ಬೆಲೆಗಳನ್ನು ಪರಿಷ್ಕರಿಸಲಾಗಿದ್ದು, ಪರಿಣಾಮವಾಗಿ ಅವುಗಳ ಬೆಲೆಯಲ್ಲಿ ಇಳಿಕೆ ಉಂಟಾಗಿದ್ದರೆ, ಎರಡೂ ಮಾದರಿಗಳ ಉನ್ನತ ವೇರಿಯಂಟ್‌ ಗಳಲ್ಲಿ ಮಾತ್ರ ಬೆಲೆ ಹೆಚ್ಚಳ ಕಂಡುಬಂದಿದೆ.  ಸ್ಕೋಡಾ ಸಂಸ್ಥೆಯ ಎರಡೂ ಮಾದರಿಗಳು ಸೀಮಿತ ಅವಧಿಗೆ ರೂ. 10.89 ಲಕ್ಷದಷ್ಟು (ಎಕ್ಸ್‌ ಶೋರೂಂ, ಪ್ಯಾನ್‌ ಇಂಡಿಯಾ) ಆರಂಭಿಕ ಬೆಲೆಗೆ ದೊರೆಯಲಿವೆ.

ಎರಡೂ ಮಾದರಿಗಳ ವೇರಿಯಂಟ್‌ ಗಳಿಗೆ ಅನುಗುಣವಾಗಿ ಬೆಲೆಗಳ ವಿವರವನ್ನು ನಾವು ಈ ಕೆಳಗೆ ನೀಡಿದ್ದೇವೆ.

ಸ್ಕೋಡಾ ಸ್ಲಾವಿಯಾ

Skoda Slavia

ವೇರಿಯಂಟ್‌

ಹಳೆಯ ಬೆಲೆಗಳು

ಹೊಸ ಬೆಲೆಗಳು

ವ್ಯತ್ಯಾಸ

ಆಕ್ಟಿವ್ 1.0 TSI MT

ರೂ 11.39 ಲಕ್ಷ

ರೂ 10.89 ಲಕ್ಷ

(ರೂ. 50,000)‌

ಅಂಬಿಷನ್‌ ಪ್ಲಸ್ 1.0 TSI MT

ರೂ 12.49 ಲಕ್ಷ

ರೂ 12.49 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಅಂಬಿಷನ್‌ 1.0 TSI MT

ರೂ 13.19 ಲಕ್ಷ

ರೂ 13.29 ಲಕ್ಷ

+ ರೂ 10,000

ಅಂಬಿಷನ್‌ ಪ್ಲಸ್ 1.0 TSI AT

ರೂ 13.79 ಲಕ್ಷ

ರೂ 13.79 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಅಂಬಿಷನ್‌ 1.0 TSI AT

ರೂ 14.49 ಲಕ್ಷ

ರೂ 14.59 ಲಕ್ಷ

+ ರೂ 10,000

ಸ್ಟೈಲ್ (NSR) 1.0 TSI MT

ರೂ 14.48 ಲಕ್ಷ

ರೂ 14.62 ಲಕ್ಷ

+ ರೂ 14,000

ಅಂಬಿಷನ್‌ 1.5 TSI MT

ರೂ 14.94 ಲಕ್ಷ

ರೂ 15.04 ಲಕ್ಷ

+ ರೂ 10,000

ಅಂಬಿಷನ್‌ 1.5 TSI ‌DSG

ರೂ 16.24 ಲಕ್ಷ

ರೂ 16.34 ಲಕ್ಷ

+ ರೂ 10,000

ಸ್ಟೈಲ್ 1.0 TSI MT

ರೂ 14.80 ಲಕ್ಷ

ರೂ 15.12 ಲಕ್ಷ

+ ರೂ 32,000

ಸ್ಟೈಲ್ 1.0 TSI AT

ರೂ 16 ಲಕ್ಷ

ರೂ 16.32 ಲಕ್ಷ

+ ರೂ 32,000

ಸ್ಟೈಲ್ 1.5 TSI MT

ರೂ 17 ಲಕ್ಷ

ರೂ 17.32 ಲಕ್ಷ

+ ರೂ 32,000

ಸ್ಟೈಲ್ 1.5 TSI DSG

ರೂ 18.40 ಲಕ್ಷ

ರೂ 18.72 ಲಕ್ಷ

+ ರೂ 32,000

 

ಸ್ಕೋಡಾ ಕುಶಾಕ್

Skoda Kushaq

ವೇರಿಯಂಟ್‌

ಹಳೆಯ ಬೆಲೆಗಳು

ಹೊಸ ಬೆಲೆಗಳು

ವ್ಯತ್ಯಾಸ

ಆಕ್ಟಿವ್ 1.0 TSI MT

ರೂ 11.59 ಲಕ್ಷ

ರೂ 10.89 ಲಕ್ಷ

(ರೂ. 70,000)‌

ಓನಿಕ್ಸ್ ಪ್ಲಸ್ 1.0 TSI MT‌ (ಹೊಸ)

ರೂ 11.59 ಲಕ್ಷ

ರೂ 11.59 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಓನಿಕ್ಸ್ 1.0 TSI MT

ರೂ 12.39 ಲಕ್ಷ

ರೂ 12.39 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಅಂಬಿಷನ್‌ 1.0 TSI MT

ರೂ 13.34 ಲಕ್ಷ

ರೂ 13.53 ಲಕ್ಷ

+ ರೂ 19,000

ಅಂಬಿಷನ್‌ 1.0 TSI AT

ರೂ 15.14 ಲಕ್ಷ

ರೂ 15.32 ಲಕ್ಷ

+ ರೂ 18,000

ಸ್ಟೈಲ್ (NSR) 1.0 TSI MT

ರೂ 15.59 ಲಕ್ಷ

ರೂ 15.91 ಲಕ್ಷ

+ ರೂ 32,000

ಸ್ಟೈಲ್ 1.0 TSI MT

ರೂ 15.79 ಲಕ್ಷ

ರೂ 16.11 ಲಕ್ಷ

+ ರೂ 32,000

ಸ್ಟೈಲ್ 1.0 TSI AT

ರೂ 17.39 ಲಕ್ಷ

ರೂ 17.71 ಲಕ್ಷ

+ ರೂ 32,000

ಸ್ಟೈಲ್‌ ಮ್ಯಾಟ್‌ ಎಡಿಷನ್ 1.0 TSI MT

ರೂ 16.19 ಲಕ್ಷ

ರೂ 16.19 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಸ್ಟೈಲ್‌ ಮ್ಯಾಟ್‌ ಎಡಿಷನ್ 1.0 TSI AT

ರೂ. 17.79 ಲಕ್ಷ 

ರೂ 17.79 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಸ್ಟೈಲ್‌ ಮ್ಯಾಟ್‌ ಎಡಿಷನ್ 1.0 TSI MT

ರೂ 16.19 ಲಕ್ಷ

ರೂ 16.19 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಸ್ಟೈಲ್‌ ಮ್ಯಾಟ್‌ ಎಡಿಷನ್ 1.0 TSI AT

ರೂ. 17.79 ಲಕ್ಷ 

ರೂ 17.79 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಮೋಂಟೆ ಕಾರ್ಲೊ 1.0 TSI MT

ರೂ 16.49 ಲಕ್ಷ

ರೂ 16.81 ಲಕ್ಷ

+ ರೂ 32,000

ಮೋಂಟೆ ಕಾರ್ಲೊ 1.0 TSI AT

ರೂ 18.09 ಲಕ್ಷ

ರೂ 18.41 ಲಕ್ಷ

+ ರೂ 32,000

ಅಂಬಿಷನ್‌ 1.5 TSI MT

ರೂ 15 ಲಕ್ಷ

ರೂ 15.18 ಲಕ್ಷ

+ ರೂ 18,000

ಅಂಬಿಷನ್‌ 1.5 TSI ‌DSG

ರೂ 16.79 ಲಕ್ಷ

ರೂ 16.98 ಲಕ್ಷ

+ ರೂ 19,000

ಸ್ಟೈಲ್ 1.5 TSI MT

ರೂ 17.79 ಲಕ್ಷ

ರೂ 18.11 ಲಕ್ಷ

+ ರೂ 32,000

ಸ್ಟೈಲ್ 1.5 TSI DSG

ರೂ 19 ಲಕ್ಷ

ರೂ 19.31 ಲಕ್ಷ

+ ರೂ 31,000

ಸ್ಟೈಲ್‌ ಮ್ಯಾಟ್‌ ಎಡಿಷನ್ 1.5 TSI MT

ರೂ 18.19 ಲಕ್ಷ

ರೂ 18.19 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಸ್ಟೈಲ್‌ ಮ್ಯಾಟ್‌ ಎಡಿಷನ್ 1.5 TSI DSG

ರೂ 19.39 ಲಕ್ಷ

ರೂ 19.39 ಲಕ್ಷ

ಯಾವುದೇ ಬದಲಾವಣೆ ಇಲ್ಲ

ಮೋಂಟೆ ಕಾರ್ಲೊ 1.5 TSI MT

ರೂ 18.49 ಲಕ್ಷ

ರೂ 18.81 ಲಕ್ಷ

+ ರೂ 32,000

ಮೋಂಟೆ ಕಾರ್ಲೊ 1.5 TSI DSG

ರೂ 19.69 ಲಕ್ಷ

ರೂ 20.01 ಲಕ್ಷ

+ ರೂ 32,000

  • ಸ್ಲಾವಿಯಾದ ಬೇಸ್‌ ಸ್ಪೆಕ್‌ ಆಕ್ಟಿವ್‌ ವೇರಿಯಂಟ್‌ ನ ದರದಲ್ಲಿ ರೂ. 50,000 ದಷ್ಟು ಇಳಿಕೆ ಉಂಟಾದರೆ, ಕುಶಾಕ್‌ ಮಾದರಿಯ ಬೇಸ್‌ ಸ್ಪೆಕ್‌ ಆಕ್ಟಿವ್ ಟ್ರಿಮ್‌ ನಲ್ಲಿ ರೂ. 70,000 ದಷ್ಟು ಇಳಿಕೆ ಉಂಟಾಗಲಿದೆ.
  • ಸ್ಲಾವಿಯಾದ ಮಿಡ್‌ ಸ್ಪೆಕ್‌ ಆಂಬಿಷನ್‌ ವೇರಿಯಂಟ್‌ ನಲ್ಲಿ ರೂ. 10,000 ದಷ್ಟು ಹೆಚ್ಚಳ ಉಂಟಾದರೆ, ಕುಶಾಕ್‌ ಮಿಡ್‌ ಸ್ಪೆಕ್‌ ಆಂಬಿಷನ್‌ ರೂ. 19,000 ದಷ್ಟು ದುಬಾರಿಯಾಗಲಿದೆ.
  • ಸ್ಲಾವಿಯಾ ಮತ್ತು ಕುಶಾಕ್‌ ಮಾದರಿಗಳ ಟಾಪ್‌ ಸ್ಪೆಕ್‌ ಸ್ಟೈಲ್‌ ವೇರಿಯಂಟ್‌ ಗಳಲ್ಲಿ ರೂ. 32,000 ದಷ್ಟು ಹೆಚ್ಚಳ ಉಂಟಾಗಲಿದೆ. 
  • ಸ್ಕೋಡಾ ಕುಶಾಕ್‌ ಮಾದರಿಯ ಮ್ಯಾಟ್‌ ಆವೃತ್ತಿ ವೇರಿಯಂಟ್‌ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ.

ಇದನ್ನು ಸಹ ನೋಡಿರಿ: ಹಬ್ಬದ ಋತುವಿಗೆ ಮೊದಲೇ ಹೋಂಟಾ ಅಮೇಝ್‌ ಎಲೀಟ್‌ ಮತ್ತು ಸಿಟಿ ಎಲಿಗೆಂಟ್‌ ಆವೃತ್ತಿ ಬಿಡುಗಡೆ

ವೈಶಿಷ್ಟ್ಯಗಳಲ್ಲಿ ಬದಲಾವಣೆ ಮತ್ತು ಸ್ಲಾವಿಯಾ ಮ್ಯಾಟ್‌ ಆವೃತ್ತಿ

Skoda Kushaq Cabin

 ಬೇಸ್‌ ಸ್ಪೆಕ್‌ ಬೆಲೆಗಳಲ್ಲಿ ಇಳಿಕೆ ಮಾಡುವ ಜೊತೆಗೆ ಸ್ಕೋಡಾ ಸಂಸ್ಥೆಯು ಎರಡೂ ಮಾದರಿಗಳ ಟಾಪ್‌ ಸ್ಪೆಕ್‌ ಸ್ಟೈಲ್‌ ವೇರಿಯಂಟ್‌ ಗಳಲ್ಲಿ ಪವರ್ಡ್‌ ಫ್ರಂಟ್‌ ಸೀಟುಗಳು ಮತ್ತು ಫೂಟ್‌ ವೆಲ್‌ ಇಲ್ಯುಮಿನೇಶನ್‌ ಇತ್ಯಾದಿ ವೈಶಿಷ್ಟ್ಯಗಳನ್ನು ಸೇರಿಸಲಿದೆ. ಅಲ್ಲದೆ, ಫೋಕ್ಸ್‌ ವ್ಯಾಗನ್‌ ಸಂಸ್ಥೆಯು ಇತ್ತೀಚೆಗೆ ವರ್ಟಸ್‌ ಮತ್ತು ಟೈಗುನ್‌ ಮಾದರಿಗಳಲ್ಲಿ ಈ ವೈಶಿಷ್ಟ್ಯಗಳನ್ನು ಅಳವಡಿಸಿದೆ.

ಸ್ಕೋಡಾ ಸ್ಲಾವಿಯಾ ಮಾದರಿಯು, ತನ್ನ SUV ದಾಯದಿ ಕುಶಾಕ್‌ ನ ನಂತರ ಸದ್ಯವೇ ಮ್ಯಾಟ್‌ ಆವೃತ್ತಿಯ ಕ್ಲಬ್‌ ಅನ್ನು ಸೇರಿಕೊಳ್ಳಲಿದೆ. ಈ ಕಾಂಪ್ಯಾಕ್ಟ್‌ ಸೆಡಾನ್‌ ನ ವಿಶೇಷ ಆವೃತ್ತಿಯು ತನ್ನ ಟಾಪ್‌ ಸ್ಪೆಕ್‌ ಸ್ಟೈಲ್‌ ವೇರಿಯಂಟ್‌ ಅನ್ನು ಆಧರಿಸಿ ಇರಲಿದೆ.

 

ಹೊಸ ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು

ಸ್ಕೋಡಾ ಸ್ಲಾವಿಯಾ ಕಾರಿನ ಬೆಲೆಯು ರೂ. 10.89 ಲಕ್ಷದಿಂದ ರೂ. 18.72 ಲಕ್ಷದ ನಡುವೆ ಇದ್ದರೆ, ಕುಶಾಕ್‌ ನ ಬೆಲೆಯು ರೂ. 10.89 ಲಕ್ಷದಿಂದ ರೂ. 20.01 ಲಕ್ಷದ ನಡುವೆ ಇರಲಿದೆ.

ಸ್ಕೋಡಾದ ಈ ಸೆಡಾನ್‌ ಕಾರು ಫೋಕ್ಸ್‌ ವ್ಯಾಗನ್‌ ವರ್ಟಸ್, ಮಾರುತಿ ಸುಝುಕಿ ಸಿಯಾಝ್, ಹ್ಯುಂಡೈ ವೆರ್ನಾ, ಮತ್ತು ಹೋಂಡಾ ಸಿಟಿ ಇತ್ಯಾದಿ ಮಾದರಿಗಳೊಂದಿಗೆ ಸ್ಪರ್ಧಿಸಲಿದೆ. ಇನ್ನೊಂದೆಡೆ ಕುಶಾಕ್‌ ಮಾದರಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ ವ್ಯಾಗನ್‌ ಟೈಗುನ್, ಮಾರುಟಿ ಸುಝುಕಿ ಗ್ರಾಂಡ್‌ ವಿಟಾರ, ಟೊಯೊಟಾ ಅರ್ಬನ್‌ ಕ್ರೂಸರ್‌ ಹೈರೈಡರ್, ಸಿಟ್ರನ್ C3 ‌ಏರ್‌ ಕ್ರಾಸ್, ಹೋಂಡಾ ಎಲೆವೇಟ್, ಮತ್ತು  MG ಆಸ್ಟರ್‌ ಇತ್ಯಾದಿ ಪ್ರತಿಸ್ಪರ್ಧಿಗಳನ್ನು ಹೊಂದಿದೆ.

ಎಲ್ಲಾ ಬೆಲೆಗಳು ಪ್ಯಾನ್‌ ಇಂಡಿಯಾ ಎಕ್ಸ್-ಶೋರೂಂ ಬೆಲೆಗಳಾಗಿವೆ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ಲಾವಿಯಾ ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Skoda ಸ್ಲಾವಿಯಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience