2025 ರ ಆರಂಭದಲ್ಲಿ ಭಾರತಕ್ಕೆ ಬರಲಿರುವ Skodaದ ಸಬ್-4m SUV ಮತ್ತೊಂದು ಟೀಸರ್ ಔಟ್- ಹಿಂಭಾಗದ ಲುಕ್ ಬಹಿರಂಗ
ಸ್ಕೋಡಾ kylaq ಗಾಗಿ rohit ಮೂಲಕ ಜುಲೈ 16, 2024 06:39 pm ರಂದು ಪ್ರಕಟಿಸಲಾಗಿದೆ
- 42 Views
- ಕಾಮೆಂಟ್ ಅನ್ನು ಬರೆಯಿರಿ
2025 ರಲ್ಲಿ ಹೊರಬರಲಿರುವ ಹೊಸ ಸ್ಕೋಡಾ SUVಯು ಕಂಪನಿಯ SUV ಶ್ರೇಣಿಯಲ್ಲಿ ಎಂಟ್ರಿ ಲೆವೆಲ್ ಮಾಡೆಲ್ ಆಗಿದೆ
-
ಸ್ಕೋಡಾ 2024 ರ ಆರಂಭದಲ್ಲಿ ಹೊಸ ಸಬ್-4m SUV ಅನ್ನು ಘೋಷಿಸಿತು.
-
ಇತ್ತೀಚಿನ ಡಿಸೈನ್ L-ಆಕಾರದ LED ಟೈಲ್ ಲೈಟ್‌ಗಳು ಮತ್ತು ಹಿಂಭಾಗದಲ್ಲಿ 'ಸ್ಕೋಡಾ' ಬ್ಯಾಡ್ಜಿಂಗ್ ಅನ್ನು ತೋರಿಸುತ್ತದೆ.
-
ಹಿಂದಿನ ಟೀಸರ್ ನಲ್ಲಿ ತೋರಿಸಿದಂತೆ ಸ್ಕೋಡಾದ ಮುಂಭಾಗವು ಬಟರ್‌ಫ್ಲೈ ಗ್ರಿಲ್ ಮತ್ತು ಸ್ಪ್ಲಿಟ್-LED ಲೈಟಿಂಗ್ ಸೆಟಪ್ ಅನ್ನು ಪಡೆಯುತ್ತದೆ.
-
ನಿರೀಕ್ಷಿಸಲಾಗಿರುವ ಫೀಚರ್ ಗಳಲ್ಲಿ 10-ಇಂಚಿನ ಟಚ್‌ಸ್ಕ್ರೀನ್, ಸನ್‌ರೂಫ್ ಮತ್ತು ಆರು ಏರ್‌ಬ್ಯಾಗ್‌ಗಳು ಸೇರಿವೆ.
-
ಇದು ಕುಶಾಕ್ SUV ಯಲ್ಲಿರುವ ಚಿಕ್ಕದಾದ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಬರುವ ಸಾಧ್ಯತೆಯಿದೆ.
-
2025 ರ ಆರಂಭದಲ್ಲಿ ಬಿಡುಗಡೆ ಅಗಲಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
-
ಬೆಲೆಯು ರೂ 8.50 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋ ರೂಂ).
2024 ರ ಆರಂಭದಲ್ಲಿ ಸಬ್-4m SUV ಅನ್ನು ತಯಾರಿಸುವುದಾಗಿ ಹೇಳಿದ ನಂತರ, ಸ್ಕೊಡಾ ಈಗ ಕಿಯಾ ಸೊನೆಟ್ ನ ಹೊಸ ಪ್ರತಿಸ್ಪರ್ಧಿಯ ಮತ್ತೊಂದು ಡಿಸೈನ್ ಸ್ಕೆಚ್ ಅನ್ನು ಶೇರ್ ಮಾಡಿದೆ, ಮತ್ತು ಇದು ಹಿಂಭಾಗದ ಲುಕ್ ಅನ್ನು ತೋರಿಸುತ್ತದೆ. ಸ್ಕೋಡಾ ಸಬ್-4m SUV ಯ ಹಲವಾರು ಟೆಸ್ಟ್ ಗಾಡಿಗಳನ್ನು ಈಗಾಗಲೇ ರಸ್ತೆಗಳಲ್ಲಿ ಸಂಪೂರ್ಣ ಕೆಮಫ್ಲೇಜ್ ನೊಂದಿಗೆ ನೋಡಲಾಗಿದೆ.
ರಿಯರ್ ಪ್ರೊಫೈಲ್ ನ ಟೀಸರ್
ಇತ್ತೀಚಿನ ಟೀಸರ್ ಚಿಕ್ಕದಾದ ಸ್ಕೋಡಾ SUV ಯನ್ನು LED ಟೈಲ್‌ಲೈಟ್‌ಗಳನ್ನು ತಲೆಕೆಳಗಾದ 'L' ಆಕಾರದೊಂದಿಗೆ ತೋರಿಸುತ್ತದೆ. ನಾವು ಟೈಲ್‌ಗೇಟ್‌ನಲ್ಲಿ ಸ್ಕೋಡಾ ಹೆಸರನ್ನು ನೋಡಬಹುದು, ಇದನ್ನು ದೊಡ್ಡದಾದ ಕುಶಾಕ್ ಮಾಡೆಲ್ ನಲ್ಲಿ ಕೂಡ ನೀಡಲಾಗಿದೆ.
ಹಿಂದಿನ ಟೀಸರ್‌ಗಳು ಮತ್ತು ಸ್ಪೈ ಫೋಟೋಗಳು, ಈ ಕ್ಲಾಸಿಕ್ ಸ್ಕೋಡಾದಲ್ಲಿ ಬಟರ್‌ಫ್ಲೈ ಗ್ರಿಲ್ ಮತ್ತು ಮುಂಭಾಗದಲ್ಲಿ ಸ್ಪ್ಲಿಟ್ LED ಲೈಟಿಂಗ್ ಡಿಸೈನ್ ನಂತಹ ಎಲಿಮೆಂಟ್ ಗಳನ್ನು ನಿರೀಕ್ಷಿಸಬಹುದು ಎಂದು ನಮಗೆ ತೋರಿಸಿವೆ.
ನಿರೀಕ್ಷಿಸಲಾಗಿರುವ ಕ್ಯಾಬಿನ್ ಮತ್ತು ಫೀಚರ್ ಗಳು
ಸಣ್ಣ ಸ್ಕೋಡಾ SUVಯಲ್ಲಿ ಕುಶಾಕ್‌ನಲ್ಲಿರುವ ಅದೇ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 10-ಇಂಚಿನ ಟಚ್‌ಸ್ಕ್ರೀನ್ ಅನ್ನು ನಾವು ನಿರೀಕ್ಷಿಸಬಹುದು. ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್, ಕ್ರೂಸ್ ಕಂಟ್ರೋಲ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ಇತರ ಫೀಚರ್ ಗಳನ್ನು ಕೂಡ ನಿರೀಕ್ಷಿಸಬಹುದು.
ಸ್ಕೋಡಾ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಫೀಚರ್ ಗಳನ್ನು ನೀಡಬಹುದು.
ಇದನ್ನು ಕೂಡ ಓದಿ: 7 ಶೋರೂಮ್ ಫೋಟೋಗಳ ಮೂಲಕ ಶವಮಿ SU7 ಎಲೆಕ್ಟ್ರಿಕ್ ಸೆಡಾನ್ ವಿವರಗಳು
ಕೇವಲ ಒಂದು ಎಂಜಿನ್ ಆಯ್ಕೆಯನ್ನು ಪಡೆಯುವ ಸಾಧ್ಯತೆ
ಹೊಸ ಸ್ಕೊಡಾ ಸಬ್-4m SUV ಅನ್ನು ಕುಶಾಕ್‌ನಿಂದ ಪಡೆದ 1-ಲೀಟರ್ ಟರ್ಬೊ-ಪೆಟ್ರೋಲ್ ಯೂನಿಟ್ ನೊಂದಿಗೆ (115 PS/178 Nm) ನೀಡುವ ಸಾಧ್ಯತೆಯಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೊಡಾ ಸಬ್-4m SUV 2025 ರ ಆರಂಭದಲ್ಲಿ ಜಾಗತಿಕವಾಗಿ ಲಾಂಚ್ ಆಗಲಿದೆ ಮತ್ತು ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ, ಇದರ ಬೆಲೆಯು ರೂ. 8.50 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಮಾರುತಿ ಬ್ರೆಝಾ, ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ XUV 3XO, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಎರಡು ಸಬ್-4m ಕ್ರಾಸ್‌ಒವರ್‌ಗಳಾದ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಗೆ ಪ್ರತಿಸ್ಪರ್ಧಿಯಾಗಿದೆ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.