Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಆಲ್ಟ್ರೋಝ್ Vs ಮಾರುತಿ ಬಲೆನೋ Vs ಟೊಯೋಟಾ ಗ್ಲಾನ್ಝಾ ಸಿಎನ್‌ಜಿ ಮೈಲೇಜ್ ಹೋಲಿಕೆ

ಟಾಟಾ ಆಲ್ಟ್ರೋಝ್ ಗಾಗಿ tarun ಮೂಲಕ ಆಗಸ್ಟ್‌ 14, 2023 02:15 pm ರಂದು ಪ್ರಕಟಿಸಲಾಗಿದೆ

ಮಾರುತಿ ಬಲೆನೋ ಮತ್ತು ಟೊಯೋಟಾ ಗ್ಲಾನ್ಝಾ ಕೇವಲ ಎರಡು ಸಿಎನ್‌ಜಿ ವೇರಿಯೆಂಟ್‌ಗಳ ಆಯ್ಕೆಯನ್ನು ಹೊಂದಿದ್ದರೆ, ಟಾಟಾ ಆಲ್ಟ್ರೋಝ್ ಅನ್ನು ಆರು ವೇರಿಯೆಂಟ್ ಗಳಲ್ಲಿ ಆಯ್ಕೆ ಮಾಡಬಹುದು.

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ನೀವು CNG ಆಯ್ಕೆ ಮಾಡಲು ಬಯಸಿದರೆ, ಟಾಟಾ ಆಲ್ಟ್ರೋಝಾ, ಮಾರುತಿ ಬಲೆನೋ, ಮತ್ತು ಟೊಯೋಟಾ ಗ್ಲಾನ್ಝಾ ನಿಮ್ಮ ಆಯ್ಕೆಯಾಗಿರುತ್ತದೆ. ಎಲ್ಲವೂ ಸಮಾನ ಬೆಲೆಯನ್ನು ಹೊಂದಿದ್ದು, ಫೀಚರ್‌ಗಳ ಪಟ್ಟಿಯೂ ಒಂದೇ ರೀತಿಯದ್ದಾಗಿವೆ. ಸ್ಪೋರ್ಟಿಯರ್ ಹ್ಯುಂಡೈ i20 ಈ ವಿಭಾಗದಲ್ಲಿ ಲಭ್ಯವಿರುವುದಿಲ್ಲ.

ಆಲ್ಟ್ರೋಝ್ CNG ಮೇ 2023ರಲ್ಲಿ ಪಾದಾರ್ಪಣೆ ಮಾಡಿದ್ದರೆ, ಟಾಟಾ ಮಾತ್ರ ತನ್ನ ಕ್ಲೈಮ್ ಮಾಡಲಾದ ಅಂಕಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ತನ್ನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಮತ್ತು ತದ್ರೂಪಿಯೊಂದಿಗಿನ ಹೊಲಿಗೆಯನ್ನು ನೋಡೋಣ.

ಮೈಲೇಜ್ ಹೋಲಿಕೆ

ಸ್ಪೆಕ್‌ಗಳು

ಆಲ್ಟ್ರೋಝ್

ಬಲೆನೊ/ಗ್ಲಾನ್ಝಾ

ಇಂಜಿನ್

1.2-ಲೀಟರ್ ಪೆಟ್ರೋಲ್ -CNG

1.2- ಲೀಟರ್ ಪೆಟ್ರೋಲ್ -CNG

ಪವರ್

73.5PS

77.5PS

ಟಾರ್ಕ್

103Nm

98.5Nm

ಟ್ರಾನ್ಸ್‌ಮಿಷನ್

5-ಸ್ಪೀಡ್ MT

5-ಸ್ಪೀಡ್ MT

ಇಂಧನ ದಕ್ಷತೆ

26.2km/kg

30.61 km/kg

ಬಲೆನೋ ಮತ್ತು ಗ್ಲಾನ್ಝಾ CNGಯ ಕ್ಲೈಮ್ ಮಾಡಲಾದ ಇಂಧನ ದಕ್ಷತೆಯು ಆಲ್ಟ್ರೋಝ್‌ಗಿಂತ ಸುಮಾರು 4km/kg ಹೆಚ್ಚು ಇದೆ. ಆಲ್ಟ್ರೋಝ್ ಹೆಚ್ಚು ಟಾರ್ಕ್ ನೀಡುತ್ತದೆ ಎಂದು ಹೇಳಲಾದರೂ ವಾಸ್ತವದಲ್ಲಿ ಬಲೆನೋ ತುಸು ಹೆಚ್ಚು ಶಕ್ತಿಶಾಲಿ. ಎಲ್ಲಾ ಮೂರು ಕಾರುಗಳನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಡ್ಯುಯಲ್-ಸಿಲಿಂಡರ್ ಸೆಟಪ್ 210 ಲೀಟರ್‌ ತನಕದ ಧಾರಾಳ ಬೂಟ್‌ಸ್ಪೇಸ್‌ಗೆ ಅವಕಾಶ ನೀಡಿ ಆಲ್ಟ್ರೋಝ್ CNG ಮೌಲ್ಯವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಟೊಯೋಟಾ ಗ್ಲಾನ್ಝಾ Vs ಹ್ಯುಂಡೇ i20 N ಲೈನ್ Vs ಟಾಟಾ ಆಲ್ಟ್ರೋಝ್ – ಸ್ಥಳಾವಕಾಶ ಮತ್ತು ವಾಸ್ತವ ಹೋಲಿಕೆ

ಫೀಚರ್-ಪ್ಯಾಕ್ಡ್ CNG ಆಯ್ಕೆಗಳು

ಈ ಎಲ್ಲಾ ಮೂರು CNG ಚಾಲಿತ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ಆಟೋಮ್ಯಾಟಿಕ್ AC, ಕ್ರೂಸ್ ಕಂಟ್ರೋಲ್, 7-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಕ್ಯಾಮರಾದಂತಹ ಸಾಮಾನ್ಯ ಫೀಚರ್‌ಗಳನ್ನು ಹಂಚಿಕೊಂಡಿವೆ. ಬಲೆನೋ/ಗ್ಲಾನ್ಝಾ ಜೋಡಿಯು ಆರು ಏರ್‌ಬ್ಯಾಗ್‌ಗಳು ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ ಜೊತೆಗೆ ESP ಮುಂತಾದ ಫೀಚರ್‌ಗಳ ಪ್ರಯೋಜನವನ್ನು ಪಡೆದಿದೆ. ಆಲ್ಟ್ರೋಝ್ ಇಲೆಕ್ಟ್ರಿಕ್ ಸನ್‌ರೂಫ್, ರೈನ್ ಸೆನ್ಸಿಂಗ್ ವೈಪರ್‌ಗಳು, ಆ್ಯಂಬಿಯೆಂಟ್ ಲೈಟಿಂಗ್, ಡಿಜಿಟೈಸ್ಡ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು ಟೈರ್‌ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಹೆಚ್ಚುವರಿಯಾಗಿ ಪಡೆದಿದೆ.

ಬೆಲೆ ಪರಿಶೀಲನೆ

ಆಲ್ಟ್ರೋಝ್ CNG

ಬಲೆನೋ CNG

ಗ್ಲಾನ್ಝಾ CNG

ಬೆಲೆ ಶ್ರೇಣಿ

ರೂ 7.55 ಲಕ್ಷದಿಂದ ರೂ 10.55 ಲಕ್ಷದ ತನಕ

ರೂ 8.35 ಲಕ್ಷದಿಂದ ರೂ 9.28 lakh

ರೂ 8.60 ಲಕ್ಷದಿಂದ ರೂ 9.63 ಲಕ್ಷದ ತನಕ

ಟಾಟಾ ಆಲ್ಟ್ರೋಝ್ CNG ಆರು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು ವಿವಿಧ ಬೆಲೆಗಳಲ್ಲಿ ಲಭ್ಯವಿದೆ. ಮಾರುತಿ ಬಲೆನೋ ಹಾಗೂ ಟೊಯೋಟಾ ಗ್ಲಾನ್ಝಾ ಎರಡಕ್ಕೂ CNG ಆಯ್ಕೆಯನ್ನು ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗಿದೆ.

ಇನ್ನಷ್ಟು ಓದಿ : ಟಾಟಾ ಆಲ್ಟ್ರೋಝ್ ಆನ್‌ರೋಡ್ ಬೆಲೆ

Share via

Write your Comment on Tata ಆಲ್ಟ್ರೋಝ್

explore similar ಕಾರುಗಳು

ಟೊಯೋಟಾ ಗ್ಲ್ಯಾನ್ಜಾ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ