Tata Curvv EVಯ ಮತ್ತೊಂದು ಟೀಸರ್ ಔಟ್, ಅತ್ಯಾಕರ್ಷಕ ಹೊಸ ಫೀಚರ್ ಗಳ ವಿವರ ಇಲ್ಲಿದೆ
ಜುಲೈ 11, 2024 08:42 pm ರಂದು dipan ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಡ್ರೈವರ್ ಡಿಸ್‌ಪ್ಲೇ, ಪ್ಯಾಡಲ್ ಶಿಫ್ಟರ್‌ಗಳು ಮತ್ತು ರೋಟರಿ ಡ್ರೈವ್ ಮೋಡ್ ಸೆಲೆಕ್ಟರ್‌ನಂತಹ ಕೆಲವು ಫೀಚರ್ ಗಳನ್ನು ಹೊಸ ನೆಕ್ಸಾನ್‌ನಿಂದ ಕರ್ವ್ ಗೆ ನೀಡಲಾಗಿದೆ ಎಂದು ಇತ್ತೀಚಿನ ಟೀಸರ್ ಖಚಿತಪಡಿಸುತ್ತದೆ.
- ಟಾಟಾ ಕರ್ವ್ ಭಾರತದ ಮೊದಲ ಮಾಸ್-ಮಾರ್ಕೆಟ್ SUV-ಕೂಪ್ ಕೊಡುಗೆಯಾಗಲಿದೆ.
- ಇತ್ತೀಚಿನ ಟೀಸರ್‌ನಲ್ಲಿ, ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ, ಪ್ಯಾಡಲ್ ಶಿಫ್ಟರ್‌ಗಳು ಮತ್ತು ರೋಟರಿ ಡ್ರೈವ್ ಮೋಡ್ ಸೆಲೆಕ್ಟರ್ ಅನ್ನು ನೋಡಲಾಗಿದೆ.
- ಇದನ್ನು ಹಲವಾರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುವುದು: ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್.
- ಟಾಟಾ ಕರ್ವ್ ಬೆಲೆಯು ರೂ. 10.50 ಲಕ್ಷ ಇರಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಕರ್ವ್ EV ಬೆಲೆಯು ಸುಮಾರು ರೂ. 20 ಲಕ್ಷ ಇರಬಹುದು.
- ಕರ್ವ್ EV ಅನ್ನು ಕರ್ವ್ ಗಿಂತ ಮೊದಲು ಮಾರುಕಟ್ಟೆಗೆ ಪರಿಚಯಿಸಲಾಗುವುದು.
ಎಲೆಕ್ಟ್ರಿಕ್ ಮತ್ತು ICE ವರ್ಷನ್ ಗಳಲ್ಲಿ ಟಾಟಾ ಕರ್ವ್ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಕಾರು ತಯಾರಕರು ಈ ಹೊಸ ಕಾರಿನ ಕೆಲವು ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚಿನ ಟೀಸರ್‌ನಲ್ಲಿ, SUV-ಕೂಪ್‌ನ ಎರಡು ಟೆಸ್ಟ್ ಗಾಡಿಯನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಟೆಸ್ಟ್ ಮಾಡಲಾಗಿದೆ ಮತ್ತು ಆ ಸಮಯದಲ್ಲಿ ಅದರ ಕೆಲವು ಫೀಚರ್ ಗಳನ್ನು ನೋಡಲಾಗಿದೆ. ಈ ಟೀಸರ್‌ಗಳಲ್ಲಿ ನಾವು ನೋಡಿರುವ ಫೀಚರ್ ಗಳ ವಿವರ ಇಲ್ಲಿದೆ
ಏನೇನು ನೋಡಿದ್ದೇವೆ?
ಟೀಸರ್ ಟಾಟಾ ನೆಕ್ಸಾನ್ EV ಯಲ್ಲಿ ಬಳಸಲಾದ 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಪ್ರಿವ್ಯು ಅನ್ನು ತೋರಿಸುತ್ತದೆ. ಡ್ರೈವರ್ ಡಿಸ್‌ಪ್ಲೇಯಲ್ಲಿ ಲೇನ್ ಕೀಪ್ ಅಸಿಸ್ಟ್ ಫೀಚರ್ ಅನ್ನು ತೋರಿಸಲಾಗಿದೆ, ಹಾಗಾಗಿ ಕರ್ವ್ EV ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಕೊಲಿಷನ್ ಅವೈಡೆನ್ಸ್ ಅಸ್ಸಿಸ್ಟಂಸ್ ನಂತಹ ಕೆಲವು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS) ಪಡೆಯುವುದು ಖಚಿತವಾಗಿದೆ.
ಕರ್ವ್ EV ನಲ್ಲಿ ಎನರ್ಜಿ ರೀಕ್ಯೂಪರೇಷನ್ ಗೆ ಸಹಾಯ ಮಾಡುವ ಪ್ಯಾಡಲ್ ಶಿಫ್ಟರ್‌ಗಳನ್ನು ಕೂಡ ನೋಡಲಾಗಿದೆ. ಈ ಫೀಚರ್ ಅನ್ನು ಕೂಡ ನೆಕ್ಸನ್ EV ಯಿಂದ ತೆಗೆದುಕೊಳ್ಳಲಾಗುತ್ತದೆ. ಟೀಸರ್‌ನಲ್ಲಿ ನೋಡಲು ಸಿಗುವ ಮತ್ತೊಂದು ಫೀಚರ್ ಎಂದರೆ ಡ್ರೈವ್ ಮೋಡ್ ಸೆಲೆಕ್ಟರ್. ರೋಟರಿ ಯೂನಿಟ್ ಅನ್ನು ಹತ್ತಿರದಿಂದ ನೋಡಿದರೆ ಕರ್ವ್ EV ಯಲ್ಲಿ ಮೂರು ಡ್ರೈವಿಂಗ್ ಮೋಡ್‌ಗಳಾದ ಇಕೋ, ಸಿಟಿ ಮತ್ತು ಸ್ಪೋರ್ಟ್ ಕೂಡ ಇರುವ ಸಾಧ್ಯತೆಯಿದೆ.


ನಿರೀಕ್ಷಿಸಲಾಗಿರುವ ಬೇರೆ ಫೀಚರ್ ಗಳು
ಟಾಟಾ ಕರ್ವ್ EV ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಆಟೋ AC ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುವ ನಿರೀಕ್ಷೆಯಿದೆ.
ಸುರಕ್ಷತೆಯ ವಿಷಯದಲ್ಲಿ, ಕರ್ವ್ ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ISOFIX ಚೈಲ್ಡ್ ಸೀಟ್ ಮೌಂಟ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು (ESC) ಪಡೆಯಬಹುದು. ಟಾಪ್ ವೇರಿಯಂಟ್ ಗಳು 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಕೂಡ ಪಡೆಯಬಹುದು.
ನಿರೀಕ್ಷಿಸಲಾಗಿರುವ ಪವರ್‌ಟ್ರೇನ್
ಕರ್ವ್ EV ಮತ್ತು ಕರ್ವ್ ಪವರ್‌ಟ್ರೇನ್‌ಗಳ ಬಗ್ಗೆ ಅಧಿಕೃತ ವಿವರಗಳು ಇನ್ನೂ ಹೊರಬಿದ್ದಿಲ್ಲ. ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಈ ಎಲೆಕ್ಟ್ರಿಕ್ ವರ್ಷನ್ ನೀಡುವ ಸಾಧ್ಯತೆಯಿದೆ ಮತ್ತು ಇದು ಸುಮಾರು 500 ಕಿಮೀಗಳ ಕ್ಲೈಮ್ ಮಾಡಿರುವ ರೇಂಜ್ ಅನ್ನು ಒದಗಿಸಬಹುದು ಏಕೆಂದರೆ ಇದನ್ನು ಟಾಟಾದ Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.
ಕರ್ವ್ ICE ಎರಡು ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಯಿದೆ: ಒಂದು ಹೊಸ 1.2-ಲೀಟರ್ T-GDi ಟರ್ಬೊ-ಪೆಟ್ರೋಲ್ (125 PS/225 Nm) ಮತ್ತು ಈಗಾಗಲೇ ಇರುವ ನೆಕ್ಸಾನ್ ನ 1.5-ಲೀಟರ್ ಡೀಸೆಲ್ (115 PS/260 Nm). ಇಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ (DCT) ಆಯ್ಕೆಗಳನ್ನು ನೀಡುವ ಸಾಧ್ಯತೆಯಿದೆ.
ನಿರೀಕ್ಷಿಸಲಾಗಿರುವ ಲಾಂಚ್ ದಿನಾಂಕ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ EV ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ, ಬೆಲೆಯು ರೂ. 20 ಲಕ್ಷದಿಂದ(ಎಕ್ಸ್ ಶೋರೂಂ) ಶುರುವಾಗಲಿದೆ ಮತ್ತು ಇದು MG ZS EV ಮತ್ತು ಮುಂಬರುವ ಹ್ಯುಂಡೈ ಕ್ರೆಟಾ EV ಮತ್ತು ಮಾರುತಿ ಸುಜುಕಿ eVX ಗೆ ಪ್ರತಿಸ್ಪರ್ಧಿಯಾಗಲಿದೆ.
ಟಾಟಾ ಕರ್ವ್ ICE ಅನ್ನು EV ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು, ಬೆಲೆಯು ಸುಮಾರು 10.50 ಲಕ್ಷವಿರುವ (ಎಕ್ಸ್ ಶೋರೂಂ) ಸಾಧ್ಯತೆಯಿದೆ ಮತ್ತು ಇದು ಮುಂಬರುವ ಸಿಟ್ರೊಯೆನ್ ಬಸಾಲ್ಟ್ SUV-ಕೂಪ್ ಗೆ ನೇರವಾಗಿ ಪ್ರತಿಸ್ಪರ್ಧಿಯಾಗಲಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ನಂತಹ ಇತರ ಕಾಂಪ್ಯಾಕ್ಟ್ SUVಗಳೊಂದಿಗೆ ಕೂಡ ಸ್ಪರ್ಧಿಸುತ್ತದೆ.
ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.