• English
  • Login / Register

ಈ 7 ಚಿತ್ರಗಳಲ್ಲಿ Hyundai Cretaದ ಪ್ರತಿಸ್ಪರ್ಧಿಯಾದ Tata Curvvನ ಹೊರಭಾಗದ ವಿನ್ಯಾಸವದ ಸಂಪೂರ್ಣ ಚಿತ್ರಣ

ಟಾಟಾ ಕರ್ವ್‌ ಗಾಗಿ rohit ಮೂಲಕ ಜುಲೈ 19, 2024 08:59 pm ರಂದು ಪ್ರಕಟಿಸಲಾಗಿದೆ

  • 300 Views
  • ಕಾಮೆಂಟ್‌ ಅನ್ನು ಬರೆಯಿರಿ

ಉತ್ಪಾದನೆಗೆ ಸಿದ್ಧವಾಗಿರುವ ಟಾಟಾ ಕರ್ವ್‌ನ ಇಂಧನ ಚಾಲಿತ ಆವೃತ್ತಿಯ ಹೊರಭಾಗವು ನೆಕ್ಸಾನ್ ಮತ್ತು ಹ್ಯಾರಿಯರ್ ಸೇರಿದಂತೆ ಪ್ರಸ್ತುತ ಲಭ್ಯವಿರುವ ಟಾಟಾ ಎಸ್‌ಯುವಿಗಳಿಂದ ವಿನ್ಯಾಸದ ಸ್ಫೂರ್ತಿಯನ್ನು ಪಡೆದುಕೊಂಡಿದೆ

Tata Curvv exterior detailed in 7 images

ಸುದೀರ್ಘ ಕಾಯುವಿಕೆಯ ನಂತರ, ಟಾಟಾ ಕರ್ವ್‌ ಇದೀಗ ಅಂತಿಮವಾಗಿ ಅನಾವರಣಗೊಂಡಿದೆ. ಇದು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದವುಗಳಿಗೆ ಸೊಗಸಾದ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತೀಯ ಕಾರು ತಯಾರಕ ಕಂಪೆನಿಯ ಮೊದಲ ಮಾಸ್‌-ಮಾರ್ಕೆಟ್‌ ಎಸ್‌ಯುವಿ ಕೂಪ್‌ ಕಾರು ಆಗಿದೆ. ಟಾಟಾ ತನ್ನ ಆಂತರಿಕ ದಹನಕಾರಿ ಎಂಜಿನ್ (ICE) ಕೌಂಟರ್‌ಪಾರ್ಟ್‌ಗಿಂತ ಮೊದಲು ಮಾರಾಟವಾಗಲಿರುವ ಕರ್ವ್‌ನ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಹೊರತರಲಿದೆ. ಈ ಸುದ್ದಿಯಲ್ಲಿ, 7 ಚಿತ್ರಗಳಲ್ಲಿ ಕರ್ವ್‌ನ ಇಂಧನ ಚಾಲಿತ ಆವೃತ್ತಿಯ(ICE) ಹೊರಭಾಗವನ್ನು ಪರಿಶೀಲಿಸೋಣ:

ಮುಂಭಾಗ

Tata Curvv LED DRL
Tata Curvv grille

ಇದು ಹೊಸ ನೆಕ್ಸಾನ್ ಮತ್ತು ಹ್ಯಾರಿಯರ್-ಸಫಾರಿ ಜೋಡಿಯಲ್ಲಿ ಕಂಡುಬರುವಂತೆ ಮುಂಭಾಗದಲ್ಲಿ ಸ್ಪ್ಲಿಟ್-ಲೈಟಿಂಗ್ ಸೆಟಪ್‌, ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ ಸ್ಟ್ರಿಪ್ ಮತ್ತು ಗ್ರಿಲ್ ಮತ್ತು ಬಂಪರ್‌ನ ಕೆಳಗಿನ ಭಾಗದಲ್ಲಿ ಕ್ರೋಮ್-ಸ್ಟಡ್ ಅಲಂಕರಣಗಳೊಂದಿಗೆ ಬರುತ್ತದೆ. ಗ್ರಿಲ್‌ನ ಕೆಳಭಾಗದಲ್ಲಿ ಮುಂಭಾಗದ ಕ್ಯಾಮೆರಾವನ್ನು ನೀಡಿರುವುದನ್ನು ಸಹ ನೀವು ಗಮನಿಸಬಹುದು.

ಹೆಡ್‌ಲೈಟ್‌ಗಳು

Tata Curvv split-LED headlights

ಲಂಬವಾಗಿ ಜೋಡಿಸಲಾದ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಫಾಗ್‌ ಲ್ಯಾಂಪ್‌ಗಳನ್ನು ಪ್ರತಿ ತುದಿಯಲ್ಲಿ ತ್ರಿಕೋನ ಹೌಸಿಂಗ್‌ಗಳಲ್ಲಿ ಇರಿಸಲಾಗುತ್ತದೆ. ಟಾಟಾ ಕರ್ವ್‌ ಇಂಧನ ಆವೃತ್ತಿಯನ್ನು ಚಡಿಗಳೊಂದಿಗೆ ಕಿರಿದಾದ ಗಾಳಿಯ ಪರದೆಯೊಂದಿಗೆ ಒದಗಿಸಿದೆ, ಇದು ಉತ್ತಮ ಗಾಳಿಯ ಹರಿವು ಮತ್ತು ವಾಯುಬಲವಿಜ್ಞಾನಕ್ಕೆ ಹೊಂದುವಂತೆ ಮಾಡಬಹುದಾಗಿದೆ.

ಸೈಡ್‌

Tata Curvv ORVM-mounted side camera

ಬಹುಶಃ ಕರ್ವ್‌ ICE ನಲ್ಲಿನ ಅತಿ ದೊಡ್ಡ ಗಮನ ಸೆಳೆಯುವ ಅಂಶವೆಂದರೆ ಕೂಪ್ ತರಹದ ರೂಫ್‌, ಇದು ಅದರ ಎತ್ತರದ ಹಿಂಭಾಗಕ್ಕೆ ಹರಿಯುತ್ತದೆ. ಇದರಲ್ಲಿ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಒದಗಿಸುವುದನ್ನು ಸಹ ನೀವು ಗಮನಿಸಬಹುದು, ಇವುಗಳನ್ನು ಮೊದಲ ಬಾರಿಗೆ ಟಾಟಾ ಕಾರುಗಳಲ್ಲಿ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಅಳವಡಿಸಲಾಗಿದೆ. 360-ಡಿಗ್ರಿ ಸೆಟಪ್‌ನ ಭಾಗವಾಗಿರುವ ORVM-ಮೌಂಟೆಡ್ ಸೈಡ್ ಕ್ಯಾಮೆರಾವನ್ನು ಸಹ ನೀವು ಗಮನಿಸಬಹುದು.

ಅಲಾಯ್‌ ವೀಲ್‌ಗಳು

Tata Curvv dual-tone alloy wheels

ಟಾಟಾವು ಉತ್ಪಾದನೆಗೆ ಸಿದ್ಧವಾಗಿರುವ ಕರ್ವ್‌ ICE ಯನ್ನು ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳೊಂದಿಗೆ ಸಜ್ಜುಗೊಳಿಸಿದೆ, ಇದು ಭಾರತ್ ಮೊಬಿಲಿಟಿ ಎಕ್ಸ್‌ಪೋ 2024ರಲ್ಲಿ ಪ್ರದರ್ಶಿಸಲಾದ ಮೊಡೆಲ್‌ನಲ್ಲಿ ಕಂಡುಬರುವ ಅದೇ ದಳದಂತಹ ವಿನ್ಯಾಸವನ್ನು ಹೊಂದಿದೆ. ಚಕ್ರದ ಕಮಾನುಗಳ ಸುತ್ತಲಿನ ಹೊದಿಕೆಯು ಹೆಚ್ಚು ಪ್ರೀಮಿಯಂ ಮತ್ತು ಸ್ಪೋರ್ಟಿ ಲುಕ್‌ಗಾಗಿ ಹೊಳಪು ಕಪ್ಪು ಫಿನಿಶ್ ಅನ್ನು ಹೊಂದಿದೆ.

ಹಿಂಭಾಗ

ಟಾಟಾ ಎಸ್‌ಯುವಿ-ಕೂಪ್ ಹಿಂಭಾಗವು ಎತ್ತರವಾಗಿದೆ ಮತ್ತು ಬೂಟ್ ಮುಚ್ಚಳವನ್ನು ಬಾನೆಟ್‌ಗಿಂತ ಎತ್ತರದ ಸ್ಥಾನದಲ್ಲಿ ಇರಿಸಲಾಗಿದೆ, ಇದು ಇದರ ಲಗೇಜ್ ಜಾಗವನ್ನು (ಕ್ಲೈಮ್‌ ಮಾಡಲಾದ 422 ಲೀಟರ್) ಹೆಚ್ಚಿಸಲು ಮಾಡಲಾಗಿದೆ.

ಹಿಂಭಾಗದ ಲೈಟ್‌ಗಳು

Tata Curvv LED tail lights

ಇದರ ಪ್ರಮುಖ ಸ್ಟೈಲಿಂಗ್ ವಿವರವೆಂದರೆ ಸುತ್ತುವರಿದ ಮತ್ತು ಕನೆಕ್ಟೆಡ್‌ ಎಲ್ಇಡಿ ಟೈಲ್ ಲೈಟ್‌ಗಳು. ಎತ್ತರದ ಬಂಪರ್ - ಕೆಳಭಾಗದಲ್ಲಿ ಸಿಲ್ವರ್ ಫಿನಿಶ್‌ನೊಂದಿಗೆ ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ - ಸ್ಪ್ಲಿಟ್-ಹೆಡ್‌ಲೈಟ್ ಸೆಟಪ್ ಅನ್ನು ಅನುಕರಿಸುತ್ತದೆ, ಅದನ್ನು ಇಲ್ಲಿ ರಿಫ್ಲೆಕ್ಟರ್‌ಗಳು ಮತ್ತು ರಿವರ್ಸಿಂಗ್ ಲ್ಯಾಂಪ್‌ಗಳಿಂದ ಬದಲಾಯಿಸಲಾಗುತ್ತದೆ.

ಪವರ್‌ಟ್ರೈನ್‌ ಆಯ್ಕೆಗಳು

ಕರ್ವ್‌ನ ಇಂಧನ ಚಾಲಿತ ಅವೃತ್ತಿಯು ಬಹುನಿರೀಕ್ಷಿತ 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ, ಆದರೆ ಇದು ನೆಕ್ಸಾನ್‌ನಿಂದ ಎರವಲು ಪಡೆದ 1.5-ಲೀಟರ್ ಡೀಸೆಲ್ ಎಂಜಿನ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ. ಇದರ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

ಎಂಜಿನ್‌

1.2- ಲೀಟರ್‌ T-GDi ಟರ್ಬೋ-ಪೆಟ್ರೊಲ್‌ 

1.5 ಲೀಟರ್‌ ಡೀಸೆಲ್‌

ಪವರ್‌

125 ಪಿಎಸ್‌

115 ಪಿಎಸ್‌

ಟಾರ್ಕ್‌

225 ಎನ್‌ಎಮ್‌

260 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನುಯಲ್‌, 7-ಸ್ಪೀಡ್ ಡಿಸಿಟಿ (ನಿರೀಕ್ಷಿತ)

6-ವೇಗದ ಮ್ಯಾನುಯಲ್‌

*ಡಿಸಿಟಿ- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ಇದನ್ನು ಸಹ ಓದಿ: Tata Nexon EVಯನ್ನು ಹಿಂದಿಕ್ಕಲು ಈ 10 ಫೀಚರ್‌ಗಳನ್ನು ಪಡೆಯಲಿರುವ Tata Curvv

ಬಿಡುಗಡೆ, ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಟಾಟಾ ಕರ್ವ್‌ನ ಇಂಧನ ಚಾಲಿತ ಆವೃತ್ತಿಯು(ICE) 2024ರ ಸೆಪ್ಟೆಂಬರ್‌ನಲ್ಲಿ ಮಾರಾಟವಾಗಬಹುದೆಂದು ಎಂದು ನಿರೀಕ್ಷಿಸಲಾಗಿದೆ, ಆದರೆ ಕರ್ವ್‌ ಇವಿಯು ಇದಕ್ಕಿಂದ ಮೊದಲು, ಅಂದರೆ ಆಗಸ್ಟ್ 7 ರಂದು ಮೊದಲು ಮಾರುಕಟ್ಟೆಗೆ ಲಗ್ಗೆ ಇಡಲಿದೆ.  ಕರ್ವ್‌ನ ಇಂಧನ ಚಾಲಿತ ಆವೃತ್ತಿಯ ಬೆಲೆಗಳು 10.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು. ಕರ್ವ್‌ ಇವಿಯು ಮಾರುಕಟ್ಟೆಯಲ್ಲಿ ಸಿಟ್ರೊಯೆನ್ ಬಸಾಲ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಇದರೊಂದಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರ್ಡರ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಹೋಂಡಾ ಎಲಿವೇಟ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಎಂಜಿ ಆಸ್ಟರ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪರ್ಯಾಯವಾಗಿ ಇದನ್ನು ಪರಿಗಣಿಸಬಹುದು.

ಟಾಟಾ ಕರ್ವ್‌ ಕುರಿತ ಹೆಚ್ಚಿನ ಆಪ್‌ಡೇಟ್‌ಗಳಿಗಾಗಿ, ಕಾರ್‌ದೇಖೋ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್‌ರೋಡ್‌ ಬೆಲೆ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಕರ್ವ್‌

1 ಕಾಮೆಂಟ್
1
S
sumeet v shah
Jul 19, 2024, 6:07:07 PM

Good Article to read.

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience