Login or Register ಅತ್ಯುತ್ತಮ CarDekho experience ಗೆ
Login

Curvv ICE ಅನಾವರಣ, ಸೆಪ್ಟೆಂಬರ್‌ನಲ್ಲಿ ಬಿಡುಗಡೆ

ಟಾಟಾ ಕರ್ವ್‌ ಗಾಗಿ samarth ಮೂಲಕ ಆಗಸ್ಟ್‌ 08, 2024 11:22 am ರಂದು ಮಾರ್ಪಡಿಸಲಾಗಿದೆ

ಕರ್ವ್‌ ಐಸಿಇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಹಲವು ಗೇರ್‌ಬಾಕ್ಸ್‌ ಆಯ್ಕೆಗಳನ್ನು ಹೊಂದಿರುತ್ತದೆ

  • ಟಾಟಾವು ತನ್ನ ಕರ್ವ್‌ ಐಸಿಇ ಅನ್ನು ಸ್ಮಾರ್ಟ್‌, ಪ್ಯೂರ್‌, ಕ್ರಿಯೆಟಿವ್‌ ಮತ್ತು ಆಕಂಪ್ಲಿಶ್ಡ್‌ ಎಂಬ 4 ವಿಶಾಲವಾದ ಆವೃತ್ತಿಗಳಲ್ಲಿ ನೀಡುತ್ತದೆ.

  • ಕರ್ವ್‌ ಐಸಿಇಯು ವೆಲ್‌ಕಮ್‌ ಮತ್ತು ಗುಡ್‌ಬೈ ಅನಿಮೇಷನ್ ಮತ್ತು ಲಂಬವಾಗಿ ಜೋಡಿಸಲಾದ ಹೆಡ್‌ಲೈಟ್‌ಗಳೊಂದಿಗೆ ಸಂಪರ್ಕಿತ ಎಲ್‌ಇಡಿ ಡಿಆರ್‌ಎಲ್‌ ಸ್ಟ್ರಿಪ್ ಅನ್ನು ಹೊಂದಿದೆ.

  • ಹಿಂಭಾಗದಲ್ಲಿ, ಇದು ಕನೆಕ್ಟೆಡ್‌ ಎಲ್ಇಡಿ ಟೈಲ್ ಲೈಟ್‌ಗಳು, ಎತ್ತರದ ಬೂಟ್ಲಿಡ್ ಮತ್ತು ಸ್ಪಾಯ್ಲರ್‌ನೊಂದಿಗೆ ಬರುತ್ತದೆ.

  • ಫೀಚರ್‌ಗಳು 12.3-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ.

  • ಕರ್ವ್‌ ಐಸಿಇಯನ್ನು ಎರಡು ಟರ್ಬೊ-ಪೆಟ್ರೋಲ್ ಆಯ್ಕೆಗಳು ಮತ್ತು ಹಲವು ಗೇರ್‌ಬಾಕ್ಸ್‌ಗಳನ್ನು ಒಳಗೊಂಡಂತೆ ಮೂರು ಎಂಜಿನ್‌ಗಳೊಂದಿಗೆ ನೀಡಲಾಗುವುದು.

  • ಕರ್ವ್‌ ಐಸಿಇನ ಬೆಲೆಗಳು 10.50 ಲಕ್ಷ ರೂ.ನಿಂದ ಪ್ರಾರಂಭವಾಗುವ (ಎಕ್ಸ್ ಶೋರೂಂ) ನಿರೀಕ್ಷೆಯಿದೆ ಮತ್ತು ಸೆಪ್ಟೆಂಬರ್ 2ರಂದು ಬಿಡುಗಡೆಯಾಗಲಿದೆ.

ಟಾಟಾ ಕರ್ವ್‌ ಇವಿಯನ್ನು ಬಿಡುಗಡೆ ಮಾಡಲಾಗಿದೆ ಮತ್ತು ಅದರೊಂದಿಗೆ ಟಾಟಾ ಕರ್ವ್‌ನ ಇಂಟರ್ನಲ್ ದಹನಕಾರಿ ಎಂಜಿನ್ (ICE) ನ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಸಹ ಅನಾವರಣಗೊಳಿಸಲಾಗಿದೆ. ಕರ್ವ್‌ ಐಸಿಇಯು ಟಾಟಾ ಅಭಿವೃದ್ಧಿಪಡಿಸಿದ ಹೊಸ ಅಡಾಪ್ಟಿವ್ ಟೆಕ್-ಫಾರ್ವರ್ಡ್ ಲೈಫ್ ಸ್ಟೈಲ್ ಆರ್ಕಿಟೆಕ್ಚರ್ (ATLAS) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಟಾಟಾವು ಸೆಪ್ಟೆಂಬರ್ 2 ರಂದು ಐಸಿಇ ಆವೃತ್ತಿಯ ಬೆಲೆಗಳನ್ನು ಬಹಿರಂಗಪಡಿಸುತ್ತದೆ ಮತ್ತು ಇದನ್ನು ಸ್ಮಾರ್ಟ್‌, ಪ್ಯೂರ್‌, ಕ್ರಿಯೆಟಿವ್‌ ಮತ್ತು ಆಕಂಪ್ಲಿಶ್ಡ್‌ ಎಂಬ 4 ವಿಶಾಲವಾದ ಆವೃತ್ತಿಗಳಲ್ಲಿ ನೀಡುತ್ತದೆ. ಎಸ್‌ಯುವಿ-ಕೂಪ್‌ನ ICE ಆವೃತ್ತಿಯ ಬಗ್ಗೆ ನಾವು ಹೊಂದಿರುವ ಎಲ್ಲಾ ವಿವರಗಳನ್ನು ಪರಿಶೀಲಿಸೋಣ.

ಹೊರಭಾಗ

ಕರ್ವ್‌ ಐಸಿಇಯು ವೆಲ್‌ಕಮ್‌ ಮತ್ತು ಗುಡ್‌ಬೈ ಅನಿಮೇಷನ್‌ನೊಂದಿಗೆ ಕನೆಕಟೆಡ್‌ ಎಲ್‌ಇಡಿ ಡಿಆರ್‌ಎಲ್‌ ಸ್ಟ್ರಿಪ್ ಅನ್ನು ಹೊಂದಿದೆ, ಇದು ಈಗ ಟಾಟಾದ ಹೊಸ ಎಸ್‌ಯುವಿ ಮೊಡೆಲ್‌ಗಳಿಗೆ ಸಿಗ್ನೇಚರ್‌ ವಿನ್ಯಾಸವಾಗಿದೆ. ಎಲೆಕ್ಟ್ರಿಕ್ ಆವೃತ್ತಿಯ ಮುಚ್ಚಿದ ವಿನ್ಯಾಸಕ್ಕಿಂತ ಭಿನ್ನವಾದ ಮುಂಭಾಗದ ಗ್ರಿಲ್, ಮತ್ತು ಹ್ಯಾರಿಯರ್‌ನಲ್ಲಿ ಕಂಡುಬರುವಂತಹ ಕ್ರೋಮ್ ಸ್ಟಡ್‌ಗಳನ್ನು ಪಡೆಯುತ್ತದೆ. ಹೆಡ್‌ಲೈಟ್‌ಗಳು ಮತ್ತು ಫಾಗ್‌ ಲೈಟ್‌ಗಳನ್ನು ಲಂಬವಾಗಿ ತ್ರಿಕೋನ ರೀತಿಯ ಹೌಸಿಂಗ್‌ನ ಒಳಗೆ ಜೋಡಿಸಲಾಗಿದೆ. ಬಂಪರ್ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ, ಇದು ಬೋರ್ಡ್‌ನಲ್ಲಿನ 360-ಡಿಗ್ರಿ ಸೆಟಪ್‌ನ ಭಾಗವಾಗಿದೆ.

ಇದು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮತ್ತು ಹೊಸ ಹೂವಿನ-ದಳ ವಿನ್ಯಾಸದ 18-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳನ್ನು ಹೊಂದಿದೆ, ಇದು ಡೈನಾಮಿಕ್‌ ಆದ ನೋಟವನ್ನು ನೀಡುತ್ತದೆ.

ಹಿಂಭಾಗದ ಪ್ರೊಫೈಲ್ ಕನೆಕ್ಟೆಡ್‌ ಟೈಲ್ ಲೈಟ್ ಸೆಟಪ್, ಸ್ಪಾಯ್ಲರ್, ಎತ್ತರದ ಬೂಟ್ ಲಿಡ್ ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಒಳಗೊಂಡಿದೆ. ಬೂಟ್ ಗೇಟ್ ಕ್ರೋಮ್ ಫಿನಿಶ್ಡ್‌ 'ಕರ್ವ್‌' ಬ್ರ್ಯಾಂಡಿಂಗ್ ಅನ್ನು ಹೊಂದಿದೆ ಮತ್ತು ಹಿಂಭಾಗದ ಬಂಪರ್ ಅದರ ಮೇಲೆ ಸಿಲ್ವರ್ ಫಿನಿಶ್ ಹೊಂದಿರುವ ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಇದು 208 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಕರ್ವ್‌ ಐಸಿಇನ ಬೂಟ್ ಸ್ಪೇಸ್ 500 ಲೀಟರ್ ಆಗಿದ್ದು, ಎರಡನೇ ಸಾಲಿನ ಸೀಟುಗಳನ್ನು ಮಡಚಿ 973 ಲೀಟರ್ ವರೆಗೆ ವಿಸ್ತರಿಸಬಹುದು.

ಕರ್ವ್‌ ಐಸಿಇಯು ಆರು ಮೊನೊಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ, ಅವುಗಳೆಂದರೆ ಡೇಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಒಪೇರಾ ಬ್ಲೂ, ಪ್ಯೂರ್ ಗ್ರೇ ಮತ್ತು ಗೋಲ್ಡ್ ಎಸೆನ್ಸ್.

ಕ್ಯಾಬಿನ್, ಫೀಚರ್‌ಗಳು ಮತ್ತು ಸುರಕ್ಷತೆ

ಕರ್ವ್‌ ಐಸಿಇನ ಡ್ಯಾಶ್‌ಬೋರ್ಡ್ ಡ್ಯುಯಲ್-ಟೋನ್ ಬರ್ಗಂಡಿ ಬಣ್ಣದ ಥೀಮ್‌ನಲ್ಲಿ ಫಿನಿಶ್‌ ಮಾಡಲಾಗಿದೆ. ಫೀಚರ್‌ಗಳ ವಿಷಯದಲ್ಲಿ, ಇದು 12.3-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನೊಂದಿಗೆ 9-ಸ್ಪೀಕರ್ JBL-ಟ್ಯೂನ್ಡ್ ಸೌಂಡ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 60:40 ಸ್ಪ್ಲಿಟ್‌ನೊಂದಿಗೆ ಎರಡು-ಹಂತದ ರಿಕ್ಲೈನರ್ ಹಿಂಭಾಗದ ಸೀಟುಗಳು ಮತ್ತು ಪನೆರೊಮಿಕ್‌ ಸನ್‌ರೂಫ್ ಅನ್ನು ಪಡೆಯುತ್ತದೆ. ಡ್ರೈವರ್ ಸೀಟ್ 6-ವೇ ಪವರ್‌ಡ್‌ ಎಡ್ಜಸ್ಟೇಬಲ್‌ ಫಂಕ್ಷನ್‌ನೊಂದಿಗೆ ಬರುತ್ತದೆ.

ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಫಾರ್ವರ್ಡ್ ಡಿಕ್ಕಿಯ ವಾರ್ನಿಂಗ್‌ ಸೇರಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಪವರ್‌ಟ್ರೈನ್‌

ಕರ್ವ್‌ ಐಸಿಇಯನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವುದು. ವಿಶೇಷಣಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ:

ಇಂಜಿನ್

1.2-ಲೀಟರ್ TGDi ಟರ್ಬೊ-ಪೆಟ್ರೋಲ್ ಎಂಜಿನ್ (ಹೊಸ)

1.2-ಲೀಟರ್ ಟರ್ಬೊ ಪೆಟ್ರೋಲ್

1.5-ಲೀಟರ್ ಡೀಸೆಲ್ ಎಂಜಿನ್

ಪವರ್‌

125 ಪಿಎಸ್‌

120 ಪಿಎಸ್‌

118 ಪಿಎಸ್‌

ಟಾರ್ಕ್‌

225 ಎನ್‌ಎಮ್‌

170 ಎನ್‌ಎಮ್‌

260 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್‌ ಮ್ಯಾನುಯಲ್‌, 7-ಸ್ಪೀಡ್‌ ಡಿಸಿಟಿ*

6-ಸ್ಪೀಡ್ ಮ್ಯಾನುಯಲ್‌, 7-ಸ್ಪೀಡ್ ಡಿಸಿಟಿ*

6-ಸ್ಪೀಡ್ ಮ್ಯಾನುಯಲ್‌, 7-ಸ್ಪೀಡ್ ಡಿಸಿಟಿ*

*ಡಿಸಿಟಿ- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟಾಟಾ ಕರ್ವ್‌ ಐಸಿಇ ಬೆಲೆಯು 10.50 ಲಕ್ಷ (ಎಕ್ಸ್-ಶೋರೂಮ್) ರೂ.ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಸಿಟ್ರೊಯೆನ್ ಬಸಾಲ್ಟ್‌ ಇದರ ನೇರಪ್ರತಿಸ್ಪರ್ಧಿಯಾಗಿದ್ದು, ಹಾಗೆಯೇ ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಸ್ಕೋಡಾ ಕುಶಾಕ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ಗಳಿಗೆ ಸೊಗಸಾದ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

Share via

Write your Comment on Tata ಕರ್ವ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ