ಭಾರತ್ ಮೊಬಿಲಿಟಿ ಎಕ್ಸ್ಪೋ 2024: ಉತ್ಪಾದನೆಗೆ ಸಿದ್ಧವಾಗುತ್ತಿರುವ Tata Curvv ಡೀಸೆಲ್ ಆವೃತ್ತಿಯ ವಿನ್ಯಾಸದ ಅನಾವರಣ
ಟಾಟಾದ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಯೂನಿಟ್ ಜೊತೆಗೆ 115 PS 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೂಡ ಕರ್ವ್ ಪಡೆಯುತ್ತದೆ.
- ಮೊದಲ ಟಾಟಾ ಕರ್ವ್ ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ಕಾನ್ಸೆಪ್ಟ್ ಅನ್ನು ಆಟೋ ಎಕ್ಸ್‌ಪೋ 2023 ರಲ್ಲಿ ತೋರಿಸಲಾಯಿತು.
- ಇತ್ತೀಚಿನ ಮಾಡೆಲ್ ನೆಕ್ಸಾನ್ ರೀತಿಯ ಫೇಸಿಯ ಮತ್ತು ಶಾರ್ಪ್ ಆಗಿರುವ ರಿಯರ್ ಪ್ರೊಫೈಲ್ ಅನ್ನು ಪ್ರದರ್ಶಿಸಿತು.
- ಬ್ಯಾಕ್‌ಲಿಟ್ ಟಾಟಾ ಲೋಗೋ ಮತ್ತು ಟಚ್-ಬೇಸ್ಡ್ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್‌ನೊಂದಿಗೆ ಹ್ಯಾರಿಯರ್ ರೀತಿಯ 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಕ್ಯಾಬಿನ್ ಪಡೆಯುವುದು ದೃಢವಾಗಿದೆ.
- ನಿರೀಕ್ಷಿಸಲಾದ ಫೀಚರ್ ಗಳಲ್ಲಿ ಡ್ಯುಯಲ್ ಡಿಜಿಟಲ್ ಡಿಸ್ಪ್ಲೇಗಳು, 360-ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್ ಮತ್ತು ಆರು ಏರ್‌ಬ್ಯಾಗ್‌ಗಳು ಸೇರಿವೆ.
- ಕರ್ವ್ ICE 2024 ರ ಅಂತ್ಯದ ವೇಳೆಗೆ ಲಾಂಚ್ ಆಗುವ ನಿರೀಕ್ಷೆಯಿದೆ; ಬೆಲೆಯು ರೂ. 10.50 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
ಟಾಟಾ ಕರ್ವ್ 2024 ರ ಅತಿದೊಡ್ಡ ಹೊಸ ಕಾರು ಲಾಂಚ್ ಗಳಲ್ಲಿ ಒಂದಾಗಿದೆ ಮತ್ತು ಈ ಪ್ರೊಡಕ್ಷನ್-ರೆಡಿ SUVಯು ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಪಾದಾರ್ಪಣೆ ಮಾಡಿದೆ. ಇದು ಮುಂಬರುವ ಟಾಟಾ SUV ಯ ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ವರ್ಷನ್ ಆಗಿದ್ದು, ಇದೀಗ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೂಡ ದೃಢೀಕರಿಸಲಾಗಿದೆ.
ಕರ್ವ್ ಡೀಸೆಲ್ ವಿವರಗಳು
ಆಟೋ ಎಕ್ಸ್‌ಪೋ 2023 ರಲ್ಲಿ, ಟಾಟಾದ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ TGDi ಎಂಜಿನ್ (125 PS/225 Nm) ಅನ್ನು ಕರ್ವ್ ಪಡೆಯುವುದು ದೃಢಪಡಿಸಲಾಗಿತ್ತು. ಈಗ, ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಮಾಡೆಲ್ ಕರ್ವ್ ನಲ್ಲಿ 1.5-ಲೀಟರ್ ಡೀಸೆಲ್ ಯೂನಿಟ್ (115 PS/260 Nm) ಲಭ್ಯತೆಯನ್ನು ಖಚಿತಪಡಿಸುತ್ತಿದೆ. ಕರ್ವ್ ICE, ಪೆಟ್ರೋಲ್ ಮತ್ತು ಡೀಸೆಲ್ ಈ ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಬರಬಹುದು ಎನ್ನುವುದು ನಮ್ಮ ನಿರೀಕ್ಷೆಯಾಗಿದೆ.
ಕರ್ವ್ ಅನ್ನು ಕರ್ವ್ EV ಯ ರೂಪದಲ್ಲಿ ಆಲ್-ಎಲೆಕ್ಟ್ರಿಕ್ ಅವತಾರದಲ್ಲಿ ಕೂಡ ನೀಡಲಾಗುವುದು, ಇದು ಮಲ್ಟಿಪಲ್ ಬ್ಯಾಟರಿ ಪ್ಯಾಕ್‌ಗಳನ್ನು ಪಡೆಯುವ ಸಾಧ್ಯತೆಯಿದೆ, ಹಾಗೂ 500 ಕಿ.ಮೀಗಿಂತ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ನೀಡಬಹುದು.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ CNG ಅನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಅನಾವರಣಗೊಳಿಸಲಾಗಿದೆ
ಅಪ್ಡೇಟ್ ಆಗಿರುವ ಡಿಸೈನ್
ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ ಕರ್ವ್ ICE ನಾವು ಮುಂದಿನ ದಿನಗಳಲ್ಲಿ ಶೋರೂಮ್‌ಗಳಲ್ಲಿ ನೋಡಬಹುದಾದ ಹಾಗೆಯೆ ಹೆಚ್ಚು ಕಡಿಮೆ ಇದೆ, ಆದರೆ ಕೆಲವು ಸಣ್ಣ ರಿವಿಷನ್ ಗಳನ್ನು ಮಾಡಲಾಗಿದೆ. ಆಟೋ ಎಕ್ಸ್‌ಪೋ 2023 ರಲ್ಲಿ ನೋಡಿದ ಕಾನ್ಸೆಪ್ಟ್ ಗೆ ನಾವು ಹೋಲಿಸಿದರೆ ಇದು ಅಪ್ಡೇಟ್ ಆಗಿರುವ ಮುಂಭಾಗವನ್ನು ಪಡೆಯಲಿದೆ. ಇದರ ಫೇಸಿಯಾ, ತ್ರಿಕೋನ ಹೆಡ್‌ಲೈಟ್ ಮತ್ತು ಫಾಗ್ ಲ್ಯಾಂಪ್ ಸೆಟಪ್, LED DRLಗಳು ಮತ್ತು ದೊಡ್ಡ ಕ್ರೋಮ್-ಸ್ಟಡ್ಡ್ ಬಂಪರ್ ಸೇರಿದಂತೆ ಇವೆಲ್ಲವೂ ನೆಕ್ಸನ್‌ನ ಮುಂಭಾಗಕ್ಕೆ ತುಂಬಾ ಹೋಲುತ್ತದೆ.
ಆದರೆ ಕರ್ವ್ ನ ಪ್ರೊಫೈಲ್ ಅದರ ಅತ್ಯುತ್ತಮ ಭಾಗವಾಗಿದೆ, ಇದು ಅದರ ಪ್ರಮುಖ ಡಿಸೈನ್ ಆದ ಕೂಪ್ ರೂಫ್‌ಲೈನ್ ಅನ್ನು ಎತ್ತಿ ತೋರಿಸುತ್ತದೆ, ಮತ್ತು ಇದು ಹೈ ಸೀಟ್ ಇರುವ ಹಿಂಭಾಗದವರೆಗೆ ಸಾಗುತ್ತದೆ. ಪ್ರದರ್ಶಿಸಲಾದ ಕರ್ವ್ ICE ಗೆ 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಅನ್ನು ನೀಡಲಾಗಿದೆ, ಇದು ವೀಲ್ ಆರ್ಚ್‌ಗಳಲ್ಲಿ, ವಿಶೇಷವಾಗಿ ಹಿಂಭಾಗದಲ್ಲಿ ಸಾಕಷ್ಟು ಜಾಗವನ್ನು ನೀಡುತ್ತದೆ.
ಈ ಹಿಂದಿನ ಕಾನ್ಸೆಪ್ಟ್ ಗೆ ಹೋಲಿಸಿದರೆ ಅದರ ಹಿಂಭಾಗವು ಯಾವುದೇ ತೀವ್ರವಾದ ಬದಲಾವಣೆಗಳನ್ನು ಕಂಡಿಲ್ಲವಾದರೂ, ಈ ಪ್ರೊಡಕ್ಷನ್-ರೆಡಿ ವರ್ಷನ್ ನ ವಿವರಗಳು ಈಗ ಇನ್ನಷ್ಟು ಸ್ಪಷ್ಟವಾಗಿದೆ. ಇದರ ಪ್ರಬಲವಾದ ಸ್ಟೈಲಿಂಗ್ ಅಂಶವೆಂದರೆ SUV ಯ ಅಗಲದುದ್ದಕ್ಕೂ ಇರುವ ಅಡ್ಡವಾಗಿರುವ ಟೈಲ್ ಲ್ಯಾಂಪ್ ಆಗಿದೆ ಮತ್ತು ಇದು ಸ್ಪ್ಲಿಟ್ ರೂಫ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಅನ್ನು ಕೂಡ ಪಡೆಯುತ್ತದೆ.
ಇಂಟೀರಿಯರ್ ಮತ್ತು ಫೀಚರ್ ಗಳು
ಟಾಟಾ ತನ್ನ ಕರ್ವ್ ICE ಯ ಇಂಟೀರಿಯರ್ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ ಕೂಡ, ನಾವು ಪ್ರದರ್ಶಿಸಿದ ಮಾಡೆಲ್ ನ ಕ್ಯಾಬಿನ್ ಒಳಗೆ ಇಣುಕಿ ನೋಡಿದ್ದೇವೆ. ಇದು ಹೊಸ ಹ್ಯಾರಿಯರ್ ನಲ್ಲಿ ಇರುವ ಮಧ್ಯದಲ್ಲಿ ಪ್ರಕಾಶಿಸಲಾದ 'ಟಾಟಾ' ಲೋಗೋದೊಂದಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಡ್ಯುಯಲ್ ಡಿಜಿಟಲ್ ಡಿಸ್ಪ್ಲೇಗಳನ್ನು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ) ಪಡೆಯುತ್ತದೆ. ಟಾಟಾ ಇದನ್ನು ಟಚ್ ಆಧಾರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ನೊಂದಿಗೆ ನೀಡಲಿದೆ
ಪ್ರೊಡಕ್ಷನ್-ಸ್ಪೆಕ್ ಕರ್ವ್ ವೆಂಟಿಲೇಟೆಡ್ ಫ್ರಂಟ್ ಮುಂಭಾಗದ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನಾರೊಮಿಕ್ ಸನ್‌ರೂಫ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಇದು ಸುರಕ್ಷತಾ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಪಡೆಯುವ ಸಾಧ್ಯತೆಯಿದೆ.
ಇದನ್ನು ಕೂಡ ಓದಿ: 2024 ಭಾರತ್ ಮೊಬಿಲಿಟಿ ಎಕ್ಸ್‌ಪೋ: ಟಾಟಾ ನೆಕ್ಸಾನ್ EV ಡಾರ್ಕ್ ಎಡಿಷನ್ ಅನಾವರಣಗೊಳಿಸಲಾಗಿದೆ
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಲಾಂಚ್ ದಿನಾಂಕ ಹಾಗೂ ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ ICE 2024 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ, ಮತ್ತು ಕರ್ವ್ EV ಇದಕ್ಕಿಂತ ಮೊದಲು ಲಾಂಚ್ ಆಗಬಹುದು. ಕರ್ವ್ ICE ಬೆಲೆಯು 10.50 ಲಕ್ಷದಿಂದ ಶುರುವಾಗುವ ನಿರೀಕ್ಷೆಯಿದೆ ಹಾಗೆಯೆ, ಅದರ EV ವರ್ಷನ್ 20 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ). ಕರ್ವ್ ICE ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೋಂಡಾ ಎಲಿವೇಟ್‌ಗಳನ್ನು ಮಾರುಕಟ್ಟೆಯಲ್ಲಿ ಎದುರಿಸಲಿದೆ, ಹಾಗೆಯೇ ಕರ್ವ್ EV, MG ZS EV ಮತ್ತು ಹುಂಡೈ ಕೋನಾ ಎಲೆಕ್ಟ್ರಿಕ್ ಜೊತೆಗೆ ಸ್ಪರ್ಧಿಸಲಿದೆ.