Login or Register ಅತ್ಯುತ್ತಮ CarDekho experience ಗೆ
Login

Tata Curvv ವರ್ಸಸ್ Hyundai Creta ವರ್ಸಸ್ Maruti Grand Vitara: ವಿಶೇಷಣಗಳ ಹೋಲಿಕೆ

published on ಫೆಬ್ರವಾರಿ 08, 2024 12:52 pm by rohit for ಟಾಟಾ ಕರ್ವ್‌

ಪ್ರೀ-ಪ್ರೊಡಕ್ಷನ್ ಟಾಟಾ ಕರ್ವ್ವ್‌ನ ಬಗ್ಗೆ ನಮ್ಮ ಹತ್ತಿರ ಸಾಕಷ್ಟು ವಿವರಗಳಿವೆ, ಆದರೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದವುಗಳ ಜೊತೆಗೆ ಸ್ಪರ್ಧಿಸಲು ಇದು ತಯಾರಾಗಿದೆಯೇ?

ಟಾಟಾ ಕರ್ವ್ ಅನ್ನು 2024 ರ ಅಂತ್ಯದ ವೇಳೆಗೆ ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ಮತ್ತು EV ವರ್ಷನ್ ಗಳಲ್ಲಿ ನೀಡಲಾಗುವುದು. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾಗಳಂತಹ ಜನಪ್ರಿಯ ಮಾಡೆಲ್ ಗಳಿರುವ ಅತ್ಯಂತ ಸ್ಪರ್ಧಾತ್ಮಕ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಟಾಟಾದ ಮೊಟ್ಟ ಮೊದಲ ಪ್ರವೇಶವಾಗಿದೆ. ಟಾಟಾ ಇಲ್ಲಿ SUV-ಕೂಪ್ ಸ್ಟೈಲಿಂಗ್‌ನೊಂದಿಗೆ ಈ ವಿಭಾಗದಲ್ಲಿ ಕರ್ವ್ ಅನ್ನು ಎದ್ದುಕಾಣುವಂತೆ ಮಾಡುವ ಗುರಿಯನ್ನು ಹೊಂದಿದೆ, ಆದರೆ ಇಲ್ಲಿ ಡಿಸೈನ್ ಮಾತ್ರವಲ್ಲ, ಇನ್ನೂ ಹೆಚ್ಚು ವಿಶೇಷತೆಗಳನ್ನು ಹೊಂದಿದೆ.

ಈ ಲೇಖನದಲ್ಲಿ, ನಮಗೆ ಇಲ್ಲಿಯವರೆಗೆ ತಿಳಿದಿರುವ ICE ಕರ್ವ್ ನ ಸ್ಪೆಸಿಫಿಕೇಷನ್ ಗಳ ಕುರಿತು ನಿಮಗೆ ಮಾಹಿತಿ ನೀಡುತ್ತೇವೆ, ಮತ್ತು ಮಾರುಕಟ್ಟೆಯಲ್ಲಿರುವ ಅದರ ಕೆಲವು ಪ್ರಮುಖ ಪ್ರತಿಸ್ಪರ್ಧಿಗಳ ವಿರುದ್ಧ ಅದು ಎಲ್ಲಿ ನಿಲ್ಲುತ್ತದೆ ಎಂಬುದನ್ನು ಕೂಡ ನೋಡೋಣ.

ಡೈಮೆನ್ಷನ್ ಗಳು

ಟಾಟಾ ಕರ್ವ್

ಹುಂಡೈ ಕ್ರೆಟಾ

ಮಾರುತಿ ಗ್ರಾಂಡ್ ವಿಟಾರಾ

ಉದ್ದ

4308 ಮಿ.ಮೀ

4330 ಮಿ.ಮೀ

4345 ಮಿ.ಮೀ

ಅಗಲ

1810 ಮಿ.ಮೀ

1790 ಮಿ.ಮೀ

1795 ಮಿ.ಮೀ

ಎತ್ತರ

1630 ಮಿ.ಮೀ

1635 ಮಿಮೀ (ರೂಫ್ ರೈಲ್ ನೊಂದಿಗೆ)

1645 ಮಿ.ಮೀ

ವೀಲ್ ಬೇಸ್

2560 ಮಿ.ಮೀ

2610 ಮಿ.ಮೀ

2600 ಮಿ.ಮೀ

ಬೂಟ್ ಸ್ಪೇಸ್

422 ಲೀಟರ್

433 ಲೀಟರ್

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

  • ಹಾಗೆಯೇ ಟಾಟಾ ಕರ್ವ್ ಈ ಮೂರು ಕಾರುಗಳಲ್ಲಿ ಅತ್ಯಂತ ಅಗಲವಾಗಿದ್ದು, ಹ್ಯುಂಡೈ ಕ್ರೆಟಾ ಅತಿ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿದೆ (ಕರ್ವ್ ಗಿಂತ 50 ಮಿಮೀ ಉದ್ದವಾಗಿದೆ).

  • ಬೂಟ್ ಸ್ಪೇಸ್‌ ನೋಡಿದರೆ, ಕ್ರೆಟಾ ಕರ್ವ್ ಗಿಂತ 11 ಲೀಟರ್ ಹೆಚ್ಚಿನ ಸ್ಟೋರೇಜ್ ಜಾಗವನ್ನು ಹೊಂದಿದೆ. ಆದರೆ, ಮಾರುತಿ ತನ್ನ ಕಾಂಪ್ಯಾಕ್ಟ್ SUV ಯ ನಿಖರವಾದ ಬೂಟ್ ಸ್ಪೇಸ್ ವಿವರವನ್ನು ಬಹಿರಂಗಪಡಿಸಿಲ್ಲ. ಆದರೆ ಗ್ರ್ಯಾಂಡ್ ವಿಟಾರಾದ ಶಕ್ತಿಶಾಲಿ-ಹೈಬ್ರಿಡ್ ವೇರಿಯಂಟ್ ಗಳು ಹಿಂಭಾಗದ ಲಗೇಜ್ ಜಾಗದ ವಿಷಯದಲ್ಲಿ ಕಡಿಮೆ ಸ್ಥಳವನ್ನು ಹೊಂದಿರುತ್ತದೆ ಎಂದು ನಮಗೆ ತಿಳಿದಿದೆ.

ಪೆಟ್ರೋಲ್ ಪವರ್‌ಟ್ರೇನ್

ಸ್ಪೆಸಿಫಿಕೇಷನ್

ಟಾಟಾ ಕರ್ವ್

ಹುಂಡೈ ಕ್ರೆಟಾ

ಮಾರುತಿ ಗ್ರಾಂಡ್ ವಿಟಾರಾ

ಎಂಜಿನ್

1.2-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ N/A^ ಪೆಟ್ರೋಲ್ ಎಂಜಿನ್/ 1.5-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಪೆಟ್ರೋಲ್ (ಮೈಲ್ಡ್-ಹೈಬ್ರಿಡ್)/ 1.5-ಲೀಟರ್ ಪೆಟ್ರೋಲ್ (ಸ್ಟ್ರಾಂಗ್-ಹೈಬ್ರಿಡ್)

ಪವರ್

125 PS

115 PS/ 160 PS

103 PS/ 116 PS (ಸಿಸ್ಟಮ್)

ಟಾರ್ಕ್

225 Nm

144 Nm/ 253 Nm

137 PS/ 141 PS (ಸಿಸ್ಟಮ್)

ಟ್ರಾನ್ಸ್ಮಿಷನ್

6-ಸ್ಪೀಡ್ MT, 7-ಸ್ಪೀಡ್ DCT (ನಿರೀಕ್ಷಿಸಲಾಗಿದೆ)

6-ಸ್ಪೀಡ್ MT, CVT 7-ಸ್ಪೀಡ್ DCT

5-ಸ್ಪೀಡ್ MT, 6-ಸ್ಪೀಡ್ AT-e-CVT

^N/A - ನ್ಯಾಚುರಲಿ ಆಸ್ಪಿರೇಟೆಡ್

  • ಇಲ್ಲಿರುವ ಮೂರು SUV ಗಳಲ್ಲಿ, ಕರ್ವ್ ಕೇವಲ ಒಂದು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ, ಟರ್ಬೋಚಾರ್ಜ್ ಯುನಿಟ್ ಆಗಿರುವ ಕಾರಣ, ಮೂರರಲ್ಲಿ ಇದು ಎರಡನೇ ಅತ್ಯುತ್ತಮ ಟಾರ್ಕ್ ಅನ್ನು ನೀಡುತ್ತದೆ.

  • ಕ್ರೆಟಾದ 1.5-ಲೀಟರ್ ಟರ್ಬೊ ಪವರ್‌ಟ್ರೇನ್ ಇಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಹೆಚ್ಚು ಟಾರ್ಕ್ ನೀಡುವ ಪೆಟ್ರೋಲ್ ಎಂಜಿನ್ ಆಗಿದೆ. ಸ್ಪೋರ್ಟಿಯರ್ ಕ್ರೆಟಾ N ಲೈನ್‌ನ ಬಿಡುಗಡೆಯೊಂದಿಗೆ ಇದು ಶೀಘ್ರದಲ್ಲೇ ಟರ್ಬೊ-MT ಕಾಂಬೊವನ್ನು ಪಡೆಯಲಿದೆ.

  • ಇಲ್ಲಿ ಮಾರುತಿ ಮಾತ್ರ ತನ್ನ ಕಾಂಪ್ಯಾಕ್ಟ್ SUVಯನ್ನು ಶಕ್ತಿಶಾಲಿ-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯೊಂದಿಗೆ ನೀಡುತ್ತದೆ, ಮತ್ತು ಇದನ್ನು e-CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಆದರೆ, ಅದರ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಇಲ್ಲಿ ಕಡಿಮೆ ಶಕ್ತಿಯುತ ಆಯ್ಕೆಯಾಗಿದೆ. ಮಾರುತಿಯು ತನ್ನ SUV ಅನ್ನು ಒಪ್ಶನಲ್ ಆಲ್-ವೀಲ್ ಡ್ರೈವ್‌ಟ್ರೇನ್ (AWD) ನೊಂದಿಗೆ ನೀಡುತ್ತಿರುವ ಏಕೈಕ ಬ್ರಾಂಡ್ ಆಗಿದೆ ಆದರೆ ಇದು ಮೈಲ್ಡ್-ಹೈಬ್ರಿಡ್ ಮ್ಯಾನುವಲ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ನೀಡಲಾಗಿದೆ.

ಇದನ್ನು ಕೂಡ ಓದಿ: ಫಾಸ್ಟ್‌ಟ್ಯಾಗ್‌ ಪೇಟಿಎಂ ಮತ್ತು KYC ಡೆಡ್‌ಲೈನ್‌ಗಳನ್ನು ವಿವರಿಸಲಾಗಿದೆ: ಫೆಬ್ರವರಿ 2024 ರ ನಂತರವೂ ನನ್ನ ಫಾಸ್ಟ್‌ಟ್ಯಾಗ್‌ ಕಾರ್ಯನಿರ್ವಹಿಸುತ್ತದೆಯೇ?

ಡೀಸೆಲ್ ಪವರ್‌ಟ್ರೇನ್

ಸ್ಪೆಸಿಫಿಕೇಷನ್

ಟಾಟಾ ಕರ್ವ್

ಹುಂಡೈ ಕ್ರೆಟಾ

ಎಂಜಿನ್

1.5-ಲೀಟರ್ ಡೀಸೆಲ್

1.5-ಲೀಟರ್ ಡೀಸೆಲ್

ಪವರ್

115 PS

116 PS

ಟಾರ್ಕ್

260 Nm

250 Nm

ಟ್ರಾನ್ಸ್ಮಿಷನ್

6-ಸ್ಪೀಡ್ MT

6-ಸ್ಪೀಡ್ MT, 6-ಸ್ಪೀಡ್ AT

  • ಇಲ್ಲಿ ಟಾಟಾ ಮತ್ತು ಹುಂಡೈ SUV ಗಳು ಮಾತ್ರ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಪಡೆಯುತ್ತವೆ.

  • ಇತ್ತೀಚೆಗೆ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಪ್ರದರ್ಶಿಸಲಾದ ಕರ್ವ್ ICE ಅನ್ನು ನೋಡಿದರೆ, ನೆಕ್ಸಾನ್ SUV ಗೆ ನೀಡಲಾಗಿರುವ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಇದು ಪಡೆಯಲಿದೆ ಎಂದು ಹೇಳಲಾಗಿದೆ. ಅದರ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳ ಬಗ್ಗೆ ಇನ್ನೂ ತಿಳಿದಿಲ್ಲವಾದರೂ, ಟಾಟಾ 6-ಸ್ಪೀಡ್ ಮ್ಯಾನುವಲ್ ಆಯ್ಕೆಯನ್ನು ನಿರ್ದಿಷ್ಟಪಡಿಸಿದೆ.

  • ಹ್ಯುಂಡೈ ಕ್ರೆಟಾ-ಕಿಯಾ ಸೆಲ್ಟೋಸ್ SUV ಗಳ ನಂತರ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಕರ್ವ್ ಮಾತ್ರ ಏಕೈಕ ಡೀಸೆಲ್ ಕೊಡುಗೆಯಾಗಿದೆ. ಹಾಗಾಗಿ ಇದು, 260 Nm ನೀಡುವ ಮೂಲಕ ಸೆಗ್ಮೆಂಟ್ ನಲ್ಲೇ ಅತ್ಯುತ್ತಮ ಟಾರ್ಕ್ ಅನ್ನು ಹೊಂದಿರುತ್ತದೆ.

ಪ್ರಮುಖ ಫೀಚರ್ ಗಳು

ಆಟೋ LED ಹೆಡ್ ಲೈಟ್ ಗಳು

LED DRL ಲೈಟ್ ಬಾರ್

ಕನೆಕ್ಟೆಡ್ LED ಟೈಲ್ ಲೈಟ್‌ಗಳು

18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್

10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್

ಕನೆಕ್ಟೆಡ್ ಕಾರ್ ಟೆಕ್ನೋಲೊಜಿ

ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು

ಪನಾರೊಮಿಕ್ ಸನ್‌ರೂಫ್

ಆಟೋ AC

ಆಂಬಿಯೆಂಟ್ ಲೈಟಿಂಗ್

ವೈರ್‌ಲೆಸ್ ಫೋನ್ ಚಾರ್ಜಿಂಗ್

ಪ್ಯಾಡಲ್ ಶಿಫ್ಟರ್‌ಗಳು (ಆಟೋ ಮಾತ್ರ)

ಪ್ರೀಮಿಯಂ JBL ಸೌಂಡ್ ಸಿಸ್ಟಮ್

ಕ್ರೂಸ್ ಕಂಟ್ರೋಲ್

6 ಏರ್ ಬ್ಯಾಗ್ ಗಳು

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

360 ಡಿಗ್ರಿ ಕ್ಯಾಮೆರಾ

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

ADAS

ಆಟೋ LED ಹೆಡ್ ಲೈಟ್ ಗಳು

LED DRL ಲೈಟ್ ಬಾರ್

ಕನೆಕ್ಟೆಡ್ LED ಟೈಲ್‌ಲೈಟ್‌ಗಳು

17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್

ಲೆಥೆರೆಟ್ ಅಪ್ಹೋಲಿಸ್ಟ್ರೀ

8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

ಆಂಬಿಯೆಂಟ್ ಲೈಟಿಂಗ್

10.25-ಇಂಚಿನ ಟಚ್‌ಸ್ಕ್ರೀನ್

10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

ಪನಾರೊಮಿಕ್ ಸನ್‌ರೂಫ್

ಡ್ಯುಯಲ್-ಝೋನ್ AC

ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು

ವೈರ್‌ಲೆಸ್ ಫೋನ್ ಚಾರ್ಜಿಂಗ್

ಪ್ಯಾಡಲ್ ಶಿಫ್ಟರ್‌ಗಳು (ಆಟೋ ಮಾತ್ರ)

ಕ್ರೂಸ್ ಕಂಟ್ರೋಲ್

8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್

ಕನೆಕ್ಟೆಡ್ ಕಾರ್ ಟೆಕ್ನೋಲೊಜಿ

ADAS

6 ಏರ್ ಬ್ಯಾಗ್ ಗಳು

360 ಡಿಗ್ರಿ ಕ್ಯಾಮೆರಾ

TPMS

ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

ESC

ಆಟೋ LED ಪ್ರೊಜೆಕ್ಟರ್ ಹೆಡ್ ಲೈಟ್ ಗಳು

LED DRL ಗಳು

LED ಟೈಲ್ ಲೈಟ್‌ಗಳು

17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್

ಲೆಥೆರೆಟ್ ಅಪ್ಹೋಲಿಸ್ಟ್ರೀ

ಆಂಬಿಯೆಂಟ್ ಲೈಟಿಂಗ್

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 9-ಇಂಚಿನ ಟಚ್‌ಸ್ಕ್ರೀನ್

7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ*

ಹೆಡ್‌ಅಪ್ ಡಿಸ್ಪ್ಲೇ*

ಪನಾರೊಮಿಕ್ ಸನ್‌ರೂಫ್

ಆಟೋ AC

ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು*

ವೈರ್‌ಲೆಸ್ ಫೋನ್ ಚಾರ್ಜಿಂಗ್*

ಕ್ರೂಸ್ ಕಂಟ್ರೋಲ್

6-ಸ್ಪೀಕರ್ ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್

6 ಏರ್ ಬ್ಯಾಗ್ ಗಳು

360 ಡಿಗ್ರಿ ಕ್ಯಾಮೆರಾ

TPMS

ESC

ಹಿಂದಿನ ಪಾರ್ಕಿಂಗ್ ಸೆನ್ಸಾರ್ ಗಳು

**ಕೇವಲ ಶಕ್ತಿಶಾಲಿ-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಲಭ್ಯವಿದೆ

  • ನೀವು ಇಲ್ಲಿ ಹೆಚ್ಚು ಫೀಚರ್ ಗಳನ್ನು ಹೊಂದಿರುವ SUV ಅನ್ನು ನೋಡುತ್ತಿದ್ದರೆ, ಹ್ಯುಂಡೈ ಕ್ರೆಟಾವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಗಳು, 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಡ್ಯುಯಲ್-ಜೋನ್ ACಯಂತಹ ಹೆಚ್ಚುವರಿ ಫೀಚರ್ ಗಳನ್ನು ಪಡೆಯುತ್ತದೆ.

  • ಪ್ರೊಡಕ್ಷನ್ ರೆಡಿ ಟಾಟಾ ಕರ್ವ್ ನ ಫೀಚರ್ ಗಳ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಇದು ಕೂಡ ಸಾಕಷ್ಟು ಫೀಚರ್ ಗಳೊಂದಿಗೆ ಬರಲಿದೆ ಎಂದು ನಾವು ನಂಬುತ್ತೇವೆ. ಇದು ಹ್ಯಾರಿಯರ್-ಸಫಾರಿ SUV ಗಳಲ್ಲಿ ಇರುವ ಪನಾರೊಮಿಕ್ ಸನ್‌ರೂಫ್, ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS) ಮತ್ತು ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್‌ನಂತಹ ಪ್ರೀಮಿಯಂ ಫೀಚರ್ ಗಳನ್ನು ಪಡೆಯಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ.

  • ಮಾರುತಿ ಗ್ರ್ಯಾಂಡ್ ವಿಟಾರಾ ಕೂಡ ಹಲವಾರು ಪ್ರೀಮಿಯಂ ಫೀಚರ್ ಗಳೊಂದಿಗೆ ಸುಸಜ್ಜಿತವಾಗಿದೆ ಮತ್ತು ಪನಾರೊಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಇದನ್ನು ಕೂಡ ಓದಿ: ಟಾಟಾ ಕರ್ವ್ ವರ್ಸಸ್ ಟಾಟಾ ನೆಕ್ಸಾನ್: 7 ದೊಡ್ಡ ವ್ಯತ್ಯಾಸಗಳನ್ನು ಇಲ್ಲಿ ವಿವರಿಸಲಾಗಿದೆ

ಬೆಲೆ

ಟಾಟಾ ಕರ್ವ್ (ನಿರೀಕ್ಷಿಸಲಾಗಿರುವ ಬೆಲೆ)

ಹುಂಡೈ ಕ್ರೆಟಾ (ಪರಿಚಯಾತ್ಮಕ)

ಮಾರುತಿ ಗ್ರ್ಯಾಂಡ್ ವಿಟಾರಾ

ಬೆಲೆ ಶ್ರೇಣಿ

ರೂ. 10.50 ಲಕ್ಷದಿಂದ ರೂ. 17 ಲಕ್ಷ

ರೂ. 11 ಲಕ್ಷದಿಂದ ರೂ. 20.15 ಲಕ್ಷ

ರೂ. 10.70 ಲಕ್ಷದಿಂದ ರೂ. 19.99 ಲಕ್ಷ

ಟಾಟಾ ಕರ್ವ್ ಇನ್ನೂ ಮಾರುಕಟ್ಟೆಯಲ್ಲಿ ಬಂದಿಲ್ಲ, ಆದರೆ ಮೇಲೆ ತಿಳಿಸಿದ ಎರಡು SUV ಗಳು ಸೇರಿದಂತೆ ಇತರ ಜನಪ್ರಿಯ ಪ್ರತಿಸ್ಪರ್ಧಿಗಳೊಂದಿಗೆ ಸಮಾನವಾಗಿ ಸ್ಪರ್ಧಿಸಲು ಆಕ್ರಮಣಕಾರಿ ಬೆಲೆಯಲ್ಲಿ ಪರಿಚಯಿಸಲಾಗುವುದು ಎಂಬುದು ನಮ್ಮ ನಂಬಿಕೆಯಾಗಿದೆ. ಅದರ ಡೀಸೆಲ್ ವೇರಿಯಂಟ್ ಗಳು ಕ್ರೆಟಾದ ಟಾಪ್-ಸ್ಪೆಕ್ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಒಟ್ಟಾರೆಯಾಗಿ, ಇಲ್ಲಿ ಫೇಸ್‌ಲಿಫ್ಟ್ ಆಗಿರುವ ಹುಂಡೈ ಕ್ರೆಟಾ ಅತ್ಯಂತ ದುಬಾರಿ ಆಯ್ಕೆಯಾಗಿದೆ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಬೆಲೆಯಲ್ಲಿ ಅದರ ಹಿಂದೆಯೇ ಇದೆ.

ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ ಬೆಲೆಯಾಗಿದೆ

ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 29 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಕರ್ವ್‌

Read Full News

explore similar ಕಾರುಗಳು

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಗ್ರಾಂಡ್ ವಿಟರಾ

ಪೆಟ್ರೋಲ್21.11 ಕೆಎಂಪಿಎಲ್
ಸಿಎನ್‌ಜಿ26.6 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ