ನಾಳೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್‌ಗಳ ಬಿಡುಗಡೆ
ಟಾಟಾ ಹ್ಯಾರಿಯರ್ ಗಾಗಿ rohit ಮೂಲಕ ಅಕ್ಟೋಬರ್ 16, 2023 02:23 pm ರಂದು ಪ್ರಕಟಿಸಲಾಗಿದೆ
- 72 Views
- ಕಾಮೆಂಟ್ ಅನ್ನು ಬರೆಯಿರಿ
ಎರಡೂ ಮಾದರಿಗಳು ಇನ್ನೂ ಅದೇ 2-ಲೀಟರ್ ಡೀಸೆಲ್ ಎಂಜಿನ್ ಹಾಗು ಮೊದಲಿನಂತೆ ಮ್ಯಾನುಯಲ್ ಮತ್ತು ಆಟೋಮೇಟಿಕ್ ಗೇರ್‌ಬಾಕ್ಸ್‌ನ ಆಯ್ಕೆಗಳನ್ನು ಪಡೆಯುತ್ತವೆ.
- ಹ್ಯಾರಿಯರ್ ಮತ್ತು ಸಫಾರಿ ಜೋಡಿಯು ತನ್ನ ಮೊದಲ ಸಂಪೂರ್ಣ ಮಿಡ್‌ಲೈಫ್ ರಿಫ್ರೆಶ್ ಅನ್ನು ಪಡೆದುಕೊಂಡಿದೆ.
- ಹೊರಗಿನ ಆಪ್‌ಡೇಟ್‌ಗಳಲ್ಲಿ ಪರಿಷ್ಕೃತ ಎಲ್ಇಡಿ ಲೈಟಿಂಗ್ ಸೆಟಪ್ ಮತ್ತು ಸುಧಾರಿಸಿದ ಬಂಪರ್ ವಿನ್ಯಾಸಗಳು ಸೇರಿವೆ.
- ಇವುಗಳ ಕ್ಯಾಬಿನ್‌ಗಳು ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಹೊಸ ಟಚ್-ಆಧಾರಿತ ಹವಾಮಾನ ಕಂಟ್ರೊಲ್ ಪ್ಯಾನೆಲ್‌ನ್ನು ಪಡೆಯುತ್ತವೆ.
- ಹೊಸ ವೈಶಿಷ್ಟ್ಯಗಳ ಆಫರ್‌ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಡ್ಯುಯಲ್-ಝೋನ್ ಎಸಿ ಮತ್ತು ಏಳು ಏರ್‌ಬ್ಯಾಗ್‌ಗಳನ್ನು ಒಳಗೊಂಡಿವೆ.
- ಎರಡೂ ಎಸ್‌ಯುವಿಗಳು ಅಸ್ತಿತ್ವದಲ್ಲಿರುವ ಮಾದರಿಗಳಿಗಿಂತ ಬೆಲೆಯಲ್ಲಿ ಸುಮಾರು ಒಂದು ಲಕ್ಷದವರೆಗೆ ಹೆಚ್ಚಾಗುವ ಸಾಧ್ಯತೆಯಿದೆ.
ಟಾಟಾ ತನ್ನ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್‌ಗಳನ್ನು ನಾಳೆ ಬಿಡುಗಡೆ ಮಾಡಲು ಸಿದ್ಧವಾಗಿದ್ದು ಮತ್ತು ಈ ಎರಡು ಎಸ್‌ಯುವಿಗಳ ಎಲ್ಲಾ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಬಹಿರಂಗಪಡಿಸಿದ್ದಾರೆ. ನೀವು ಹೊಸ ಹ್ಯಾರಿಯರ್ ಅಥವಾ ಸಫಾರಿಯನ್ನು ಆನ್‌ಲೈನ್‌ನಲ್ಲಿ ಅಥವಾ ಭಾರತದಾದ್ಯಂತ ಟಾಟಾ ಡೀಲರ್‌ಶಿಪ್‌ಗಳಲ್ಲಿ 25,000 ರೂ.ನೀಡಿ ಬುಕ್ ಮಾಡಬಹುದು.
ಈ ಎಸ್‌ಯುವಿಗಳಲ್ಲಿ ಹೊಸದೇನಿದೆ ಎಂಬುದರ ತ್ವರಿತ ಮಾಹಿತಿ ಇಲ್ಲಿದೆ:
ಸುಧಾರಿಸಿದ ಬಾಹ್ಯ
ಮರುವಿನ್ಯಾಸಗೊಳಿಸಲಾದ ಗ್ರಿಲ್, ತೀಕ್ಷ್ಣವಾದ ಇಂಡಿಕೇಟರ್ ಮತ್ತು ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳಂತಹ ಬದಲಾವಣೆಗಳೊಂದಿಗೆ ಎರಡೂ ಎಸ್‌ಯುವಿಗಳು ತಾಜಾ ನೋಟವನ್ನು ಪಡೆಯುತ್ತವೆ. ಅವುಗಳು ಮುಂಭಾಗದಲ್ಲಿ ಉದ್ದವಾದ ಎಲ್ಇಡಿ ಡಿಆರ್‌ಎಲ್ ಸ್ಟ್ರಿಪ್ ಅನ್ನು ಒಳಗೊಂಡಿರುತ್ತವೆ ಮತ್ತು ಮುಂಭಾಗದ ಬಾಗಿಲುಗಳಲ್ಲಿ ಬೊಲ್ಡ್ ಅಕ್ಷರಗಳಲ್ಲಿ 'ಹ್ಯಾರಿಯರ್' ಮತ್ತು 'ಸಫಾರಿ' ಎಂದು ಬ್ಯಾಡ್ಜ್‌ಗಳನ್ನು ಹೊಂದಿವೆ. ಟಾಟಾ ಎರಡು ಎಸ್‌ಯುವಿಗಳನ್ನು 17 ಇಂಚಿನ ಬದಲಾಗಿ 19 ಇಂಚಿನ ಅಲಾಯ್ ವೀಲ್‌ಗಳೊಂದಿಗೆ ನೀಡಲಾಗುತ್ತಿದೆ. ಎರಡು ಎಸ್‌ಯುವಿಗಳ ಹಿಂಭಾಗವು ಕನೆಕ್ಟೆಡ್ LED ಟೈಲ್‌ಲೈಟ್ ಸೆಟಪ್ ಅನ್ನು ಹೊಂದಿದೆ ಮತ್ತು ಎರಡೂ ದಪ್ಪನಾದ ಸ್ಕಿಡ್ ಪ್ಲೇಟ್‌ಗಳೊಂದಿಗೆ ಬರುತ್ತವೆ.
ಟಾಟಾ ಸಫಾರಿ ಫೇಸ್‌ಲಿಫ್ಟ್ Vs ಮಹೀಂದ್ರಾ XUV700
ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ Vs ಕಿಯಾ ಸೆಲ್ಟೋಸ್
ಆಪ್‌ಡೇಟ್ ಆಗಿರುವ ಇಂಟಿರೀಯರ್
ಕ್ಯಾಬಿನ್ ಈಗ ಲೇಯರ್ಡ್ ಡ್ಯಾಶ್‌ಬೋರ್ಡ್ ವಿನ್ಯಾಸ, ಹೊಸ ಸೆಂಟ್ರಲ್ ಎಸಿ ವೆಂಟ್‌ಗಳು ಮತ್ತು ಟಚ್-ಆಧಾರಿತ ಹವಾಮಾನ ಕಂಟ್ರೊಲ್ ಪ್ಯಾನೆಲ್‌ನ್ನು ಹೊಂದಿದೆ. ಎರಡೂ ಮಾದರಿಗಳು ಲಿಟ್ 'ಟಾಟಾ' ಲೋಗೋದೊಂದಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿವೆ ಮತ್ತು ಆಯ್ಕೆ ಮಾಡಿದ ವೇರಿಯೆಂಟ್‌ನ ಆಧಾರದ ಮೇಲೆ ವಿವಿಧ ಒಳಸೇರಿಸುವಿಕೆಯನ್ನು ಬಾಹ್ಯದೊಂದಿಗೆ ಬಣ್ಣ ಸಂಯೋಜಿತಗೊಳಿಸಬಹುದು.
ಹೊಸ ವೈಶಿಷ್ಟ್ಯಗಳ ಸೇರ್ಪಡೆ
ಈ ಎಸ್‌ಯುವಿಗಳು 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ಹೊಸ ವೈಶಿಷ್ಟ್ಯಗಳ ಒಂದು ರೇಂಜ್‌ನೊಂದಿಗೆ ಬರುತ್ತವೆ. ಇದರಲ್ಲಿ ಎಲೆಕ್ಟ್ರಿಕ್ ಆಗಿ ಹೊಂದಾಣಿಸಬಹುದಾದ ಮತ್ತು ಗಾಳಿ ಸೌಕರ್ಯ ಹೊಂದಿರುವ ಆಸನಗಳನ್ನು (6-ಆಸನಗಳ ಸಫಾರಿಯಲ್ಲಿ ಮಧ್ಯಮ-ಸಾಲಿನ ವೆಂಟಿಲೇಶನ್‌ನೊಂದಿಗೆ), ಕ್ರೂಸ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಸಹ ನೀಡುತ್ತಾರೆ.
ಸುರಕ್ಷತಾ ಕಿಟ್, ಏಳು ಏರ್‌ಬ್ಯಾಗ್‌ಗಳವರೆಗೆ (ಸ್ಟ್ಯಾಂಡರ್ಡ್ ಆಗಿ ಆರು), 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಹಿಲ್-ಹೋಲ್ಡ್ ಅಸಿಸ್ಟ್‌ನೊಂದಿಗೆ ಒಳಗೊಂಡಿದೆ. ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್-ಡಿಕ್ಕಿ ಎಚ್ಚರಿಕೆ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್‌ನೊಂದಿಗೆ ಒದಗಿಸಲಾಗಿದೆ.
ಇದನ್ನೂ ಓದಿ: ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್‌ನೊಂದಿಗೆ ಟಾಟಾ ಕಾರಿನಲ್ಲಿ ಪ್ರಾರಂಭವಾದ ಈ 5 ವೈಶಿಷ್ಟ್ಯಗಳು
ಡೀಸೆಲ್ ಎಂಜಿನ್ ಮಾತ್ರ
ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್‌ಗಳು 2-ಲೀಟರ್ ಡೀಸೆಲ್ ಎಂಜಿನ್ (170PS/350Nm) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿರುತ್ತವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಎಸ್‌ಯುವಿಗಳನ್ನು ಪರಿಷ್ಕೃತ ವೇರಿಯೆಂಟ್‌ನ ರೇಂಜ್‌ನಲ್ಲಿ ಮಾರಾಟ ಮಾಡಲಾಗುವುದು ಮತ್ತು ಇದನ್ನು ವಿಶಾಲವಾದ ನಾಲ್ಕು ಮುಖ್ಯ ಟ್ರಿಮ್‌ಗಳಾಗಿ ವಿಂಗಡಿಸಲಾಗಿದೆ. ಹ್ಯಾರಿಯರ್ ಫೇಸ್‌ಲಿಫ್ಟ್‌ಗಾಗಿ ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್‌ಲೆಸ್ ಎಂಬ ನಾಲ್ಕು ಟ್ರಿಮ್ ಆದರೆ, ಸಫಾರಿ ಫೇಸ್‌ಲಿಫ್ಟ್‌ಗಾಗಿ ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಆಕಂಪ್ಲಿಶ್‌ಡ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ನೀಡಲಾಗುತ್ತಿದೆ.ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಗಳಿಗಿಂತ ಫೇಸ್‌ಲಿಫ್ಟ್‌ಗಳ ಬೆಲೆಗಳು ಒಂದು ಲಕ್ಷದವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ಮಾಹಿತಿಗಾಗಿ, ಪ್ರಸ್ತುತ ದೆಹಲಿಯಲ್ಲಿ ಹ್ಯಾರಿಯರ್‌ನ ಎಕ್ಸ್ ಶೋರೂಂ ಬೆಲೆ 15.20 ಲಕ್ಷ ರೂ.ನಿಂದ ಪ್ರಾರಂಭವಾಗಿ 24.27 ಲಕ್ಷ ರೂ.ವರೆಗೆ ಇದೆ. ಹಾಗೆಯೇ ಅಸ್ತಿತ್ವದಲ್ಲಿರುವ ಸಫಾರಿಯ ಎಕ್ಸ್ ಶೋರೂಂ ಬೆಲೆ 15.85 ಲಕ್ಷ ರೂ.ನಿಂದ ಪ್ರಾರಂಭವಾಗಿ 25.21 ಲಕ್ಷ ರೂ.ವರೆಗೆ ಇದೆ.
ಹೊಸ ಟಾಟಾ ಹ್ಯಾರಿಯರ್ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ700 ಜೊತೆಗೆ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ನ ಟಾಪ್-ಎಂಡ್ ವೇರಿಯೆಂಟ್‌ಗಳೊಂದಿಗೆ ಸ್ಪರ್ಧಿಸುವುದನ್ನು ಮುಂದುವರಿಸುತ್ತದೆ. ಹಾಗೆಯೇ ಫೇಸ್‌ಲಿಫ್ಟೆಡ್ ಟಾಟಾ ಸಫಾರಿ ಇನ್ನೂ 3-ಸಾಲಿನ ಎಸ್‌ಯುವಿಗಳಾದ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.
ಇದನ್ನು ಓದಿರಿ: Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...
ಹೆಚ್ಚು ಓದಿ: ಹ್ಯಾರಿಯರ್ ಡೀಸೆಲ್
0 out of 0 found this helpful