Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...
ಟಾಟಾ ಸಫಾರಿ ಗಾಗಿ rohit ಮೂಲಕ ಅಕ್ಟೋಬರ್ 16, 2023 11:48 am ರಂದು ಪ್ರಕಟಿಸಲಾಗಿದೆ
- 71 Views
- ಕಾಮೆಂಟ್ ಅನ್ನು ಬರೆಯಿರಿ
ಈ ವೇರಿಯಂಟ್ ಬಂದ ನಂತರ ಈ SUV ಯು ಮುಂಭಾಗದ LED ಫಾಗ್ ಲೈಟ್ ಗಳು, 19 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಗಳು ಮತ್ತು ಕಂದು ಬಣ್ಣದ ಕ್ಯಾಬಿನ್ ಥೀಮ್ ಮೂಲಕ ಐಷಾರಾಮಿ ವಾಹನದ ನೋಟವನ್ನು ಪಡೆಯಲಿದೆ
ನಾವೀಗ ಟಾಟಾ ಸಫಾರಿ ಫೇಸ್ ಲಿಫ್ಟ್ ವಾಹನದಲ್ಲಿ ದೊರೆಯಲಿರುವ ವೈಶಿಷ್ಟ್ಯಗಳ ಕುರಿತು ತಿಳಿದಿದ್ದು, ಹೊಸ ಗುಣವಿಶೇಷಗಳಿಂದ ಹಿಡಿದು ಇದರ ಪವರ್ ಟ್ರೇನ್ ಆಯ್ಕೆಗಳು ಮತ್ತು ಬೆಲೆಗಳ ಕುರಿತು ವಿವರಗಳು ಹೊರಬಂದಿವೆ. ಈ ಮಾರ್ಪಾಡಿನೊಂದಿಗೆ ಟಾಟಾ ಕಾರು ತಯಾರಕ ಸಂಸ್ಥೆಯು ಇದರ ವೇರಿಯಂಟ್ ಪಟ್ಟಿಯನ್ನು ಪರಿಷ್ಕರಿಸಿದ್ದು (ಈಗ ʻಪರ್ಸೋನಾಸ್ʼ ಎಂದು ಕರೆಯಲಾಗುತ್ತದೆ) ಅವುಗಳನ್ನು ಹೀಗೆ ಹೆಸರಿಸಲಾಗಿದೆ: ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಂಪ್ಲಿಷ್ಡ್. ಅಡ್ವೆಂಚರ್ ಟ್ರಿಮ್ ಈ ಕೆಳಗಿನ ಸಬ್ ವೇರಿಯಂಟ್ ಗಳನ್ನು ಹೊಂದಿದೆ: ಅಡ್ವೆಂಚರ್+, ಅಡ್ವೆಂಚರ್+ ಡಾರ್ಕ್ ಮತ್ತು ಅಡ್ವೆಂಚರ್+A.
ನೀವು ಟಾಟಾದ 3 ಸಾಲುಗಳ SUV ಯಲ್ಲಿ 1-ಬಿಲೋ-ಟಾಪ್ ಅಡ್ವೆಂಚರ್ ವೇರಿಯಂಟ್ ಅನ್ನು ಆರಿಸಲು ಇಚ್ಛಿಸುವುದಾದರೆ ಅದು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದರ ಕುರಿತ ವಿವರಗಳು ಇಲ್ಲಿವೆ:
ಇನ್ನಷ್ಟು ಆಕರ್ಷಕ ನೋಟ
ಟಾಟಾ ಸಫಾರಿ ಹೊಸ ಅಡ್ವೆಂಚರ್ ವೇರಿಯಂಟ್, ಸರಿಸುಮಾರು ಟಾಪ್ ಸ್ಪೆಕ್ ಅಕಂಪ್ಲಿಷ್ಡ್ ಟ್ರಿಪ್ ಕಾರಿನಂತೆ ಕಾಣಿಸಿಕೊಳ್ಳುತ್ತದೆ. ಇದು ಕಪ್ಪು ಬಣ್ಣದ ಅಲಂಕಾರದೊಂದಿಗೆ ʻಪ್ಯಾರಾಮೆಟ್ರಿಕ್ʼ ಗ್ರಿಲ್ ಅನ್ನು ಪಡೆಯಲಿದ್ದು, ಸಂಪರ್ಕಿತ LED DRL ಗಳು ಮತ್ತು ಬಂಪರ್ ನಲ್ಲಿ ದಪ್ಪನೆಯ ಸ್ಕಿಡ್ ಪ್ಲೇಟ್ ಅನ್ನು ಪಡೆಯಲಿದೆ. ಟಾಟಾ ಸಂಸ್ಥೆಯು ಸಫಾರಿ ಅಡ್ವೆಂಚರ್ ಕಾರಿನಲ್ಲಿ LED ಫ್ರಂಟ್ ಫಾಗ್ ಲ್ಯಾಂಪ್ ಗಳು ಮತ್ತು LED ಪ್ರಾಜೆಕ್ಟರ್ ಹೆಡ್ ಲೈಟ್ ಗಳಿಗೆ ʻಫಾಲೋ-ಮಿ-ಹೋಂʼ ಫಂಕ್ಷನ್ ಅನ್ನು ನೀಡಿದೆ.
ಪ್ಯೂರ್ ವೇರಿಯಂಟ್ ನಲ್ಲಿ ದೊಡ್ಡದಾದ 18 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಅಳವಡಿಸಿರುವುದು ಪ್ರೊಫೈಲ್ ನಲ್ಲಿ ಮಾಡಲಾಗಿರುವ ಏಕೈಕ ಪ್ರಮುಖ ಬದಲಾವಣೆಯಾಗಿದೆ. ಕಪ್ಪು ORVM ಹೌಸಿಂಗ್ ಗಳು ಮತ್ತು ಮುಂದಿನ ಬಾಗಿಲಿನ ಮೇಲಿರುವ ‘ಸಫಾರಿ’ ಲಾಂಛನದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಹಿಂಭಾಗದಲ್ಲಿ ಸಫಾರಿ ಫೇಸ್ ಲಿಫ್ಟ್ ನ ಅಡ್ವೆಂಚರ್ ವೇರಿಯಂಟ್ ನಲ್ಲಿ ಅದೇ ಸಂಪರ್ಕಿತ ಟೇಲ್ ಲೈಟ್ ಸೆಟಪ್ ಮತ್ತು ಬೂಟ್ ಲಿಡ್ ನಲ್ಲಿ ಹೊಸ ಫಾಂಟ್ ನಲ್ಲಿ ʻಸಫಾರಿʼ ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.
ಇನ್ನೊಂದೆಡೆ ಅಡ್ವೆಂಚರ್+ ವೇರಿಯಂಟ್ ನಲ್ಲಿ ಅಟೋಮ್ಯಾಟಿಕ್ ಹೆಡ್ ಲೈಟ್ ಫಂಕ್ಷನಾಲಿಟಿಯನ್ನು ನೀಡಲಾಗಿದೆ. ಒಂದು ವೇಳೆ ನೀವು ಅಡ್ವೆಂಚರ್+ಡಾರ್ಕ್ ಅನ್ನು ಆರಿಸಿಕೊಂಡರೆ, ಇದು ಓಬೆರಾನ್ ಬ್ಲ್ಯಾಕ್ ಹೊರಾಂಗಣ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಮುಂಭಾಗದ ಫೆಂಡರ್ ಗಳಲ್ಲಿ ʻಡಾರ್ಕ್ʼ ಬ್ಯಾಜುಗಳು ಮತ್ತು 19 ಇಂಚಿನ ಕಪ್ಪು ಅಲೋಯ್ ವೀಲ್ ಗಳನ್ನು ನೀವು ಪಡೆಯಬಹುದು.
ಒಳಾಂಗಣದಲ್ಲೂ ಪರಿಷ್ಕರಣೆ
ಟಾಟಾ ಸಂಸ್ಥೆಯು ಸಫಾರಿಯ ಫೇಸ್ ಲಿಫ್ಟ್ ಅಡ್ವೆಂಚರ್ ಟ್ರಿಮ್ ಕಾರಿಗೆ ಕಂದು ಬಣ್ಣದ ಉಫೋಲ್ಸ್ಟರಿಯ ಜೊತೆಗೆ ಟ್ಯಾನ್ ಕ್ಯಾಬಿನ್ ಥೀಮ್ ಅನ್ನು ನೀಡಿದೆ. ಸ್ಮಾರ್ಟ್ ಮತ್ತು ಪ್ಯೂರ್ ವೇರಿಯಂಟ್ ಗಳಲ್ಲಿ ಇರುವಂತೆಯೇ ಮಿನುಗುವ ʻಟಾಟಾʼ ಲೋಗೊ ಮತ್ತು ಟಚ್ ಬೇಸ್ಡ್ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಜೊತೆಗೆ 4 ಸ್ಪೋಕ್ ಸ್ಟೀಯರಿಂಗ್ ವೀಲ್ ಅನ್ನು ಇದು ಮುಂದುವರಿಸಿದೆ. ನೀವು ಅಡ್ವೆಂಚರ್+ಡಾರ್ಕ್ ವೇರಿಯಂಟ್ ಅನ್ನು ನೀವು ಆರಿಸಿಕೊಂಡರೆ, ಕಪ್ಪು ಬಣ್ಣದ ಆಸನದ ಉಫೋಲ್ಸ್ಟರಿಯ ಜೊತೆಗೆ ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್ ಥೀಮ್ ಅನ್ನು ಇದು ಹೊಂದಿದೆ.
ವೈಶಿಷ್ಟ್ಯಗಳ ಸರಮಾಲೆ
ಡ್ಯುವಲ್ 10.25 ಇಂಚಿನ ಡಿಸ್ಪ್ಲೇಗಳು (ಒಂದು ಇನ್ಫೊಟೈನ್ ಮೆಂಟ್ ಗಾಗಿ ಮತ್ತು ಇನ್ನೊಂದು ಇನ್ಸ್ ಟ್ರುಮೆಂಟೇಶನ್ ಗಾಗಿ), ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮಲ್ಟಿ ಕಲರ್ ಆಂಬಿಯೆಂಟ್ ಲೈಟಿಂಗ್, ಲಂಬರ್ ಸಪೋರ್ಟ್ ಜೊತೆಗೆ ಎತ್ತರವನ್ನು ಹೊಂದಿಸಬಹುದಾದ ಚಾಲಕನ ಸೀಟ್ ಮತ್ತು ಕ್ರೂಸ್ ಕಂಟ್ರೋಲ್ ಇತ್ಯಾದಿ ವೈಶಿಷ್ಟ್ಯಗಳನ್ನು ಪರಿಷ್ಕೃತ SUV ಯ ಅಡ್ವೆಂಚರ್ ವೇರಿಯಂಟ್ ಹೊಂದಿದೆ. ಹಿಂಭಾಗದ ಪ್ರಯಾಣಿಕರು ವಿಂಡೋ ಸನ್ ಶೇಡ್ ಮತ್ತು ಕಪ್ ಹೋಲ್ಡರ್ ಜೊತೆಗೆ ಆರ್ಮ್ ರೆಸ್ಟ್ ಅನ್ನು ಪಡೆಯಲಿದ್ದಾರೆ. ಒಂದು ವೇಳೆ ನೀವು ಅಡ್ವೆಂಚರ್+ ವೇರಿಯಂಟ್ ಅನ್ನು ಗಳಿಸಿಕೊಂಡರೆ, ಇದು ಪ್ಯಾನೊರಾಮಿಕ್ ಸನ್ ರೂಫ್, ವೈರ್ ಲೆಸ್ ಫೋನ್ ಚಾರ್ಜಿಂಗ್, ಏರ್ ಪ್ಯೂರಿಫೈರ್ ಮತ್ತು ಮಳೆ ಸಂವೇದಿ ವೈಪರ್ ಗಳನ್ನು ಪಡೆಯಲಿದ್ದೀರಿ.
ಆರು ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ISOFIX ಚೈಲ್ಡ್ ಸೀಟ್ ಆಂಕರೇಜ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ರಿವರ್ಸಿಂಗ್ ಕ್ಯಾಮರಾದ ಮೂಲಕ ಅಡ್ವೆಂಚರ್ ವೇರಿಯಂಟ್ ನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಅಡ್ವೆಂಚರ್+ ವೇರಿಯಂಟ್ ನಲ್ಲಿ 360 ಡಿಗ್ರಿ ಕ್ಯಾಮರಾ, ಅಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಕಾಣಬಹುದು. ಪ್ಯೂರ್ ಟ್ರಿಮ್ ನ ನಂತರ ರಿಯರ್ ವೈಪರ್ ಮತ್ತು ವಾಶರ್ ಗಳನ್ನು ನೀಡಲಾಗುತ್ತಿದ್ದು, ಇದೀಗ ಅಡ್ವೆಂಚರ್ ನಲ್ಲಿ ರಿಯರ್ ಡಿಫಾಗರ್ ಅನ್ನು ಒದಗಿಸಲಾಗುತ್ತಿದೆ.
ನೀವು ಅಡ್ವೆಂಚರ್+A ವೇರಿಯಂಟ್ ಅನ್ನು ಆರಿಸಿಕೊಂಡರೆ, ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂನ (ADAS) 11 ವೈಶಿಷ್ಟ್ಯಗಳನ್ನು ನೀವು ಪಡೆಯಲಿದ್ದು ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಡ್ರೈವರ್ ಡ್ರೌಸಿನೆಸ್ ಅಲರ್ಟ್ ಅನ್ನು ಹೊಂದಿರಲಿದೆ.
ಇದನ್ನು ಸಹ ಓದಿರಿ: ಟಾಟಾ ಸಫಾರಿ ಫೇಸ್ ಲಿಫ್ಟ್ ಪ್ಯೂರ್ ವೇರಿಯಂಟ್ 4 ಚಿತ್ರಗಳಲ್ಲಿ ಕಂಡಂತೆ...
ಡೀಸೆಲ್ ಎಂಜಿನ್ ನಲ್ಲಿ ಮಾತ್ರವೇ ಲಭ್ಯ
ಹೊಸ ಟಾಟಾ ಸಫಾರಿ ವಾಹನವು 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಆಯ್ಕೆಗಳೊಂದಿಗೆ (ಅಡ್ವೆಂಚರ್ ಟ್ರಿಮ್ ನಂತರ ಲಭ್ಯವಿರುವ) ಹೊಂದಿಸಲಾದ 2 ಲೀಟರ್ ಡೀಸೆಲ್ ಎಂಜಿನ್ (170PS/350Nm) ಜೊತೆಗೆ ಬರಲಿದೆ. ಟಾಟಾ ಸಫಾರಿ ಫೇಸ್ ಲಿಫ್ಟ್ ನ ಅಡ್ವೆಂಚರ್ ವೇರಿಯಂಟ್, ಮಲ್ಟಿ ಡ್ರೈವ್ ಮೋಡ್ ಗಳು (ಇಕೋ, ಸಿಟಿ, ಸ್ಪೋರ್ಟ್) ಮತ್ತು ಮಲ್ಟಿ ಟೆರೇನ್ (ನಾರ್ಮಲ್, ರಫ್ ಮತ್ತು ವೆಟ್) ಗಳೊಂದಿಗೆ ದೊರೆಯಲಿದೆ.
ಅಡ್ವೆಂಚರ್+ ಕಾರಿನ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ವೇರಿಯಂಟ್ ಗಳಲ್ಲಿ ಪ್ಯಾಡಲ್ ಶಿಫ್ಟರ್ ಗಳನ್ನು ಸಹ ಕಾಣಬಹುದು.
ಸಂಬಂಧಿತ: ಟಾಟಾ ಹ್ಯರಿಯರ್ ಮತ್ತು ಸಫಾರ್ ಫೇಸ್ ಲಿಫ್ಟ್ ಕಾರುಗಳ ಇಂಧನ ದಕ್ಷತೆಯ ಅಂಕಿಅಂಶ ಬಹಿರಂಗ
ಇದನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ?
ಟಾಟಾ ಸಂಸ್ಥೆಯು ಪರಿಷ್ಕೃತ ಸಫಾರಿಯನ್ನು ಅಕ್ಟೋಬರ್ 17ರಂದು ಬಿಡುಗಡೆ ಮಾಡಲಿದೆ. ಹೊಸ ಸಫಾರಿಗೆ ರೂ. 25,000 ಕ್ಕೆ ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿದೆ. ಹೊಸ SUVಯು ಈಗಿರುವ ಮಾದರಿಗಿಂತ ಸುಮಾರು ರೂ. ಒಂದು ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ (ಬೆಲೆ ರೂ. 15.85 ಲಕ್ಷದಿಂದ ರೂ. 25.21 ಲಕ್ಷದ ತನಕ, ಎಕ್ಸ್ ಶೋರೂಂ ದೆಹಲಿ) ಎಂದು ಅಂದಾಜಿಸಲಾಗಿದೆ. ಇದು ಹ್ಯುಂಡೈ ಅಲ್ಕಜಾರ್, MG ಹೆಕ್ಟರ್ ಪ್ಲಸ್, ಮತ್ತು ಮಹೀಂದ್ರಾ XUV700 ಜೊತೆಗೆ ಸ್ಪರ್ಧಿಸಲಿದೆ.
ಇದನ್ನು ಸಹ ನೋಡಿರಿ: ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಅಡ್ವೆಂಚರ್ ವೇರಿಯಂಟ್ 6 ಚಿತ್ರಗಳಲ್ಲಿ ಕಂಡಂತೆ...
0 out of 0 found this helpful