• English
  • Login / Register

Tata Harrier ಮತ್ತು Tata Safari ಸ್ಟೆಲ್ತ್ ಎಡಿಷನ್‌ನ ಬೆಲೆಗಳು ಬಿಡುಗಡೆ, ಆರಂಭಿಕ ಬೆಲೆ ರೂ. 25.09 ಲಕ್ಷ ರೂ.ನಿಗದಿ

ಟಾಟಾ ಸಫಾರಿ ಗಾಗಿ shreyash ಮೂಲಕ ಫೆಬ್ರವಾರಿ 24, 2025 07:52 pm ರಂದು ಪ್ರಕಟಿಸಲಾಗಿದೆ

  • 5 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯಾರಿಯರ್ ಮತ್ತು ಸಫಾರಿಯ ಹೊಸ ಸ್ಟೆಲ್ತ್ ಎಡಿಷನ್‌ ಕೇವಲ 2,700 ಯೂನಿಟ್‌ಗಳಿಗೆ ಸೀಮಿತವಾಗಿರುತ್ತದೆ

Tata Harrier And Tata Safari Stealth Edition Prices Out, Starts From Rs 25.09 Lakh

  • ಹ್ಯಾರಿಯರ್ ಮತ್ತು ಸಫಾರಿ ಸ್ಟೆಲ್ತ್ ಎರಡೂ ಕಪ್ಪು ಬಣ್ಣದ ಗ್ರಿಲ್, ಬಂಪರ್ ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿವೆ.

  • ಕಪ್ಪು ಬಣ್ಣದ ಲೆದರೆಟ್ ಸೀಟ್ ಕವರ್‌ ಜೊತೆಗೆ ಸಂಪೂರ್ಣ ಕಪ್ಪು ಬಣ್ಣದ ಒಳಾಂಗಣ ಥೀಮ್‌ನೊಂದಿಗೆ ನೀಡಲಾಗಿದೆ.

  • 12.3-ಇಂಚಿನ ಟಚ್‌ಸ್ಕ್ರೀನ್, ಪನೋರಮಿಕ್ ಸನ್‌ರೂಫ್ ಮತ್ತು ಚಾಲಿತ ಟೈಲ್‌ಗೇಟ್‌ನಂತಹ ಸೌಲಭ್ಯಗಳನ್ನು ಒಳಗೊಂಡಿದೆ.

  • ಸುರಕ್ಷತೆಯನ್ನು 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ADAS ಮೂಲಕ ನೋಡಿಕೊಳ್ಳಲಾಗುತ್ತದೆ.

  • 170ಪಿಎಸ್‌ ಮತ್ತು 350ಎನ್‌ಎಮ್‌ ಉತ್ಪಾದಿಸುವ ಅದೇ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ.

  • 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳಲ್ಲಿ ಲಭ್ಯವಿದೆ.

ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಎಸ್‌ಯುವಿಗಳ ಸ್ಟೆಲ್ತ್ ಎಡಿಷನ್‌ನ ವೇರಿಯೆಂಟ್‌ಗಳ ಬೆಲೆಗಳನ್ನು ಘೋಷಿಸಲಾಗಿದ್ದು, 25.09 ಲಕ್ಷ ರೂ.ನಿಂದ ಬೆಲೆ (ಎಕ್ಸ್-ಶೋರೂಂ ದೆಹಲಿ) ರೇಂಜ್‌ಗಳು ಪ್ರಾರಂಭವಾಗುತ್ತದೆ. ಟಾಟಾ ಕಂಪನಿಯು ಜನವರಿ 17 ರಂದು ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ ಸಫಾರಿ ಮತ್ತು ಹ್ಯಾರಿಯರ್ ಇವಿಯ ಸ್ಪೇಷಲ್‌ ಮೊದಲು ಪ್ರದರ್ಶಿಸಿತು, ಹಾಗೆಯೇ, ಹ್ಯಾರಿಯರ್ ಇವಿ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹ್ಯಾರಿಯರ್ ಮತ್ತು ಸಫಾರಿಯ ಈ ಹೊಸ ಎಡಿಷನ್‌ ಮ್ಯಾಟ್ ಕಪ್ಪು ಬಣ್ಣದ ಫಿನಿಶ್‌ಅನ್ನು ಹೊಂದಿದ್ದು, ಸ್ಟೆಲ್ತ್ ಕಪ್ಪು ಇಂಟೀರಿಯರ್‌ ಥೀಮ್ ಅನ್ನು ಹೊಂದಿದೆ. ಹೆಚ್ಚಿನ ವಿವರಗಳನ್ನು ಪಡೆಯುವ ಮೊದಲು, ಈ ಎಸ್‌ಯುವಿಗಳ ವೇರಿಯೆಂಟ್‌ವಾರು ಬೆಲೆಗಳನ್ನು ಮೊದಲು ನೋಡೋಣ. 

ಬೆಲೆಗಳು

ಟಾಟಾ ಸಫಾರಿ

ವೇರಿಯೆಂಟ್‌

ರೆಗ್ಯುಲರ್‌ ಬೆಲೆ

ಸ್ಟೆಲ್ತ್‌ ಎಡಿಷನ್‌ ಬೆಲೆ

ವ್ಯತ್ಯಾಸ

ಫಿಯರ್‌ಲೆಸ್ ಪ್ಲಸ್ ಮ್ಯಾನ್ಯುವಲ್‌

24.35 ಲಕ್ಷ ರೂ.

25.10 ಲಕ್ಷ ರೂ.

+ 75,000 ರೂ.

ಫಿಯರ್‌ಲೆಸ್ ಪ್ಲಸ್ ಆಟೋಮ್ಯಾಟಿಕ್‌

25.75 ಲಕ್ಷ ರೂ.

26.50 ಲಕ್ಷ ರೂ.

+ 75,000 ರೂ.

ಟಾಟಾ ಸಫಾರಿ

ವೇರಿಯೆಂಟ್‌

ರೆಗ್ಯುಲರ್‌ ಬೆಲೆ

ಸ್ಟೆಲ್ತ್‌ ಎಡಿಷನ್‌ ಬೆಲೆ

ವ್ಯತ್ಯಾಸ

ಅಕಂಪ್ಲಿಶ್ಡ್ ಪ್ಲಸ್ ಮ್ಯಾನ್ಯುವಲ್‌ 7-ಸೀಟರ್‌

25 ಲಕ್ಷ ರೂ.

25.75 ಲಕ್ಷ ರೂ.

+ 75,000 ರೂ.

ಅಕಂಪ್ಲಿಶ್ಡ್ ಪ್ಲಸ್ ಆಟೋಮ್ಯಾಟಿಕ್‌ 7-ಸೀಟರ್‌

26.40 ಲಕ್ಷ ರೂ.

27.15 ಲಕ್ಷ ರೂ.

+ 75,000 ರೂ.

ಅಕಂಪ್ಲಿಶ್ಡ್ ಪ್ಲಸ್ ಆಟೋಮ್ಯಾಟಿಕ್‌ 6-ಸೀಟರ್‌

26.50 ಲಕ್ಷ ರೂ.

25.25 ಲಕ್ಷ ರೂ.

+ 75,000 ರೂ.

ಈ ಎಸ್‌ಯುವಿಗಳ ಹೊಸ ಸ್ಟೆಲ್ತ್ ಎಡಿಷನ್‌ ಕೇವಲ 2,700 ಯುನಿಟ್‌ಗಳಿಗೆ ಸೀಮಿತವಾಗಿರುತ್ತವೆ.

ಹೊಸ ಮ್ಯಾಟ್ ಕಪ್ಪು ಕಲರ್‌

Tata Harrier And Tata Safari Stealth Edition Prices Out, Starts From Rs 25.09 Lakh

ಹ್ಯಾರಿಯರ್ ಮತ್ತು ಸಫಾರಿ ಎರಡರ ಹೊಸ ಸ್ಟೆಲ್ತ್ ಎಡಿಷನ್‌ ಅನ್ನು ಹೊಸ ಸ್ಟೆಲ್ತ್ ಮ್ಯಾಟ್ ಬ್ಲಾಕ್ ಬಾಡಿ ಕಲರ್‌ನೊಂದಿಗೆ ನೀಡಲಾಗುತ್ತಿದೆ. ಎರಡೂ ಎಸ್‌ಯುವಿಗಳ ಮುಂಭಾಗದ ಗ್ರಿಲ್, ಬಂಪರ್‌ಗಳು, ಅಲಾಯ್ ವೀಲ್‌ಗಳಿಗೆ ಕಪ್ಪು ಬಣ್ಣವನ್ನು ನೀಡಲಾಗಿದೆ. ಉಳಿದ ವಿನ್ಯಾಸ ಅಂಶಗಳಾದ ಕನೆಕ್ಟೆಡ್‌ ಎಲ್‌ಇಡಿ ಲೈಟಿಂಗ್ ಅಂಶಗಳು ಮತ್ತು ಈ ಎಸ್‌ಯುವಿಗಳ ಒಟ್ಟಾರೆ ಬಾಡಿ ಆಕೃತಿಯು ಒಂದೇ ಆಗಿರುತ್ತದೆ.

ಸಂಪೂರ್ಣ ಕಪ್ಪು ಇಂಟೀರಿಯರ್‌

Tata Harrier And Tata Safari Stealth Edition Prices Out, Starts From Rs 25.09 Lakh

ಹ್ಯಾರಿಯರ್ ಮತ್ತು ಸಫಾರಿ ಸ್ಟೆಲ್ತ್ ಎರಡೂ ಸಂಪೂರ್ಣ ಕಪ್ಪು ಬಣ್ಣದ ಇಂಟೀರಿಯರ್‌ ಥೀಮ್ ಜೊತೆಗೆ ಕಪ್ಪು ಲೆದರೆಟ್ ಸೀಟ್ ಕವರ್‌ ಅನ್ನು ಪಡೆಯುತ್ತವೆ.

ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಈ ಸ್ಪೇಷಲ್‌ ಎಡಿಷನ್‌ ಅನ್ನು 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಟಚ್‌ಸ್ಕ್ರೀನ್, ಡ್ಯುಯಲ್-ಜೋನ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಿದೆ. ಸುರಕ್ಷತೆಯನ್ನು 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ನೋಡಿಕೊಳ್ಳುತ್ತವೆ.

ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲ

ಟಾಟಾ ಕಂಪನಿಯು ಹ್ಯಾರಿಯರ್ ಮತ್ತು ಸಫಾರಿ ಸ್ಟೆಲ್ತ್ ಎಡಿಷನ್ ಎಸ್‌ಯುವಿಗಳಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ. ವಿಶೇಷಣಗಳು ಇಲ್ಲಿವೆ:

ಎಂಜಿನ್‌

2-ಲೀಟರ್ ಡೀಸೆಲ್

ಪವರ್‌

170 ಪಿಎಸ್‌

ಟಾರ್ಕ್‌

350 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಎಂಟಿ, 6-ಸ್ಪೀಡ್ ಎಟಿ

ಎಟಿ - ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ಪ್ರತಿಸ್ಪರ್ಧಿಗಳು

ಟಾಟಾ ಹ್ಯಾರಿಯರ್ ಮತ್ತು ಸಫಾರಿ ಸ್ಟೆಲ್ತ್ ಎಡಿಷನ್‌ ಅನ್ನು ಕಿಯಾ ಸೆಲ್ಟೋಸ್ ಎಕ್ಸ್-ಲೈನ್‌ಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು.

ಆಟೋಮೋಟಿವ್ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

was this article helpful ?

Write your Comment on Tata ಸಫಾರಿ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience