ಟಾಟಾ ಹ್ಯಾರಿಯರ್ EV ಅಥವಾ ಹ್ಯಾರಿಯರ್ ಪೆಟ್ರೋಲ್ - ಯಾವುದು ಮೊದಲಿಗೆ ಬಿಡುಗಡೆಯಾಗಲಿದೆ?
ಟಾಟಾ ಹ್ಯಾರಿಯರ್ ಗಾಗಿ ansh ಮೂಲಕ ಅಕ್ಟೋಬರ್ 20, 2023 01:35 pm ರಂದು ಪ್ರಕಟಿಸಲಾಗಿದೆ
- 50 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯಾರಿಯರ್ EV ಯನ್ನು 2023ರ ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದ್ದು, ಪರಿಷ್ಕೃತ ಹ್ಯಾರಿಯರ್ ವಾಹನದ ಬಿಡುಗಡೆಯ ನಂತರ ಹ್ಯಾರಿಯರ್ ಪೆಟ್ರೋಲ್ ಅನ್ನು ಟಾಟಾ ಸಂಸ್ಥೆಯು ದೃಢೀಕರಿಸಿದೆ.
ಪರಿಷ್ಕೃತ ಟಾಟಾ ಹ್ಯಾರಿಯರ್ ಅನ್ನು ಹೊಸ ವಿನ್ಯಾಸ, ಹೆಚ್ಚಿನ ವೈಶಿಷ್ಟ್ಯಗಳು ಮತ್ತು 5-ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್ ಜೊತೆಗೆ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಆದರೆ ಈ ಎಲ್ಲಾ ಬದಲಾವಣೆಗಳ ಹೊರತಾಗಿಯೂ ಇದರ ಪವರ್ ಟ್ರೇನ್ ಆಯ್ಕೆ ಮಾತ್ರ ಇಲ್ಲಿಯತನಕ ಬದಲಾಗಿಯೇ ಇಲ್ಲ. ಇದು ಇನ್ನೂ ಸಹ 170PS ಮತ್ತು 350Nm ಉಂಟು ಮಾಡುವ 2 ಲೀಟರ್ ಎಂಜಿನ್ ಜೊತೆಗೆ ಬರುತ್ತಿದೆ. ಆದರೆ, ಈ ಮಧ್ಯಮ ಗಾತ್ರದ SUV ಗೆ ಎರಡು ಪವರ್ ಟ್ರೇನ್ ಆಯ್ಕೆಗಳನ್ನು ಸೇರ್ಪಡೆಗೊಳಿಸುವುದಾಗಿ ಟಾಟಾ ಸಂಸ್ಥೆಯು ಹೇಳಿದೆ. ಅವೆಂದರೆ ಹ್ಯಾರಿಯರ್ EV ಮತ್ತು ಹ್ಯಾರಿಯರ್ ಪೆಟ್ರೋಲ್. ಈ ಎರಡೂ ಮಾದರಿಗಳು ಮುಂದಿನ ವರ್ಷ ರಸ್ತೆಗಿಳಿಯುವುದು ಖಚಿತವಾಗಿದೆ. ಅಲ್ಲದೆ ಹ್ಯಾರಿಯರ್ EV ಯನ್ನು ಉತ್ಪಾದನೆಗೆ ಸಿದ್ಧಗೊಂಡ ಮಾದರಿಯ ರೂಪದಲ್ಲಿ ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ. ಇದೇ ವೇಳೆ, ಪರಿಷ್ಕೃತ ಹ್ಯಾರಿಯರ್ ವಾಹನದ ಬಿಡುಗಡೆಯ ಸಂದರ್ಭದಲ್ಲಿ ಹ್ಯಾರಿಯರ್ ಪೆಟ್ರೋಲ್ ಆವೃತ್ತಿಯ ಆಗಮನವನ್ನು ಸಹ ದೃಢೀಕರಿಸಲಾಗಿದೆ.
ಈ ಆವೃತ್ತಿಗಳ ಕುರಿತು ಏನೆಲ್ಲ ಮಾಹಿತಿ ತಿಳಿದಿದೆ ಎಂಬುದನ್ನು ನೋಡೋಣ.
ಟಾಟಾ ಹ್ಯಾರಿಯರ್ EV
ಟಾಟಾ ಹ್ಯಾರಿಯರ್ EV ಯು ಉತ್ಪಾದನೆಗೆ ಸಿದ್ಧವಾಗಿರುವ ಮಾದರಿಯ ರೂಪದಲ್ಲಿ ಅಟೋ ಎಕ್ಸ್ಪೊ 2023 ರಲ್ಲಿ ಪ್ರದರ್ಶಿತವಾಗಿತ್ತು. ಇದರ ವಿನ್ಯಾಸವು ಇತ್ತೀಚೆಗಷ್ಟೇ ಬಿಡುಗಡೆಯಾದ ಪರಿಷ್ಕೃತ ಹ್ಯಾರಿಯರ್ ಅನ್ನು ಹೋಲುತ್ತಿದ್ದರೂ, EV ಗೆ ಸೀಮಿತವಾದ ವಿನ್ಯಾಸವನ್ನು ಸಹ ಹೊಂದಿದೆ. ಬ್ಯಾಟರಿ ಪ್ಯಾಕ್ ಕುರಿತ ವಿವರಗಳು ಇನ್ನೂ ಬಹಿರಂಗಗೊಳ್ಳದೆ ಇದ್ದರೂ, ಇದು ಲ್ಯಾಂಡ್ ರೋವರ್ ನಿಂದ ಪಡೆದ OMEGA- ಆರ್ಕ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ ಎಂಬುದು ನಮಗೆ ತಿಳಿದಿದೆ. ಅಲ್ಲದೆ ಇದು ಡ್ಯುವಲ್ ಮೋಟಾರ್ ಸೆಟಪ್ ಜೊತೆಗೆ ಹ್ಯಾರಿಯರ್ ನೇಮ್ ಪ್ಲೇಟ್ ಗೆ AWD ಯನ್ನು ತರಲಿದ್ದು, ಸುಮಾರು 500km ಶ್ರೇಣಿಯನ್ನು ಹೊಂದಿರುವ ಸಾಧ್ಯತೆ ಇದೆ.
ಇದನ್ನು ಸಹ ಓದಿರಿ: ಭಾರತದಲ್ಲಿ ನಿರ್ಮಿತ ಸುರಕ್ಷಿತ ಕಾರುಗಳೆನಿಸಿದ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ
ಮಹೀಂದ್ರಾ XUV700 ಮಾದರಿಯ ಎಲೆಕ್ಟ್ರಿಕ್ ಆವೃತ್ತಿ ಎನಿಸಿರುವ XUV E8 ಕಾರು ಮಾತ್ರವೇ ಇದಕ್ಕೆ 2024ರಲ್ಲಿ ಸ್ಪರ್ಧೆಯನ್ನು ನೀಡಲಿದೆ.
ಟಾಟಾ ಹ್ಯಾರಿಯರ್ ಪೆಟ್ರೋಲ್
ಅದೇ ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಟಾಟಾ ಸಂಸ್ಥೆಯು, ಇನ್ನೂ ಅಭಿವೃದ್ಧಿಯ ಹಂತದಲ್ಲಿರುವ ಹಾಗೂ 170PS ಮತ್ತು 280Nm ಕ್ಷಮತೆಯನ್ನು ಒದಗಿಸುವ ಹೊಸ 1.5-ಲೀಟರ್ TGDi ಪೆಟ್ರೋಲ್ ಎಂಜಿನ್ ಅನ್ನು ಪರಿಚಯಿಸಿದೆ. ಹ್ಯಾರಿಯರ್ ಪೆಟ್ರೋಲ್ ಆವೃತ್ತಿಯು ಸದ್ಯದಲ್ಲೇ ರಸ್ತೆಗಿಳಿಯಲಿದ್ದು, ಇದು ಒಂದೆರಡು ವರ್ಷಗಳ್ಲಲಿ ಈ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನ ಪಡೆಯಲಿದೆ ಎಂದು ಪರಿಷ್ಕೃತ ಹ್ಯಾರಿಯರ್ ವಾಹನದ ಬಿಡುಗಡೆಯ ವೇಳೆ ಟಾಟಾ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಟಾಟಾದ ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ಗಳ ಸಾಲು, ಮುಂದಿನ ವರ್ಷದಲ್ಲಿ ರಸ್ತೆಗಿಳಿಯಲಿರುವ ಟಾಟಾ ಕರ್ವ್ ಮೂಲಕ ಅನಾವರಣಗೊಳ್ಳಲಿದ್ದು, ಟಾಟಾವು 1.5 ಲೀಟರ್ ಟರ್ಬೊ ಎಂಜಿನ್ ಅನು ಪರಿಷ್ಕೃತ ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಿಗೆ ಸೇರ್ಪಡೆಗೊಳಿಸಲಿದೆ.
ಇದನ್ನು ಸಹ ಓದಿರಿ: ಟಾಟಾ ಹ್ಯಾರಿಯರ್ ಫೇಸ್ ಲಿಫ್ಟ್ ಅಟೋಮ್ಯಾಟಿಕ್ ಮತ್ತು ಡಾರ್ಕ್ ಎಡಿಷನ್ ವೇರಿಯಂಟ್ ಗಳ ಬೆಲೆಗಳ ವಿವರಗಳು
ಇದೇ ವೇಳೆ ಪ್ರತಿಸ್ಪರ್ಧಿಗಳಾದ ಮಹೀಂದ್ರಾ XUV700 ಮತ್ತು MG ಹೆಕ್ಟರ್ ಇತ್ಯಾದಿಗಳು ಬಿಡುಗಡೆಯ ಸಮಯದಿಂದಲೇ ಟರ್ಬೊ ಪೆಟ್ರೋಲ್ ಎಂಜಿನ್ ಗಳನ್ನು ನೀಡುತ್ತಿವೆ.
ಬಿಡುಗಡೆಯ ಸಮಯ
ಟಾಟಾ ಹ್ಯಾರಿಯರ್ Evಯು 2024ರ ಸುಮಾರಿಗೆ ರಸ್ತೆಗಿಳಿಯಲಿದ್ದು, ಆರಂಭಿಕ ಬೆಲೆಯು ರೂ. 30 ಲಕ್ಷ (ಎಕ್ಸ್-ಶೋರೂಂ) ಆಗಿರಲಿದೆ. ಟಾಟಾ ಹ್ಯಾರಿಯರ್ ಪೆಟ್ರೋಲ್ ಆವೃತ್ತಿಯ ಬಿಡುಗಡೆಯು, 2024ರ ಏಪ್ರಿಲ್ ನಲ್ಲಿ ಮಾರುಕಟ್ಟೆಗೆ ಬರಲಿರುವ ಟಾಟಾ ಕರ್ವ್ ಕಾರಿನ ಬಿಡುಗಡೆಯನ್ನು ಅವಲಂಬಿಸಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ಹ್ಯರಿಯರ್ ಡೀಸೆಲ್