Login or Register ಅತ್ಯುತ್ತಮ CarDekho experience ಗೆ
Login

ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್‌ಲಿಫ್ಟ್‌ಗಳ ಬಿಡುಗಡೆ

ಟಾಟಾ ಹ್ಯಾರಿಯರ್ ಗಾಗಿ rohit ಮೂಲಕ ಅಕ್ಟೋಬರ್ 13, 2023 04:32 pm ರಂದು ಪ್ರಕಟಿಸಲಾಗಿದೆ

ಅವುಗಳ ಬುಕಿಂಗ್‌ಗಳು ರೂ 25,000 ಬೆಲೆಗೆ ಆನ್‌ಲೈನ್ ಹಾಗೂ ಟಾಟಾದ ಪ್ಯಾನ್-ಇಂಡಿಯಾ ಡೀಲರ್ ನೆಟ್‌ವರ್ಕ್‌ ಎರಡರಲ್ಲಿಯೂ ಈಗಾಗಲೇ ತೆರೆದಿವೆ

  • ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಮೊದಲ ಪ್ರಮುಖ ನವೀಕರಣವನ್ನು ಪಡೆದಿವೆ.
  • ಎರಡರಲ್ಲಿಯೂ ಮುಂಭಾಗದಲ್ಲಿ ಸಂಪರ್ಕಿತ LED DRL, 19-ಇಂಚು ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ ಟೇಲ್‌ಲೈಟ್‌ಗಳು ಇವೆ.
  • ಒಳಭಾಗದಲ್ಲಿ, ಎರಡರಲ್ಲಿಯೂ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಜೊತೆಗೆ ಬ್ಯಾಕ್‌ಲಿಟ್ ‘ಟಾಟಾ’ ಲೋಗೋ ಮತ್ತು ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಅನ್ನು ಕಾಣಬಹುದು.
  • 12.3-ಇಂಚು ಟಚ್‌ಸ್ಕ್ರೀನ್, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಡ್ಯುಯಲ್-ಝೋನ್ AC ಫೀಚರ್‌ಗಳನ್ನು ಪಡೆದಿವೆ
  • ಸುರಕ್ಷತಾ ಫೀಚರ್‌ಗಳು, ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ ಮತ್ತು ADAS ಅನ್ನು ಒಳಗೊಂಡಿದೆ.
  • ಎರಡೂ ಕಾರುಗಳು ಪ್ರಸ್ತುತ ಬೆಲೆಗಳಿಗಿಂತ ರೂ ಒಂದು ಲಕ್ಷದಷ್ಟು ದುಬಾರಿಯಾಗಿರುವ ಸಂಭವ ಇದೆ.

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಮತ್ತು ಟಾಟಾ ಸಫಾರಿ ಫೇಸ್‌ಲಿಫ್ಟ್ ಅನಾವರಣಗೊಂಡಾಗ, ಕಾರುತಯಾರಕರು ಈ ನವೀಕೃತ SUV ಜೋಡಿಯ ಬೆಲೆಯನ್ನು ಹೊರತುಪಡಿಸಿ ಉಳಿದಂತೆ ಸುಮಾರಿಗೆ ಎಲ್ಲದರ ವಿವರಗಳನ್ನೂ ಹಂಚಿಕೊಂಡಿದ್ದಾರೆ. ಈ ಹೊಸ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಅಕ್ಟೋಬರ್ 17ಕ್ಕೆ ಮಾರಾಟಕ್ಕೆ ಬರುತ್ತದೆ ಎಂಬುದು ದೃಢಪಟ್ಟಿದೆ. ಟಾಟಾ, ಈ ಜೋಡಿಯ ಬುಕಿಂಗ್‌ಗಳನ್ನು ತೆರೆದಿದ್ದು, ಇವುಗಳನ್ನು ಆನ್‌ಲೈನ್ ಮತ್ತು ಪ್ಯಾನ್ ಇಂಡಿಯಾ ಡೀಲರ್‌ಶಿಪ್‌ಗಳೆರಡರಲ್ಲಿಯೂ ರೂ 25000 ಬೆಲೆಗೆ ಕಾಯ್ದಿರಿಸಬಹುದಾಗಿದೆ. ಈ ನವೀಕೃತ SUVಗಳ ಸಂಕ್ಷಿಪ್ತ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

ಹೊಚ್ಚಹೊಸ ಎಕ್ಸ್‌ಟೀರಿಯರ್‌ಗಳು

ಎರಡು SUVಗಳಿಗೂ ಒಂದೇ ರೀತಿಯ ಡಿಸೈನ್ ಸುಧಾರಣೆಗಳನ್ನು ನೀಡಲಾಗಿದೆ. ಈ ಪರಿಷ್ಕರಣೆಗಳು ನವೀಕೃತ ಗ್ರಿಲ್, ಚೂಪಾದ ಇಂಡಿಕೇಟರ್‌ಗಳು ಮತ್ತು ಲಂಬವಾಗಿ ಜೋಡಿಸಲಾದ ಸ್ಪ್ಲಿಟ್- LED ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ. ಮುಂಚೂಣಿಯಲ್ಲಿರುವ ಈ SUV ಜೋಡಿ ಮುಂಭಾಗದಲ್ಲಿ ಉದ್ದನೆಯ LED DRL ಸ್ಟ್ರಿಪ್ ಅನ್ನು ಹೊಂದಿವೆ.

ಇವುಗಳ ಬದಿಯಲ್ಲಿ, ಮುಂಭಾಗದ ಡೋರ್‌ಗಳ ಕೆಳಭಾಗದಲ್ಲಿ ಅನುಕ್ರಮವಾಗಿ ‘ಹ್ಯಾರಿಯರ್’ ಮತ್ತು ‘ಸಫಾರಿ’ ಮೋನಿಕರ್‌ಗಳನ್ನು ಕಾಣಬಹುದು, ಜೊತೆಗೆ ಎರಡೂ SUV ಗಳು 17ರಿಂದ 19-ಇಂಚುಗಳ ಅಲಾಯ್ ವ್ಹೀಲ್‌ಗಳನ್ನು ಪಡೆದಿವೆ. ಎರಡು SUVಯ ಹಿಂಭಾಗದಲ್ಲಿ ಸಂಪರ್ಕಿತ LED ಟೇಲ್‌ಲೈಟ್ ಸೆಟಪ್ ಮತ್ತು ಆಯಾ ನೇಮ್ ಬ್ಯಾಡ್‌ಗಳಿಗೆ ನವೀಕೃತ ಫಾಂಟ್ ಅನ್ನು ನೀಡಲಾಗಿದೆ. ಎರಡು SUVಗಳೂ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಚಂಕಿ ಸ್ಕಿಡ್ ಪ್ಲೇಟ್‌ಗಳನ್ನು ಪಡೆದಿವೆ.

ಎಕ್ಸ್‌ಟೀರಿಯರ್‌ಗೆ ಪೂರಕವಾದ ಇಂಟೀರಿಯರ್

ಈ ಎರಡು SUVಗಳ ಕ್ಯಾಬಿನ್ ಅನ್ನು ಟಾಟಾ ಸಂಪೂರ್ಣವಾಗಿ ಪರಿಷ್ಕರಿಸಿದ್ದು, ಎರಡೂ ಕೂಡಾ ಸ್ತರಗಳಂತಹ ಡ್ಯಾಶ್‌ಬೋರ್ಡ್ ಡಿಸೈನ್, ಪರಿಷ್ಕರಿಸಿದ ಸೆಂಟ್ರಲ್ ಎಸಿ ವೆಂಟ್‌ಗಳು ಮತ್ತು ಸ್ಪರ್ಶ ಆಧಾರಿತ ಕ್ಲೈಮೇಟ್-ಕಂಟ್ರೋಲ್ ಪ್ಯಾನೆಲ್ ಅನ್ನು ಪಡೆದಿವೆ. ಅಲ್ಲದೇ ಹೊಸ ಹ್ಯಾರಿಯರ್ ಮತ್ತು ಸಫಾರಿ ಬ್ಯಾಕ್‌ಲಿಟ್ ‘ಟಾಟಾ’ ಲೋಗೋ ಹೊಂದಿರುವ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನೂ ಪಡೆದಿವೆ. ಈ ಕ್ಯಾಬಿನ್ ಈಗ ಬಣ್ಣ ಸಂಯೋಜನೆಯಿಂದ ನೀವು ಆರಿಸುವ ‘ಪರ್ಸೋನಾ’ ಆಧರಿಸಿ ಇರಲಿದೆ.

ಇದನ್ನೂ ಓದಿ: 2023 ಟಾಟಾ ಹ್ಯಾರಿಯರ್ ವೇರಿಯೆಂಟ್‌ವಾರು ಫೀಚರ್‌ಗಳ ವಿವರ

ಫೀಚರ್‌ಗಳ ಉದ್ದನೆಯ ಪಟ್ಟಿ

ಎರಡೂ ಟಾಟಾ ಕಾರುಗಳು ಈಗ ಇನ್ನಷ್ಟು ಹೆಚ್ಚಿನ ಫೀಚರ್‌ಗಳನ್ನು ಪಡೆದಿದ್ದು ಇದರಲ್ಲಿ, ದೊಡ್ಡದಾದ 12.3-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿ ಕಲರ್ ಆ್ಯಂಬಿಯೆಂಟ್ ಲೈಟಿಂಗ್ ಮತ್ತು ವಿಹಂಗಮ ಸನ್‌ರೂಫ್ ಅಡಕವಾಗಿದೆ. ಅಲ್ಲದೇ ಇವುಗಳು ವಾತಾಯನದ ಮುಂಭಾಗದ ಸೀಟುಗಳು (ಸಫಾರಿಯ 6-ಸೀಟರ್ ಆವೃತ್ತಿಯಲ್ಲಿ ಮಧ್ಯದ ಸಾಲು ಕೂಡಾ ಸೇರಿದೆ), ಕ್ರೂಸ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಕೂಡಾ ಪಡೆದಿದೆ.

ಪ್ರಯಾಣಿಕ ಸುರಕ್ಷತೆಯು ಏಳು ಏರ್‌ಬ್ಯಾಗ್‌ಗಳು (ಡ್ರೈವರ್-ಬದಿಯ ಮೊಣಕಾಲಿನ ಏರ್‌ಬ್ಯಾಗ್ ಸೇರಿದಂತೆ), 360 ಡಿಗ್ರಿ ಕ್ಯಾಮರಾ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಇತ್ಯಾದಿಗಳಿಂದ ವರ್ಧಿಸಿದೆ. ಅವುಗಳ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ಕೂಡಾ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಪಾರ್ವರ್ಡ್ ಕೊಲಿಶನ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಅನ್ನು ಪಡೆದಿವೆ.

ಇದನ್ನೂ ಓದಿ: 2023 ಟಾಟಾ ಸಫಾರಿ ಫೇಸ್‌ಲಿಫ್ಟ್‌ಗಳ ವೇರಿಯೆಂಟ್‌ವಾರು ಫೀಚರ್‌ಗಳು ಬಹಿರಂಗ

ಇಷ್ಟೆಲ್ಲ ಇದ್ದರೂ ಡೀಸೆಲ್ ಇಂಜಿನ್‌ ಮಾತ್ರ ಲಭ್ಯ

ಟಾಟಾ ಈಗ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್‌ಗಳನ್ನು 2-ಲೀಟರ್ ಡೀಸೆಲ್ ಇಂಜಿನ್ (170PS/350Nm) ಜೊತೆಗೆ ನೀಡುವ ಆಯ್ಕೆ ಮಾತ್ರವೇ ಮಾಡಿದ್ದು, ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಪಡೆಯಬಹುದಾಗಿದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಎರಡೂ SUVಗಳನ್ನು ಪರಿಷ್ಕೃತ ವೇರಿಯೆಂಟ್ ಲೈನ್‌ಅಪ್‌ನಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಅವುಗಳು ಈ ಕೆಳಗಿನಂತಿವೆ: ಹ್ಯಾರಿಯರ್-ಸ್ಮಾರ್ಟ್ ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್‌ಲೆಸ್ ಮತ್ತು ಸಫಾರಿ-ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಆಂಡ್ ಅಕಾಂಪ್ಲಿಶ್ಡ್. ಈ ಹೊಸ ಹ್ಯಾರಿಯರ್ ಮತ್ತು ಸಫಾರಿಯು ಪ್ರಸ್ತುತ ಬೆಲೆಗಿಂತ ರೂ 1 ಲಕ್ಷದಷ್ಟು ದುಬಾರಿಯಾಗಿರಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ. ಉಲ್ಲೇಖಕ್ಕಾಗಿ, ಪ್ರಸ್ತುತ ಹ್ಯಾರಿಯರ್ ಬೆಲೆ ರೂ15.20 ಲಕ್ಷದಿಂದ ರೂ 24.27 ಲಕ್ಷದ ತನಕ ಇದ್ದು, ಸಫಾರಿಯ ಪ್ರಸ್ತುತ ಬೆಲೆಯು ರೂ 15.85 ಲಕ್ಷ ಮತ್ತು 25.21 ಲಕ್ಷದ (ಎಕ್ಸ್-ಶೋರೂಂ, ದೆಹಲಿ) ನಡುವೆ ಇರಲಿದೆ.

ಈ 5-ಸೀಟಿನ SUVಯು MG ಹೆಕ್ಟರ್ ಮತ್ತು ಮಹೀಂದ್ರಾ XUV700 ಅದೇ ರೀತಿ ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್‌ನ ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಸಫಾರಿ ಫೇಸ್‌ಲಿಫ್ಟ್ ಹ್ಯುಂಡೈ ಅಲ್ಕಾಝಾರ್, ಮಹೀಂದ್ರಾ XUV700 ಮತ್ತು MG ಹೆಕ್ಟರ್ ಪ್ಲಸ್‌ಗೆ ಪೈಪೋಟಿ ನೀಡಲಿದೆ.

ಇನ್ನಷ್ಟು ಓದಿ : ಹ್ಯಾರಿಯರ್ ಡೀಸೆಲ್

r
ಅವರಿಂದ ಪ್ರಕಟಿಸಲಾಗಿದೆ

rohit

  • 39 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Tata ಹ್ಯಾರಿಯರ್

Read Full News

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ