• English
  • Login / Register

Tata Nexon CNG ಪರೀಕ್ಷೆ ಪ್ರಾರಂಭ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ

ಟಾಟಾ ನೆಕ್ಸಾನ್‌ ಗಾಗಿ ansh ಮೂಲಕ ಮಾರ್ಚ್‌ 19, 2024 07:58 pm ರಂದು ಪ್ರಕಟಿಸಲಾಗಿದೆ

  • 70 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತೀಯ ಮಾರುಕಟ್ಟೆಯಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಮೊದಲ ಸಿಎನ್‌ಜಿ ಕಾರು ಇದಾಗಿದೆ. 

Tata Nexon CNG Spied

  • 120 ಪಿಎಸ್‌ ಮತ್ತು 170 ಎನ್‌ಎಮ್‌ ಅನ್ನು ಉತ್ಪಾದಿಸುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

  • ಮ್ಯಾನುಯಲ್‌ ಮತ್ತು AMT ಆಯ್ಕೆಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

  • CNG ವೇರಿಯೆಂಟ್‌ಗಳು ಸುಮಾರು  1 ಲಕ್ಷ ರೂ.ವರೆಗೆ ಬೆಲೆ ಏರಿಕೆಯೊಂದಿಗೆ ಬರಬಹುದು.

ಫೇಸ್‌ಲಿಫ್ಟೆಡ್ ಟಾಟಾ ನೆಕ್ಸಾನ್ ಅನ್ನು ಕಳೆದ ವರ್ಷ ಅದೇ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಪ್ರಿ-ಫೇಸ್‌ಲಿಫ್ಟ್ ಆವೃತ್ತಿಯಂತೆ ಬಿಡುಗಡೆ ಮಾಡಲಾಯಿತು. 2024 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ, ಟಾಟಾವು ಸಬ್‌ಕಾಂಪ್ಯಾಕ್ಟ್ ಎಸ್ಯುವಿಯ ಸಿಎನ್‌ಜಿ ಆವೃತ್ತಿಯನ್ನು ಅದರ ಸನ್ನಿಹಿತ ಆಗಮನದ ಸುಳಿವು ನೀಡಿತು. ಇತ್ತೀಚೆಗೆ, ನೆಕ್ಸಾನ್‌ನ ಕವರ್‌ ಮಾಡಿರುವ ಪರೀಕ್ಷಾ ಆವೃತ್ತಿಯನ್ನು ಗುರುತಿಸಲಾಗಿದೆ ಮತ್ತು ಇದು ಮುಂಬರುವ CNG ಆವೃತ್ತಿಯಾಗಿದೆ. 

ಪವರ್‌ಟ್ರೇನ್‌ ವಿವರಗಳು

Tata Nexon

ನೆಕ್ಸಾನ್ ಸಿಎನ್‌ಜಿ ಭಾರತೀಯ ಮಾರುಕಟ್ಟೆಯಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಆಯ್ಕೆಯನ್ನು ನೀಡುವ ಮೊದಲ ಕಾರಾಗಿದೆ. ಇದು ಸಾಮಾನ್ಯ ಆವೃತ್ತಿಯಂತೆಯೇ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 120 PS ಮತ್ತು 170 Nm ನಷ್ಟು ಉತ್ಪಾದಿಸುತ್ತದೆ, ಆದಾಗ್ಯೂ, ಇಲ್ಲಿ ಔಟ್‌ಪುಟ್ ಅಂಕಿಅಂಶಗಳು ಸ್ವಲ್ಪ ಕಡಿಮೆ ಇರುತ್ತದೆ.

ಇದನ್ನು ಸಹ ಓದಿ: Tata Nexon EV Facelift Long Range ವರ್ಸಸ್ Tata Nexon EV (ಹಳೆಯ ವರ್ಷನ್): ಪರ್ಫಾರ್ಮೆನ್ಸ್ ಹೋಲಿಕೆ ಇಲ್ಲಿದೆ 

ಟ್ರಾನ್ಸ್‌ಮಿಷನ್ ಆಯ್ಕೆಯ ವಿಷಯದಲ್ಲಿ, ಟಾಟಾ ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡುತ್ತದೆ ಮತ್ತು ಇದು ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿಯಂತಹುಗಳಲ್ಲಿ ಎಎಮ್‌ಟಿ ಆಯ್ಕೆಯನ್ನು ಸಹ ಪಡೆಯಬಹುದು. ನೆಕ್ಸಾನ್‌ ಸಿಎನ್‌ಜಿಯ ಪರ್ಫಾರ್ಮೆನೆನ್ಸ್‌ ಮತ್ತು ಮೈಲೇಜ್ ವಿಶೇಷಣಗಳು ಇನ್ನೂ ತಿಳಿದಿಲ್ಲ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

Tata Nexon  Cabin

ಸದ್ಯಕ್ಕೆ, ಸಿಎನ್‌ಜಿ ಆಯ್ಕೆಯು ಟಾಪ್‌-ಎಂಡ್‌ ವೇರಿಯೆಂಟ್‌ನಲ್ಲಿ ಲಭ್ಯವಿರುತ್ತದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ, ಆದರೆ ಅದು ಲಭ್ಯವಿದ್ದರೆ, ಇದು ಮಾರುಕಟ್ಟೆಯಲ್ಲಿ ಉತ್ತಮ-ಸುಸಜ್ಜಿತ ಸಿಎನ್‌ಜಿ ಎಸ್‌ಯುವಿ ಆಗಿರುತ್ತದೆ. ಟಾಪ್-ಎಂಡ್‌ ನೆಕ್ಸಾನ್ ಸಿಎನ್‌ಜಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಇದನ್ನು ಸಹ ಓದಿ: ತಮಿಳುನಾಡಿನಲ್ಲಿ ಹೊಸ ಪ್ಲಾಂಟ್‌ಗಾಗಿ 9,000 ಕೋಟಿ ರೂ. ಹೂಡಿಕೆ ಮಾಡಿದ Tata ಮೋಟರ್ಸ್ 

ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾದೊಂದಿಗೆ ಬರಬಹುದು. 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Tata Nexon 2023

ಟಾಟಾ ನೆಕ್ಸಾನ್‌ನ ಎಕ್ಸ್ ಶೋರೂಂ ಬೆಲೆ 8.15 ಲಕ್ಷ ರೂ.ನಿಂದ  15.80 ಲಕ್ಷ ರೂ.ಗಳ ನಡುವೆ ಇರಲಿದ್ದು, ಮತ್ತು ಸಿಎನ್‌ಜಿ ಆವೃತ್ತಿಗಳು ಅನುಗುಣವಾದ ಪೆಟ್ರೋಲ್-ಮ್ಯಾನ್ಯುವಲ್ ಆವೃತ್ತಿಗಿಂತ ಸುಮಾರು 1 ಲಕ್ಷ ರೂ.ವರೆಗೆ ದುಬಾರಿಯಾಗುವ ನಿರೀಕ್ಷೆಯಿದೆ. ಇದು ಬಿಡುಗಡೆಯಾದಾಗ  ಮಾರುತಿ ಬ್ರೆಜ್ಜಾದ CNG ಆವೃತ್ತಿಗಳು ಇದರ ನೇರ ಪ್ರತಿಸ್ಪರ್ಧಿಯಾಗಿರುತ್ತದೆ. ರೆಗುಲರ್‌ ನೆಕ್ಸಾನ್ ಮಾರುಕಟ್ಟೆಯಲ್ಲಿ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್‌ಗಳಿಗೆ ಸಹ ಸ್ಪರ್ಧೆಯನ್ನು ಒಡ್ಡುತ್ತದೆ. 

 ಇನ್ನಷ್ಟು ಓದಿ: ಟಾಟಾ ನೆಕ್ಸಾನ್ ಎಎಂಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ನೆಕ್ಸಾನ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience